GudeAngadi

ಕಾಂಚಿಕ ಪರಮೇಶ್ವರಿ ದೇವಸ್ಥಾನ, ಬಾಡ:

                       ಕುಮುಟಾದಿಂದ 8.ಕಿ.ಮೀ. ದೂರದ ಬಾಡ ಗ್ರಾಮದ ಭಾಗವಾದ ಗುಡೇಅಂಗಡಿಯಲ್ಲಿ ಕಾಂಚಿಕಾ ಪರಮೇಶ್ವರಿ ದೇವಾಲಯ ಇದೆ. ಕಾಂಚಿಕಾಪುರದಲ್ಲಿ ಕಲಭ ಋಷಿಗೆ ಸಿಕ್ಕ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರಿಂದ ‘ಕಾಂಚಿಕಾಂಬ’ ಎಂಬ ಹೆಸರು ಪ್ರಚಲಿತದಲ್ಲಿ ಬಂತು. ಇದು ಗ್ರಾಮ ದೇವತೆಯಾಗಿದ್ದು ವರ್ಷಕ್ಕೊಮ್ಮೆ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಎತ್ತರವಾದ ಗುಡ್ಡದ ಮೇಲಿರುವ ದೇವಾಲಯದಿಂದ ಸಮುದ್ರದ ದೃಶ್ಯಗಳು ಆಕರ್ಷಣೀಯ. ಗುಡಿ ಮತ್ತು ಅಂಗಡಿಗಳು ಇರುವುದರಿಂದ ‘ಗುಡೇಅಂಗಡಿ’ ಎಂಬ ಹೆಸರು ಈ ಗ್ರಾಮಕ್ಕೆ ಬಂದಿದೆ. ಬಾಡದ ಅಮ್ಮ ಎಂದೇ ಭಕ್ತರಿಂದ ಕರೆಯಲ್ಪಡುತ್ತಿದೆ.