Jog Falls

ಜೋಗ್ ಫಾಲ್ಸ್

             ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಕಣಿವೆಯಲ್ಲಿ ಜನಿಸಿದ ಶರಾವತಿ ನದಿ ನಾಲ್ಕು ಭಾಗಗಳಾಗಿ 253 ಮೀಟರ್‍ಗಳ ಎತ್ತರದಿಂದ ಧುಮುಕುತ್ತಿರುತ್ತದೆ. ಈ ಜಲಪಾತಕ್ಕೆ ನಾಲ್ಕು ಹೆಸರುಗಳಿವೆ. ಮೊದಲ ಭಾಗಕ್ಕೆ ರಾಜಾ ಎಂದು ಹೆಸರು. ರಾಜಗಾಂಭೀರ್ಯ ಉಕ್ಕಿ ಹರಿಯುತ್ತಿರುವ ಜಲಧಾರೆ ನಿಧಾನವಾಗಿ, ಮಲುವಾಗಿ ಕಣಿವೆಯೊಳಗೆ ಜಾರುತ್ತದೆ.ಎರಡನೆಯ ಧಾರೆಯೇ ರೋರರ್ ರೋರರ್ ಎಂದರೆ ಧ್ವನಿ ಮಾಡುವ ಪ್ರವಾಹವೆಂದರ್ಥ. ಈ ಧಾರೆ ದೊಡ್ಡ ದೊಡ್ಡ ಕಲ್ಲುಗಳ ಮೇಲಿಂದ ಘರ್ಜಿಸುತ್ತ ಧುಮುಕುತ್ತದೆ.ಮೂರನೆಯ ಧಾರೆಯನ್ನು ರಾಕೆಟ್ ಎನ್ನುತ್ತಾರೆ. ಇದು ನೇರವಾಗಿ ಕ್ಷಿಪಣಿಯಷ್ಟು ವೇಗವಾಗಿ ಚಿಮ್ಮತ್ತದೆ. ನಾಲ್ಕನೆಯ ಧಾರೆಯನ್ನು ರಾಣಿ ಎನ್ನುತ್ತಾರೆ. ಈ ಪ್ರಾಂತ್ಯದಲ್ಲಿನ ಜಲಧಾರೆ ಅನೇಕ ತಿರುವುಗಳನ್ನು ತಿರುಗುತ್ತಾ ನರ್ತಕಿಯಂತೆ ಕಣಿವೆಯೊಳಗೆ ಜಾರುತ್ತಿರುತ್ತದೆ.

         ಮಳೆಗಾಲದಲ್ಲಿ ಈ ಜಲಪಾತ ಹೆಚ್ಚೂ ಕಡಿಮೆ ಅರ್ಧ ಕಿ.ಮೀ. ಅಗಲವಾಗಿರುತ್ತದೆ. ಈ ಜಲಪಾತದ ನೀರನ್ನು ಶರಾವಾತಿ ಕೊಂಡೊಯ್ದು ಹೈರಬ್ ಸಾಗರ್ ಅಣೆಕಟ್ಟಿಗೆ ತಲುಪಿಸುತ್ತದೆ. ಇಲ್ಲಿ ವಿದ್ಯುತ್ ಉತ್ಪತ್ತಿ ಕೇಂದ್ರವಿದೆ. ಈ ಸ್ಥಳವನ್ನು ಪರ್ಯಾಟಕರು ಅಧಿಕ ಸಂಖ್ಯೆಯಲ್ಲಿ ದರ್ಶಿಸುತ್ತಿರುತ್ತದೆ.

ಈ ಪ್ರದೇಶದಲ್ಲಿ ಇನ್ನೂ ನೋಡಬಹುದಾದ ಸ್ಥಳಗಳು ಹೀಗೆವೆ.

1. ಹೊನ್ನೆಮರದ ದ್ವೀಪ, ಲಿಂಗನಮಕ್ಕಿ ಡ್ಯಾಮ್, ನೀರಿನ ಮಧ್ಯದಲ್ಲಿದೆ.

2. ಇಕ್ಕೇರಿಯ ದೇವಸ್ಥಾನ, ಕೆಳದಿ ರಾಜವಂಶದವರು ನಿರ್ಮಿಸಿದ ಅಗೋರೇಶ್ವರಾಲಯ. ಭಕ್ತರನ್ನು ಬಹಳವಾಗಿ ಆಕರ್ಷಿಸುತ್ತದೆ.

3. ಬನವಾಸಿ, ಗೋಕರ್ಣ ಮಂದಿರಗಳು, ಬನವಾಸಿ ಕದಂಬ ರಾಜ್ಯಕ್ಕೆ ರಾಜಧಾನಿಯಾಗಿತ್ತು. ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಇಲ್ಲಿಗೆ ತಲುಪಬಹುದು.

ಇಲ್ಲಿ ಅನೇಕ ಹೋಟೆಲ್‍ಗಳು, ಗೆಸ್ಟ್‍ಹೌಸ್‍ಗಳು ಇವೆ.