Mirjaan Fort

                      ಐತಿಹಾಸಿಕ ಕುರುಹುಗಳು ಹೆಜ್ಜೆಗಳನ್ನು ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ನೋಡಬಹುದು. ಗೇರುಸೊಪ್ಪಾದ ‘ಕಾಳುಮೆಣಸಿನ ರಾಣಿ’ ಎಂದೇ ಖ್ಯಾತಿಪಡೆದಿದ್ದ ಚೆನ್ನಭೈರಾದೇವಿ, ಸೋದೆಯ ಅರಸರ ಆಡಳಿತ, ಕದಂಬರ ಸಾಮ್ರಾಜ್ಯ. ಸರ್ಪಮಲ್ಲಿಕನು ಗೆದ್ದು ಆಳ್ವಿಕೆ ನಡೆಸಿದ ‘ಮಿರ್ಜಾನ್ ಕೋಟೆ’. ಹೀಗೆ ಅನೇಕ ಕುರುಹುಗಳು. ಜಿಲ್ಲೆಯಲ್ಲಿ ಇರುವ, ಸಾಧಾರಣ ಸುಸ್ಥಿತಿಯಲ್ಲಿ ಇರುವ ಕೋಟೆ ಎಂದರೆ ಇದೊಂದೇ. ಅಘನಾಶಿನಿಯ ನದಿ ಕಿನಾರೆಯಲ್ಲಿ ಈ ಕೋಟೆ ಇದೆ.ಇದನ್ನು ಬಿಜಾಪುರದ ಆದಿಲ್‍ಶಾಹಿ ನಿರ್ಮಿಸಿದ ಎಂದು ಹೇಳಲಾಗುತ್ತಿದೆ.

                       ಕೋಟೆ 4 ಪ್ರವೇಶ ಮಾರ್ಗಗಳನ್ನು ಹೊಂದಿದ್ದು, ಅಗಲವಾದ ಮೆಟ್ಟಿಲುಗಳನ್ನು ಹೊಂದಿದೆ. ಬಾವಿಗಳು, ಸುರಂಗ ಮಾರ್ಗಗಳು ಇದ್ದು, 10 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಮಲ್ಲಿಕೇಶ್ವರ, ಲಕ್ಷ್ಮೀ ನಾರಾಯಣ ದೇವಾಲಯ ಹಾಗೂ ಊರಿನ ಹೊರಗೆ 6 ವೀರಗಲ್ಲುಗಳು ಕೂಡ ಇವೆ. ಇಂದು ಕೋಟೆ ಅವಸಾನದ ಅಂಚಿನಲ್ಲಿದೆ. ಕುರುಹುಗಳು ಮಾತ್ರ ಉಳಿದುಕೊಂಡಿವೆ.