Paper Article

ಅಜ್ಜಿಯ ಕೈರುಚಿ ನೆನಪಿಸುವ ಹಳ್ಳಿ ನೆನಪು :

                       ಮಾಲ್‍ಗಳಲ್ಲಿ ಸಿಗುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಪಿಜ್ಜಾ, ಬರ್ಗರ್, ಸ್ಯಾಂಡ್‍ವಿಚ್ ಸೇರಿದಂತೆ ಆಧುನಿಕ ತಿಂಡಿ ತಿನಿಸುಗಳ ಸಾಲೇ ದೊಡ್ಡದಿರುತ್ತದೆ. ಆದರೆ, ಮಾಗಡಿ ರಸ್ತೆಯ ಜಿ.ಟಿ ಮಾಲ್‍ನ ನಾಲ್ಕನೇ ಮಹಡಿಗೆ ಹೋಗುತ್ತಿದ್ದಂತೆ ಅಲ್ಲೊಂದು ಅಪ್ಪಟ ಹಳ್ಳಿ ತಿನಿಸುಗಳ ಹೋಟೆಲು ಗಮನ ಸೆಳೆಯುತ್ತದೆ. ಆ ಹೋಟೆಲಿನ ಹೆಸರೇ ಹೋಟೆಲ್ ಹಳ್ಳಿ ನೆನಪು. ಮಾಲ್‍ಗೆ ಬರುವ ಗ್ರಾಹಕರ ನೆಚ್ಚಿನ ತಣವಾಗಿದೆ.
                     ಈ ಹೋಟೆಲ್‍ನಲ್ಲಿ ಸಿಗುವ ಆಹಾರದ ಪಟ್ಟಿಯಲ್ಲಿ ಅಪ್ಪಟ ಗ್ರಾಮೀಣ ಶೈಲಿಯ ನಾಟಿಕೋಳಿ ಸಾರು, ನೀರುದೋಸೆ, ಒತ್ತು ಶ್ಯಾವಿಗೆ, ಅಕ್ಕಿರೊಟ್ಟಿ, ಗೋದಿರೊಟ್ಟಿ, ಮಟನ್ ಕರಿ ಪ್ರಮುಖವಾಗಿದೆ. ಮಾಂಸಹಾರಿಗಳ ನೆಚ್ಚಿನ ಚಿಕನ್ ಮಟನ್ ಬಿರಿಯಾನಿ ಕೂಡಾ ಇಲ್ಲಿ ಸಿಗುತ್ತದೆ.
                   ಆಹಾರ ಆರ್ಡರ್ ನೀಡಿದ ತಕ್ಷಣ ವೆಲ್‍ಕಂ ಡ್ರಿಂಕ್ ನೀಡುತ್ತಾರೆ. ವೆಲ್‍ಕಂ ಡ್ರಿಂಕ್ ಅಂದ ತಕ್ಷಣ ಬಗೆ ಬಗೆಯ ಪಾನೀಯಗಳು ನೆನಪಾಗುತ್ತದೆ. ಆದರೆ ಹಳ್ಳಿ ನೆನಪು ಹೋಟೆಲಿನಲ್ಲಿ ರಸಂ ನೀಡುತ್ತರೆ. ಜೀರಿಗೆ,
ದನಿಯಾ, ಬೆಳ್ಳುಳ್ಳಿ, ಶುಂಠಿ, ಮಸಾಲೆ ಹಾಕಿ ರಸಂ ಕುಡಿದರೆ ಶೀತ-ನೆಗಡಿ, ಕೆಮ್ಮ ಇದ್ದವರಿಗೆ ರಿಲೀಫ್ ಸಿಗುತ್ತದೆ. ಮಾಂಸಹಾರ ಸೇವನೆ ಮಾಡಿದವರಿಗೆ ಜೀರ್ಣಕ್ಕೂ ಸಹಕಾರಿಯಾಗುತ್ತದೆ. ಈ ಉದ್ದೇಶದಿಂದ ರಸಂ ನೀಡುತ್ತೆವೆ, ಗ್ರಾಹಕರು ಇಷ್ಟಪಡುತ್ತರೆ.  ನಗರದ ಜನ ಹಳ್ಳಿ ಸೊಗಡಿನ ತಾಜಾ ಆಹಾರ ಇಷ್ಟಪಟ್ಟು ಸವಿಯುತ್ತರೆ
                    ಹಳ್ಳಿ ನೆನಪು ಹೋಟೆಲಿನಲ್ಲಿ ತರಾವರಿ ಮೀನಿನ ಖಾದ್ಯ ಸಿಲ್ವರ್‍ಫಿಷ್‍ಫ್ರೈ, ಸಿಗಡಿ, ಬಾಂಗ್ಡಾ, ಅಂಜಲ್ ಫ್ರೈ, ಸಿಗುತ್ತದೆ. ಬಾಳೆ ಎಲೆಯಲ್ಲಿ ಮಸಾಲೆ ಹಚ್ಚಿದ ಮೀನನ್ನು ಸುತ್ತಿ ಹಬೆಯಲ್ಲಿ ಬೇಯಿಸಿದ ಮೀನಿನ ಖಾದ್ಯ ವಿಶೇಷ. ಕೃತಕ ಬಣ್ಣ ಮಸಾಲೆಪುಡಿಗಳನ್ನು ಬಳಸದೇ ತಯಾರಿಸುವ ಕಾರಣ ಎಲ್ಲಾ ವಯಸಿನವರಿಗೂ ಇಷ್ಟವಾಗುತ್ತದೆ. ಬಿರಿಯಾನಿಗೆ ಪುದೀನ ಸೊಪ್ಪ ಹೆಚ್ಚು ಬಳಸುತ್ತರೆ. ಚಿಕನ್, ಫಿಷ್‍ಫ್ರೈಗಳ ಜೊತೆ ಸಾಸ್ ಬದಲು ಪುದೀನ ಚಟ್ನಿ ಇಲ್ಲಿನ ವಿಶೇಷ.
                  ಹೋಟೆಲ್ ಮಾಲೀಕ ರವಿ ನಂದನ್ ದಾಬಸ್‍ಪೇಟೆಯ ಹೆದ್ದಾರಿ ಸಮೀಪ ನಾಲ್ಕು ವರ್ಷಗಳಿಂದ ಹಳ್ಳಿ ನೆನಪು ಹೋಟೆಲ್ ನಡೆಸುತ್ತಿದ್ದು, ಅಪ್ಪಟ ಹಳ್ಳಿ ತಿನಿಸುಗಳಿಂದಲೇ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆರಂಭಿಸಿದ ಈ ಹೋಟೆಲ್‍ಗೆ ಹಳ್ಳಿಗಳಿಂದಲೂ ಗ್ರಾಹಕರು ಬರುತ್ತಾರೆ. ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಜನರ ಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾಕಷ್ಟು ಯುವಕರು, ಚಿತ್ರನಟರು ಊಟಕ್ಕೆ ಬರುತ್ತಾರೆ. ಹಾಗಾಗಿ ನಗರದ ಮಾಲ್‍ಗಳಲ್ಲಿ ತಮ್ಮ ರುಚಿ ಹಂಚಬೇಕು ಎಂಬ ಉದ್ದೇಶದಿಂದ ಜಿಟಿ ಮಾಲ್‍ನಲ್ಲಿ ಹೋಟೆಲ್ ಆರಂಭಿಸಿದರುವುದಾಗಿ ಅವರು ಹೇಳುತ್ತಾರೆ.

ತಾಜಾ ಮಾಂಸ, ನಮ್ಮದೇ ಮಸಾಲೆ:

                   50 ವರ್ಷಗಳ ಹಿಂದಿನ ರುಚಿಯನ್ನೇ ಈಗಿನವರಿಗೆ ನೀಡಬೇಕು ಎಂಬ ಉದ್ದೇಶದಿಂದ ಅದೇ ರುಚಿ ನೀಡುವಂಥ ಮಸಾಲೆಗಳನ್ನು ನಾವೇ ತಯಾರಿಸಿ, ನಾಟಿ ಕೋಳಿಗಳನ್ನೂ ಹಳ್ಳಿಗಳಿಂದ ಸಂಗ್ರಹಿಸಿ, ಮೇಕೆಗಳನ್ನೂ ಗ್ರಾಮಾಂತರ ಪ್ರದೇಶದ ರೈತರಿಂದ ಖರೀದಿಸಿ, ಗುಣಮಟ್ಟದ ಆಹಾರ ನೀಡಲು ಸಾಧ್ಯ. ಬೆಲೆಯಲ್ಲಿ ವ್ಯತ್ಯಸವಾದರೂ ಗುಣಮಟ್ಟದಲ್ಲಿ ರಾಜಿ ಮಾಡುವುದಿಲ್ಲ ಎನ್ನುತ್ತಾರೆ ಮಾಲೀಕರು.