St.Anne's Church

ಭಾವೈಕ್ಯತೆ ಸಂಕೇತ-ಸಂತ ಅನ್ನಮ್ಮಚರ್ಚ್ :

                 ಮಡಿಕೇರಿಯಿಂದ 32 ಕಿ.ಮೀ ದೂರ. ಕೊಡಗು ಭಾವೈಕ್ಯತೆಯ ಸಂಗಮ ಎನ್ನುವುದಕ್ಕೆ ಇಲ್ಲಿ ನಡೆಯುವ ಹಬ್ಬಗಳು, ನೆಲೆ ನಿಂತಿರುವ ದೇಗುಲ, ಮಸೀದಿ, ಇಗರ್ಜಿಗಳು ಸಾಕ್ಷಿಯಾಗುತ್ತದೆ.ಇದಕ್ಕೊಂದು ಉದಾಹರಣೆ ವೀರಾಜಪೇಟೆಯ ಅನ್ನಮ್ಮ ಇಗರ್ಜಿ. ವೀರಾಜಪೇಟೆಯ ಅನ್ನಮ್ಮ ಇಗರ್ಜಿ ವೀರಾಜಪೇಟೆಗೆ ಭೇಟಿ ನೀಡಿದವರಿಗೆ ಮುಗಿಲೆತ್ತರಕ್ಕೆ ಹರಡಿ ನಿಂತಿರುವ  ಭತ್ತದ ಗದ್ದೆಗಳು ಸುತ್ತುವರಿ ಜನವಸತಿ ಗೃಹಗಳು ಇಂತಹ ನಿಸರ್ಗ ವನಸಿರಿಯ ನಡುವೆ ಗಗನ ಚುಂಬಿಯಾಗಿ ಕಂಗೊಳಿಸುತ್ತದೆ. ಸಂತ ಅನ್ನಮ್ಮಇಗರ್ಜಿ.

                ಅನ್ನಮ್ಮ ಕೊಡಗಿನ ಹೆಮ್ಮೆಯ ಇಗರ್ಜಿ, ಇದಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ, ಈ ಇಗರ್ಜಿಯ ನಿರ್ಮಾಣದ ಹಿಂದೆ ರೋಚಕ ಕಥೆಯಿದೆ. ದೊಡ್ಡವೀರರಾಜೇಂದ್ರ ನಿಮಾರ್ತೃ! ಅದು 1791-92ನೇ ಇಸವಿಯ ದಿನಗಳು. ಮೂರನೇ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ತಪ್ಪಿಸಿಕೊಂಡು ಬಂದಂತಹ ಸುಮಾರು 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿದನಂತೆ. ಆ ಕಾಲದಲ್ಲಿ ಸ್ಥಾಪಿಸಲ್ಪಟ್ಟಂತಹ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ಅವರನ್ನು ನೆಲೆಸುವಂತೆ ವ್ಯವಸ್ಥೆ ಮಾಡಿದನು. ಅಲ್ಲದೆ ಅವರ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್‍ಡಿ’ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರಲ್ಲಿ ಇಗರ್ಜಿ ಕಟ್ಟಿಸಿದನು. ದೊಡ್ಡವೀರರಾಜೇಂದ್ರ ಕಾಲದಲ್ಲಿ ನಿರ್ಮಿತವಾದ ಈ ಇಗರ್ಜಿಯು ಕೊಡಗಿನ ಏಕೈಕ ಐತಿಹಾಸಿಕ ಕ್ರೈಸ ್ತಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ವೈಭವದಿಂದ ಇಂದು ಮೆರೆಯುತ್ತಿದೆ.

                 ಸುಂದರಕೃತ್ರಿಮ ಗವಿ:- ಸಂತ ಅನ್ನಮ್ಮಚರ್ಚ್‍ಗೆ ಭೇಟಿ ನೀಡಿದ್ದೇಆದರೆ ನಮಗೆ ಚರ್ಚ್‍ನ ಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಚರ್ಚ್‍ನ ಕಲಾವೈಭವ ಕಣ್ಣಿಗೆಕಟ್ಟುತ್ತದೆ. ಚರ್ಚ್‍ನ ಸಮೀಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಪ್ರಾನ್ಸ್‍ನ ‘ಲೂರ್ದ್’ ಮಾದರಿಯ ಸುಂದರ ಕೃತ್ರಿ ಮಗವಿಯನ್ನು ಕಾಣಬಹುದು. ದೇವಾಲಯವು ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದ್ದು, ಭವ್ಯಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರವಿದೆ.

150 ಅಡಿಯಗೋಪುರ:ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿವೆ. ಗೋಪುರವು ಸುಮಾರು 150 ಆಡಿಗಳಷ್ಟು ಎತ್ತರವಿದ್ದು, ಇದರ ಮೇಲೆ ಪಂಚಲೋಹದ 6 ಅಡಿ ಎತ್ತರದ ಶಿಲುಬೆಯಿದ್ದು, ದೂರದಿಂದ ವೀಕ್ಷಿಸಿದಾಗ ವಿಶಾಲ ಅಂಗಳದ ನಡುವೆ ಇತಿಹಾಸದ ಕಥೆಯನ್ನು ಹೇಳಲಲು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ.

                 ಪ್ಯಾರೀಸ್‍ನಿಂದ ತಂದ ಗಂಟೆ:- ಸಾಲ್ವದೋರ್‍ಪಿಂಟೋ ಹಾಗೂ ದೋನಥ್ ಲೋಬೋರವರಜ್ಞಾಪಕಾರ್ಥವಾಗಿ ಪ್ಯಾರೀಸ್‍ನಿಂದತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳನ್ನು ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ. ದೇವಾಲಯಕ್ಕೆ ಪೂರ್ವ ಹಾಗೂ ಉತ್ತರಮುಖವಾಗಿ ಪ್ರವೇಶ ದ್ವಾರಗಳಿವೆ. ಒಳ ಪ್ರವೇಶಿದರೆ, ಭವ್ಯ ಸಭಾಂಗಣಕಂಡು ಬರುತ್ತದೆ.

                ಪಶ್ಚಿಮ ಭಿತ್ತಿ(ಗೋಡೆ)ಯ ಬಳಿ ಬಲಿಪೀಠದ ಸುಂದರ ವಿನ್ಯಾಸವು ನಮ್ಮನ್ನುಆಕರ್ಷಿಸುತ್ತದೆ. ಚರ್ಚ್‍ನ ಸ್ಥಾಪನೆಗೆ ಕಾರಣನಾದದೊರೆ ವೀರರಾಜೇಂದ್ರ ಒಡೆಯ ನೀಡಿರುವ ಎರಡು ದೀಪಕಂಬಗಳು(ಕುತ್ತುಬೊಳ್‍ಚಿ)’ವಿ’ ಸಂಕೇತದಿಂದ ಕೂಡಿದೆ. ಬಲಿಪೀಠದ ಮೇಜಿನ ಮೇಲಿಡಲಾಗಿದೆ. ಮೇಜಿನ ಹಿಂಭಾಗದಲ್ಲಿ ಪರಮಪ್ರಸಾದದ ಪೆಟ್ಟಿಗೆಇದೆ. ಪೆಟ್ಟಿಗೆಯ ಮೇಲೆವಿಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ.ಚರ್ಚ್‍ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ದ ಕಲಾವಿದ ಮೈಕಲ್‍ಎಂಜಿಲೋ ರೂಪಿಸಿದಂತಹ ‘ಪಿಯಾತ್’ ಶಿಲ್ಪದ ಮಾದರಿಯ ‘ಪಿಯಾತ್’ ಸ್ಥಿತಿಯ ಅಂದರೆತಾಯಿ ಮೇರಿಯತೊಡೆ ಮೇಲೆ ವಿಸುವಿನ ನಾಭಿಗೆ ಸನಿಹವಿರುವಂತಹ ಭಾವ, ತಾಯಿಯ ಹೊಕ್ಕಳ ಬಳ್ಳಿಯ ಅಜನ್ಮ ಸಂಬಂಧದ ಸಾಂತ್ವನ ಕಾಣುತ್ತದೆ. ಏಸುವು ಮೂರನೇ ಬಾರಿ ಶಿಲುಬೆಗೆ ಸಿಲುಕಿ ಭಾರದಿಂದ ಬಳಲಿ ಬೋರಲಾಗಿ ಬೀಳುತ್ತಿದ್ದರೂ, ಹೊಡೆಯುತ್ತಿರುವುದನ್ನು ಒಂಭತ್ತನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ.ಕಠಿಣ ಮನಸ್ಸಿನ ಸೈನಿಕರು ಏಸುವಿನ ವಸ್ತ್ರವನ್ನು ಸೆಳೆದು ಹರಾಜು ಹಾಕುವುದನ್ನು ಕಾಣಬಹುದು. ಏಸುವನ್ನು ಶಿಲುಬೆಗೆ ಜಡಿದಚಿತ್ರವಾಗಿ ಸಾಂಧರ್ಭಿಕವಾಗಿ ಕೆಂಪು ವರ್ಣಾಚ್ಚಾದಿತವಾಗಿದೆ.ವಿಶಿಷ್ಟ ಹದಿನಾಲ್ಕು

                   ಕಾಷ್ಠ ಶಿಲ್ಪಗಳು:-ಏಸುವಿನ ಶಿಲುಬೆಗೆ ಏರಿಸುವ ಹಾದಿಯನ್ನು ತೋರಿಸುವ 14 ಕಾಷ್ಠ ಶಿಲ್ಪಗಳು ಸಭಾಂಗನದಗೋಡೆ ಮತ್ತು ಕಂಬಗಳ ನಡುವೆ ಇವೆ. ಒಂದನೆಯ ಶಿಲ್ಪದಲ್ಲಿ ಏಸುವಿನ ಮರಣಕ್ಕೆ ನಿರ್ಣಯದಲ್ಲಿಕ್ರೌರ್ಯ, ದೌರ್ಜನ್ಯದ ಪ್ರತೀಕವಾದ ಭಾವ ಕಂಡುಬಂದರೆ, ಎರಡನೆಯ ಶಿಲ್ಪದಲ್ಲಿ ಬದುಕಿನ ಯತನೆಗಳನ್ನು, ಶಿಲುಬೆಯನ್ನು ಹತ್ತಲೇಳಿಸುವಲ್ಲಿ ಸಮಚಿತ್ತದಿಂದಿರುವ ಏಸುವಿನ ಮುಖವನ್ನು ಕಾಣಬಹುದು.

ಮೂರನೆಯದು ಮೊದಲ ಬಾರಿಗೆ ಭಾರವಾದ ಶಿಲುಬೆಯೊಡನೆ ಬೋರಲಾಗಿ ಬೀಳುತ್ತಿರುವ ಏಸುವಿನ ನೋವನ್ನು ಸಹಿಸುವ ದೃಢಚಿತ್ತಮುಖವನ್ನು ಹೊತ್ತ ಶಿಲಪ್ವಾಗಿದೆ. ಏಸುವು ಶಿಲುಬೆಯನ್ನು ಹೊತ್ತು ಹೋಗುವಲ್ಲಿ ತಾಯಿಯ ದರ್ಶನ ಮತ್ತುಆಕೆಯಅವರ್ಣನೀಯ ಅಲಲನ್ನು ಬಿಂಬಿಸುವ ಶಿಲ್ಪವು ನಾಲ್ಕನೆಯದಾಗಿದೆ. ಈದನೆಯ ಶಿಲ್ಪವು ‘ಸಿದೇನ್ಯನಾದಸಿಮೋನ’ ಏಸುವಿಗೆ ಶಿಲುಬೆ ಹೊರಲು ಸಹಾಯಕ್ಕೆ ಬರುವುದನ್ನು ತೋರಿಸುತ್ತದೆ. ಇನ್ನುವೆರೋನಿಕಮ್ಮ ಎಂಬ ವನಿತೆ ಏಸುವಿನ ಬಳಲಿಕೆ ಕಂಡು ಮುಖವೊರೆಸುವುದನ್ನುಆರನೆಯ ಶಿಲಪ್ದಲ್ಲಿಎರಡನೇ ಬಾರಿಗೆ ಶಿಲುಬೆಯ ಭಾರದಿಂದ ಬಳಲಿ ಬೀಳುವ ಮಾನವನಅಂತಃಕರಣ ಮಿಡಿಯುವ ಏಸುವಿನ ಭಂಗಿಯಾಗಿದೆ. ಎಚಿಟನೆಯ ಶಿಲ್ಪದಲ್ಲಿ ಏಸುವನ್ನು ಹಿಂಬಾಲಿಸಿ ಬಂದ ಪುಣ್ಯ ಸ್ತ್ರಿಯರಿಗೆ ಏಸುವು ನೀಡುತ್ತಿರುವ ಸಾಮತ್ವನಕಾಣುತ್ತದೆ. ಏಸುವು ಮೂರನೇ ಬಾರಿ ಶಿಲಿಬೆಗೆ ಸಿಲುಕಿ ಭಾರದಿಂದ ಬಳಲಿಬೋರಲಾಗಿ ಬೀಳುತ್ತಿದ್ದರೂ, ಹೊಡೆಯುತ್ತಿರುವುದನ್ನು ಒಂಬತ್ತನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ.

   ಹತ್ತನೆಯದರಲ್ಲಿ ಕಠಿಣ ಮನಸ್ಸಿನ ಸೈನಿಕರು ಏಸುವಿನ ವಸ್ತ್ರವನ್ನು ಸೆಳೆದು ಹರಾಜು ಹಾಕುವುದನ್ನು ಕಾಣಬಹುದು. ಹನ್ನೊಂದನೆಯದರಲ್ಲಿ ಏಸುವನ್ನು ಶಿಲುಬೆಗೆ ಜಡಿದಚಿತ್ರವಾಗಿ ಸಾಂದರ್ಭಿಕವಾಗಿ ಕೆಂಪು ವರ್ಣಾಚ್ಚಾದಿತವಾಗಿದೆ. ಮರಣವೇ ಮಹಾನವಮಿ ಎನ್ನುವಂತೆ ಏಸುವಿನ ಪ್ರಾಣತ್ಯಾಗದಚಿತ್ರ ಹನ್ನೆರಡನೆಯದರಲ್ಲಿದೆ. “ಪಿಯಾತ್’ ಭಂಗಿಯ ಶಿಲ್ಪವು ಹದಿಮೂರನೆಯದರಲ್ಲಿದೆ. ಕೊನೆಯ ಶಿಲ್ಪ ದೇವಮಾನವನಾಗುವ ತೆಜೋ ಮುಖದ ಏಸುವಿನ ‘ತಿರುಶರೀರ’ದ ಮೂಲಕ ಸಂಕಟದಿಂದ ಶಾಂತಿಯ ಗುರಿಯತ್ತ ಸಾಗುವ ಮನುಕುಲದ ಕತೆಯಾಗಿದೆ. ಮೇಲಿನ ಹದಿನಾಲ್ಕು ಹಂತಗಳಲ್ಲಿ ಶಿಲ್ಪಗಳನ್ನು ವ್ಯವಸ್ತೆ ಮಾಡಿದ್ದು ಗುಲಿಯನ್ ಪಾದ್ರಿಎಂದು ಹೇಳಲಾಗಿದೆ. ಇವುಗಳ ಪಕ್ಕದಲ್ಲಿಯೇ ಬ ಆಳ ಏಸುವು ತನ್ನ ಅಜ್ಜಿಅನ್ನಮ್ಮ ಬಳಿ ನಿಂತು ಲಾಲಿತ್ಯ ಸವಿಯುವ ಶಿಲ್ಪವು ಪ್ರತ್ಯೇಕಗೂಡಿನಲ್ಲಿದ್ದು ಮನ ಮುಟ್ಟುವಂತಿದೆ.by:ಲವಕುಮಾರ್ ಮೈಸೂರು