Sri Kshethra Mandharthi

ಶ್ರೀ ಕ್ಷೇತ್ರ ಮಂದಾರ್ತಿ:

ಭೂಲೋಕದಲ್ಲಿ ಅತ್ಯಂತ ಪವಿತ್ರ ಸ್ಥಳವೆನಿಸಿದ ನೈಮಿಷಾರಣ್ಯದಲ್ಲಿ ಶ್ವನಕರೇ ಮೊದಲಾದ ಮಹರ್ಷಿಗಳು ಯಜ್ಞಾದಿ ಕಾರ್ಯಗಳನ್ನು ಮಾಡುತ್ತಾ ತಪಸ್ಸನ್ನಾಚರಿಸುತ್ತಿದ್ದರು. ಅವರಿಗೆ ಭಗವತ್ಕಥಗಳನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿರಲಿಲ್ಲ. ಒಂದು ದಿನ ಸೂತಪೂರಾಣಿಕರು ಅಲ್ಲಗೆ ಬರಲು, ಶೌನಕಾದಿಕಗಳು ಸ್ವಾಗತಿಸಿ ಸತ್ಕರಿಸಿದರು. ಮತ್ತು ಆತನನ್ನು ಕುರಿತು -"ನೀನು ತಿಳಿಯದ ವೇದ ರಹಸ್ಯವಿಲ್ಲ: ಪುರಾಣ, ಇತಿಹಾಸ, ಕಥೆ, ನೀತಿಶಾಸ್ತ್ರಗಳಿಲ್ಲ ಎಂದು ಕೇಳಿದ್ದೇವೆ. ದೈವೀ ಮಹಾತ್ಮ್ಯೆಗಳ್ಳುಳ್ಳ ಇತಿಹಾಸಗಳನ್ನು ಹೇಳಿ ನಮ್ಮನ್ನು ಧನ್ಯರನ್ನಾಗಿ ಮಾಡಬೇಕೆಂದು" ಕೇಳಿಕೊಂಡರು.

               ಆಗ ಆತನು ಸಮ್ಮತಿಸಿ ಅನೇಕ ಇತಿಹಾಸಗಳನ್ನು ಹೇಳಿದನು. ಪ್ರಸಂಗವಶಾತ್, ಮಂದರ್ತಿ ಕ್ಷೇತ್ರದ ಹೆಸರು ಬರಲು, ಶೌನಕಾದಿಗಳಿಗೆ ಆಸಕ್ತಿಯುಂಟಾಯಿತು. ಶ್ರೀ ಮಂದಾರ್ತಿ ಕ್ಷೇತ್ರದ ಇತಿಹಾಸವನ್ನು ವಿಸ್ತರಿಸಬೇಕೆಂದುಅಗ್ರಹಪಡಿಸಲು,ಸೂತಪುರಾಣಿಕರು ಶ್ರೀ ದುರ್ಗಾಪರಮೇಶ್ವರಿಯನ್ನು ಮನಸಾಧ್ಯಾನಿಸಿ, ಹೀಗೆಂದು ಹೇಳತೊಡಗಿದರು.

© 2014 AUTHOR CURIOUS KARNATAKA ALL RIGHTS RESERVED