Gokarna

ಆತ್ಮಲಿಂಗ ||ಲೀನಂ ಅರ್ಥಂ ಗಮಯತೀತಿ ಲಿಂಗಂ|| 

             ಕಾಣದಿರುವ ವಸ್ತುವಿನ ಅರ್ಥವೇ ಲಿಂಗ ಶೃತಿಯಲ್ಲಿ ಹೇಳಿರು (ಭಾರತೀಯ ಸನಾತನ ಸಂಸ್ಕøತಿಯ) ವೇದಾಂತ ವಾಕ್ಯಗಳ ತಾತಪರ್ಯವು (ಅಂತರಾರ್ಥವು) ಒಮ್ಮೆಲೆ ಸುಲಭವಾಗಿ ಕಾಣುವಂತಿಲ್ಲ. ಆ ಸದ್ವಸ್ತುವನ್ನು ಷಡ್ಲಿಂಗಗಳಿಂದ ನಿರ್ಣಯ ಮಾಡಿ ಅರಿತಾಗಲೇ ನಮ್ಮ ಆತ್ಮವೇ ಆದ ಪರಮಾತ್ಮನ ಸಂದರ್ಶನ ಸಾಧ್ಯ. ಇದು ಆತ್ಮಲಿಂಗದ ನಗೂಢ ಮಹಿಮೆ.

ಗೋಕರ್ಣ :-

              ನಕಾಶೆಯಲ್ಲಿ ಗೋಕರ್ಣ ಕ್ಷೇತ್ರವು ಆಕಳ ಕಿವಿಯ ಆಕಾಶವನ್ನು ಹೋಲುತ್ತದೆ. ಅದಕ್ಕಾಗಿ ಗೋಕರ್ಣ ಎಂಬ ಹೆಸರು ಪ್ರಚಲಿತವಾಗಿದೆ ಎಂದು ಕೆಲವರ ಅಂಬೋಣ, ಗೋ ಎಂದರೆ ದೇಹ, ದೇಹಕ್ಕೆ ಶಿರವೇ ಪ್ರಧಾನ, ನಮ್ಮತ್ಮವೇ ಆದ ಪರಮಾತ್ಮನನ್ನು ನಾವು ನಮ್ಮ ತಲೆಬುರುಡೆಯಲ್ಲಿಯೇ ಅಂದರೆ ಶುದ್ಧ ಭಾವಬುದ್ಧಿಯಿಂದಲೇ ( 6 ಲಕ್ಷಣಗಳ ಮುಖಾಂತರ) ತಿಳಿದು ಮುಟ್ಟಿ ಗುತುರಿಸಿಕೊಳ್ಳಬೇಕು. ಓಂಕಾರನಾದ ಶುದ್ಧ ಆತ್ಮತತ್ವ ಕೇಳಿ ಅರಿತುಕೊಳ್ಳಲು ನಮಗೆ ಕಿವಿಯೇ (ಕರ್ಣ) ಪ್ರಾಮುಖ್ಯ ಇಂದ್ರಿಯ, ಚೆನ್ನಾಗಿ ಶ್ರವಣ ಮನನ ಮಾಡಿ ಆ ಸ್ವಯಂನಾದ ಚಿತ್ಪ್ರಕಾಶ ತತ್ವ ಸಾಕ್ಷಾತ್ಕಾರವಾದಗಲೇ ಮಾನವ ಜನ್ಮ ಸಾರ್ಥಕ್ಯ. ಓದಿ ತಿಳಿಯುವದಕ್ಕಿಂತ ಶ್ರೀಗುರು ಮುಖವಾಗಿ ಕೇಳಿ ತಿಳಿಯುವುದೇ ಶ್ರೇಷ್ಠ. ಇದೇ ದೇಹವೆಂಬ ಗೋಕರ್ಣ ಕ್ಷೇತ್ರದ ಮಹಿಮೆ! ಆಹಾ ಇದೆಂಥ ಭವ್ಯ-ದಿವ್ಯ ಗೋಕರ್ಣ ಕ್ಷೇತ್ರದ ಮಹಿಮೆ!!

ತದಡಿ:-

               ಇಲ್ಲಿ ಸಮೀಪವೇ ತದಡಿ ಎಂಬ ಊರು ಇದೆ. ಉರವೆಂದರೆ ಹೃದಯವೆಂದೂ ಅರ್ಥವಾಗುತ್ತದೆ. ದಹರಾಕಾಶ ಹೃದಯದಲ್ಲಿ “ತ್ವಃ’ ತತ್ವ ಅಡಗಿದೆ. ಆ ತ್ವಃ ತತ್ವವು “ತತ್” ಎಂದರೆ ಪರಮಾತ್ಮನ ಅಂಚು. ಆದ್ದರಿಂದ ಅಂತರಾತ್ಮವೇ ತದಡಿ (ತತ್+ತಡಿ). ಅದೇ ದೇವನ ಅಂಗ. ದೇವನಂಗಿ ಎಂಬ ಊರು ಅಲ್ಲಿಯೇ ಇದೆ. ದೇವಣವೆಂಬ ಮಜರೆಯೂ ಅಲ್ಲೇ ಸಮೀಪ ಇದೆ.

ಅಘನಾಶಿನಿ:- 

                  ತತ್ರೂಪ (ಶಿವ) ಆತ್ಮಲಿಂಗ ದರ್ಶನ ಮಾಡಿದಾಗ ಪಾಪ-ಪುಣ್ಯಗಳೆರಡೂ ನಾಶವಾಗುವವು. ಅದೇ ಅಘನಾಶೀನಿ ತತ್ವ. ಆಗಲೇ ಕಾಮೇಶ್ವರನ ಅಂದರೆ ಸರ್ವ ಕಾಮನಾ ಪೂರ್ಣ ಮಾಡಿ ನಂತರ ಆ ನಮ್ಮ ಕಾಮ ಸಂಕಲ್ಪಗಳೆಲ್ಲವನ್ನು ನುಂಗಿ ನೀರು ಕುಡಿದು, ನಿಸ್ಸಂಕಲ್ಪ ನಿಸ್ತರಂಗ ನಿರಾಮಯನನ್ನಾಗಿ ಮಾಡುವ ಕಾಮೇಶ್ವರನೂ ಇಲ್ಲಿ ಇಲ್ಲಾನೆ. ಈ ಕ್ಷೇತ್ರಕ್ಕೆ ಹಿಂದಿನ ಕಾಲದಲ್ಲಿ ಸಮುದ್ರ ಮಾರ್ಗವಾಗಿ ಅಘನಾಶಿನಿ ಮುಖವಾಗಿ ಪ್ರವೇಶಿಸುತ್ತಿದ್ದರು. ಈ ಕಾರಣದಿಂದ ಅಘನಾಶಿನಿಗೆ ಅಗಸೆ ಎಂತಲೂ ಹೆಸರು ಬಂದಿದೆ ಎನ್ನುತ್ತಾರೆ.

ಗಂಗಾವಳಿ:-

                 ಅನಂತ ಕೋಟಿ ತೀರ್ಥಗಳೇ ಹರಿದು ಒಂದಾಗಿ ಆತ್ಮ (ಸಮುದ್ರ) ಸಾಗರವಾಗಿದೆ. ಇವೆಲ್ಲಾ ಜ್ಞಾನ ತೀರ್ಥ ಗಂಗೆಯನ್ನು ಸಂಧರಿಸಿದ ಸುಲಕ್ಷಣವೇ ಗಂಗಾವಳಿ ಎಂಬ ಊರು. ಸುಜ್ಞಾನ ಗಂಗೆಯನ್ನು ಶಿರದಲ್ಲಿ ಧರಿಸಿ ಮಾಯಾ ಜಗತ್ತೆಂಬ ಗೌರಿಯನ್ನು ಬೇಕಾದಂತೆ ಕುಣಿಸಿ ತಾನೂ ನಟರಾಜನಾಗಿ ನಟಿಸಿ ಲೀಲಾ ವಿಹಾರಿಯಾಗಿ ಗೋಕರ್ಣದಲ್ಲಿ ಮಹಾಬಲೇಶ್ವರನೆಂಬ ಬಿರುದು ಪಡೆದು ಶ್ರದ್ಧಾಳುಗಳಿಗೆಲ್ಲಾ ಇಹ-ಪರ ಸಿದ್ಧಿ ಪ್ರದನಾಗಿದ್ದಾನೆ ಆ ಭಗವಂತ.