Ladies Beach

ಲೇಡಿಸ್ ಕಡಲತೀರ:

ಆಂಗ್ಲರ ಕಾಲದಲ್ಲಿ ಆಂಗ್ಲ ಮಹಿಳೆಯರು ದೋಣಿಗಳ ಮೂಲಕ ಇಲ್ಲಿಗೆ ಜಲಕ್ರೀಡೆಗೆ ಬರುತ್ತಿದ್ದರಂತೆ. ಈಗಲೂ ಇದನ್ನು ನೋಡಬೇಕಾದರೆ ದೋಣಿಯಲ್ಲೇ ಸಾಗಬೇಕು. ಆಂಗ್ಲ ಮಹಿಳೆಯರ ಜಲಕ್ರೀಡೆಯ ತಾಣ ಲೇಡಿಸ್ ಕಡಲತೀರ ಎಂದು ಕರೆಸಿಕೊಂಡಿದೆ. ಈ ಕಡಲ ತೀರದಲ್ಲಿ ಅಲೆಗಳ ಆರ್ಭಟಗಳು ಇಲ್ಲ! ಇಲ್ಲಿ ಎತ್ತರವಾ ಬಂಡೆಗಳ ಸಾಲುಗಳು, ದಟ್ಟ ಕಾಡು ಕಂಗೊಳಿಸುತ್ತವೆ. ಪ್ರಶಾಂತವಾದ ತೀರ. ನಿಸರ್ಗಪ್ರಿಯರಿಗೆ ಅಕರ್ಷಣೀಯ ಸ್ಥಳ. ಕಾರವಾರ ಬಂದರನ್ನು ನೋಡುತ್ತ ಈ ಕಡಲ ತೀರಕ್ಕೆ ಸಾಗಬಹುದು. ವೀಕ್ಷಣೆಗೆ ಸೂಕ್ತ ಸಮಯ. ಆಗಸ್ಟ್ ದಿಂದ ಮಾರ್ಚ್