Nudigattu / Nadaavali

ಮಂಜುನಾಥನ ನೆಲದಲ್ಲಿ ಧರ್ಮದೈವಗಳ ನುಡಿಗಟ್ಟು :-

                        ‘ನಡಾವಳಿ’ ಶಬ್ದದ ಅರ್ಥ ನಡವಳಿಕೆ, ಶಿಸ್ತು ನಿಯಮ. ಪರಂಪರೆಯ ಹಿನ್ನೆಲೆಗೊಂದು ಬಿಗುವಾದ ಚೌಕಟ್ಟು ಅಥವಾ ಬದ್ಧತೆಯಿದೆ. ತುಳು-ನಾಡಿನ ಪದ್ಧತಿಯಂತೆ ಧರ್ಮ ದೇವತೆ ಅಥವಾ ದೈವ, ಭೂತಗಳನ್ನು ಆರಾಧಿಸುವ ಕ್ರಮ ನೇಮ, ಕೋಲ. ಧರ್ಮಸ್ಥಳದಲ್ಲಿ ಧರ್ಮ ದೇವತೆಗಳಿಗೆ ನಡೆಯುವ ಆರಾಧನೆಯಾಗಿರುವ ಆರಾಧನೆಯನ್ನು ನಡಾವಳಿ ಎಂದು ಕರೆಯಲಾಗುತ್ತಿದೆ. ಇದು ಪರಂಪರಾಗತ ಆರ್ಷೇಯ ಪದ್ಧತಿಗಳಲ್ಲಿ ಒಂದಾಗಿದ್ದು ಅನೇಕ ಧಾರ್ಮಿಕ ವಿಧಿ ವಿಧಾನಗಳು ನಡೆಯುವುದರಿಂದ ‘ಮಹಾ ನಡಾವಳಿ’ ಎನ್ನಲಾಗುತ್ತಿದೆ. ಹೆಗ್ಗಡೆಯವರಿಗೆ ಪ್ರೇರಣೆ ಆದಾಗ ಮಾತ್ರ ‘ಮಹಾ ನಡಾವಳಿ’ ನಡೆಯುತ್ತದೆ.

 ನಡಾವಳಿ ಕ್ರಮ :

                        ಶ್ರೀ ಮಂಜುನಾಥ ಸ್ವಾಮಿ ಮತ್ತು ಬದಿನಡೆ ಬೆಟ್ಟದ ಧರ್ಮದೇವತೆಗಳ ಸನ್ನಿಧಿಯಲ್ಲಿ ವಿವಿಧ ಪ್ರಕಾರದ ನಡಾವಳಿ ಸೇವೆಗಳು ನಡೆಯುತ್ತವೆ. ಪ್ರತಿ ವರ್ಷದ ಕುಂಭ ಮಾಸ (ಫೆಬ್ರವರಿ)ದಲ್ಲಿ ಮಾಯಿ ನಡಾವಳಿ ನಡೆಯುತ್ತದೆ. ಆದರೆ ವಿಶೇಷತಃ ಹೆಗ್ಗಡೆಯವರಿಗೆ ಪ್ರೇರಣೆಯಾದಾಗ, ಕಾಲ ಕೂಡಿ ಬಂದಾಗ ನೆಲ್ಯಾಡಿ ಬೀಡಿಗೇ ಧರ್ಮ ದೇವತೆಗಳನ್ನು ಆಹ್ವಾನಿಸಿ ಅಲ್ಲಿ ಅವರಿಗೆ ನಡಾವಳಿ ಸೇವೆ ಸಡೆಯುವುದೂ ಉಂಟು. ಈ ಸಂದರ್ಭ ಶ್ರೀ ಮಂಜುನಾಥ ಸ್ವಾಮಿಗೆ 5 ದಿನಗಳ ಪರ್ಯಂತ ವಿಶೇಷ ಲಕ್ಷದೀಪೋತ್ಸವ, ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಆರಾಧನೆ, ಉತ್ಸವ ಜರುಗುತ್ತದೆ. ನಡಾವಳಿಯಲ್ಲಿ ಲಕ್ಷದೀಪೋತ್ಸವದ ನಂತರ ನೆಲ್ಯಾಡಿ ಬೀಡಿಗೆ ದೈವಗಳ ಭಂಡಾರ ಕೊಂಡೊಯ್ಯಲಾಗುತ್ತದೆ. ಅಂದರೆ ಧರ್ಮ ದೇವತೆಗಳ ಉಡುಗೆ ತೊಡುಗೆ, ಆಯುಧ, ಆಭರಣ ಮೊದಲಾದ ಪರಿಕರಗಳನ್ನು ದೇವಸ್ಥಾನದಿಂದ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮರುದಿನ 4 ಜಾವಗಳಲ್ಲಿ ಕಾಳರಾಹು, ಕಾಳರ್ಕಾಯಿ, ಕುಮಾರ ಸ್ವಾಮಿ, ಕನ್ಯಾಕುಮರಿಯೆಂಬ ಧರ್ಮ ದೇವತೆಗಳ ನೇಮ ನಡೆಯುತ್ತದೆ. ನಿಶ್ಚಿತ ಸಮಯದಲ್ಲಿ ‘ಪಾತ್ರಿ’ಯ ಮೇಲೆ ಧರ್ಮದೇವತೆಗಳೂ ಆವಾಹಿತವಾಗಿ. ‘ನುಡಿ’ ಕೊಡುವಂತೆ ಹೆಗ್ಗಡೆಯವರು ಪ್ರಾರ್ಥಿಸುತ್ತಾರೆ. ‘ನುಡಿಗಟ್ಟು’ ಲಭಿಸಿ, ಕ್ಷೇತ್ರದ ಪೂಜಾದಿ ಆಚರಣೆ ಕ್ರಮ ಸರಿಯಾಗಿ ನಡೆಯುತ್ತಿರುವ ಬಗ್ಗೆ ಧರ್ಮ ದೇವತೆಗಳು ಖಚಿತಪಡಿಸಿಕೊಂಡು ಅನಿಯತವಾಗಿ ದಾನಧರ್ಮಗಳನ್ನು ನಡೆಸುವಂತೆ ಆದೇಶ ನೀಡುತ್ತಾರೆ. ಅದಕ್ಕೆ ಪೂರಕವಾಗುವ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡುತ್ತಾರೆ. ಧರ್ಮದೇವತೆಗಳು ಹಾಗೂ ಹೆಗ್ಗಡೆಯವರ ನಡುವಿನ ಸಂವಹನದಲ್ಲಿ ಎಲ್ಲಿಯೂ ಹೆಗ್ಗಡೆಯವರು ಮೌನ ಮುರಿಯುವಂತಿಲ್ಲ.

ಧರ್ಮದೇವತೆಗಳು ನುಡಿ

                        ಕೊಡುತ್ತಿದ್ದರೂ ಅದಕ್ಕೆ ಬಾಯಿ ಮಾತಿನ ಮೂಲಕ ಉತ್ತರಿಸುವಂತಿಲ್ಲ. ಎಲ್ಲವೂ ತಮ್ಮ ಚಿತ್ತಕ್ಕೆ ವೇದ್ಯ ಎಂಬ ಅರ್ಥ ಬರುವಂತೆ ಸಂಜ್ಞೆಯ ಮೂಲಕವೇ ಉತ್ತರ ನೀಡಬೇಕು. ಮರುದಿನ ರಾತ್ರಿ ಅಣ್ಣಪ್ಪ ಸ್ವಾಮಿಯ ನೇಮ, ಬಳಿಕ ಕಲ್ಲೇರಿತ್ತಾಯ, ಇಷ್ಟದೇವತೆ, ಕುಕ್ಕಿನಡ್ಕತ್ತಾಯರಿಗೆ ನೇಮ ನಡೆಯುತ್ತದೆ. ಕೊನೆಗೆ ದಿನ ‘ಚಪ್ಪರಸೂರೆ’ ಎಂಬ ವಿಶಿಷ್ಟ ಕಾರ್ಯಕ್ರಮವೂ ನಡೆಯುತ್ತದೆ. ಶಬ್ದಾರ್ಥವೇ ಹೇಳುವಂತೆ ಇದು ಮುಕ್ತದಾನ ಪದ್ದತಿ. ಕುಟುಂಬಕ್ಕೆ ಸಂಬಂಧಪಟ್ಟ ಸಮಸ್ತ ವಸ್ತುಗಳನ್ನೂ ಒಂದು ಚಪ್ಪರದ ಅಡಿಯಲ್ಲಿ ಇಟ್ಟು ಸೂರೆಗೈಯಲು ಅವಕಾಶ ಮಾಡಿಕೊಡುವ ವಿಶಿಷ್ಟ ಕ್ರಮ ಇದಾಗಿದೆ. ಯುವಕರ ಶಕ್ತಿ, ಚತುರತೆ ಪರೀಕ್ಷೆಗೂ ಅವಕಾಶ ಕೊಟ್ಟಂತೆ. ಕ್ಷೇತ್ರದ ಅಪೂರ್ವ ದಾನ ಪರಂಪರೆಯಲ್ಲಿ ಇದು ಕೂಡಾ ಒಂದೆನಿಸಿದೆ. ಧರ್ಮಸ್ಥಳ ಕ್ಷೇತ್ರದ ನಿರಂತರ ಧರ್ಮ ಯಾತ್ರೆಯಲ್ಲಿ ಮುಂದಿನ ಸಾವಿರಾರು ಯೋಜನೆಗಳಿಗೆ ಮಹಾನಡಾವಳಿ ಪ್ರೇರಣೆಯಾಗಿದೆ ಎಂದು ಧರ್ಮಾಧಿಕಾರಿ ಡಾ| ಹೆಗ್ಗಡೆಯವರು ಮನದುಂಬಿ ನುಡಿದಿದ್ದಾರೆ. ನಡಾವಳಿ ಬಹು ಕಾಲದಿಂದ ರೂಢಿಯಾಗಿ, ಸಂಪ್ರದಾಯವಾಗಿ ನಡೆದು ಬಂದ ಧರ್ಮಪ್ರಚಾರ ಕಾರ್ಯ. ಕಾಲ ಕಾಲದಲ್ಲಿ ನಾನಾ ರೀತಿಯಲ್ಲಿ ಭಜಿಸಿ, ಪೂಜಿಸಿಕೊಂಡು ಬರುವಂತಹ ದೇವರನ್ನೂ, ವಿವಿಧ ದೇವತೆಗಳನ್ನೂ ಆರಾಧನೆ, ಅರ್ಚನೆ, ಪೂಜಾ ವಿಧಾನಗಳಿಂದ ಪ್ರಸನ್ನೀಕರಿಸಿಕೊಳ್ಳುವ ಒಂದು ಮಹಾಯಜ್ಞ. ರಾಷ್ಟ್ರದ ಅಭ್ಯದಯಕ್ಕೂ, ಲೋಕದ ಸುಕ ಶಂತಿ ನಿಮ್ಮದಿ, ಕ್ಷೇಮ ಲಾಭಕ್ಕೂ ಹಿಂಬಲ ಮುಂಬಲ ದೊರಕುವ ಹಾಗೆ, ಭಕ್ತಿ ಭಾವದ ಪ್ರಾರ್ಥನೆಗಳಿಂದ ಒಲಿಸಿಕೊಳ್ಳುವುದೇ ಇದರ ಉದದೇಶವಾಗಿದೆ ಎಂದು ಮಂಜಯ್ಯ ಹೆಗ್ಗಡೆಯವರು ನಡಾವಳಿ ಕುರಿತು ಹೇಳಿದ್ದರು. 1886, 1909ರಲ್ಲಿ, 1951ರಲ್ಲಿ ಮಹಾ ನಡಾವಳಿ ನಡೆದ ಬಗ್ಗೆ ದಖಲೆಗಳಿವೆ. ತ್ರಿವೇಣಿ ಸಂಗಮದ ಕುಂಭಮೇಳದೋಪಾದಿಯಲ್ಲಿ ಜನ ಸೇರಿತ್ತು ಎಂದು ಹಿರಿಯರು ಸ್ಮರಿಸುತ್ತಾರೆ. 1951ರ ನಡಾವಳಿಯನ್ನು ಉದ್ಘಟಿಸಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರೇ 2005ರ ಮಹಾನಡಾವಳಿಯನ್ನೂ ಉದ್ಘಾಟಿಸಿದ್ದರು.