Turbo Rathnakar

ಟರ್ಬೋ ಕೈಗಾರಿಕೆಯು ಇದುವರೆಗೆ ನಡೆದುಬಂದ ದಾರಿ ಹಾಗೂ ಪಡೆದುಕೊಂಡ ಪುರಸ್ಕಾರಗಳು:

ದಿನಾಂಕ 18.12.2002ರಂದು ನವದೆಹಲಿಯಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ.

ದಿನಾಂಕ 02-05-2002ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ “ಕೈಗಾರಿಕಾ ವಸ್ತು ಪ್ರದರ್ಶನ”ದಲ್ಲಿ ಪ್ರಥಮ ಸ್ಥಾನ.

ದಿನಾಂಕ16-11-2002ರಂದು “ಜಿಲ್ಲಾ ವಿಜ್ಞಾನ ಪ್ರಶಸ್ತಿ” ಪುರಸ್ಕಾರ.

2006ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯು.ಜಿ.ಸಿ. ಕಾರ್ಯಕ್ರಮದಲ್ಲಿ 15 ನಿಮಿಷಗಳ ಸಾಕ್ಷಚಿತ್ರ ಬಿಡುಗಡೆ.

ಕುವೆಂಪು ವಿಶ್ವವಿದ್ಯಾನಿಲಯದ ಪರಿಸರ ಶಿಕ್ಷಣದ ಪಠ್ಯ ಪುಸ್ತಕದಲ್ಲಿ ಟರ್ಬೋ ಯಂತ್ರದ ಪರಿಚಯ.

ಇದುವರೆಗೆ ಸುಮಾರು 20 ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಶಿಬಿರಗಳಿಗೆ ಟರ್ಬೋ ಯಂತ್ರದ ಸಂಪೂರ್ಣ ಮಾಹಿತಿ ಬೋಧನೆ

ಸುಮಾರು 20 ವಿವಿಧ ಸಂಘಸಂಸ್ಥೆಗಳಿಂದ ಅಭಿನಂದನೆಗಳೊಂದಿಗೆ ಸನ್ಮಾನಗಳು.

2008ರಲ್ಲಿ ಬೆಂಗಳೂರು ದೂರದರ್ಶನದಿಂದ “ತಮಸೋಮ” ಎಂಬ 22 ನಿಮಿಷಗಳ ಸಾಕ್ಷಚಿತ್ರ ಬಿಡುಗಡೆ.

2015- ಹಾಗೂ 16ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ.

12-03-2016ರಿಂದ 27-03-2016ರವರೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ “ಫೆಸ್ಟಿವಲ್ ಇನ್ನೋವೇಶನ್” ಕಾರ್ಯಕ್ರಮದಲ್ಲಿ 15 ದಿನಗಳ ಕಾಲ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳೊಂದಿಗೆ ನೇರವಾಗಿ ಮಾತುಕತೆ.

ಜುಲೈ 2016ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿ ಅಲ್ಲಿಯ ಬುಡಕಟ್ಟು ಜನಾಂಗದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಮಾತುಕತೆ.

ಮೇಘಾಲಯ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಖಾಂಡ ಹೋಗೆ ಜಲಪಂಪನ್ಮೂಲ ಹೊಂದಿದ ರಾಜ್ಯಗಳಿಗೆ ಭೇಟಿ ನೀಡಿ ಟರ್ಬೋ ತಂತ್ರಜ್ಞಾನದ ಅಳವಡಿಕೆಯ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ.

ಇದುವರೆಗೆ ಸುಮಾರು 360 ಟರ್ಬೋ ಯಂತ್ರಗಳನ್ನು ಅಳವಡಿಸಿದ್ದು, ಇದರಿಂದ ಪ್ರತಿನಿತ್ಯ ಸುಮಾರು 18,000 ಕಿ.ವ್ಯಾ ಸ್ವತಂತ್ರ ವಿದ್ಯುಚ್ಛಕ್ತಿ ಉತ್ಪಾದನೆ.

ದಿನಾಂಕ 25-3-2017ರಂದು ಸುವರ್ಣ ನೈಸ್, ಕನ್ನಡ ಪ್ರಭ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾಸಿಯಾ ಇವರಿಂದ “ಉಜ್ವಲ ಉದ್ಯಮಿ” ಪ್ರಶಸ್ತಿ ಸ್ವೀಕಾರ.

ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮಕ್ಕೆ ಡೈಲಿ ಫ್ಯಾಕ್ಟರ್ ತಂಡದವರಿಂದ ಚಿತ್ರೀಕರಣ.

ಉತ್ತರಾಖಂಡ್ ರಾಜ್ಯಕ್ಕೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಉತ್ತರಾಖಾಂಡ್‍ನಲ್ಲಿರುವ ವಿದ್ಯುತ್ ಸೌಲಭ್ಯ ವಂಚಿತ ಹಳ್ಳಿಗಳಿಗೆ ಟರ್ಬೋ ಯಂತ್ರದಿಂದ ವಿಸ್ಯುತ್ ಶಕ್ತಿಯ ಸಂಪರ್ಕಕ್ಕೆ ಸರ್ಕಾರದೊಂದಿಗೆ ಮಾತುಕತೆ. 


Related Information