Shri Channakeshawa Temple Sullia

 ಶ್ರೀ ಚೆನ್ನಕೇಶವ ದೇವಾಲಯ ಸುಳ್ಯ:
     ಮಡಿಕೇರಿ ಹೆದ್ದಾರಿಯಲ್ಲಿ ಮಂಗಳೂರಿನಿಂದ ಸುಮಾರು 85 ಕಿ.ಮೀ ದೂರದಲ್ಲಿದೆ. ಶ್ರೀ ಚೆನ್ನಕೇಶವ ಸುಳ್ಯದ ಗ್ರಾಮದೇವಾಲಯ. ಪಯಸ್ವಿನಿ
 ನದಿಯು ಪ್ರದಕ್ಷಿಣಾ ಕಾರವಾಗಿ ಹೆಚ್ಚು ಕಡಿಮೆ ದೇವಾಲಯದ ಮೂರು ದಿಕ್ಕುಗಳಲ್ಲಿಯೂ ಹರಿಯುತ್ತದೆ. ಇದರಿಂದಾಗಿ ಒಂದು ಸುಂದರ ಪರಿಸರ
ನಿರ್ಮಾಣವಾಗಿದೆ.
    ಈ ದೇವಾಲಯಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಗಳೂ ಇದು ವರೆಗೆ ಲಭ್ಯವಾಗಿಲ್ಲ. ಈ ದೇವಸ್ಥಾನ ಬಗೆಗಿನ ಐತಿಹ್ಯವೊಂದು ಹೀಗಿದೆ. ಸುಮಾರು 500 ವರ್ಷಗಳ ಹಿಂದೆ ಈ ದೇವಾಲಯವು ಈಗಿರುವ ಸ್ಥಳದಲ್ಲಿ ನಿರ್ಮಾಣವಾಯಿತು. ಚೆನ್ನಿಗರಾಯನೆಂಬ ಪದ್ದೆ ಬೀಡಿನ ಬಲ್ಲಾಳ ಅರಸನು ಇದನ್ನು ನಿರ್ಮಿಸಿದ್ದರಿಂದ ಈ ದೇವಾಲಯವೆಂಬ ಹೆಸರಾಯಿತು. ಈ ಚೆನ್ನಿಗರಾಯನ ಕುದುರೆಯ ಮೇಲೆ ಕುಳಿತಿರುವ ಪಂವಲೋಹದ ಮೂರ್ತಿಯೊಂದನ್ನು ದೇವಾಲಯದ ಗೋಪುರದಲ್ಲಿ ಪ್ರತಿಪ್ಠಾಪಿಸಲಾಗಿದೆ. ಈ ದೇವಾಲಯದ ಮೂಲಸ್ಥಾನ ಮೂರ್ತಿಯು ಇಲ್ಲಿ ಸ್ಥಾಪನೆ ಆಗುವ ಮುನ್ನ ಪದ್ದೆ ಬೀಡಿನಲ್ಲಿತ್ತೆಂದೂ, ಅಲ್ಲಿ ದೋಷಾದಿಗಳು ಕೂಡ ಕಾರಣ ಈಗಿನ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಯಿತೆಂದೂ ತಿಳಿಯಲಾಗಿದೆ. ಈ ಬಲ್ಲಾಳ ವಂಶದಲ್ಲಿ ಒಬ್ಬ ಸ್ತ್ರೀ ಮಾತ್ರ ಉಳಿದುಕೊಂಡು ಗಂಡ ಸಂತತಿ ಇಲ್ಲದೆ ಆಕೆ ಆ ಕಾಲದಲ್ಲಿ ಪ್ರಸಿದ್ದವಾಗಿದ್ದ ಧರ್ಮಸ್ಥಳದ ಹೆಗ್ಗಡೆಯವರಿಗೆ ಆಸ್ತಿಯನ್ನು ಒಪ್ಪಿಸಿದಳೆಂದೂ ತಿಳಿದುಬರುತ್ತದೆ. ಹೀಗಾಗಿ ಈ ದೇವಾಲಯದ ಸುತ್ತಮುತ್ತಲಿನ ಎಲ್ಲಾ ಸ್ಥಳಗಳೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿವೆ.
    ಈ ದೇವಾಲಯದ ಮೂಲಸ್ಥಾನ ದೇವತೆಯಾದ ರ್ಮಾವನ ಮೂರ್ತಿಯು ಪಂಚಲೋಹದಿಂದ ಕೂಡಿದ್ದು ಒಂದಡಿ ಎತ್ತರವಾಗಿದೆ. ಇದು ಸುಮಾರು ಕ್ರಿ.ಶ. 13 ನೆಯ ಶತಮಾನಕ್ಕೆ ಅನ್ವಯಿಸಬಹುದಾದ ಶಿಲ್ಪ. ಈಗ ಈ ದೇವಾಲಯ ಜೀರ್ಣೋದ್ದಾರವಾಗಿ ಸುಸ್ಥಿತಿಯಲ್ಲಿದೆ. ಈ ದೇವಾಲಯದಲ್ಲಿ ದರ್ನುಮಾಸ 23 ಕ್ಕೆ ಧ್ವಜರೋಹಣವಾಗಿ ವರ್ಷಾವಧಿ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಮಯ ಕುಕ್ಕನೂರು, ಕನತ್ತಲ, ಮಿತ್ತೂರು, ಕಲ್ಕುಡ, ಬಜಪ್ಪಿಲ -ಈ ದೈವಗಳ ಭಂಡಾರಗಳು ಬಂದು ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ