Kukke Sri Subramanya Temple Seva Mahithi

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ಸೇವಾ ಮಾಹಿತಿ:

ಸರ್ಪಸಂಸ್ಕಾರಯುಕ್ತ ನಾಗಪ್ರತಿಷ್ಠೆ :-

                   ಸರ್ಪಹತ್ಯಾ ದೋಷದ ನಿವಾರಣೆಗಾಗಿ ಈ ಹರಕೆಯನ್ನು ಸಲ್ಲಿಸುವ ಭಕ್ತಾದಿಗಳು ಉಪನಯನ ಸಂಸ್ಕಾರವನ್ನು ಹೊಂದಿದ್ದರೆ ಹಾಗೂ ಪಿತೃ ಸಂಸ್ಕಾರವನ್ನು ನೆರವೇರಿಸಿದ್ದಲ್ಲಿ ಅಂತಹ ಮಂದಿಗಳು ಸ್ವತಃ ಕರ್ತೃಗಳಾಗಿ ನೆರವೇರಿಸಬಹುದು. ಇತರ ಮಂದಿಗಳಿಗೆ ಅನ್ಯ ಬ್ರಾಹ್ಮಣ ಮುಖೇನ ಮಾಡಿಸಲು ಶ್ರೀ ದೇವಳದಿಂದ ವ್ಯವಸ್ಥೆ ಕಲ್ಪಿಸಲಾಗುವುದು. ದಶಮಿ ದಿನಗಳಲ್ಲಿ ಮತ್ತು ಏಕಾದಶಿ, ಗ್ರಹಣ ಇತ್ಯಾದಿ ಉಪವಾಸ ದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಯ 15 ದಿನಗಳಲ್ಲಿ ಈ ಸೇವೆಯು ನಡೆಯುವುದಿಲ್ಲ. 2 ದಿನಗಳಲ್ಲಿ ನಡೆಯುವ ಈ ಹರಕೆಯನ್ನು ನೆರವೇರಿಸಲು ಭಕ್ತಾದಿಗಳು ಕ್ಷೇತ್ರದಲ್ಲೇ ವಾಸ್ತವ್ಯವಿರತಕ್ಕದ್ದು.

                    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಲು ಅಪೇಕ್ಷಿಸುವ ಭಕ್ತಾದಿಗಳು ರೂ.2.500ರ ಮೊತ್ತಕ್ಕೆ ಯಾವುದೇ ಬ್ಯಾಂಕ್ ನ ಡಿ.ಡಿ.ಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿಗೆ ತೆಗೆದು ತಮ್ಮ ಸ್ಪಷ್ಟ ಪೂರ್ಣ ವಿಳಾಸದೊಂದಿಗೆ (ದೂರವಾಣಿ ಸಂಖ್ಯೆ ಸಹಿತ). ಶ್ರೀ ದೇವಳಕ್ಕೆ ಮುಂಚಿತವಾಗಿ ಕಳುಹಿಸಿ ಬುಕ್ಕಿಂಗ್ ಮಾಡಿಸಿಕೊಳ್ಳತಕ್ಕದ್ದು ಅಥವಾ ಸ್ವತಃ ನಗದು ಪಾವತಿಸಿಯೂ ಬುಕ್ಕಿಂಗ್ ಮಾಡಿಸಬಹುದು. ಡಿ. ಡಿ. ತಲುಪಿದ ನಂತರ ಶ್ರೀ ದೇವಳದಿಂದ ದಿನ ನಿಗದಿಪಡಿಸಿ ತಿಳಿಸಲಾಗುವುದು. ಅಲ್ಲದೇ ಶ್ರೀ ದೇವಳದ ಅಧಿಕೃತ ವೆಬ್ ಸೈಟ್  ತಿತಿತಿ.ಞuಞಞe.oಡಿgನಲ್ಲಿ ಆನ್ ಲೈನ್ ಮೂಲಕವೂ ಬುಕ್ಕಿಂಗ್ ಮಾಡಿಸಬಹುದು.

1. ನಾಗಪ್ರತಿಷ್ಠೆ :-

                 ಏಕಾದಶಿ ಅಥವಾ ಇನ್ಯಾವುದೇ ಉಪವಾಸ ದಿನಗಳಲ್ಲಿ ಈ ಸೇವೆಯು ನಡೆಯುವುದಿಲ್ಲ. ಪೂರ್ವಾಹ್ನ ಗಂಟೆ 10.00ರ ಒಳಗಾಗಿ ಶ್ರೀ ದೇವಳದ ಸೇವಾ ಕಛೇರಿಯಲ್ಲಿ ರೂ.400ನ್ನು ಪಾವತಿಸಿ ರಶೀದಿಯನ್ನು ಪಡೆಯುವುದು. ಶ್ರೀ ದೇವಳದ ಹೊರಾಂಗಣದಲ್ಲಿರುವ ಸಂಕಲ್ಪ ಮಂದಿರದಲ್ಲಿ ಸದ್ರಿ ಸೇವೆಯ ಭಕ್ತಾದಿಗಳು ಪುರೋಹಿತರಿಂದ ಸಂಕಲ್ಪ ಮಾಡಿಸಿಕೊಂಡು ಪ್ರದಕ್ಷಿಣೆ ಬಂದು ಗಂಟೆ 10.00ರ ಸುಮಾರಿಗೆ ನಡೆಯುವ ಹೋಮದ ಪೂರ್ಣಾಹುತಿ ನೋಡಿಕೊಂಡು ಮಹಾಪೂಜಾ ನಂತರ ಮಧ್ಯಾಹ್ನ ಗಂಟೆ 12.00ರ ಸುಮಾರಿಗೆ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಡೆಯುವ ಪ್ರತಿಷ್ಠಾ ಕಾರ್ಯದಲ್ಲಿ ಭಾಗವಹಿಸಿ  ಪ್ರಸಾದ ಸ್ವೀಕರಿಸುದು.

ಆಶ್ಲೇಷ ಬಲಿ :-

                ಏಕಾದಶಿ ಅಥವಾ ಯಾವುದೇ ಉಪವಾಸ ದಿನಗಳ ಹೊರತು ಇತರ ಯಾವುದೇ ದಿನಗಳಲ್ಲಿ ಈ ಕಾರ್ಯವನ್ನು ನೆರವೇರಿಸಬಹುದು. ಬೆಳಿಗ್ಗೆ ಗಂಟೆ 6.30, 8.00 ಮತ್ತು 9.30ಕ್ಕೆ ಮೂರು ಬಾರಿಯಾಗಿ ನೆರವೇರಿಸುವ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ಸೇವಾ ಕಛೇರಿಯಲ್ಲಿ  ಆಯಾ ದಿನವೇ 15 ನಿಮಿಷಗಳ ಮುಂಚಿತವಾಗಿ ರೂ 400ನ್ನು ಪಾವತಿಸಿ ರಶೀದಿ ಪಡೆದುಕೊಳ್ಳತಕ್ಕದ್ದು. ದೇವಳದ ಹೊರಾಂಗಣದಲ್ಲಿರುವ ಸಂಕಲ್ಪ ಮಂದಿರದಲ್ಲಿ ಪುರೋಹಿತರಿಂದ ಸಂಕಲ್ಪ ಮಾಡಿಸಿಕೊಂಡು, ಹೋಮಾದಿ ಕಾರ್ಯಗಳಲ್ಲಿ ಉಪಸ್ಥಿತರಿದ್ದು ಪೂರ್ಣಾಹುತಿ ನಂತರ ಪ್ರಸಾದ ಸ್ವೀಕರಿಸುವುದು.

ಪ್ರಾರ್ಥನೆ :-

             ಸರ್ಪಹತ್ಯಾ, ದೋಷ, ಕಾಳಸರ್ಪ ದೋಷ ಮುಂತಾದ ದೋಷಗಳ ಸಂಬಂಧವಾಗಿ ಬರುವಂತಹ ಸಂತಾನ ಹೀನತೆ, ಧರ್ಮವ್ಯಾದಿ, ಭೂಮಿ, ನೀರು ಇತ್ಯಾದಿ ಜ್ವಲಂತ ಸಮಸ್ಯೆಗಳ ಪರಿಹಾರೋಪಾಯಕ್ಕಾಗಿ ಹಾಗೂ ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯುನ್ನು ನೆರೆವೇರಿಸಬಹುದು. ಮಧ್ಯಾಹ್ನ ಮಹಾಪೂಜಾ ನಂತರ (ಗಂಟೆ 12.30) ಹಾಗೂ ರಾತ್ರಿ ಮಹಾಪೂಜಾ ನಂತರ (ಗಂಟೆ 7.30) ಶ್ರೀ ದೇವರ ಮುಂಭಾಗದಲ್ಲಿ ಪ್ರಾರ್ಥನೆಯನ್ನು ನಡೆಸಲಾಗುವುದು. ಮಧ್ಯಾಹ್ನ ಗಂಟೆ 12.00ರ ಒಳಗಾಗಿ ಅಥವಾ ಸಾಯಂಕಾಲ ಗಂಟೆ 7.00ರ ಒಳಗಾಗಿ ಸೇವಾ ಕಛೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ರಶೀದಿ ಪಡೆದುಕೊಳ್ಳತಕ್ಕದ್ದು.

ವಿಶೇಷ ಮಾಹಿತಿ: 

1.ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಪೂಜೆ, ಚವಲ, ಅಭಿಷೇಕಾದಿ ಸೇವೆಗಳು ಮಧ್ಯಾಹ್ನದ ಒಳಗೆ ಮಾತ್ರ ನಡೆಯುವ ಸೇವೆಗಳಾಗಿದ್ದರಿಂದ ಬೆಳಿಗ್ಗೆಯೇ ನಿಗದಿತ ಸಮಯಕ್ಕೆ ಮುಂಚೆಯೇ ರಶೀದಿ ಮಾಡಿಸಿಕೊಳ್ಳತಕ್ಕದ್ದು.

2. ಏಕಾದಶಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶಿವರಾತ್ರಿ ಹಾಗೂ ಗ್ರಹಣ ಸಮಯದ ದಿನಗಳಲ್ಲಿ ಅಭಿಷೇಕಗಳು, ಮಹಾಪೂಜೆ, ಕಾರ್ತಿಕಪೂಜೆ, ಶೇಷಸೇವೆ, ಹಣ್ಣುಕಾಯಿ, ಮಂಗಳಾರತಿ ಸೇವೆಯನ್ನು ಹೊರತುಪಡಿಸಿ  ಯಾವುದೇ ಹರಕೆ ಸೇವೆಗಳು ನಡೆಯುವುದಿಲ್ಲ.

3. ಮಹಾ ರಥೋತ್ಸವ, ಚಿಕ್ಕ ರಥೋತ್ಸವ, ಬೀದಿಯಲ್ಲಿ ಚಂದ್ರಮಂಡಲ ಉತ್ಸವ, ಬೀದಿಯಲ್ಲಿ ಹೂವಿನ ತೇರಿನ ಉತ್ಸವ, ಪಂಚಾಮೃತ ಮಹಾಭಿಷೇಕ ಸೇವೆ ನಿಗದಿತ ದಿನಗಳಲ್ಲಿ ಮಾತ್ರ ನಡೆಯುವುದಾಗಿದ್ದು, ಕನಿಷ್ಟ 15 ದಿನಗಳ ಮುಂಚಿತವಾಗಿ ಮುಂಗಡ ಪಾವತಿಯೊಂದಿಗೆ ದಿನ ನಿಗದಿ ಮಾಡಬೇಕಾಗುವುದು.

4.ರಾಜಾಂಗಣದಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ, ದೀಪಾರಾಧನೆಯುಕ್ತ ಪಾಲಕಿ ಉತ್ಸವ, ಪಲ್ಲಕಿ ಉತ್ಸವಯುಕ್ತ ಮಹಾಪೂಜೆ, ಇಡೀ ದಿನದ ಸಪರಿವಾರ ಸಂಕ್ಷಿಪ್ತ ಸೇವಾ, ರಾತ್ರಿ ಮಹಾಪೂಜಾಯುಕ್ತ ಪಲ್ಲಕಿ ಉತ್ಸವ ಸೇವೆಗಳು ದೀಪಾವಳಿ ಪಾಡ್ಯದಿಂದ ಜ್ಯೇಷ್ಠ ಶುದ್ಧ ಷಷ್ಠಿ (ಸುಮಾರು ಮೇ ತಿಂಗಳವರೆಗೆ) ಮಾತ್ರ ನಡೆಯುತ್ತದೆ (ಏಕಾದಶಿ ದಿನ ಹೊರತುಪಡಿಸಿ).

5.ಕಾರ್ತಿಕ ಬಹುಳ ದ್ವಾದಶಿಯಿಂದ ಮಾರ್ಗಶಿರ ಶುದ್ದ ದ್ವಾದಶಿವರೆಗೆ 15 ದಿನ ವಾರ್ಷಿಕ ಜಾತ್ರಾ ಸಮಯ ಸರ್ಪ ಸಂಸ್ಕಾರ ಸೇವೆ ನಡೆಯುವುದಿಲ್ಲ.

6.ರಂಗಪೂಜೆ ಹಾಗೂ  ಸತ್ಯನಾರಾಯಣ ಪೂಜೆಗಳು ಅಪರಾಹ್ನ ನಡೆಯುವುದಾಗಿದ್ದು, ಪೂರ್ವಾಹ್ನ ಗಂಟೆ 9.30 ರ ಒಳಗಾಗಿ ರಶೀದಿ ಮಾಡಿಸಿಕೊಳ್ಳತಕ್ಕದ್ದು.

7.ಡೋಲೋತ್ಸವ ಸೇವೆಯು ಚಂದ್ರಮಾನ ಯುಗಾದಿಯಿಂದ ನಂತರ ಜೇಷ್ಠ ಶುದ್ಧ ಷಷ್ಠಿವರೆಗೆ ಮಾತ್ರ ರಾತ್ರಿ ನಡೆಯುವುದು.

8.ಮಂಟಪೋತ್ಸವ ಸೇವೆಯು ಮಾರ್ಗಶಿರ ಶುದ್ಧ ಸಪ್ತಮಿಯಿಂದ ನಂತರ ಜ್ಯೇಷ್ಠ ಶುದ್ಧ ಪಂಚಮಿವರೆಗೆ ಮಾತ್ರ ರಾತ್ರಿ ನಡೆಯುವುದು.

9.ಪುರುಷರಾಯನಿಗೆ ಒಂಟಿನೇಮವನ್ನು ಮಾಡಲಪೇಕ್ಷಿಸುವ ಭಕ್ತಾದಿಗಳು 15 ದಿನಗಳ ಮುಂಚಿತವಾಗಿ ದಿನ ನಿಗದಿ ಮಾಡಿಸಿಕೊಳ್ಳತಕ್ಕದ್ದು ( ಮಾರ್ಗಶಿರ ಬ. ಸಪ್ತಮಿಯಿಂದ ವೈಶಾಖ ಮಾಸದವರೆಗಿನ ಪ್ರತಿ ಸಪ್ತಮಿಗಳಲ್ಲಿ).

10.ಆಶ್ಲೇಷ ಬಲಿ ಸೇವೆಯು ಬೆಳ್ಳಿಗೆ ಗಂಟೆ 6.30, 8.00 ಮತ್ತು 9.30ಕ್ಕೆ ಮೂರು ಬಾರಿಯಾಗಿ ನಡೆಯುವುದು. 15 ನಿಮಿಷಗಳ ಮುಂಚಿತವಾಗಿ ರಶೀದಿ ಪಡೆದುಕೊಳ್ಳತಕ್ಕದ್ದು.

11.ಉರುಳು ಸೇವೆ ಮಾಡಲಿಚ್ಚಿಸುವ ಭಕ್ತಾದಿಗಳಿಗೆ ಶ್ರೀ ದೇವಳದ ಹೊರಾಂಗಣದಲ್ಲಿ ಮಾತ್ರ ಅವಕಾಶವಿರುತ್ತದೆ.

12.ವಾರ್ಷಿಕ ಜಾತ್ರೆಯ ಚಂಪಾಷಷ್ಠಿ ದಿನದಂದು ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆ ನಡೆಯುವುದಿಲ್ಲ. 

13.ರೂ.50ಕ್ಕಿಂತ ಮೇಲ್ಪಟ್ಟು ಕಾಣಿಕೆಯನ್ನು ಮನಿ ಆರ್ಡರ್ ಮೂಲಕ ಕಳುಹಿಸುವವರಿಗೆ ಪ್ರಸಾದವನ್ನು ಅಂಚೆ ದ್ವಾರಾ ರವಾನಿಸಲಾಗುವುದು.

ಶ್ರೀ ದೇವರ ವಾರ್ಷಿಕ ಜಾತ್ರೆ ಹಾಗೂ ಇತರ ಪಂಚಪರ್ವಾದಿ ವಿಶೇಷ ಉತ್ಸವಗಳು:-

1. ಕಾರ್ತಿಕ ಬಹುಳ ದ್ವಾದಶಿಯಿಂದ ಮಾರ್ಗಶಿರ ಶುದ್ಧ ದ್ವಾದಶಿವರೆಗೆ – 15 ದಿನ ವಾರ್ಷಿಕ ಜಾತ್ರೆ

2. ಮಾರ್ಗಶಿರ ಶುದ್ಧ ಷಷ್ಠಿ _ ಚಂಪಾಷಷ್ಠಿ ಮಹಾರಥೋತ್ಸವ

3. ಪುಷ್ಯ ಶುದ್ಧ ಷಷ್ಠಿ _ ಕಿರುಷಷ್ಠಿ

4. ಮಾಘ ಶುದ್ಧ ಷಷ್ಠಿ- ರಾತ್ರಿ ಹೂವಿನ ತೇರು ಉತ್ಸವ

5. ಮಾಘ ಶುದ್ಧ ಸಪ್ತಮಿ (ರಥ ಸಪ್ತಮಿ)_ ಸಾಯಂಕಾಲ ಹೂವಿನ ತೇರು ಉತ್ಸವ

6. ಮಕರ ಸಂಕ್ರಮಣ _ ಕುಕ್ಕೆಲಿಂಗ ಜಾತ್ರೆ

7. ಮೇಷ (ವಿಷು) ಸಂಕ್ರಮಣ _ ಚಿಕ್ಕ ರಥೋತ್ಸವ

8. ಮಾಘ ಬಹುಳ ತ್ರಯೋದಶಿ _ ಮಹಾ ಶಿವರಾತ್ರಿ

9. ಶ್ರಾವಣ ಶುದ್ಧ ಪಂಚಮಿ_ ನಾಗರ ಪಂಚಮಿ

ಭಕ್ತಾದಿಗಳು ಪಾಲಿಸತಕ್ಕ ನಿಯಮಗಳು :-

1. ಸ್ನಾನ ಮಾಡಿ ಶ್ರೀ ದೇವಳವನ್ನು ಪ್ರವೇಶಿಸತಕ್ಕದ್ದು.

2. ದೇವಳದ ಒಳಾಂಗಣದಲ್ಲಿ ಶರ್ಟ್, ಬನಿಯನ್, ಟೋಪಿ ಇತ್ಯಾದಿಗಳನ್ನು ಧರಿಸಬಾರದು.

3. ಎಲ್ಲಾ ಕಾಣಿಕೆ / ಹರಕೆಗಳನ್ನು ಹುಂಡಿಯಲ್ಲಿ ಹಾಕುವುದು.

4. ಛತ್ರಿ ಹಾಗೂ ಚರ್ಮದಿಂದ ತಯಾರಾದ ವಸ್ತುಗಳನ್ನು ದೇವಳದ ಒಳಾಂಗಣಕ್ಕೆ ತರಬಾರದು.

5. ದೇವಳದ ಪ್ರಾಕಾರದಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಉಗುಳುವುದು / ತಿಂಡಿ ತಿನಿಸುಗಳನ್ನು ತಿನ್ನುವುದನ್ನು ನಿಷೇಧಿಸಿದೆ.

6. ತೈಲಮಜ್ಜನವನ್ನು ಮಾಡಿಕೊಂಡು ದೇವಳದೊಳಗೆ ಪ್ರವೇಶಿಸಬಾರದು.

7. ಪಾದರಕ್ಷೆಗಳನ್ನು ದೇವಳದ ಪ್ರಾಕಾರಕ್ಕೆ ತರಕೂಡದು.

8. ಮೊಬೈಲ್ ಪೋನ್‍ಗಳನ್ನು ಬಳಸುವುದು ಮತ್ತು ವೀಡಿಯೋ / ಪೋಟೋ ಚಿತ್ರೀಕರಣವನ್ನು ಕಡ್ಡಾಯವಾಗಿ ನಿಷೇಧಿಸಿದೆ.

9. ಗಾಯಗಳು ಅಥವಾ ವೃಣ ಇರುವ ವ್ಯಕ್ತಿಗಳು  ದೇವಳವನ್ನು ಪ್ರವೇಶಿಸಬಾರದು.

10. ಮಹಿಳೆಯರು ಬಹಿಷ್ಠೆಯರಾದಾಗ 7 ದಿನ ದೇವಳವನ್ನು ಪ್ರವೇಶಿಸಬಾರದು.

11. 6 ತಿಂಗಳ ನಂತರದ ಗರ್ಭಿಣಿ ಸ್ತ್ರೀಯರು ದೇವಳದ ಪ್ರಾಕಾರಕ್ಕೆ ಬರಕೂಡದು.

12. ದೇವಳದ ಶುಚಿತ್ವ ಹಾಗೂ ಪಾವಿತ್ರ್ಯತೆಯನ್ನು ಕಾಪಾಡತಕ್ಕದ್ದು.

13. ದೇವಳದಲ್ಲಿ ಶಾಂತತೆಯಿಂದ ಸೌಜನ್ಯದಿಂದ ವರ್ತಿಸತಕ್ಕದ್ದು.

14. ಶ್ರೀ ದೇವಳದಲ್ಲಿ ಬರುವ ಭಕ್ತಾದಿಗಳು ಶ್ರೀ ದೇವಳದ ಧರ್ಮ / ಸಂಪ್ರದಾಯಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

15. ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತರಾಗಿರಲು ಸೂಚಿಸಿದೆ.

16. ಯಾವುದೇ ಹೆಚ್ಚಿನ ಮಾಹಿತಿಗಾಗಿ ದೇವಳದ ಅಧಿಕೃತ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು.

ಭಕ್ತಾದಿಗಳಿಗೆ ಇತರ ಸೌಕರ್ಯಗಳು:- 

1. ಸುರಕ್ಷತೆಯ ದೃಷ್ಠಿಯಿಂದ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ.

2. ಮಧ್ಯಾಹ್ನ ಮತ್ತು ರಾತ್ರಿ ಅನ್ನದಾಸೋಹದ ಸೌಕರ್ಯವಿರುತ್ತದೆ.

3. 24 ಗಂಟೆಯೂ ಕಾರ್ಯನಿರ್ವಹಿಸುವ ಲಗ್ಗೇಜು ಕೊಠಡಿಯ ಸೌಕರ್ಯ.

4. ಕಲ್ಯಾಣ ಮಂಟಪದ ವ್ಯವಸ್ಥೆ.

5. ವಾಚನಾಲಯದ ಸೌಲಭ್ಯವಿರುತ್ತದೆ.

6. ಆದಿಸುಬ್ರಹ್ಮಣ್ಯ ಮತ್ತು ಬಿಲದ್ವಾರ ಎಂಬಲ್ಲಿ ಸುಂದರ ಪುಷ್ಪೋದ್ಯಾನಗಳನ್ನು ನಿರ್ಮಿಸಲಾಗಿದೆ.

7. ವಸತಿ ವ್ಯವಸ್ಥೆ.

8. ಶೌಚಾಲಯಗಳ ವ್ಯವಸ್ಥೆ.

ಭಕ್ತಾದಿಗಳ ಗಮನಕ್ಕೆ :

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕ್ಷೇತ್ರದಲ್ಲಾಗಲೀ ಅಥವಾ ರಾಜ್ಯದ ಯಾವ ದೇಶದ ಯಾವುದೇ ಊರು / ನಗರಗಳಲ್ಲಿ ಉಪಶಾಖೆಗಳಿರುವುದಿಲ್ಲ. ಆದುದರಿಂದ ಶ್ರೀ ದೇವರಿಗೆ ಸಲ್ಲತಕ್ಕ ಸರ್ಪಸಂಸ್ಕಾರ - ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮುಂತಾದ ಯಾವುದೇ ಸೇವೆಗಳಾಗಲಿ, ಕಾಣಿಕೆ-ದೇಣಿಗೆಗಳಾಗಲಿ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ”ದ ಹೆಸರಿಗೆ ಸಂದಾಯವಾಗಿ ದೇವಳದ ಆವರಣದೊಳಗೆ ಅಥವಾ ದೇವಳದಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಸೇವೆಗಳನ್ನು ನಡೆಸಿದಲ್ಲಿ ಮಾತ್ರ ಶ್ರೀ ದೇವಳದ ಭಂಡಾರಕ್ಕೆ ತಮ್ಮ ಕಾಣಿಕೆಗಳು ಅರ್ಪಿತವಾಗಿ “ಕುಕ್ಕೆ ಶ್ರೀ ಸುಬ್ರಹ್ಮಣ್ಯ” ದೇವರಿಗೆ ಸೇವೆಗಳನ್ನು ಪೂರೈಸಿದಂತಾಗುವುದು ಹೊರತು ಇನ್ನಿತರ ಯಾವುದೇ ಕಡೆಗಳಲ್ಲಿ ಭಕ್ತಾದಿಗಳ ಸೇವೆ ಯಾ ಕಾಣಿಕೆಗಳನ್ನು ನೀಡಿದಲ್ಲಿ “ಕುಕ್ಕೆ ಶ್ರೀ ಸುಬ್ರಹ್ಮಣ್ಯ” ದೇವರಿಗೆ ಸಂದಾಯವಾದಂತಾಗಲಾರದು ಹಾಗೂ ದೇವಳದ ಕಛೇರಿ ಹೊರಗೆ ಯಾವುದೇ ವ್ಯಕ್ತಿಗಳಿಗೆ ಹಣ ನೀಡಿ ಭಕ್ತಾದಿಗಳು ಮೋಸ ಹೋದಲ್ಲಿ ಈ ಬಗ್ಗೆ ದೇವಳವು ಜವಾಬ್ದಾರಿಯಲ್ಲ ಎಂಬ ವಿಚಾರಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಭಕ್ತಾದಿಗಳಿಗೆ ದೇವಳದ ಆಡಳಿತವು ಈ ಮೂಲಕ ಸ್ಪಷ್ಟಪಡಿಸುತ್ತದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ:

ದೇವಸ್ಥಾನದ ಬಾಗಿಲು ತೆರೆಯುವ ಹಾಗೂ ಮುಚ್ಚುವ ಸಮಯ

ಶ್ರೀ ದೇವರ ದರ್ಶನ ಸಮಯ

ಪೂರ್ವಹ್ನ 6.30 ರಿಂದ ಅಪರಾಹ್ನ 1.30ರವರೆಗೆ  

ಅಪರಾಹ್ನ 3.30 ರಿಂದ ರಾತ್ರಿ 8.00ರ ವರೆಗೆ

ಪ್ರಾತಃ ಕಾಲ 5.00 ಗರ್ಭಗುಡಿ ಬಾಗಿಲು ತೆರೆಯುವುದು, ಗೋಪೂಜೆ

ಬೆಳಿಗ್ಗೆ 5.30 ರಿಂದ 6.00 ಶ್ರೀ ದೇವರಿಗೆ ಉಷಾಕಾಲ ಪೂಜೆ

ಬೆಳಿಗ್ಗೆ 6.30 ರಿಂದ 10.00 ಸೇವೆಗಳು

ಪೂರ್ವಾಹ್ನ 10.00 ರಿಂದ  12.15 ಕಲಶ ಪೂಜೆ, ಪಂಚಾಮೃತಾಭಿಷೇಕ, ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ

ಅಪರಾಹ್ನ 12.30 ರಿಂದ 1.30 ಶ್ರೀ ದೇವರ ತೀರ್ಥಪ್ರಸಾದ ವಿತರಣೆ 

ಅಪರಾಹ್ನ 11.30 ರಿಂದ 2.00 ಅನ್ನ ಸಂತರ್ಪಣೆ

ಅಪರಾಹ್ನ 3.30 ರಿಂದ 6.00 ಸೇವೆಗಳು

ಸಂಜೆ 6.00 ರಿಂದ 7.45 ಶ್ರೀ ದೇವರಿಗೆ ಮಹಾಪೂಜೆ

ರಾತ್ರಿ 7.45 ರಿಂದ 8.30 ಶ್ರೀ ದೇವರ ತೀರ್ಥಪ್ರಸಾದ ವಿತರಣೆ

ರಾತ್ರಿ 7.30 ರಿಂದ 9.30 ಪ್ರಸಾದ ಭೋಜನ ವಿತರಣೆ

ವಿ.ಸೂ: ವಿಶೇಷ ದಿನಗಳಲ್ಲಿ ಅನಿರೀಕ್ಷಿತ ಸಮಯದ ಬದಲಾವಣೆಗಳು ಒಳಪಟ್ಟಿರುತ್ತದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ಸಮೀಪದ ರೈಲ್ವೆ ಸ್ಟೇಷನ್

ನೆಟ್ಟಣ ರೈಲ್ವೇ ಸ್ಟೇಷನ್-12 ಕಿ.ಮೀ

ಪುತ್ತೂರು ರೈಲ್ವೇ ಸ್ಟೇಷನ್ - 59 ಕಿ.ಮೀ

ಮಂಗಳೂರು ರೈಲ್ವೇ ಸ್ಟೇಷನ್- 103 ಕಿ.ಮೀ

ಮೈಸೂರು ರೈಲ್ವೇ ಸ್ಟೇಷನ್ -168 ಕಿ.ಮೀ

ಬೆಂಗಳೂರು ರೈಲ್ವೇ ಸ್ಟೇಷನ್-281 ಕಿ.ಮೀ

ಸಮೀಪದ ವಿಮಾನ ನಿಲ್ದಾಣ ಬಜಪೆ (ಮಂಗಳೂರು)-113 ಕಿಮೀ

ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ- 306 ಕಿ.ಮೀ

ಪ್ರಯಾಣ ಸೌಕರ್ಯ

ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಮಡಿಕೇರಿ, ಸುಳ್ಯ, ಪುತ್ತೂ, ಗೋಕರ್ಣ, ಹುಬ್ಬಳ್ಳಿ, ಉಡುಪಿ, ಶೀವಮೊಗ್ಗ, ಹರಿಹರ, ದಾವಣಗೆರ, ಕಳಸ, ಹರಪ್ಪನಹಳ್ಳಿ, ಬೆಳಗಾವಿ, ಧರ್ಮಸ್ಥಳ ಇತ್ಯಾದಿ ಕಡೆಗಳಿಂದ ಸಾಕಷ್ಟು ಕೆ.ಎಸ್.ಆರ್.ಟಿ.ಸಿ ಬಸ್ಗಳ ಸೌಕರ್ಯ ಮತ್ತು ಖಾಸಗಿ ವಾಹನಗಳ ಸೌಲಭ್ಯ ಇರುತ್ತದೆ. ಸುಬ್ರಹ್ಮಣ್ಯ ಬಸ್ಸು ನಿಲ್ದಾಣದ ದೂ.ಸಂ. 08257 281212

ಬಸ್ಸು ನಿಲ್ದಾಣದ ಮುಂಗಡ ಟಿಕೇಟ್ ಕೌಂಟರ್ ದೂ.ಸಂ.08257 281345, 281344

ಶ್ರೀ ದೇವಳದ ವಸತಿ ಗೃಹಗಳು

ಕುಮಾರ ಕೃಪಾ, ಸ್ಕಂದ ಕೃಪಾ, ಕಾರ್ತಿಕೇಯ ಕೃಪಾ, ಅಕ್ಷರಾ, ಆಶ್ಲೇಷ, ಅನಂತ ಮತ್ತು ಅಭಯ ವಸತಿ ಗೃಹಗಳು, ಆದಿಶೇಷ ಹಾಗೂ ವಸುಧಾ-ವರದಾ ಕಾಟೇಜುಗಳು.

ದೇವಸ್ಥಾನದ ಅಂಚೆ ವಿಳಾಸ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ – 574238, ಸುಳ್ಯ ತಾಲೂಕು,ದಕ್ಷಿಣ ಕನ್ನಡ ಜಿಲ್ಲೆ.

ಸಂಪರ್ಕಿಸಬೇಕಾದ ಅಧಿಕಾರಿ / ಕಾರ್ಯ ನಿರ್ವಹಣಾಧಿಕಾರಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ – 574 238, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ದೂರವಾಣಿ ಸಂಖ್ಯೆಗಳು

ಕಛೇರಿ +91 8257 281700, 281423, 281224

ಶಿಸ್ಠಾಚಾರ ವಿಭಾಗ +91 8257 281265

ಸರ್ಪಸಂಸ್ಕಾರ ಸೇವಾ ಕೌಂಟರ್ +91 8257 281300

ಮಾಹಿತಿ ಕೇಂದ್ರ +91 8257 281400

ಫ್ಯಾಕ್ಸ್ +91 8257 281800

ವೆಬ್ ಸೈಟ್

ಇ-ಮೇಲ್