Thodikana Temple

ತ್ರೇತಾಯುಗದಲ್ಲಿ ಚಂದ್ರವಂಶದವನಾದ “ಮೇಧಾತಿಥಿ” ಎಂಬ ಮಹಾರಾಜನು:

                        ತನ್ನ ರಾಜ ಭೋಗಗಳನ್ನೆಲ್ಲಾ ತ್ಯಜಿಸಿ ಕಾಡಲ್ಲಿ ತಪಸ್ಸು ಮಾಡಿ ಮಹಾದೇವನಾದ ಶಿವನನ್ನು ಒಲಿಸಿ “ಬ್ರಹ್ಮಶ್ರ್ರಿ” ಎನಿಸಿಕೊಂಡನು. ಇಂತಹ ಬ್ರಹ್ಮಶ್ರ್ರಿಗೆ ಕಣ್ವನೆಂಬ ಸುಪುತ್ರನಿದ್ದನು.  ತಂದೆಯಂತೆ ತಾನೂ ಶಿವ ಧ್ಯಾನ ನಿರತನಾಗಿ ಮಹರ್ಷಿ ಎನಿಸಿಕೊಳ್ಳಬೇಕೆಂಬ ಅಪೇಕ್ಷೆ ಅವನದಾಗಿತ್ತು. ಈ ಒಂದು ಪ್ರಬಲ ಉದ್ದೇಶದಿಂದ ಆ ಮಹಾಮುನಿಗಳಾದ ಕಣ್ವರು ಆಶ್ರಮವನ್ನು ಕಟ್ಟಿಕೊಳ್ಳುವುದಕೋಸ್ಕರ ಧ್ವೈತ ವನಕ್ಕೆ ಅಗಮಿಸುತ್ತಿರುವುದು. ಈ ದಾರಿಯಲ್ಲಿ ಶ್ರೀ ರಾಮ ಬರುತ್ತಾನೆ ಎಂಬ ನಿರೀಕ್ಷೆಯಿಂದಲೇ ಕಣ್ವರು ಈ ಧ್ವೈತ ವನಕ್ಕೆ ಆಗಮಿಸುತ್ತಾರೆ.

                       ಹೀಗೆ ಬಂದಂತಹ ಕಣ್ವರು ಧ್ವೈತ ವನದ (ತೋಡು+ಕಾನ) ವನಗಳ ಸಂಗಮ ಸ್ಥಳದಲ್ಲಿ ಪ್ರಭಾ ಸತ್ಯಕ ಸಹಿತ ಶಾಸ್ತರನನ್ನು ಪೂಜಿಸಿ, ಸುಂದರವಾದ ಪರ್ಣ ಕುಟೀರವನ್ನು ನಿರ್ಮಿಸಿ ನಿಯಮ, ನಿಷ್ಟೆಯಿಂದ ಸಂಕಲ್ಪ ಗಳನ್ನು ಮಾಡುತ್ತಾರೆ. ಹೀಗೆ ಪ್ರತಿಷ್ಠಾಪಿಸಿದ ಯಜ್ಞವಾಟದಲ್ಲಿ ನಿತ್ಯ ನಿರಂತರ ಅಗ್ನಿ ಪ್ರಜ್ವಲಿಸುತ್ತಿರುತ್ತದೆ. ಧ್ವೈತ ವನವೆಂದರೆ ತಲಕಾವೇರಿ ಬ್ರಹ್ಮಗಿರಿಯ ಪರಿಸರ ಬ್ರಹ್ಮ ಕ್ಷೇತ್ರ ಮತ್ತು ಪರಶುರಾಮ ಕ್ಷೇತ್ರ ಸಂಧಿ ಸ್ಥಳವಾಗಿರುತ್ತದೆ.

                       ಇತಂಹ ಪವಿತ್ರವಾದ ಕಣ್ವಾಶ್ರಮದಲ್ಲಿ ಗುರುಕುಲ ಸ್ಥಾಪನೆಯಾಗುತ್ತದೆ. ಇಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವೇದ ಪಾರಾಯಣ ಮಾಡಿಸುತ್ತಾ ವಿದ್ಯಾದಾನವನ್ನು ಮಾಡುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಪಾಂಡವರು ತಮಗೆ ಬಂದೊದಗಿದ ಹದಿನಾಲ್ಕು ವರ್ಷ ವನವಾಸದ ನಿಮಿತ್ತವಾಗಿ ಅಯೋಧ್ಯೆಯ ಪಶ್ಚಿಮ ದಿಕ್ಕಿನ ಅರಣ್ಯದಲ್ಲಿ ಆಶ್ರಮ ಮಾಡಿಕೊಂಡಿರುತ್ತಾರೆ. ಹೀಗೆ ವನವಾಸದಲ್ಲಿದ್ದ ಪಾಂಡವರು ಕಣ್ವಾಶ್ರಮದತ್ತ ಆಗಮಿಸುತ್ತಿರುವುದು.

                       ಇತ್ತ ಕಡೆ ಕಣ್ವಾಶ್ರಮದಲ್ಲಿ ವೇದ ಪಾರಾಯಣ ನಡೆಯುತ್ತಿರುತ್ತದೆ. ಪಾಂಡವರು ತಿರುಗಾಡುತ್ತಾ ಭಾರತ ವರ್ಷದ ದಕ್ಷಿಣ ದಿಶಾ ಭಾಗದಲ್ಲಿದ್ದ ಶಾಮ್ಯಕ್ಕೆ ವನಕ್ಕೆ ಬರುತ್ತಾರೆ. ವಿಶಾಲವಾಗಿದ್ದ ಜಂಬೂವನದ ತಪ್ಪಲಿನಲ್ಲಿ ಮುನಿಗಳಾಶ್ರಮದ ಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಒಂದೇ ಒಂದು ಜಂಬೂಫಲವನ್ನು ಭೀಮನು ನೋಡುತ್ತಾನೆ. ದ್ರೌಪದಿಯ ಕೋರಿಕೆಯಂತೆ ಮತ್ತು ತನ್ನವರಿಗೆ ತೋರುವ , ಹೇಳುವ ಕುತೂಹಲದಿಂದ ಫಲವನ್ನು ಪತನಗೊಳಿಸುತ್ತಾನೆ. ಇದರಿಂದಾಗಿ ಪಾಂಡವರು ಸತ್ಯಪರೀಕ್ಷೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ.

                       ಧರ್ಮರಾಯನು ಬ್ರಹದ್ದಾಕಾರವಾಗಿದ್ದ ಈ ಹಣ್ಣನ್ನು ನೋಡಿ ಸಂಶಯದಿಂದ ತನ್ನೊಂದಿಗೆದ್ದ ದೌಮ್ಯರೊಡನೆ ತನ್ನ ಮನೋಗತವನ್ನು ತಿಳಿಸುತ್ತಾನೆ. ಅವರು ತನ್ನ ದಿವ್ಯದೃಷ್ಟಿಯಿಂದ ಈ ಹಣ್ಣಿನ ವೃತ್ತಾಂತ ಹೇಳುತ್ತಾ, ಇದು ಕಣ್ವರ ಪಾರಣಿಗಾಗಿ (ಆಹಾರಕ್ಕಾಗಿ) ಪಕ್ವವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಬಿಡುವ ಫಲ ಅವರು ಕಣ್ತೆರೆದು ನೋಡಿದಾಗ ತಾನಾಗಿಯೇ ತೊಟ್ಟು ಕಳಚಿ ಅವರೆ ಬೊಗಸೆಗಿಳಿಯುತ್ತದೆ. ಇದು ಅವರ ಆಹಾರಕ್ಕೆ ದಕ್ಕದೆ ಹೋದರೆ ಮುನಿಶಾಪ ತಪ್ಪಿದ್ದಲ್ಲ ಎಂಬುದನ್ನು ತಿಳಿಸುತ್ತಾರೆ. ಇದಕ್ಕೆ ಪರಿಹಾರ ಸೂಚಿಸುವವನು ಶ್ರೀಕೃಷ್ಣನೊಬ್ಬನೇ ಎಂದು ತಿಳಿಯಪಡಿಸುತ್ತಾರೆ. ಹಾಗಾಗಿ ದ್ರೌಪದಿಯು ಭಕ್ತಿಯಿಂದ ಪೂಜಿಸಿ ಭಗವಂತ ಶ್ರೀಕೃಷ್ಣನನ್ನು ಬರಮಾಡಿಕೊಳ್ಳುತ್ತಾಳೆ.

                      ಪ್ರತ್ತಕ್ಷನಾದ ಶ್ರೀಕೃಷ್ಣನು, ಜಂಬೂಫಲವು ಮರಳಿ ತೊಟ್ಟಿನಲ್ಲಿ ಸೇರಬೇಕಾದರೆ ಪಾಂಡವರು ಮತ್ತು ದ್ರೌಪದಿಯು ತಮ್ಮ ತಮ್ಮ ಮನದೊಳಗಿನ ಇಚ್ಚೆಯನ್ನು ಮರೆಮಾಚದೆ ಸರದಿಯಂತೆ ಋಜುಮಾರ್ಗ (ಸತ್ಯಮಾರ್ಗ)ದಿಂದ ಪ್ರಕಟಿಸಬೇಕು ಎಂದು ಕೃಷ್ಣನು ಫಲವನ್ನು ಮುಟ್ಟಿ ಹಾರೈಸುತ್ತಾನೆ. ಧರ್ಮರಾಯನಿಂದ ಕಾರ್ಯಾರಂಭವಾಗುತ್ತದೆ. ಸತ್ಯ ಪ್ರಕಟಿಸುತ್ತಿರುವಂತೆ ಫಲವೂ ಪ್ರತೀಸಲವೂ ಒಂದಾಳಿನಷ್ಟು ಮೇಲಕ್ಕೆ ನೆಗೆಯುತ್ತಿತ್ತು. ಕೊನೆಗೆ ದ್ರೌಪದಿಯ ಸರದಿ ಬಂದಾಗ, ತನ್ನ ಮನೋಗತಿಯನ್ನು ಹೇಳುತ್ತಿದ್ದರೂ ಜಂಬೂಫಲ ಅಲುಗದೇ ಹಾಗೆಯೇ ನಿಂತಿತು. ಇದನ್ನರಿತ ಕೃಷ್ಣನು ದ್ರೌಪದಿಯು ಮರೆಮಾಚುತ್ತಿರುವ ವಿಚಾರವನ್ನು ಧೈರ್ಯವಾಗಿ ಹೇಳುವಂತೆ ಹುರುದುಂಬಿಸಿದ. ಆಗ ಅದೊಂದು ಸಂದರ್ಭದಲ್ಲಿ ನನಗೆ ಐವರು ಪತಿಗಳಿದ್ದರೂ ನನಗೊದಗುತ್ತಿತುವ ಕಷ್ಟಗಳಿಂದ ಪಾರುಮಾಡಲು ಆರನೆಯವನಾದ ಮಹಾಪುರುಷನೊಬ್ಬನಿರಿತ್ತಿದ್ದರೆ ಎಂಬ ಮನೋವೇಧನೆಯ ಸತ್ಯವನ್ನು ಹೇಳುವಾಗ ಜಂಬೂಫಲವು ತನ್ನ ಯಥಾಸ್ಥಾನದಲ್ಲಿ ಹೋಗಿ ಸೇರಿಕೊಳ್ಳುತ್ತದೆ. ಇಲ್ಲಿ ರೂಢಿಯಲ್ಲಿ ದ್ರೌಪದಿ ಕರ್ಣನನ್ನು ಅಪೇಕ್ಷೆಪಟ್ಟವಳು ಎಂಬ ತಪ್ಪು ಕಲ್ಪನೆಯಿದೆ. ಆದರೆ ದ್ರೌಪದಿಯ ಮನಸ್ಸಿನ ಅಪಮಾನದ ಬೆಂಕಿಯನ್ನು ಹೊರಹಾಕುವ ಸತ್ಯಪರೀಕ್ಷೆಯ ಸಂದರ್ಭ ಇದಾಗಿರುತ್ತದೆ. ಹಾಗಾಗಿ ಆಮದಿನಿಂದ ಈ ಕ್ಷೇತ್ರ ಸತ್ಯ ಕ್ಷೇತ್ರವಾಗಿ ಮಾರ್ಪಟ್ಟಿತು.

                        ಪಾಂಡವರ ವನವಾಸ ಅಜ್ಞಾತವಾಸಗಳ ಅವಧಿಗಳು ಮುಗಿದ ಬಳಿಕವೂ ಕೌರವರು, ಪಾಂಡವರಿಗೆ ಅವರ ತಮ್ಮ ಭಾಗವನ್ನು ಮರಳಿಸಬಹುದೆಂಬ ಧೈರ್ಯ ಇಲ್ಲದಾಗಿರುತ್ತದೆ. ಈ ನಿಟ್ಟಿನಲ್ಲಿ ಕೃಷ್ಣನ ಸಲಹೆಯಂತೆ ಪ್ರಭು ಪರಮೇಶ್ವರನ ಶಕ್ತಿ ಸರ್ವಸ್ವವೆನಿಸಿದ ಪಾಶು ಪಾತಾಸ್ತ್ರವನ್ನು ಪಡೆಯುವುದಕ್ಕಾಗಿ ಅರ್ಜುನನು ನಿಯೋಜಿತನಾಗಿರುತ್ತಾನೆ. ಕೌರವರು ಅಪಾರವಾದ ಜನಶಕ್ತಿಯಿಂದ ಕೂಡಿದವರು, ಅವರ ಮಾನವ ಶಕ್ತಿಯನ್ನು ಅಡಗಿಸಿ ರಾಜ್ಯವನ್ನು ಪಡೆಯುವ ದೃಷ್ಟಿಯಿಂದ ಮತ್ತು ದ್ರೌಪದಿಯ ಅವಮಾನವನ್ನು ಇಂಗಿಸುವ ಉದ್ದೇಶ ಪಾಂಡವರದಾಗಿರುತ್ತದೆ. ಹೀಗಾಗಿ ಜಲಪಾತದ ವಾತಾವರಣದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ದೈವ ಶಕ್ತಿಯ ಮೂಲಕ ಬಲಿಷ್ಠನಾಗಲು ಅರ್ಜುನನು ಮಲ್ಲಿಗೆ ಮುಂತಾದ ಹೂಗಳಿಂದ ಶಿವನನ್ನು ಅರ್ಚಿಸಿ ವೇದ ತಪಸ್ಸನ್ನು ಆಚರಿಸುತ್ತಾನೆ.

                        ಧ್ವೈತವನದಲ್ಲಿ ಲೋಕ ಹಿತಾರ್ಥವನ್ನು ಬಯಸಿ ಶಿವ ತಪಸ್ಸನ್ನು ಮಾಡುತ್ತಿರುವ ಅದೇಷ್ಟೋ ಮುನಿಗಳಿಗೆ ಮೂಕಾಸುರನೆಂಬ ದುಷ್ಟ ರಾಕ್ಷಸನೊಬ್ಬನು ತೊಂದರೆಗಳನ್ನು ಉಂಟುಮಾಡುತ್ತಾ ಅಟ್ಟಿಸಿಕೊಂಡು ಬರುತ್ತಿರುವ ಸಂದರ್ಭ. ಈ ಮೂಕಾಸುರನೆಂಬ ರಾಕ್ಷಸನು ತನ್ನ ರೂಪವನ್ನು ಹಂದಿ ರೂಪಕ್ಕೆ ಮರೆಯಿಸಿ ಕಾಡಿನಲ್ಲಿ ವಾಸಿಸುವ ಶಕ್ತಿಯನ್ನು ಹೊಂದಿದ್ದಾನೆ. ಇವನು ಮುನಿಗಳಿಗೆ ಕಾಟಗಳನ್ನು ಕೊಡುತ್ತಿರುತ್ತಾನೆ. ಇಂತಹ ರಾಕ್ಷಸನೊಬ್ಬ ಸಂಹಾರ ಅರ್ಜುನನಿಂದಲೇ ಆಗುವ ಮೂಲಕ ಲೋಕಕಲ್ಯಾಣವಾಗುವುದೆಂಬುದು ಶಿವ ಇಚ್ಚೆಯಾಗಿರುತ್ತದೆ. ಹೀಗೆ ಮೂಕಾಸುರ ವಾಸಿಸುತ್ತಿದ್ದ ಸ್ಥಳವನ್ನು ಮೂಕಮಲೆ ಎಂದು ಗುರುತಿಸಲ್ಪಡುತ್ತದೆ.

                        ಪಾಶುಪತಾಸ್ತ್ರವನ್ನು ಪಡೆಯುವ ಇಚ್ಚೆಯಿಂದ ಅರ್ಜುನನು ತಪೋನಿರತನಾಗುತ್ತಾನೆ. ಅತ್ತ ಲೋಕ ಪ್ರಳಯಾಂತಕ ರುದ್ರ ಶಕ್ತಿಯನ್ನು ಧರಿಸುವ ಯೋಗ್ಯತೆ ಅರ್ಜುನನಲ್ಲಿ ಇದೆಯೇಎಂದು ಶಿವಪಾರ್ವತಿಯರು ಅರ್ಜುನನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಪಾರ್ವತಿ ಪರಮೇಶ್ವರರು ಬೇಡರೋದಿಗೆ ಶಬರ ರೂಪದಲ್ಲಿ ಬೇಟೆಯಾಡುತ್ತಾ ಹಂದಿಯನ್ನು ಅರಸುತ್ತಾ ಕಾಡಿಗೆ ಬರುತ್ತಾರೆ. ಪೊದರಿನೊಳಗಡೆಯಲ್ಲಿದ್ದ ಹಂದಿಗೆ ಶಬರಿದೊರೆಯು ಬಿಲ್ಲಿಗೆ ಬಾಣವನ್ನು ಜೋಡಿಸಿ ಹೊಡೆಯುವ ಸಂದರ್ಭದಲ್ಲಿ ಮಾಯಾಮೃಗವು ಕಿರುಬಾಲವನ್ನು ಅಲುಗಿಸುತ್ತಾ ಡುರುಂಕರಿಸಿ ಪ್ರಪಾತಕ್ಕೆ ನೆಗೆಯುತ್ತದೆ. ಇದರಿಂದಾಗಿ ಶಬರನು ಎದೆಗಿಟ್ಟ ಗುರಿಯು ಪಕ್ಕೆ ( ಅಳ್ಳೆ) ಗೆ ತಾಗುತ್ತದೆ. ಅಲ್ಲಿಯೇ ತಿರೆಯ ತಡಿಯಲ್ಲಿ ಶಿವನನ್ನು ಭಜಿಸುತ್ತಿದ್ದ ಅರ್ಜುನನಿಗೆ ಈ ಎಲ್ಲಾ ಗಲಾಟೆಗಳಿಂದ ಧ್ಯಾನ ಭಂಗವಾಗುತ್ತದೆ. ಕೋಪದಲ್ಲಿ ತನ್ನ ತಟದಲ್ಲಿದ್ದ ಗಾಂಢಿವವನೆತ್ತಿ ಕೂರ್ನಳೆ ( ಬಾಣ)ಯಂದನ್ನು ಸಿಡಿಸಿತ್ತಾನೆ. ಅರ್ಜುನನ ಬಾಂದಿಂದ ಹಂದಿಯು ಮಡಿದು ಬೀಳುತ್ತದೆ.

                       ಅರ್ಜುನನು ಸತ್ತಯ ಬಿದ್ದ ಹಂದಿಯ ಸಮೀಪಕ್ಕೆ ಹೋಗಿ ನೋಡಿದಾಗ ಆತನಿಗೆ ಆಶ್ಚರ್ಯವಾಯಿತು. ಏಕೆಂದರೆ ತಾನಿ ಹೊಡೆದ ಬಾಣವು ಒಂದು, ಆದರೆ ಹಂದಿ ಮೈಯಲ್ಲಿ ಎರಡು ಬಾಣಗಳು ಕೀಲಿಸಿದ್ದವು. ಹೀಗೆ ಯೋಚನಾಕ್ರಾಂತನಾದಗ ಬೇಡರೊಡೆಯನು ತನ್ನವರೊಂದಿಗೆ ನೇರವಾಗಿ ತನ್ನೆಡೆಗೆ ಬರುತ್ತಾನೆ. ಸತ್ತು ಬಿದ್ದ ಹಂದಿಯನ್ನು ಕಾಲಿನಿಂದ ಹೊರಳಿಸಿ ತನ್ನವರೊಂದಿಗೆ ಕಟ್ಟಿಕೊಂಡು ಹೊರಡಲನುವಾಗುತ್ತಾನೆ. ಈ ಸಂದರ್ಭದಲ್ಲಿ ಹಂದಿಯನ್ನು ಹಹೊಡೆದುರುಳಿಸಿದವನು ನಾನು, ನನ್ನ ಒಪ್ಪಿಗೆಯಿಲ್ಲದೆ ಮೃಗವನ್ನು ಮುಟ್ಟಿದರೆ ಜೋಕೆ ಎಂದು ತಡೆಯುತ್ತಾನೆ. ಹೀಗೆ ಅವರೊಳಗೆ ವಾಗ್ವಾದಗಳು ನಡೆದು ಘೋರ ಯುದ್ಧದವರೆಗೆ ಮುಂದುವರಿಯುತ್ತದೆ.

                         ಭಕ್ತಿ ಭಗವಂತರ ಈ ಮಹಾ ಸಂಗ್ರಾಮವನ್ನು ಬಳಿಯಲ್ಲಿ ನಿಂತು ನೋಡುತ್ತಿರುವ ಪಾರ್ವತಿಗೆ ಮನದಲ್ಲಿ ದಿಗಿಲು ಬುಗಿಲೇಳುತ್ತದೆ. ಬೇಡರೊಡೆಯನೊಡನೆ ಗೆಲುವನ್ನು ಸಾಧಿಸಿಕೊಳ್ಳುವುದೇ ಅರ್ಜುನನ ಗುರಿಯಾಗಿತ್ತು. ಎಂದೂ ಬತ್ತದಿರುವ ಬತ್ತಳಿಕೆಯು ಬರಿದಾದಾಗ, ಸಾಮಾನ್ಯ ಬೇಡನಿಂದ ಸೋಲುಂಟಾದಾಗ ಅರ್ಜುನನಿಗೆ ಆಶ್ವರ್ಯವೂ, ಕೋಪವು, ದುಃಖವೂ ಒಂದಾಗಿ ಸೇರಿ ಮನಸ್ಸು ಅಸ್ತವ್ಯಸ್ತವಾಯಿತು. ಮುಂದೇನು ಎಂಬ ಯೋಚನೆಗೂ ಎಡೆಯಿಲ್ಲದೆ ಮನಸ್ಸು ಸ್ಥೀಮಿತಕ್ಕೆ ತರಲು ವಿವೇಕದಿಂದ ಯೋಚಿಸಲು ಸಾಧ್ಯವಾಗದೇ ಮೂಡನಾಗುತ್ತಾನೆ. ತಾನೇನು ಮಾಡುತ್ತಿರುವನೆಂದೂ ಅರಿವಿಲ್ಲದೆ ಅರ್ಜುನ ಗಾಂಡೀವ ಧನುಸ್ಸನ್ನು ದಂಡದಂತೆ ಎತ್ತಿ ಎರಡೂ ಕೈಗಳಲ್ಲಿ ಹಿಡಿದುಕೊಂಡು ಶಬರ ರೂಪಿನ ಶಂಕರನ ನೆತ್ತಿಗೆ ಗುರಿಯಿಟ್ಟು ಹೊಡೆಯುತ್ತಾನೆ.

                         ಅರ್ಜುನನು ಗಾಂಡೀವ ಧನಸ್ಸುನಿಂದ ಅಪ್ಪಳಿಸಿದ ಭಾರಕ್ಕೆ ತಲೆಯ ಎಡ ಹಣೆ ಒಡೆದು ಕೆನ್ನೆಗೆ ನೆತ್ತರು ಬಸಿಯುತ್ತದೆ. ತಲೆಯೂ ಸ್ವಲ್ಪ ಕುಸಿಯುತ್ತದೆ. ಇದನ್ನು ನೋಡುವುದಕ್ಕೆ ಸಾಧ್ಯವಾಗದೆ ಪಾರ್ವತಿಯು “ಪ್ರಭೋ ಪ್ರಭು” ಶಿವ ಶಿವಾ, ಶಿವ ಶಿವಾ ಎನ್ನುತ್ತಾ ಓಡೋಡಿ ಬಂದು ನೆತ್ತರಿನ ಹರಿವನ್ನು ಸೆರಗಿನಲ್ಲಿ ಧರಿಸುತ್ತಾಳೆ. ಇನ್ನೊಂದು ಕಡೆ ಬೇಡರೊಡೆಯನನ್ನು ಹೊಡೆಯುವ ಭರದಲ್ಲಿ ಬಿಲ್ಲು ಕೈಯಿಂದ ಜಾರಿ ಸಿಡಿದು ದೂರಕ್ಕೆ ಹೋಗಿ ಬಿದ್ದುದರಿಂದ ಅರ್ಜುನನು ನಿರಾಯುಧನಾಗಿ ನಿಂತಿರುವನು.   

                         ಆಯುಧಗಳಾವುದೂ ಇಲ್ಲದ ಅರ್ಜುನನು ಬಾಹುಗಳನ್ನಪ್ಪಳಿಸುತ್ತಾ ಮಲ್ಲಯುದ್ಧಕ್ಕೆ ತೊಡಗುತ್ತಾನೆ. ಜರ್ಝರಿತವಾದ ಶರೀರದಿಂದ ಕೆನ್ನೆತ್ತರು ಹರಿಯುತ್ತಿರುವುದನ್ನು ಲೆಕ್ಕಿಸದೆ, ಹಲವು ತಿಂಗಳಿಂದ ಆಹಾರವಿಲ್ಲದೆ ತಪಸ್ಸುಗೈಯುತ್ತಿದ್ದ ಅರ್ಜುನನ ವೀರತ್ವವನ್ನು, ಕ್ಷತ್ರಿಯ ಗುಣವನ್ನು ಕಂಡ ಮಹದೇವನು ಮನಸ್ಸಿನಲ್ಲೇ ಮೆಚ್ಚುತ್ತಾನೆ. ಆದರೂ ಶಬರ ರೂಪದ ಶಂಕರನು ಅರ್ಜುನನನ್ನು ನೆಲಕ್ಕೆ ಕೆಡವುತ್ತಾನೆ. ಕ್ಷತ್ರೀಯ ರಕ್ತದಿಂದ ಹುಟ್ಟಿದ ನನಗೂ ಈ ಸ್ಥಿತಿಯೇ ಎಂದು ದುಃಖದಿಂದ, ಮರಳಿ(ಹೊಯ್ಗೆ) ನಲ್ಲಿ ಶಿವಲಿಂಗವನ್ನು ಮಾಡಿ ಕಾಡುಮಲ್ಲಿಗೆಯಿಂದ ಪೂಜಿಸಿ ಮತ್ತೆ ಶಕ್ತಿಯನ್ನು ಪಡೆಯುವ ಉದ್ದೇಶವಾಗಿರಯತ್ತದೆ. ಹೀಗೆ ಮಲ್ಲಿಗೆಯನ್ನು ತಂದು ಲಿಂಗದ ತಲೆಗೆ ಭಕ್ತಿಯಿಂದ ಪಂಚಾಕ್ಷರಿ ಜಪ ಮಾಡುತ್ತಾ ಪೂಜಿಸುತ್ತಿರುವುದನ್ನು ಮರೆಯಲ್ಲಿ ಕುಳಿತು ನೋಡುತ್ತಿರುವ ಶಿವ ಪಾರ್ವತಿಯರು.

                        ಅರ್ಜುನನು ಭಕ್ತಿಯಿಂದ ದೇವರ ತಲೆಗಿರಿಸಿದ ವನ ಮಲ್ಲಿಕಾ ಕುಸುಮವು ಶಬರನ ತಲೆಗೇರಿ ಮೆರೆಯುತ್ತಿತ್ತು. ಅಬ್ಬಬ್ಬಾ ಅ ದೇವರಿಗಿಟ್ಟ ಹೂವನ್ನು ಇವನು ಅಪಹರಿಸುತ್ತಿರುವನಲ್ಲಾ ಅಥವಾ ಈ ಕಿರಾತ ಪತಿಯೇ ಆ ಶಿವನೇ ಎಂದು ಅರ್ಜುನನ ಒಳಮನಸ್ಸು ಯೋಚಿಸಿತು. ಪರೀಕ್ಷೆಗೋಸ್ಕರವೇ ಮತ್ತೆ ಲಿಂಗದ ಪರಿಸರವನ್ನು ಶುಚಿಯಾಗಿರಿಸಿ ಕಣಗಿಲ ಹೂವನ್ನು ಲಿಂಗದ ಮೇಲಿರಿಸಿ ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಮತ್ತೆ ಹೂವುಗಳು ಪುಳಂದ(ಶಿವ)ನ ಮುಡಿಯಲ್ಲಿ ! ತಾನು ಒಡಯನೇ ಓಡೋಡಿ ಬಂದು ಶಬರ ರೂಪಿನ ಶಂಕರನ ಪಾದದ ಅಡಿಯಲ್ಲಿ ಹೊರಳುತ್ತಾನೆ. ಪಾದಗಳನ್ನಪ್ಪಿ ಸರ್ವಾಪರಾದಗಳನ್ನು ಕ್ಷಮಿಸೆಂದು ಬೇಡಿಕೊಳ್ಳುತ್ತಾನೆ. ಶಿವನು, ನಿನ್ನ ಭಕ್ತಿ ಶಕ್ತಿಗಳಿಗೆ ಒಲಿದು ಬಂದಿದ್ದೇನೆ ಕಂದಾ ಏಳು, ನಿನ್ನ ಮನದಿಚ್ಚೆ ಏನೆಂದು ಹೇಳು ಎನ್ನುತ್ತಾ ಶಿವ ಪಾರ್ವತಿಯರು ಕೇಳುತ್ತಾರೆ. ಒಡನೆಯೇ ಅರ್ಜುನನು ಸರ್ವಮಂಗಳದಾತನೇ, ಸರ್ವಭುವನೇ, ಸದಾಶಿವನೇ ನಿನ್ನ ಶಕ್ತಿ ಸಾಮಥ್ರ್ಯದಿಂದೊಪ್ಪುವ ಪಾಶುಪತ ಮಹಾಸ್ತ್ರವನ್ನಿತ್ತು ಕಾಪಾಡು ಎಂದು ಕೇಳಿಕೊಳ್ಳುತ್ತಾನೆ. ಅದರಂತೆ ಶಿವ ಪಾರ್ವತಿಯರು ಪಾಶುಪತಶಸ್ತ್ರವನ್ನು ನೀಡಿ ಹರಸುತ್ತಿರುವುದು.

                      ಈರೇಳು ಲೋಕಗಳಲ್ಲಿಯೂ ಇದುವರೆಗೆ ಯುದ್ಧದಲ್ಲಿ ನಮ್ಮನ್ನೆದುರಿಸಿ ಬದುಕುಳಿದವರು ನೀನೊಬ್ಬನೇ ಸರಿ. ಬಿಲ್ಲಿನಿಂದ ಅಪ್ಪಳಿಸಿ ಅರೆಕ್ಷಣವಾದರು ಸಮರದಲ್ಲಿ ಈ ಸದಾಶಿವನ ಮೈಮರೆಸಿದ ನಿನ್ನ ಗಾಂಢೀವ ಧವಳ ಕೀರ್ತಿಯು ಲೋಕದಲ್ಲಿ ಅಚ್ಚಳಿಯದೆ ಉಳಿಯಲೆಂದು ಶಿವಪಾರ್ವತಿಯರು ಹಾರೈಸುತ್ತಾರೆ. ನಿನ್ನ ಗಾಂಢೀವ ಹೊಡೆತದ ಕುರುಹನ್ನು ಎಡ ಹಣೆಯ ಭಾಗದಲ್ಲಿ ಎಂದೆಂದೂ ಧರಿಸಿಕೊಂಡು ಮೆರೆಯುತ್ತೇನೆಂದು ಶಿವನು ಅಭಯ ನೀಡುತ್ತಿರುವುದು. ಹೀಗಾಗಿ ಅರ್ಜುನು ಶಿವನಿಗೆ ಅಂದು ಹೊಡೆದ ಗಾಂಢೀವದ ಗುರುತು ಇಂದಿಗೂ ಶಿವಲಿಂಗದಲ್ಲಿ ವೈಕಲ್ಯವಾಗಿ ಗೋಚರಿಸಿತ್ತದೆ. ಅಲ್ಲದೇ ಕಣ್ವಮಹರ್ಷಿಗಳಿಂದಾಗಿ ಧರೆಗವತರಿಸಿ ಹರಿಯುತ್ತಿರುವ ದಕ್ಷಿಣ ಗಂಗೆಯ ತಟದಲ್ಲಿ ಶಿವನಿತ್ತ ವಚನದಂತೆ ಪಾಶುಪತ ಮಹಾಸ್ತ್ರದ ಗ್ರಹಣ ಮೋಕ್ಷಾದಿಗಳನ್ನು ಸಾದ್ಯಂತವಾಗಿ ಬೋಧಿಸಿ ‘ಸಕಲದಿಷ್ಠ ನೀರಸನಮಸ್ತು ಸಕಲಾಭಿಷ್ಟ ಸಿದ್ಧಿರಸ್ತು’ ಎಂದು ಹರಿಸುತ್ತಿರುವುದು.

                      ಆನಂದ ಸಾಗರದಲ್ಲಿ ತೇಲಾಡುತ್ತಿರುವ ಅರ್ಜುನನ್ನು ಮಹಾದೇವನಾದ ಶಿವನು ಬಳಿಗೆ ಕರೆಯುತ್ತಾನೆ. ತಾನು ವಶೀಕರಿಸಿಕೊಂಡಿದ್ದ ಗಾಂಡೀವಾದಿ ಶಸ್ತ್ರಾಸ್ತ್ರಗಳನ್ನು ಅರ್ಜುನನಿಗೆ ಮರಳಿ ಒಪ್ಪಿಸಿ, ಇದೀಗ ನಿನಗೆ ಸಂತೋಷವಾಯಿತಷ್ಟೇ ಎಂದು ಪ್ರಶ್ನಿಸುತ್ತಾನೆ.ವಿನಾಕಾರಣ ಗಿರಿಗೊಳಗೆ ಪಾಶುಪತವನ್ನು ಪ್ರಯೋಗಿಸಬೇಡ. ನಿಮ್ಮವನು, ನಮ್ಮವನೂ ಆಗಿರುವ ಶ್ರೀ ಕೃಷ್ಣನ ಅಪ್ಪಣೆಯನ್ನು ಮೀರಬೇಡ. ದ್ರೌಪದಿಯ ಸಹಿತ ನಿಮಗೈವರಿಗೂ ಸಕಲಾಭ್ಯುದಯ ಉಂಟಾಗಲಿ ಎಂದು ಹಾರೈಸಿ ಅರ್ಜುನನು ತಪಸ್ಸು ಮಾಡುತ್ತಿದ್ದ ದ್ವೈತವನದ ಇಂದ್ರಕೀಲ ಪ್ರಾಂತದಲ್ಲಿ ಸತಿಸಹಿತ ಲಿಂಗರೂಪದಲ್ಲಿ ಐಕ್ಯರಾಗಿರುವುದು.

                      ಕಣ್ವ ಮಹಾಮುನಿಗಳ ಪಾವನ ತಪೋಭೂಮಿಯಲ್ಲಿ ಹರಿಯುತ್ತಿರುವ ಈ ಜಲಪಾತವು ಹರಿ ಹರರ ಸಂಪರ್ಕದಿಂದ ತೀರ್ಥೋದಕವಾಗುತ್ತದೆ. ಶಿವನ ಸಾನಿಧ್ಯದ ಈ ಸ್ಥಳದಲ್ಲಿ ಸಪ್ತಗಂಗೆಯರಾದ ಗಂಗೆ, ಯಮುನೆ, ಗೋದಾವರಿ, ಭಾಗವತೋತ್ತಮರಾದ ಪಾಂಡವರ, ಪರಮ ಪತಿವೃತೆಯಾದ ದ್ರೌಪದಿಯ ಬರುವಿಕೆಯಿಂದ ಶ್ರೀ ಕೃಷ್ಣ ಪರಮಾತ್ಮನ, ಪಾರ್ವತಿ ಪರಮೇಶ್ವರರ ಪುಣ್ಯ ತೀರ್ಥವೇ ದೇವರ ಗುಂಡಿ ಜಲಪಾತ ! ಈ ಪುಣ್ಯ ತೀರ್ಥವನ್ನು ಈಗಲೂ ಪಂಚಪರ್ವಾದಿ ದಿನಗಳಲ್ಲಿ ಶಿವನಿಗೆ ಅಭಿಷೇಕ ಮಾಡುವರು ಮತ್ತು ಶ್ರೀ ದೇವಳಕ್ಕೆ ಸಂಬಂಧಿಸಿದ ವಿಶೇಷ ಪ್ರಾರ್ಥನೆಗಳನ್ನು ಈ ಸ್ಥಳದಲ್ಲಿ ಮಾಡುವ ಸಂಪ್ರದಾಯವಿದೆ.

                       ಮಹಾದೇವನಾದ ಶಿವನು ಅರ್ಜುನನ ತಪಸ್ಸಿಗೆ ಒಲಿದು ದ್ವೈತವನದ ಇಂದ್ರ ಕಾಲ ಪ್ರಾಂತದಲ್ಲಿ ಪತಿಸಹಿತ ಲಿಂಗರೂಪದಲ್ಲಿ ನೆಲೆಸಿದವನು. ಕಾಲಾನುಭಾಗದಲ್ಲಿ ಶಿವಲಿಂಗವು ಮಣ್ಣಿನೊಡನೆ ಸೇರಿಕೊಂಡಿತು. ಅದಿಂದು ದಿನ ಆದಿವಾಸಿ ಹೆಣ್ಣು “ಮಲ್ಲಿ” ಯೆಂಬುವವಳಿ ಮೇಲಿನ ಆ ಪರ್ವತದ ಕಾಡಿನಲ್ಲಿ “ನೆರೆಗೆಡ್ಡೆ” (ಗೆಡ್ಡೆ ಗೆಣಸು) ಗಳನ್ನು ಸಂಗ್ರಹಿಸುತ್ತಾಳೆ. ಹೀಗೆ ಗೆಡ್ಡೆಯನ್ನು ಕುಡುಗೋಲಿನಿಂದ ಅಗೆಯುತ್ತಿರುವಾಗ, ಕತ್ತಿಯ ತುದಿಯು ಕಲ್ಲೊಂದಕ್ಕೆ ಬಡಿದು ನೆತ್ತರು ಚಿಮ್ಮುತ್ತದೆ. ಇದರಿಂದ ಗಾಬರಿಯಾದ ಮಹಿಳೆ ‘ಮಲ್ಲಿ’ ಇದನ್ನು ವೀಕ್ಷಿಸುತ್ತಿರುವುದು.

                      ಹೀಗೆ ಕಲ್ಲಿನಿಂದ ಚಿಮ್ಮುತ್ತಿರುವ ರಕ್ತವನ್ನು ನೋಡಿ ಈಕೆ ಸಂಗ್ರಹಿಸಿದ ನರೆ (ಗೆಡ್ಡೆ ಗಡಣಸು)ಗಳನ್ನೂ ಬಿಟ್ಟು ಓಡುತ್ತಾಳೆ. ಸುದ್ದಿಯನ್ನು ತಿಳಿಸಲು ದೀರ್ಘ ತಪಸ್ಸಿ ಗಳಾಗಿದ್ದ ಕಣ್ವರ ಗುಹೆಯ ಹೊರ ಪ್ರದೇಶದಲ್ಲಿದ್ದ ಮುನಿಗಳಾಸ್ರಮಕ್ಕೆ ಹೋಗುತ್ತಾಳೆ. ಆಶ್ರಮದಲ್ಲಿದ್ದ ಮುನಿಗಳೆಲ್ಲರೂ ಸೇರಿಕೊಂಡು ಮಹಿಳೆಯೊಂದಿಗೆ ಮಾತನಾಡುತ್ತಿರಯವುದು ಕಣ್ವರಿಗೆ ಕೇಳಿಸುತ್ತದೆ. ಅವರು ಕುಳಿತಲ್ಲಿಂದ ಎದ್ದು ಗುಹೆಯಿಂದ ಹೊರಬಂದಾಗ ನಡೆದ ವಿಷ್ಮಯವನ್ನು, ಆ ಹೆಂಗಸು ವಿವರಿಸುತ್ತಿದ್ದ ಆಶ್ವರ್ಯಕರ ಘಟನೆಯನ್ನು ನಿವೇದಿಸುತ್ತಾರೆ. ತಲೆಯೆತ್ತಿ ಮಲ್ಲಿಯ ಕಡೆಗೆ ನೋಡಿದ ಮುನಿಗಳು ಸ್ಥಳವನ್ನು ತೋರಿಸುವುದಕ್ಕೆ ಹೇಳುತ್ತಾರೆ. ಹಾಗೆ ಆಪ್ರದೇಶಕ್ಕೆ ಬಂದಾಗ ಕಲ್ಲಿನಿಂದ ಇನ್ನೂ ನೆತ್ತರು ಜಿನುಗುತ್ತಿತ್ತು. ಕಲ್ಲನ್ನೆತ್ತಿ ಮಣ್ಣನ್ನು ತೋಡೆದು ನೀರಿನಲ್ಲಿ ತೊಳೆಯುತ್ತಾರೆ. ಅಲ್ಲದೆ ಬಟ್ಟೆಯಿಂದ ಒರೆಸಿ ಮಹರ್ಷಿಗಳು ಸೂಕ್ಷ್ಮವಾಗಿ ವೀಕ್ಷಿಸಿದಾಗ ಅದು ಪುರಾತನ ಶಿವಲಿಂಗವೆಂದು ತಿಳಿಯುತ್ತದೆ. ತನ್ನ ತ್ರಿಕಾಲಜ್ಞಾನ ದೃಷ್ಟಿಯಿಂದ ಅದರ ಪೂರ್ವೋತ್ತರಗಳನ್ನು ತಿಳಿದು ಲಿಂಗದಿಂದ ಒಸರುತ್ತಿರುವ ರಕ್ತಕ್ಕೆ ತನ್ನ ಕೈಯಿಂದ ಗಂಧಲೇಪನ ಮಾಡುತ್ತಿರುವುದು.

                        ಹೀಗೆ ದೊರೆತ ಶಿವಲಿಂಗವನ್ನು ದುರ್ಗಮ ಪ್ರದೇಶವಾದ ಇಲ್ಲಿ ಸ್ಥಾಪಿಸುವುದು ಸರಿಯಲ್ಲ. ಇಲ್ಲಿಗೆ ಬಂದು ಜನರಿಗೆ ಪೂಜಿಸಲು ಕಷ್ಟ ಸಾಧ್ಯ ಎಂಬ ಯೋಚನೆಯನ್ನು ತಮ್ಮ ಮನೋಗತದ ಮೂಲಕ ಮಹಾದೇವನಾದ ಶಿವನಲ್ಲಿ ವಿಜ್ಞಾಪಿಸಿಕೊಂಡರು. ಮಹೇಶ್ವರನು, ಇದು ಲೋಕಹಿತಕರ ಕಾರ್ಯವಾದರು ನಮ್ಮದೊಂದು ಶರ್ತವಿದೆ. ನಾವು ಭೂಮಿಯ ಅಂತರ್ ಮಾರ್ಗದಲ್ಲಿಯೂ ಹೋಗಿ ಯಾರು ಮೊದಲಿಗೆ ಇಚ್ಚಿತ ಸ್ಥಳವನ್ನು ಸೇರುವರೋ ಅಲ್ಲಿಗೆ ನಿಮ್ಮ ಇಚ್ಚೆಯು ಈಡೇರುವುದೆಂದು ಪಂಥಹ್ವಾನಿಸುತ್ತಾನೆ. ಕಣ್ವರು ದೃಢಮನಸ್ಕರಾಗಿ ಹೊರಡುತ್ತಾರೆ. ಶಿವನುನ ಮಹಾವಿಷ್ಣುವನ್ನು ಬಳಿಗೆ ಬರಮಾಡಿಕೊಂಡು ಆತನನ್ನು ಮತ್ಸ್ಯವಾಹನವನ್ನಾಗಿ ಅಂತರ್ ಮಾರ್ಗದಲ್ಲಿ ಕಣ್ವಾಶ್ರಮದತ್ತ ದಾವಿಸುತ್ತಿರುವುದು. 

                       ಪಂಥಹ್ವಾನವನ್ನು ಸ್ವೀಕರಿಸಿದ ಕಣ್ವರು ತನ್ನ ಮುನಿವರ್ಯರೊಂದಿಗೆ ಶಿವಲಿಂಗವನ್ನು ಪಿಡಿದು ಹೊರಬಂದರು. ಹೀಗೆ ಹೊರಟಾಗ ಮುನಿಗಳು ಎಲ್ಲಿಗೆ ತಲುಪಿರಬಹುದೆಂಬುದನ್ನು ತಿಳಿಯುವ ಸಲುವಾಗಿ ಮೂರುಬಾರಿ ಶಿವನು ಭೂಮಿಯೊಳಗಿನಿಂದ ಮೇಲೆದ್ದು ವೀಕ್ಷಿಸುತ್ತಾನೆ. ಮೂರುಬಾರಿ ವೀಕ್ಷಿಸಿದಾಗಲೂ ಮುನಿಯ ಗಮನವು ಮುಂದೆಯೇ ಇತ್ತು ಹೀಗೆ ವೀಕ್ಷಣೆಗಾಗಿ ಶಿವನೆದ್ದು ನೋಡಿದ ಸ್ಥಳವನ್ನು ದೇವರೆದ್ದ ಸ್ಥಳವೆಂದೂ ಮತ್ತು ಆ ಸ್ಥಳಗಳಿಗೆ ಪಂಜಿಕೊಡಿ, ಕಜೆತೋಟ ಮತ್ತು ಎಡ್ಚಾರು ಎಂಬುವಲ್ಲಿ ಗುರುತಿಸಲ್ಪಡುತ್ತದೆ. ಹೀಗೆ ಮಧ್ಯಹಾದಿಯಲ್ಲಿ ಶಿವ ಮೇಲೆದ್ದು ವೀಕ್ಷಿಸುವಾಗ ಲಿಂಗ ಪಿಡಿದ ಕಣ್ವರು ಮುಂದೆ ಸಾಗುತ್ತಿರುವುದು.

                      ಮುನಿಗಳು ನಿಶ್ಚಿತ ಸ್ಥಳಕ್ಕೆ ತಲುಪಿ, ತಪೋಭೂಮುಯಾಗಿದ್ದ ಜಾಗದಲ್ಲಿ ಸೆಟೆದು ನಿಂತು, ಅಂಜಲಿ ಬದ್ಧರಾಗಿ ಭಕ್ತಿಯಿಂದ ಶಿವನನ್ನು ಆಹ್ವಾನಿಸುತ್ತಿರುವುದು. ಪಂಥದಲ್ಲಿ ಶಂಕರನು ಕಿಂಕರನಿಂದ ಸೋತು, ಭಕ್ತ ಮುನಿಯ ಇಷ್ಟಾರ್ಥದಂತೆ ಅವರ ಕೈಯಲ್ಲಿದ್ದ ಲಿಂಗವನ್ನು ಮರಳಿ ಸೇರಿಕೊಳ್ಳುತ್ತಾನೆ. ಕಣ್ವರ ಆಗಮನದ ನಂತರ ಮೀನ ಗುಂಡಿಯಲ್ಲಿ ಶಿವಾಗಮನವನ್ನು ಕಾಣಬಹುದು. ಹೀಗೆ ಮಹಾದೇವನೊಡನೆ ಮತ್ಸ್ಯವಾಗಿ ಆಶ್ರಮದ ಬಳಿ (ತೋಡಿಕಾನ) ಬಂದ ಮಹಾವಿಷ್ಣುವು ತನ್ನ ಬೃಹದಾಕಾರವನ್ನು ಸಂಕುಚಿತ ‘ಕಿರು’ ಮೀನಾಗಿ ಬಳಿಯ ತಟಾಕದಲ್ಲಿ ನಲೆಸುತ್ತಾನೆ. ಹೀಗೆ ನೆಲೆಸಿದ ತಟಾಕವನ್ನು ಮತ್ಸ್ಯ ತೀರ್ಥವೆಂದು ಕರೆಯಲ್ಪಡುತ್ತದೆ.

                      ಕಿರಾತನೊಡನೆ ನಡೆದ ಮಹಾ ಸಂಗ್ರಾಮದಲ್ಲಿ ಅರ್ಜುನನು ಹೊಡೆದ ಮಂತ್ರದ ಬಾಣಗಳು ಮಹಾದೇವಿಯ ವರದಿಂದ ಮಲ್ಲಿಕಾ ಕುಸುಮಗಳಾಗಿ ಶಿವನಿಗೆ ಅರ್ಚನೆಯಾದವು. ಹೀಗೆ ಮಲ್ಲಿಗೆಯಿಂದ ಅಲಂಕೃತನಾದ ಶವನನ್ನೇ ಪ್ರಥಮತಃ ಅರ್ಜುನನು ನೋಡಿದ್ದರಿಂದಲೂ, ‘ಮಲ್ಲಿಗೆ’ಯಂತೆ ಶುಭ್ರವಾದ ಕೀರ್ತಿಯನ್ನು ಶಿವನಲ್ಲಿ ಹೋರಾಡಿ ಅರ್ಜುನನು ಪಡೆದೆನೆಂಬುದರಿಂದಲೂ, ‘ಮಲ್ಲಿ’ಯೆಂಬ ಆದಿವಾಸಿ ಮಹಿಳೆಯಿಂದಾಗಿ, ಮತ್ತು ಅರ್ಜುನನಿಗೂ ಅದು ಲಿಂಗರೂಪವನ್ನು ಧರಿಸಿದ ಪರಮೇಶ್ವರನು ತನಗೆ ದೊರೆತನೆಂಬುದರಿಂದಲೂ ಕಣ್ವರು ಮಲ್ಲಿಕಾರ್ಜುನುನೆಂಬ ಹೆಸರಿನಿಂದ ‘ಶಿವ’ ತೊಡಿಕಾನ (ತಡಿಕಾನ) ದಲ್ಲಿ ವೈದಿಕ ವಿದಿವಿಧಾನಗಳಿಂದ ಶಾಸ್ತ್ರೋಕ್ತವಾಗಿ ಸ್ಥಾಪಿಸುತ್ತಿರುವುದು. ಜೊತೆಗೆ ಲಿಂಗರೂಪಿಯಾದ ಗಣಪತಿಯನ್ನು ಕೂಡಾ ಈ ಸಂದರ್ಭದಲ್ಲಿ ಸ್ಥಾಪಿಸಲ್ಪಡುತ್ತದೆ.

                     ಶ್ರೀ ಕ್ಷೇತ್ರ ಕಾಶಿಗೆ ಹರಕೆಯನ್ನು ತೊಡಿಕಾನದಲ್ಲಿ ಒಪ್ಪಸಿದರೆ, ಗಂಗೆಯ ತಡಿಯಲ್ಲಿ ಮಾಡುವ ಎಲ್ಲಾ ಕಾರ್ಯಗಳನ್ನು ಇಲ್ಲಿಯ ಮತ್ಸ್ಯವಾಹಿನಿಯ ತೀರದಲ್ಲಿ ಮಾಡಿದರೆ, ಅಲ್ಲಿ ವಿಶ್ವನಾಥನು ಕೊಡುವ ಮುಕ್ತಿಯನ್ನು ಇಲ್ಲಿ ಮಲ್ಲಿಕಾರ್ಜುನನು ಕೊಡುತ್ತಾನೆಂಬ ನಂಬಿಕೆಯಿಂದ ಹರಕೆ ಒಪ್ಪಿಸುವ ಪರಿಪಾಠವಿದೆ. ಹಾಗಾಗಿ ಶ್ರೀ ಕ್ಷೇತ್ರ ತೊಡಿಕಾನದ ವಾರಣಾಶಿಯಲ್ಲಿ ಗಂಗಾಮಾತೆಯ ನೆಲೆಯನ್ನು ಕಂಡುಕೊಂಡು ಭಕ್ತಿಯಿಂದ ಪೂಜಿಸುತೇವೆ. ಇದರಿಂದಾಗಿ ಶ್ರೀ ಕ್ಷೇತ್ರದಲ್ಲಿ ವಾರಣಾಸಯೇ ನಮ್ಮ ಗಂಗಾಮಾತೆಯ ನೆಲೆಯೆಂದು ನಂಬಿಕೊಂಡು ಆರಾಧಿಸುತ್ತೇವೆ.

                     ಕಣ್ವರ ಆಗಮನ ಆಗ್ರಹದ ಅಪೇಕ್ಷೆಯಂತೆ ಶಿವನು ಮಹಾವಿಷ್ಣುವನ್ನೇ ಮತ್ಸ್ಯವನ್ನಾಗಿಸಿಕೊಂಡು ದೇವರ ಗುಂಡಿಯಿಂದ ತೊಡಿಕಾನಕ್ಕೆ ಬರುತ್ತಾರೆ. ಹೀಗೆ ಬಂದ ಮೇಲೆ ಮಹಾಮತ್ಸ್ಯಕ ರೂಪವನ್ನು ಸಂಕುಚಿಸಿ ಮೀನಾಗಿ ಶಾಸ್ತಾರ ವನದ ಬಳಿ ಪ್ರಹರಿಸುವ ನದಿಯಲ್ಲಿ ನೆಲೆಸಿರುವ ಮೀನಿಗೆ ಕಣ್ವರಿಂದಲೇ ಪ್ರತಿಸ್ಥಾಪಿಸಲ್ಪಟ್ಟ ಮಲ್ಲಿಕಾರ್ಜುನನಿಗೆ ನಿತ್ತ ಅರ್ಚನೆಯಾದ ಬಳಿಕ ನೈವೇಧ್ಯವನ್ನು ಮೀನಿಗೆ ಸಮರ್ಪಿಸುವುದು ಸಂಪ್ರದಾಯ. ಇದು ಈಗಲೂ ನಡೆದುಕೊಂಡು ಬರುತ್ತಿರುವ ಆಚರಣೆ. ಹಿಂದೆ ಕಣ್ವರಿಂದಲೇ ಮತ್ಸ್ಯಗಳಿಗೆ ನೈವೇಧ್ವ ಸಮರ್ಪಣೆಯಾಗುತ್ತಿರುವುದನ್ನು ಇಲ್ಲಿ ಕಾಣಬಹುದು.

                      ದ್ವ್ಯೆತವನದ ಎಲೆಮನೆಯಲ್ಲಿ ಕಣ್ವರು, ಭದ್ರವಾದ ಯಜ್ಞಕುಂಡವನ್ನು ನಿರ್ಮಿಸುತ್ತಾರೆ. ಹೀಗೆ ಸ್ಥಾಪಿಸಿದ ಯಜ್ಞೇಶ್ವರನನ್ನು ಆಹ್ವಾನಿಸುತ್ತಾರೆ. ಹೀಗೆ ಅಕ್ಷಂಯಾಗ್ನಿಯಲ್ಲಿ ಮಹೇಶ್ವರನನ್ನು ಮಂತ್ರತಂತ್ರಗಳಿಂದಲೂ ಶ್ರೀರಾಮನನ್ನು ಪೂಜಿಸುತ್ತಿರುವುದು. ಮಹರ್ಷಿಗಳ ನಿಯಮ ನಿಷ್ಠೆ, ಮಹಾಸಂಕಲ್ಪದಿಂದಾಗಿ ಇಂದಿಗೂ ಯಜ್ಞವಾಟದಲ್ಲಿ ಅಚ್ಚಳಿಯದೆ ಅಕ್ಷಯಾಗ್ನಿ ಉರಿಯುತ್ತಲೇ ಇರುತ್ತದೆ. ಹೀಗೆ ಕಣ್ವರು ಪ್ರತಿಸ್ಥಾಪಿಸಿದ ಯಜ್ಞಕುಂಡದ ಬಳಿ ಯಜ್ಞೇಶ್ವರನಾಗಿ ಬ್ರಹ್ಮನ ಪ್ರತಿಷ್ಠಾಪನೆಯನ್ನು ಕಾಣಬಹುದು.

                       ಕುಂಬಳೆ ಅರಸ ಜಯಸಿಂಹನ ತಂಗಿಯಾದ ಯಶೋಧಾದೇವಿಗೆ ವಿವಾಹವಾಗಿ ಹಲವು ಕಾಲದವರೆಗೆ ಮಕ್ಕಳಾಗಲಿಲ್ಲ. ತಂಗಿಯ ವಿವಾಹಾದಿ ಸಂಸ್ಕಾರಗಳ ಹೊಣೆಯನ್ನು ಜಯಸಿಂಹನೇ ವಹಿಸಿರುವುದರಿಂದ ತನ್ನ ತಂಗಿಯೊಂದಿಗೆ ತೀರ್ಥಯಾತ್ರೆಗೆ ಹೊರಡುತ್ತಾನೆ. ಶ್ರೀ ತಲಕಾವೇರಿ ಪುಣ್ಯ ಕ್ಷೇತ್ರಕ್ಕೆ ದರ್ಶನ ಮಾಡಿ ಹಿಂತಿರುಗುವಾಗ ತೊಡಿಕಾನ ಕ್ಷೇತ್ರಕ್ಕೆ ಬರುತ್ತಾರೆ. ಇಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಅಭಿಷೇಕ, ಪೂಜೆ ಕಾಣಿಕೆಗಳನ್ನು ಸಮರ್ಷಿಸುತ್ತಾರೆ. ನಂತರ ಕಣ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಅವರ ಪಾದಗಳಿಗೆರಗಿ ಮಕ್ಕಳಾಗದಿರುವ ಬಗ್ಗೆ ಹೇಳಿಕೊಳ್ಳುತ್ತಾನೆ. ಮಹರ್ಷಿಗಳು ಅವರ ಪೂರ್ವೋತ್ತರಗಳನ್ನು ತಿಳಿದು ನೀನು ನಿನ್ನ ಅರಮನೆಯ ನೈರುತ್ಯ ದಿಕ್ಕಿನಲ್ಲಿ ಕಾಡಿನ ಮಧ್ಯೆ ಬಹಳ ಕಾಲದ ಹಿಂದೆ ನಾವೇ ಪ್ರತಿಷ್ಠಾಪಿಸಿರುವ ಸಂತಾನ ಗೋಪಾಲಕೃಷ್ಣನ ವಿಗ್ರಹವಿದೆ. ಇದಕೆ ದೇವಾಲಯವೊಂದನ್ನು ನಿರ್ಮಿಸು. ಇದರಿಂದ ನಿನ್ನ ತಂಗಿಗೆ ಸುಪುತ್ರನನ್ನು ಪಡೆದು ರಾಜ ವಂಶ ಬೆಳೆಯುತ್ತದೆ ಎಂಬ ಆದೇಶವನ್ನು ಮಾಡುತ್ತಿರುವುದು. 

                        ಮಲ್ಲಿಕಾರ್ಜುನ ಸ್ವಾಮಿಯ ಸರ್ವಕಾರ್ಯಗಳ ಭಾರವನ್ನು ಹೊತ್ತ ಮಹಾ ಕಾರ್ಯಸ್ಥ (ಮಹಾಮಂತ್ರಿಣಿ) ಯೇ ಶ್ರೀ ಪಾಷಾಣಮೂರ್ತಿ. ಶ್ರೀ ಮಲ್ಲಿಕಾರ್ಜುನನ ಹಾಗೂ ಶ್ರೀ ಕ್ಷೇತ್ರದ ಹಿತರಕ್ಷಣೆಗಳಿಗಾಗಿಯೇ ತನ್ನನ್ನು ತೊಡಗಿಸಿಕೊಂಡ ಅಂಗರಕ್ಷಕಿಯೂ, ಅನುಪಮ ಶಕ್ತಿ- ಮಾಯಾಶಕ್ತಿಗಳಿಂದ ಕೂಡಿದ ಬಲುತರದ ಬಲವಂತೆಯೂ ಶ್ರೀ ಕ್ಷೇತ್ರದಲ್ಲಿ ಪ್ರಧಾನ ರಕ್ಷಣಾ ದೇವವತೆಯಾಗಿ ನೆಲೆಗೊಂಡಿದ್ದಾಳೆ, ಸುಪ್ರಸಿದ್ಧವಾದ ಪಾಷಾಣ ಮೂರ್ತಿಯು ಮೂಲತಃ ಇಲ್ಲೇ ಇದ್ದ ದೈವವಲ್ಲ. ನೂರಾರು ವರ್ಷಗಳ ಮೊದಲು ಉಪ್ಪಿನಂಗಡಿ ಕರಾಯದ ವೈಲಾಯರು, ತೊಡಿಕಾನಕ್ಕೆ ಬಂದಿದ್ದಾಗ ಅಚರ ಆರಾಧ್ಯ ದೈವಬಾಗಿದ್ದ ಈ ಕಾಳಮ್ಮ ಅವರೊಡನೆ ತಾನೂ ಬರುತ್ತಿರುವುದು. ಹೀಗೆ ಬಂದ ನೆಲೆಯಾದ ಪಾಷಾಣಮೂರ್ತಿಯು ಶ್ರೀ ಕ್ಷೇತ್ರಕ್ಕೆ ತುಲ್ಯಾಧಿಪತ್ಯಳಾಗಿ (ಸಮಾನಶಕ್ತಿ) ಶ್ರೀ ಕ್ಷೇತ್ರದಲ್ಲಿರುವ ಮಹಾದೇವನ ಪಾದಸೇವಕಿಯಾಗಿ ಮತ್ತು ಪ್ರಧಾನ ರಕ್ಷಣಾ ದೇವತೆಯಾಗಿ ಇಲ್ಲಿಯೇ ನೆಲೆಯಾಗುತ್ತಾಳೆ. 

                          ಶ್ರೀ ಕ್ಷೇತ್ರ ರಕ್ಷಕಳಾಗಿರುವ ಪಾಷಾಣ ಮೂರ್ತಿಯು ಈ ದೇವಸ್ಥಾನದಿಂದ ಬಡಗು ದಿಕ್ಕಿನಲ್ಲಿ ಸಿಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕರಿಯಸ್ಥಾನದ ‘ಮಾಡ’ (ದೈವಸ್ಥಾನ) ದಲ್ಲಿ ನೆಲೆಗೊಂಡಿರುವುದು. ವರ್ಷಂಪ್ರತಿ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೆಯ ಅವಧಿಯಲ್ಲಿ ಪಾಷಾಣಮೂರ್ತಿಯು, ಸ್ವಾಮಿಯೆಡೆಗೆ ದಾವಿಸಿ ಬರುವ ಸಂದರ್ಭವನ್ನು ಶ್ರೀ ಕ್ಷೇತ್ರದಲ್ಲಿ ಕಾಣಬಹುದು. ಮಲ್ಲಿಕಾರ್ಜುನನಿಗೆ ಹರಕೆ ಹೇಳುವಾಗ ಪ್ರಭಾವಿಯಾದ, ಈ ಕ್ಷೇತ್ರಕ್ಕೆ ತುಲ್ಯಾಧಿಪತ್ಯ ಶಕ್ತಿ ದೇವತೆಯಾದ ಪಾಷಾಣಮೂರ್ತಿಯನ್ನು ಭಕ್ತ ಜನರು ಮರುಯುವುದಿಲ್ಲ. ತಮ್ಮ ಮನದಿಚ್ಚೆಯು ನೆರವೇರಿದ ಕೂಡಲೇ ದೇವತೆಯ ಸನ್ನಿಧಿಗೆ ಬಂದು ‘ಸಮ್ಮಾನ’ ಪೂರೈಸಿ ಹೋಗುವುದಯ ಊರಿನ ಹಾಗೂ ಪರವೂರಿನ ಭಕ್ತ ಜನರ ಆಚರಣೆಯಾಗಿದೆ. ಮತ್ಸ್ಯ ತೀರ್ಥವಾಹಿನಿಯನ್ನು ದಾಟಿ, ದೇವಸ್ಥಾನಕ್ಕೆ ಬರಲು ನಿರ್ಮಿಸಲ್ಪಟ್ಟ ‘ಪಾಲ’ವೇ ‘ಸತ್ಯಪಾಲ’ವಾಗಿದೆ. 

                          ದ್ವಾಪರ ಯುಗದ ಅಂತ್ಯದಲ್ಲಿ ಜಂಬೂಫಲದ ಕಡಿತದಿಂದ ಕೃಷ್ಣನೊಡನೆ ಬಂದ ಪಾಂಡವರು ದ್ರೌಪದಿಯ ಸಹಿತ ಇಲ್ಲಿ ತಮ್ಮ ಹೃದ್ಗತ ಸತ್ಯವನ್ನು ಪ್ರಮಾಣೀಕರಿಸಿದ್ದರು. ಅಲ್ಲಿಂದಲೇ ಊರ ಹಾಗೂ ಪರ ಊರಿನವರೊಳಗೆ ಯಾವುದಾದರೂ ವಾದವಿವಾದಗಳು ತಲೆದೋರಿದರೆ. ಇತ್ಯರ್ಥಕ್ಕಾಗಿ ಮಾಇನ ಸತ್ಯಸ್ವರೂಪವನ್ನು ನಿರ್ಣಯಿಸುವುದಕ್ಕಾಗಿ ಮಾತ್ರ ಸತ್ತಪಾಲವನ್ನು ಉಪಯೋಗಿಸಿತ್ತಾರೆ. ಇಂತಹ ದೇವಾಂಶ ಸಂಭೂತರ, ಸತ್ಯವಂತರ, ಸತ್ತಕ್ಷೇತ್ರವಾದ ಮೇಲೆ ಉಳ್ಳಾಕುಳ ಸತ್ಯಪಾಲವನ್ನು ದಟಿ ದೇವಸ್ಥಾನದ ಒಳಗೆ ಬಂದು ತಾವು ಸತ್ಯವಂಶರೆಂದು ತೋರಿಸಿದರಾದರೂ, ಅನಾದಿಯಿಂದ ದೇವತಾ ಸನ್ನಿಧಿಯಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದ ಸತ್ ಸಂಪ್ರದಾಯವೆಂಬ ಸತ್ಯವನ್ನು ಅವರಿಗೂ ಮೀರಿ ನಡೆಯಲಾಗಲಿಲ್ಲ ಎಂತಲೇ ಪಾಷಾಣಮೂರ್ತಿಗೂ, ಮಲೆಉಳ್ಳಾಕುಳಿಗೂ ಇಲ್ಲಿ ಕದನವಾಗುತ್ತರುವುದು.

                        ಮಲ್ಲಕಾರ್ಜುನ ಲಿಂಗದ ಸ್ಥಾಪನೆಯಾದಂದಿನಿಂದ ಶಿವಕೇತ್ರವು ಇದೇ ಸೀಮೆಗೆ ಪ್ರಧಾನ ದೇವಾಲಯವಾಯಿತು. ಮಲ್ಲಿಕಾರ್ಜುನನೊಡನೆ ಬೇರೆ ಬೇರೆ ದೇವತೆಗಳ ದೈವಗಳ ನೆಲೆಗಳು ಒಂದೊಂದಾಗಿ ಸ್ಥಾಪಿಸಲೊಟ್ಟ ಶ್ರೀ ಕ್ಷೇತ್ರ ತೊಡಕಾನದಲ್ಲಿ ಮಹಾಗಣಪಿ, ಶಾಸ್ತರ, ಮಹಾವಿಷ್ಣು, ವನದುರ್ಗೆ, ರಕ್ತೇಶ್ವರಿ, ಭಗವತಿ, ನಂದೀಶ್ವರ, ಅಯ್ಯಪ್ಪ, ಸುಬ್ರಹ್ಮಣ್ಯ ಸ್ವಾಮಿ, ಪುರುಷದೈವ, ದೈಯಾರು, ಮಲೆಭೂತ, ಪೊಟ್ಟದೈವ, ಶೆಟ್ಟಿಭೂತ, ಅಂಗಾರಭೂತ, ರಾಜನ್ ದೈವ ಮತ್ತು ಪಾಷಾಣಮೂರ್ತಿ ಮಲೆಉಳ್ಳಾಕಲು ಮೊದಲಾದ ದೈವಗಳಸಾನಿಧ್ಯಗಳಿವೆ. ಅವರಲ್ಲಿ ಪಾಷಾಣಮೂರ್ತಿ, ಮಲೆ ಉಳ್ಳಾಕುಳುಗೆ ಸತ್ಯಪಾಲದಲ್ಲಿ ಬಹಳ ಹೊತ್ತು ಕದನವಾಗಿ ಕೊನೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತ್ಯಕ್ಷನಾದ ಶಿವನು ಉಳ್ಳಾಕುಳುಗಳಿಗೆ ಪಾಷಾಣಮೂರ್ತಿಯ ಸಹೋದರರಾಗಿ ನೆಲೆಯಾಗುವಂತೆ ಆದೇಶ ನೀಡುತ್ತಿರುವುದು.

                         ಶ್ರೀ ಕ್ಷೇತ್ರ ತಲಕಾವೇರಿಯೂ, ಶ್ರೀ ಕ್ಷೇತ್ರ ತೊಡಿಕಾನವೂ ಸಹ್ಯಾದ್ರಿಯ ಇಕ್ಕಡೆಗಳಲ್ಲಿರುವ ಪ್ರಾಚೀನ ಕ್ಷೇತ್ರಗಳು. ಹದಿನೆಂಟು ಕಿಲೋಮೀಟರ್ ಅಂತರಗಳಲ್ಲಿರುವ ಈ ಎರಡೂ ದೇವಾಲಯಗಳ ಸಂಬಂಧವಿರುವುದು ಪೂರ್ವದಲ್ಲೇ ಕಂಡುಬಂದಿದೆ, ಕಾವೇರಿಯ ಯಾತ್ರಿಕರು ತೊಡಿಕಾನಕ್ಕಾಗಿ ದಕ್ಷಿಣ ಕನ್ನಡ ಕಡೆಯಿಂದ ಹೋಗಿ ಬರುತ್ತಿದ್ದುದು ಹೆಚ್ಚಾಗಿತ್ತು. ಆ ಕಾಲದಲ್ಲಿ ತೊಡಿಕಾನದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಊಟ, ವಸತಿಗಳನ್ನು ದೇವಾಸ್ಥಾನದಲ್ಲಿ ವ್ಯವಸ್ಥೆಗೊಳಿಸಲಾಗುತ್ತಿತ್ತು. ತುಲಾ ಸಂಕ್ರಮಣದಂದು ಆರಂಭಗೊಳ್ಳುವ ಕಾವೇರಿ ಜಾತ್ರೆಗೆ ಮೊದಲೇ ಕನ್ಯಾಮಾಸದ 28 ರಂದು ತೊಡಿಕಾನದಲ್ಲಿ ಪೂಜೆಯಾಗಿ ಅನ್ನದ ಕೊಪ್ಪರಿಗೆಯು ಏರಿಸಲ್ಪಡುವುದು. ಹೀಗೆ ಬರುವ ಹೋಗುವ ಯಾತ್ರಾರ್ಥಿಗಳು ಶ್ರೀ ಕ್ಷೇತ್ರದಲ್ಲಿ ದೇವರ ಪ್ರಸಾದವನ್ನು ಸ್ವೀಕರಿಸಿ ಮುಂದೆ ಯಾತ್ರೆ ಕೈಗೊಳ್ಳುತ್ತಿರುವುದು. ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸಿ ಹೋಗುವುದು ತಲಕಾವೇರಿ ಯಾತ್ರೆಯ ಅವಿಭಾಜ್ಯ ಅಂಗವೆಂದು ಆಸ್ಥಿಕರ ನಂಬಿಕೆ.

                            ತಲಕಾವೇರಿಯಲ್ಲಿ ತೀರ್ಥೋದ್ಬವವಾದಾಗ, ಅಲ್ಲಿನ ಅರ್ಚಕರು ತಡಿಕಾನಕ್ಕೆಂದೇ ತೀರ್ಥವನ್ನು ಪ್ರತ್ಯೇಕವಾಗಿ ತೆಗೆದಿರಿಸುವ ಕ್ರಮವಿತ್ತು. ಉದ್ಬವ ತೀರ್ಥವನ್ನು ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಗೆ ತರುವುದಕ್ಕಾಗಿ ಹಿಂದೆ ರಾಜರು, ಬ್ರಾಹ್ಮಣರನ್ನು ನಿಯೋಜಿಸಿತ್ತಿದ್ದರು. ತೀರ್ಥವನ್ನು ತಂದು ಪ್ರಥಮತಃ ತೊಡಿಕಾಡಿನ ಕ್ಷೇತ್ರಕ್ಕೆ ಕೊಟ್ಟು, ಅನಂತರ ಪೆರಾಜೆ, ಸುಳ್ಯ, ಕಾವು, ಉರುಡೂರುಗಳಿಗೆ ಒಯ್ದು ಕೊಡುತ್ತಿರುವುದು. ಅದಕ್ಕಾಗಿ ತರುವ ಬ್ರಾಹ್ಮಣರಿಗೆ ‘ಉಂಬಳಿ’ ಕೊಡುತ್ತಿದ್ದರೆಂದು ತಿಳಿದು ಬರುತ್ತದೆ. ಹೀಗೆ ಉದ್ಬವ ತೀರ್ಥವನ್ನು ಬ್ರಾಹ್ಮಣರು ತಲಕಾವೇರಿಯಿಂದ ಶ್ರೀ ಕ್ಷೇತ್ರ ತೊಡಿಕಾನ, ಪೆರಾಜೆ, ಅಡೂರಿಗೆ ತರುತ್ತಿರುವುದು. ಇಲ್ಲಿ ತೀರ್ಥಜಲಕ್ಕೆ ‘ಗಂಗಾ ಪೂಜೆ’ ಮಾಡಿ ಮಲ್ಲಿಕಾರ್ಜುನ ಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ.

                            ಬಲ್ಲಾಳ ರಾಜವಂಶದವರ ಆಳ್ವಿಕೆಯಲ್ಲಿ ತಮ್ಮ ಆರಾಧ್ಯ ದೇವದೈವಗಳಾಗಿದ್ದ ಶ್ರೀ ಮಲ್ಲಿಕಾರ್ಜುನ, ಮಲೆ ಉಳ್ಳಾಕ್ಲು, ಪಾಷಾಣಮೂರ್ತಿ, ರಕ್ತೇಶ್ವರಿ, ಭಗವತೀ, ಶಾಸ್ತಾರ, ವನದುರ್ಗಾದಿ ದೇವತೆಗಳಿಗೆ ನಾನಾ ತರದ ಪೂಜಾ ವಿಧಿ ವಿಧಾನಗಳಿಂದ ಆರಾಧಿಸುತ್ತಾ ಬಂದವರು. ಬಲ್ಲಾಳರು ನಿಸ್ಸಂತತಿಯಿಂದ ಮಡಿದಾಗ ರಾಜ್ಯಾಡಳಿತ ಅಷ್ಟ ಬಲ್ಲಾಳ್ತಿಯರಿಗೊಳಪಟ್ಟಿತು. ಅವರಲ್ಲೊಬ್ಬಾಕೆಯಾಗಿದ್ದ ಅಕ್ಕು ಬಲ್ಲಾಳ್ತಿಯು ತೊಡಿಕಾನ ಪ್ರದೇಶದ ಒಡತಿಯಾದಳು. ಅತೀ ದೊಡ್ಡ ಕುಟುಂಬವಾಗಿ ಗೌಡ ಸಮುದಾಯದ ಉಳಿವಾರು ಮನೆತನದವರು ಅವಳ ಕಾರ್ಯಸ್ಥರಾಗಿ ನಿಯಮಿತರಾದರು. ಅವರಲ್ಲಿ ಕೊನೆಯ ಬಲ್ಲಾಳ್ತಿಯು ಸಂತಾನಹೀನೆಯಾದಾಗ ಬಲ್ಲಾಳ ರಾಜವಂಶದ ಸಮಸ್ತ ಹಕ್ಕು ಬಾಧ್ಯತೆಗಳನ್ನು ಕಾರ್ಯಸ್ಥರಾಗಿದ್ದ ಉಳುವಾರಿನವರಿಗೆ ಪ್ರತಿಬಲ್ಲಾಳರಾಗಿ ದೇವಸ್ಥಾನದ ಆಡಳಿತ ಹಸ್ತಾಂರಿಸುತ್ತಿರುವುದು.

                               ರಾಜ್ಯಾಡಳಿತವು ಮತ್ತೆ ಕೊಡವರಸರ ಕೈ ಸೇರಿತು. ಲಿಂಗಾಯುತ ಮತಸ್ಥರಾದ ಕೊಡಗು ಅರಸರು ತಮ್ಮ ಇಷ್ಟದೇವರಾದ ಮಲ್ಲಿಕಾರ್ಜುನನನ್ನು ವಿಶೇಷವಾಗಿ ಆರಾಧಿಸಿಕೊಂಡು ಬರುತ್ತಿದ್ದರು. 1811 ರಿಂದ 1820 ನೆಯ ಇಸವಿಯಲ್ಲಿ ಕೊಡಗಿನ ರಾಜ್ಯಾಡಳಿತವು ಲಿಂಗರಾಜ ಅರಸನದಾಗಿತ್ತು. ಇವನು ವಿಶೇಷವಾಗಿ ದೇವಸ್ಥಾನದ ವಿಷಯದಲ್ಲಿ ಕಾಳಜಿ ವಹಿಸಿದ್ದ. ಶಿಸ್ತಿಗೆ ಹೆಸರಾಗಿದ್ದ ಲಿಂಗರಾಜನು ದೇವಸ್ಥಾನದಲ್ಲಿ ಹೆಚ್ಚಿನ ಕಟ್ಟು ನಿಟ್ಟುಗಳನ್ನು ವಿಧಿಸಿದ್ದನು. ದೇವಸ್ಥಾನದ ಸಕಲ ಅಭಿವೃದ್ಧಿಗಾಗಿ ಮತು ತನ್ನ ಬ್ರಹ್ಮ ಹತ್ಯಾದೋಷ ಪರಿಹಾರಕ್ಕಾಗಿ ದೇವಳದಲ್ಲಿ ಸ್ವರ್ಣ ತುಲಾಭಾರವನ್ನು ನೆರೆವೇರಿಸುತ್ತಿರುವುದು. ಈ ಮೂಲಕ ತನ್ನ ದುರಿತಗಳನ್ನು ಹೋಗಲಾಡಿಸಿಕೊಂಡನಲ್ಲದೆ ದೇವರಿಗೆ ಚಿನ್ನದ ಸತ್ತಿಗೆ, ಸರ ಮೊದಲಾದ ಅನಘ್ರ್ಯ ವಸ್ತುಗಳನ್ನು ಕೂಡ ಸಮರ್ಪಿಸಿರುವನು.

                               ಸುಮಾರು ಮೂರುಸಾವಿರ ವರ್ಷಗಳಿಂದತ್ತಲೂ, ಐದು ಸಾವಿರ ವರ್ಷಗಳಿಂದತ್ತಲೂ ಇರುವ ಮದ್ಯಂತರ ಕಾಲದಲ್ಲಿ ಅರ್ಜುನನಿಗೊಲಿದ ಮಲ್ಲಿಕಾರ್ಜುನ ‘ಲಿಂಗ’ ಸ್ವರೂಪದಿಂದ ದ್ವೈತವನದಲ್ಲಿ ನೆಲೆಯಾಗುವುದು. ಹೀಗೆ ಇಂದ್ರ ಕೀಲ ಪ್ರಾಂತದಲ್ಲಿ ಶಿವಲಿಂಗವು ‘ಮಲ್ಲಿ’ ಎಂಬ ಆದಿವಾಸಿ ಮಹಿಳೆಗೆ ದೊರಕಿರುವುದು. ಬ್ರಹ್ಮರ್ಷಿಗಳೂ , ಕುಲಪತಿಗಳೂ, ಮಹಾತಪಸ್ವಿಗಳೂ, ಆಗಿದ್ದ ಮಹಾರ್ಥಿಗಳಾದ ಕಣ್ವರಿಗೆ ಶಿವಲಿಂಗ ದೊರಕಿ, ಅವರು ಅದನ್ನು ತಮ್ಮ ಆಶ್ರಮ ತಪೋಭೂಮಿಯಾಗಿದ್ದ ಸಹ್ಯಾಚಲದ ತಡಿಯಕಾನದಲ್ಲಿ ಶಾಸ್ತ್ರೀಯವಾಗಿ ಪ್ರತಿಷ್ಠಾನಿಸಲ್ಪಟ್ಟರು. ಹಲವಾರು ವರ್ಷಗಳ ಬಳಿಕ ರಾಜ್ಯಾಡಳಿತ ಸಂದರ್ಭದಲ್ಲಿ ದೇವಮಂದಿರವು ನಿರ್ಮಿಸಲ್ಪಟ್ಟಿತು. ಮುಂದೆ. ಶ್ರೀ ಮಲ್ಲಿಕಾರ್ಜುನ ದೇವಾಲಯ ಕಾಲಕಾಲಕ್ಕೆ ಜೀರ್ಣೋದ್ಧಾರಗಳನ್ನು ಪಡೆಯುತ್ತಾ ಪ್ರತೀ ಮೀನ ಮಾಸ 30 ಕ್ಕೆ ಧ್ವಜಾರೋಹಣ ಮಾಡಿ ಮೇಷ ಮಾಸ 6 ರ ತನಕ ಅಂದರೆ ಸಾಮಾನ್ಯವಾಗಿ ಏಪ್ರಿಲ್ 13 ರಿಂದ 19 ರವರೆಗೆ ಕಾಲಾವಧಿ ಜಾತ್ರೆಯು ನಡೆದು ಬರುತ್ತಿರುವುದು.