Kalghtaghi Cradles

ಕಲಘಟಗಿಯ ಬಣ್ಣದ ತೊಟ್ಟಿಲು ಬಣ್ಣದ ಬದುಕು...ಕೈಗಳು ಸೋತಿಲ್ಲ, ಪ್ರತಿಭೆ ಕಮರಿಲ್ಲ.........

        ಅಲ್ಲಿ ಕೆಲಸ ಮಾಡುವ ಕೈಗಳು ಸೋತಿಲ್ಲಾ, ಪ್ರತಿಭೆ ಕಮರಿಲ್ಲ, ಮಾಡುವ ತೇಜಸ್ಸು ಕಳೆಗುಂದಿಲ್ಲ, ಆದರೂ ಕಾಲ ಬದಲಾದಂತೆ ತೊಟ್ಟಿಲು ಕೊಂಡುಕೊಳ್ಲುವವರು ಸಂಖ್ಯೆ ಕ್ಷಿಣಿಸಿದೆ. ಆಧುನಿಕತೆಯ ಭರಾಟೆಗೆ ಸಿಕ್ಕು, ಜನರ ಅಭಿರುಚಿ ಬದಲಾಗುತ್ತಿದೆ. ಪ್ಲಾಸ್ಟಿಕ್, ಅಲ್ಯೂಮಿನಿಯಂ, ಕಬ್ಬಿಣದಂತಹ ತೊಟ್ಟಿಲುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ಸಿಗುವುದರಿಂದ ಕೊಂಡುಕೊಳ್ಳುವವರಲ್ಲಿ ಆಸಕ್ತಿ ಕುಂದಿದೆ.

        ನಮ್ಮ ಅಪೂರ್ವ ಗ್ರಾಮೀಣ ಕುಶಲ ಕಲೆಗಳಲ್ಲಿ,ಜಾನಪದಕಲೆ,ಶಿಲ್ವಕಲೆ, ಚಿತ್ರಕಲೆ, ಸಂಸ್ಕøತಿಯನ್ನು ಬಿಂಬಿಸುವಂತಹ ಕರಕುಶಲ ವಿನ್ಯಾಸಗಳು ರಾಷ್ಟ್ರಿಯ ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರುಗಳಿಸಿವೆ.ಪ್ರಸಿದ್ದಿಯನ್ನು, ಪಡೆದಿವೆ.ಶತಮಾನಗಳು ಕಳೆದರೂ ತಮ್ಮದೆ ಆದ ವೈಶಿಷ್ಟ್ವನ್ನು ಕಾಯ್ದುಕೊಂಡು ಬಂದಿವೆ.ಇತಂಹ ಕರಕುಶಲ ಉದ್ಯಮದಲ್ಲಿ ಹೆಸರುವಾಸಿಯಗಿರುವುದು ಕಲಘಟಗಿಯ ಬಣ್ಣದ ತೊಟ್ಟಿಲು ಕೊಡ ಒಂದು.ಧಾರವಾಡ ಜಿಲ್ಲೆಯಲ್ಲಿನ ಮಲೆನಾಡ ಸೆರಿಗಲ್ಲಿನಲ್ಲಿನ,ಕಲಾ ಸಿರಿವಂತಿಕೆಯನ್ನು ತನ್ನ ಮಡಿಲಲ್ಲಿ ಹೊದ್ದಿರುವ,ಕಲೆಗಳ ಘಟಕ, ಜಾನಪದ ಕಲೆಗಳ ಬೀಡು, ಕಲಾ ನಗರಿ, ತೊಟ್ಟಿಲು ನಗರಿ ಎಂದು ಪ್ರಸಿದ್ದವಾದ ಕಲಘಟಗಿ ಪಟ್ಟಣದಲ್ಲಿ ಈ ವಿಶ್ವ ವಿಖ್ಯಾತ ಬಣ್ಣದ ತೊಟ್ಟಿಲು ತಯಾರಾಗುತ್ತವೆ. ಗ್ರಾಮೀಣ ಜೀವನದಲ್ಲಿ ತನ್ನದೇ ಆದ ಪ್ರಭಾವನ್ನು ಹೊಂದಿರುವ ಈ ತೊಟ್ಟಿಲು ತಯಾರಿಕೆಗೆ ಮೀಸಲಿರಿಸದೆ ಇತರೆ ಪೀಠೋಪಕರಣ ತಯಾರಿಕೆಗೂ ವಿಸ್ತರಿಸಿದೆ.

       ಕಲಘಟಗಿಯ ಮರದ ಬಣ್ಣದ ತೊಟ್ಟಿಲುಗಳು ಉತ್ತರ ಕರ್ನಾಟಕದ ಜನರಿಗೆ ಹಲವಾರು ತಲೆಮಾರುಗಳಿಂದ ಚಿರಪರಿಚಿತ. ಈ ಬಣ್ಣದ ತೊಟ್ಟಿಲಲ್ಲಿ ಆಡಿ ಬೆಳೆದ ಮಕ್ಕಳಗೇನೂ ಕಮ್ಮಿ ಇಲ್ಲಾ. ಮೊದಲ ಹೆರಿಗೆಗೆಂದು ತವರಿಗೆ ಬಂದು ಹೆಣ್ಣು ಮರಳಿ ಗಂಡನ ಮನೆಗೆ ಹೋಗುವಾಗ ಮರೆಯದೆ ಕೊಂಡು ಹೋಗುತ್ತಿದ್ದ ತೊಟ್ಟಿಲು ಇದು. ಬಡವರು, ಶ್ರೀಮ0ತರು ಎಲ್ಲರಿಗೂ ಕಲಘಟಗಿಯ ತೊಟ್ಟಿಲಲ್ಲಿ ತಮ್ಮ ಮಕ್ಕಳನ್ನು ತೂಗುವುದು ಶ್ರೀಮಂತಿಕೆಯ ವಿಷಯವಾಗಿತ್ತು. ಆದರೆ ಇದು ನಾಲ್ಕೈದು ದಶಕಗಳ ಹಿಂದಿನ ಮಾತು. ಕಾಲ ಬದಲಾದಂತೆ  ತೊಟ್ಟಿಲುಗಳು ಬಂದು ಕಲಘಟಗಿ ಜಾಗ ಆಕ್ರಮಿಸಿವೆ.

ತೊಟ್ಟಿಲು ತಯಾರಕ ಸಾಹುಕಾರ ಕುಟುಂಬ: ಬಣ್ಣದ ಬದುಕಿಲ್ಲಿ ಮಿಂದೆದ್ದು, ಬಣ್ಣವನ್ನೇ ತಮ್ಮ ಜೀವನಾಧಾರವಾಗಿಸಿಕೊಂಡು ಬದುಕು ಸೆವೆಸುತ್ತಿರುವ ಈ ಸಾಹುಕಾರ ಕುಟುಂಬ ಸುಮಾರು ನಾಲ್ಕು ತಲೆಮಾರುಗಳಿಂದಲೂ ತೊಟ್ಟಿಲು ತಯಾರಿಕೆಯ ಕಾರ್ಯದಲ್ಲಿ ತೊಡಗಿದೆ. ಇಂದಿಗೂ ತನ್ನ ಕಲಾ ಪ್ರೌಡಿಮೆಯನ್ನು ಮುಂದುವರಿಸಿಕೊಂಡು ಬಂದಿದೆ. ತೊಟ್ಟಿಲು ಕಲೆಯೇ ಇವರ ಆಸ್ತಿ, ಅಂತಸ್ತು-ಐಶ್ವರ್ಯ. ಕುಟುಂಬ ನಿರ್ವಹಣೆಯಲ್ಲಿ ಎಷ್ಟೇ ತೊಂದರೆಗಳದ್ದರೂ ಈ ಸಾಂಪ್ರದಾಯಿಕ ಕಲೆಯನ್ನು ಕಾಯ್ದುಕೊಂಡ ತಮ್ಮತನವನ್ನು ಉಳಿಸಿಕೊoಡು ಬೆಳಸಿಕೊಂಡು ಬರುತ್ತಿದ್ದಾರೆ.  

       ಸಾಹುಕಾರ ಕುಂಟುಬದಲ್ಲಿ ಶ್ರೀ ಪೀರಾಜಿ ತಮ್ಮಣ್ಣ ಸಾಹುಕಾರ, ಇವರು ಈ ಸಾಂಪ್ರದಾಯಿಕ ಬಣ್ಣದ ತೊಟ್ಟಿಲು ತಯಾರಿಸುವುದರಲ್ಲಿ ಸಿದ್ದ ಹಸ್ತರು.ಮಕ್ಕಳಾದ ಗಂಗಾಧ,ಲಕ್ಷಣ,ಶಿವಾಜಿ,ಅವರಿಗೆ ಈ ಕಲೆಯನ್ನು ಸುಲಲಿತವಾಗಿ ಧಾರೆ ಎರೆದರು. ಹಿರಿಯ ಮಗನಾದ ಗಂಗಾಧರ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಶಾಲೆ ತೊರೆದು ತೊಟ್ಟಿಲ ತಯಾರಿಕೆಯಲ್ಲಿ ತೊಟಗಿಕೊಡರು.ತಂದೆಯ ಮರಣಾಂತರ ತೊಟ್ಟಿಲ ವಿನ್ಯಾಸದಲ್ಲಿ ತೊಡಗಿಸಿಕೊಡಿದ್ದಾರೆ.

ತೊಟ್ಟಿಲು ಮಾಡುವ ವಿಧಾನ:

        ಕಲಘಟಿಗಿ ತೊಟ್ಟಿಲಿನಲಿ ಯಶಸ್ಸಿಗೆ ಕಾರಣ ಅದ್ಭುತ ವಿನ್ಯಾಸ ಮತ್ತು ವಿಶಿಷ್ಡ ಬಣ್ಣಗಾರಿಕೆ, ತೊಟ್ಟಿಲು ತಯಾರಿಕೆಗೆ ಮುಖ್ಯವಾಗಿ ಬೇಕಾಗಿರುವುದು ಸಾಗುವಾನಿ ಕಟ್ಟಿಗೆ. ಈ ಕಟ್ಟಿಗೆಯನ್ನು ಸಮೀಪದ ದೇವಿಕೊಪ್ಪ,ಮುಂಡಗೋಡ, ಕಿರವೆತ್ತಿ ಮುಂತಾದ ಕಡೆ ಇರುವ ಸರಕಾರಿ ಅರಣ್ಯ ಡೀಪೋದಿಂದ ಖರೀದಿಸುತ್ತಾರೆ. ಸಾಗುವಾನಿಯನ್ನು ತಮಗೆ ಬೇಕಾದ ಆಕೃತಿಗಳಲ್ಲಿ ಕತ್ತರಿಸಿಕೊಂಡು,ತುಂಡುಗಳಿಗೆ ಹುಣಸೆ ಬೀಜದಿಂದ ತಯಾರಿಸಿದ ಮಿಶ್ರಣವನ್ನು ಲೇಪಿಸಿ ಕಲ್ಲಿನಿಂದ ಪಾಲಿಶ್ ಮಾಡಲಾಗುತ್ತದೆ.ನಂತರ ಇವರೆ ತಯಾರಿಸಿದ  ವಿವಿÀಧ ಬಣ್ಣಗಳನ್ನು ಹಾಕುತ್ತಾರೆ.ಯವುದೇ ರೀತಿಯ ಮಾರುಕಟ್ಟೆಯಲ್ಲಿ ಸಿಗುವ ಬಣ್ಣವನ್ನು ಬಳಸುವುದಿಲ್ಲ.

ಅಭಿರುಚಿಗೆ ತಕ್ಕಂತೆ ಬದಲಾವಣೆ :

        ಮೊದಲು ತೊಟ್ಟಿಲು ಪಲ್ಲಕ್ಕಿ ತಯಾರಿಸುತ್ತಿದ್ದ ಈ ಕುಟುಂಬ ಈಗ ಸೋಫಾಸೆಟ್, ದಿವಾನ್, ಟಿಪಾಯಿ, ಉಯ್ಯಾಲೆ, ಮೊದಲಾದ ಆಧುನಿಕ ಪೀಠೋಪಕರಣಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೇ ರಥ, ಗೌರಿಮುಖ,ರತಿಕಾಮ,ಬಣ್ಣದಮಣೆ,ಲತ್ತಿಗುಣಿಯಂತಹ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಗಿರಾಕಿಗಳ ಬೇಡಿಕೆಗೆ ತಕ್ಕಂತೆ ಕಲಾಕೃತಿಗಳ ಮೇಲೆ ರಾಮಾಯಣ,ಮಹಾಭಾರತ,ಕೃಷ್ಣಾವತಾರ,ಬುಧ್ದ ಬಸವ ಹಾಗೇ  ಧರ್ಮಗಳಿಗನುಸಾರವಾಗಿ ಕ್ರಿಶ್ಚಿಯನ್,ಮಕ್ಕಾ,ಮದೀನಾ,ಮಸೀದಿಯ ದೃಶ್ಯಾವಳಿಗಳನ್ನು ಚಿತ್ರಿಸುತ್ತಾರೆ.ಬಾಳಿಕೆಯ ದೃಷ್ಟಿಯಿಂದಲೂ ಕಲಘಟಗಿಯ ತೊಟ್ಡಿಲುಗಳು 150-200 ವರ್ಷಗಳವರೆಗೂ ಉಳಿಯುತ್ತವೆ. ಮೊಮ್ಮಗ,ಅಪ್ಪ,ಅಜ್ಜ, ಎಲ್ಲರೂ ಒಂದೇ ತೊಟ್ಟಿಲು ಉಪಯೋಗಿಸಿದ ಉದಾಹರಣೆಗಳಿವೆ.ಹಚ್ಚಿದ ಬಣ್ಣ ಕೊಡಾ 60-80 ವರ್ಷಗಳವರೆಗೂ ಉಳಿಯುತ್ತದೆ.

       ಕೇವಲ ಬೆಂಗಳೂರಿನಂಥಹ ದೊಡ್ಡ ಶಹರಗಳಲ್ಲದೆ ಗೋವ, ಆಂಧ್ರಪ್ರದೇಶ,ಮಹಾರಾಷ್ಟ್ರ ಹಾಗೂ ಸಾಹರದಾಚೆಯ ದುಬೈ,ಪ್ರಾನ್ಸ,ಆಮೇರಿಕಾ ಮೊದಲಾದ ದೇಶಗಳಿಗೆ ತೊಟ್ಟಿಲು ಕಳಿಸಿದ ಕೀರ್ತಿ ಇವರದು.ದಿವಂಗತ ಡಾಕ್ಟರ್ ರಾಜಕುಮಾರರವರ ಕುಟುಂಬಕ್ಕೆ ತೊಟ್ಟಿಲೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಸಾಹುಕಾರ ಕುಟುಂಬದ ಕಲಾವಂತಿಕೆ ರಾಷ್ಟ್ರಿಯ ಪತ್ರಿಗಳಲ್ಲಿ,ದೂರದರ್ಶನಗಳಲ್ಲಿ ಅಷ್ಟೇ ಅಲ್ಲದೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಾಗೂ ಇನ್ನಿತರ ಕೈಗಾರಿಕಾ ಪ್ರದರ್ಶನಗಳಲ್ಲಿ ಪ್ರಸದ್ದಿ ಪಡೆದಿದೆ.ಕರ್ನಾಟಕ ವಾರ್ತಾ ಚಿತ್ರ ತಯಾರಿಸಿದೆ.

ಕೈಗಳು ಸೋತಿಲ್ಲ, ಪ್ರತಿಭೆ ಕಮರಿಲ್ಲ, .....

.ಅಲ್ಲಿ ಕೆಲಸ ಮಾಡುವ ಕೈಗಳು ಸೋತಿಲ್ಲ,ಪ್ರತಿಭೆ ಕಮರಿಲ್ಲ,ಮಾಡುವ ತೇಜಸ್ಸು ಕಳೆಗುಂದಿಲ್ಲ,ಆದರೂ ಕಾಲ ಬದಲಾದಂತೆ ತೊಟ್ಟಿಲು ಕೊಂಡುಕೊಳ್ಳುವವರ ಸಂಖ್ಯೆ ಕ್ಷಣಿಸಿದೆ.ಆಧುನಿಕತೆಯ ಭರಾಟೆಗೆ ಸಿಕ್ಕು.ಜನರ ಅಭಿರುಚಿ ಬದಲಾಗುತ್ತಿದೆ,ಪ್ಲಾಸ್ಟಿಕ್, ಅಲ್ಯೂಮಿನಿಯಂ,ಕಬ್ಬಿಣದಂತಹ ತೊಟ್ಟಿಲುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ಸಿಗುವುದರಿಂದ.ಕೊಂಡುಕೊಳ್ಲುವವರಲ್ಲಿ ಆಸಕ್ತಿ ಕುಂದಿದೆ.

ಈ ಕಲೆಯನ್ನು ಗುರುತಿಸಿದ ಸರ್ಕಾರ, ಈತೊಟ್ಟಿಲು ತಯಾರಕ ಸಾಹುಕಾರ ಕುಟುಂಬಕ್ಕೇ ಮಾಸಾಶನ ನೀಡುವ ಭರವಸೆಯನ್ನು ನೀಡಿತ್ತು.ಆದರೆ ಸರ್ಕಾರದ ಈಭರವಸೆ ಕೀವಲ ಕ್ಷಣಿಕವಾಗಿತ್ತು.ಕೇವಲ ಪ್ರಶಸ್ತಿ ಪತ್ರಗಳನ್ನು ನೀಡಿದೆ ಹೊರತು ಯಾವುದೇ ರೀತಿಯ ಹಣಕಾಸು ನೇರವು ಇದುವರೆಗೂ ದಕ್ಕಿಲ್ಲ.

ಇನ್ನೂ ಮೇಲಾದರೂ ಈ ಕಲೆಯ ಉಳಿವಿಗಾಗಿ ಸರ್ಕಾರ ಶ್ರಮಿಸಬೇಕಾಗಿದೆ.ಇವರ ಈ ಕಲೆಗೆ ಬೆನ್ನೀಗಾಸರೆಯಾಗಬೇಕಿದೆ ಬಣ್ಣ ಮಾಸುವ ಮುನ್ನವೇ ಅವರ ಕಡೆ ನೋಡಿ.... ಕಲೆಯನ್ನು ಉಳಿಸಿ ಬೆಳಸಿ... ಮಂಜುನಾಥ ಕೊಟಗುಣಸಿ