T.C.S

ಟ್ರಾನ್ಸ್ ಪೋರ್ಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್... ಸಂಘದ ಕಿರು ಪರಿಚಯ:

                    ಮಲೆನಾಡು ತವರೂರಾದ ಚಿಕ್ಕಮಗಳೂರು ಜಿಲ್ಲೆಯು ರಾಜಕೀಯವಾಗಿ ಹಾಗೂ ವಾಣಿಜ್ಯವಾಗಿ ಇಡೀ ರಾಷ್ಟ್ರದ ಗಮನವನ್ನು ಸೆಳೆದಿರುವ ಉದಾಹರಣೆಯಂತೆ ಇದೇ ಜಿಲ್ಲೆಯು ಅತ್ಯಂತ ಸಣ್ಣ ಮತ್ತು ಹಿಂದುಳಿದ ಹೊಸ ಕೊಪ್ಪದ ಸಾರಿಗೆಯು ಕ್ಷೇತ್ರದಲ್ಲಿ ಇಡೀ ರಾಜ್ಯದ ಗಮನ ಸೆಳೆದಿರುವಂತೆ ಪುನಃ ಮತ್ತೊಂದು ಹೊಸ ದಾಖಲೆಯನ್ನು ಸಹ ನಿರ್ಮಿಸುತ್ತ ಹೊರಟಿರುವ ‘ಸಹಕಾರ ಸಾರಿಗೆ’ ಎಂಬ ನಾಮಾಂಕಿತದಿಂದ ಮಲೆನಾಡಿನಾದ್ಯಂತ ಹಳ್ಳಿ, ಗುಡ್ಡಗಾಡು ಮತ್ತು ಹಸಿರಿನ ನಡುವೆ ಲೀಲಾಜಾಲವಾಗಿ ಹಸಿರು ಮತ್ತು ಬಿಳಿ ಬಣ್ಣವನ್ನು ಧರಿಸಿದ ಬಸ್ಸುಗಳ ಸೇವೆಯನ್ನು ಪಡೆದಿರುವ ಜನತೆಯ ಬಾಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆಯೊಂದನ್ನು ಸಡೆಸುತ್ತಿರುವ ಕಾರ್ಮಿಕ ವೃಂದವನ್ನು ಅಭಿನಂದಿಸಿ ಹಾರೈಸುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವ ಸಹಕಾರಿ ಮಿತ್ರರಿಗೆ ಒಂದು ಹೊಸ ಚೈತನ್ಯವನ್ನು ಮೂಡಿಸುತ್ತಿರುವುದೇ ಸಾಕ್ಷಿಯಾಗಿದೆ.

                    ಇದೇ ಕೊಪ್ಪದಲ್ಲಿರುವ ಮೇ|| ಶಂಕರ್  ಟ್ರಾನ್ಸ್ ಪೋರ್ಟ್ಸ್   ಕಂಪೆನಿ ಪ್ರೈವೇಟ್ ಲಿಮಿಟೆಡ್, ಕೊಪ್ಪ ಇಲ್ಲಿ ಕರ್ಮೀಕರು ಮತ್ತು ಮಾಲೀಕರ ನಡುವೆ ಉಂಟಾಗಿದ್ದ ಕಾರ್ಮಿಕ ವಿವಾದವು 1990ನೇ ಡಿಸೆಂಬರ್‍ನಿಂದ ಫೆಬ್ರವರಿ 1991ರವರೆಗೆ ಇದ್ದು. ಸದ್ರಿ ವಿವಾದವು ಕಡೆಗೂ ಇತ್ಯರ್ಥವಾಗದೇ ಮೇ|| ಶಂಕರ್  ಟ್ರಾನ್ಸ್ ಪೋರ್ಟ್ಸ್  ಕಂಪೆನಿ ಪ್ರೈವೇಟ್ ಲಿಮಿಟೆಡ್, ಕೊಪ್ಪ ಈ ಸಂಸ್ಥೆಯು ಬೀಗ ಮುದ್ರೆಯಾಯಿತು.

                    ಇಂತಹ ಒಂದು ಸಆರಿಗೆ ಸಂಸ್ಥೆಯನ್ನು ಕಟ್ಟುವತ್ತಾ, ಸಹಕಾರಿ ಮಿತ್ರರು ಹಿರಿಯರು ಹಾಗೂ ಅಭಿಮಾನಿಗಳು ನೀಡಿದ ಸಲಹೆ-ಸಹಕಾರಗಳ ಪ್ರತೀಕವೇ ಈ ಸಂಗದ ಉದಯಕ್ಕೆ ಕಾರಣವಾಯಿತೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದಾಗ್ಯೂ ಈ ಸಂಘವನ್ನು ಪ್ರಾರಂಭಿಸಬೇಕಾದ ಸಂದರ್ಭವು ದೂರದ ಆಲೋಚನೆಯಿಂದ ಕೂಡಿದ್ದು, ಮಾತ್ರವಲ್ಲದೇ ನೊಂದ ದುಡಿಯುವ ಕೈಗಳನ್ನು ಬಲಪಡಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವ ಇನ್ನೂ ಮುಂತಾದ ಮಹತ್ತರವಾದ ಪ್ರಗತಿಪರ ವಿಚಾರಗಳ ಹಿನ್ನೆಲೆಯಲ್ಲಿ ಈ ಸಂಘ ಉಗಮವಾಯಿತು.

                     ಈ ಸಂಘದ ಸ್ಥಾಪನೆಗೆ ಶ್ರಮಿಸಿದವರಲ್ಲಿ ಈ ಜಿಲ್ಲೆಯ ಪ್ರಗತಿಪರ ಚಿಂತಕರಾಗಿದ್ದ ದಿವಂಗತ ಬಿ.ಕೆ. ಸುಂದರೇಶ್‍ರವರ ಕನಸಿನ ಕೀಸಾಗಿ ಹೊರಹೊಮ್ಮಿದ್ದು, ಮಾತ್ರವಲ್ಲದೇ ಜಿಲ್ಲೆಯ ಅತ್ಯಂತ ಹಿರಿಯ ಅಧಿಕಾರಿಗಳಾಗಿದ್ದ ಸನ್ಮಾನು ಶ್ರೀ ಡಾ|| ಎಸ್. ಸುಬ್ರಹ್ಮಣ್ಯ (ಜಿಲ್ಲಾಧಿಕಾರಿಗಳು) ಇವರ ನೇತೃತ್ವದಲ್ಲಿ ಮಾನ್ಯ ಉಪನಿಬಂಧಕರಾಗಿದ್ದ ಶ್ರೀ ಜಿ.ಎಸ್. ರಮಣರೆಡ್ಡಿ ಸನ್ಮಾನ್ಯ ಶ್ರೀ. ಈ. ಪುಟ್ಟೇಗೌಡ ಇವರ ನೆರನೊಂದಿಗೆ 1991ರ ಫೆಬ್ರಬರಿ 11 ರಿಂದ ಈ ಸಂಘದ ಸ್ಥಾಪನೆಯ ಚಾಲನೆ ನಡೆಯತೊಡಗಿತು.

                      ಪ್ರಾಯೋಗಿಕವಾಗಿ 1991ರ ಮಾರ್ಚ್ 8 ರಿಂದ ಈ ಸಂಘದ ಚಟುವಟಿಕೆಗಳನ್ನು ನೊಂದಣಿ ಪೂರ್ವ ಅಧಿಕೃತವಾಗಿ ಮಲೆನಾಡಿನ ಆಯ್ದ ಕೆಲವು ಮಾರ್ಗಗಳಲ್ಲಿ ಕೈಗೊಳ್ಳಲಾಯಿತು. ಪ್ರಾಯೋಗಿಕ ಪ್ರಕ್ರಿಯೆಯು ಪ್ರಗತಿಪರವಾಗಿ ಹೊರಹೊಮ್ಮಿದಾಗ 1991ನೇ ಮೇ 16 ರಿಂದ ಮಾನ್ಯ ಉಪನಿಬಂಧಕರು ಚಿಕ್ಕಮಗಳೂರು ಇವರಿಂದ ಅಧಿಕೃತವಾಗಿ ನೊಂದಣಿ ಮಾಡಿಸಿ ಈ ಸಂಘದ ಚಟುವಟಿಕೆ ವ್ಯವಹಾರಗಳನ್ನು ವಿಸ್ತರಿಸುವತ್ತ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಅಂದಿನ ದೂರದೃಷ್ಟಿಯ ಯೋಜನೆಗಳ ಫಲವೇ ಇಂದು ‘ಸಹಕಾರ ಸಾರಿಗೆ’ಯು ಯಶಸ್ವಿಯಾಗಿ 25ನೇ ವರ್ಷ ಮುಗಿಸಿದ ಸಂದರ್ಭದಲ್ಲಿ ಸಹಕಾರಿ ಮಿತ್ರರೆಲ್ಲರೂ ಸಹ ಅಭಿನಂದನಾರ್ಹರು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

                     ಈ ಸಂಘ ಸ್ಥಾಪನೆಯಾದಂದಿನಿಂದ ಈವರೆವಿಗೂ ಹಲವಾರು ಹಿರಿಯ ಅಧಿಕಾರಿಗಳು ಹಿತೈಷಿಗಳು ಈ ಸಂಘದ ವ್ಯವಹಾರವನ್ನು ಕಂಡು ಹರಸಿ ಈ ಸಂಘದ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಸಲಹೆ ನೀಡುತ್ತಿರುವುರಿಂದಲೇ ಕಾರ್ಮಿಕರಿಂದಲೇ, ಕಾರ್ಮಿಕರಿಗಾಗಿಯೇ, ಮತ್ತು ಕಾರ್ಮಿಕರಿಗೋಸ್ಕರವೇ ಇರುವ ಈ ಸಂಘವು ಹಲವಾರು ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಮತ್ತು ಸಾಮಾಜಿಕ ಕಳಕಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದುಡಿಯುತ್ತಿರುವುದೇ ಸಾಕ್ಷಿಯಾಗಿದೆ, ಈ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ನೌಕರರ ಮತ್ತು ಸದಸ್ಯರ ಶ್ರಮವೂ ಸಹ ಗಣನೀಯವಾರಿರುವುದರಿಂದ ಮತ್ತು ಸರ್ಕಾರದ ಸಕಾಲಿಕ ಪ್ರೋತ್ಸಾಹವಿರುವುದರಿಂದ ಹಾಗೂ ಸಾರ್ವಜನಿಕ ಸಹಕಾರವಿರುವುದರಿಂದ ಪ್ರಗತಿಪಥದತ್ತ ಈ ಸಂಘವನ್ನು ಕೊಂಡ್ಯೊಲು ಸಾಧ್ಯವಾಗುತ್ತಿದೆ,

                     ಪ್ರಾರಂಭದಲ್ಲಿ  123 ಜನ ಕಾರ್ಮೀಕರು ತಮ್ಮ ಪಾಲಿನ ಪರಿಹಾರದ ಹಣವನ್ನು ತೊಡಗಿಸಿ ಅದರಲ್ಲಿ ಅವರೇ ಸದಸ್ಯರಾಗಿ, ಅವರೇ ಕಾರ್ಮಿಕರಾಗಿ, ಅವರೇ ಆಡಳಿತ ನಡೆಸುವವರಾಗಿ ಸುಮಾರು ರೂ. 12 ಲಕ್ಷಗಳ ಪಾಲಿನ ಹಣದಲ್ಲಿ ಈ ಹಿಂದಿನ ಮಾಲೀಕ ವರ್ಗದವರಿಂದ 06 ಬಸ್‍ಗಳನ್ನು ಖರೀದಿಸಿ ಆ ಮೂಲಕ ಶ್ರೀ ದಿವಾಕರ್ ಎ.ಎನ್. ಅಧ್ಯಕ್ಷರಾಗಿ ಹಾಗೂ ಶ್ರೀ ಚಿಕ್ಕೇಗೌಡ ಇವರು ಚೀಫ್ ಪ್ರೋಮೊಟರಾಗಿ ದಿನಾಂಕ 08-03-1991 ರಿಂದ ಉದ್ಯಮ ಪ್ರಾರಂಭವಾಯಿತು. ಇದರಲ್ಲಿ ಸುಮಾರು 36 ಜನ ಕಾರ್ಮಿಕರು ಕರ್ತವ್ಯ ನಿರತರಾಗಿದ್ದು, ಉಳಿದ ಕಾರ್ಮಿಕರು ಬೇರೆ-ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಸದ್ರಿ ಉದ್ಯಮದಿಂದ ಬಂದ ಲಾಭದಲ್ಲಿ ಹೊಸ ಹೊಸ ಬಸ್‍ಗಳನ್ನು ಕೊಂಡುಕೊಂಡ, ಬೇರೆಡೆಗಳಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯರನ್ನು ಕಾರ್ಮಿಕರನ್ನಾಗಿ ಮಾಡಿಕೊಂಡು ಸಂಘದ ಉನ್ನತಿಗೆ ಭದ್ರ ತಳಪಾಯ ಹಾಕಿತು.

                    ಆದಾಗ್ಯೂ ಸಂಘದ ಕಾರ್ಮಿಕರಿಗೆ ಬರೇ ಕೆಲಸ ಮಾಡಿದ ಅನುಭವವೇ ವಿನಃ ಆಡಳಿತದ ವೈಕರಿಯ ಅನುಭವವಿಲ್ಲದಿದ್ದರೂ ಕ್ರಮೇಣ ಅದನ್ನು ರೂಢಿಸಿಕೊಂಡು ಸಹಕಾರ ಇಲಾಖೆ, ಸಾರಿಗೆ ಇಲಾಖೆ, ಕಾರ್ಮೀಕ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಸ್ಥಳೀಯರ ನೆರವಿನೊಂದಿಗೆ ಕಾಯ್ದೆ-ಕಾನೂನು, ನಿಯನಗಳ ಬಗ್ಗೆ ಸ್ಪಂದನೀಯ ತಿಳಿವಳಿಕೆ ಪಡೆದು ಸಮರ್ಥವಾಗಿ ಮುನ್ನಡೆಯಲು ಕಾರನವಾಗಿದೆ. ಈ ಸಂಬಂಧ ಘನ ಸರ್ಕಾರವು 1993-94ನೇ ಸಾಲಿನಲ್ಲಿ ವಿಶೇಷ ಸಹಕಾರ ಸಂಘವೆಂದು ಪರಿಗಣಿಸಿ ರೂ.01 ಲಕ್ಷಗಳ ಪ್ರಶಸ್ತಿಯನ್ನು ನೀಡಿದೆ. ನೌಕರರ ಈ ಸಂಘಟನೆಯು ಈ ಉದ್ಯಮದಲ್ಲಿಯ ಬಂದ ಆದಾಯದಿಂದ ಒಳ್ಳೆಯ ವೇತನ ನೀಡುತ್ತಿದೆ. ಹಾಗೂ ಕ್ರಮೇಣವಾಗಿ ವುವಹಾರವು ವಿಸ್ತಾರಗೊಂಡು ಕಾರ್ಮಿಕರಿಗೆ ವಿವಿಧ ರೀತಿಯ ಎಲ್ಲಾ ಶಾಸನಬದ್ಧ ಸೌಲಭ್ಯಗಳೊಂದಿಗೆ ಸಾಮೂಹಿಕ ವಿಮಾ ಯೋಜನೆ, ಪಿಂಚಣಿ ಯೋಜನೆಯಂತ್ ಕ್ರಾಂತಿಕಾರಕ ಸೌಲಭ್ಯಗಳನ್ನು ನೀಡುತ್ತಿದ್ದು, ಇಲ್ಲಿ ಕಾರ್ಮಿಕರು-ಸದಸ್ಯರು ಒಬ್ಬರೇ ಆಗಿರುವುದರಿಂದ ಎಲ್ಲಾ ಸೌಲಭ್ಯವನ್ನು ಪಡೆಯುವವರಾಗಿದ್ದಾರೆ.

                     ಪ್ರಥಮದಲ್ಲಿ ತನ್ನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಸಂಬಂಧ ಪ್ರಾರಂಭಗೊಂಡ ಈ ಸಂಘವು ಮುಂದೆ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಪ್ರಯಾಣಿಕರಿಗೆ ಉತ್ತಮ ಸಾರಿಗೆ-ಸೌಕರ್ಯ ಕಲ್ಪಿಸುತ್ತಿದ್ದೆ. ಅದರಂತೆ ಈ ಸಂಘವು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಜಿಲ್ಲೆಯಾದ್ಯಂತ ಸಾರಿಗೆ ಸೌಕರ್ಯವನ್ನು ಕೈಗೊಂಡಿದ್ದು, ನೂತನ ಮಾದರಿಯ ಪ್ರಯಾಣಿಕರ ಪ್ರಯಾಣಕ್ಕೆ ಯೋಗ್ಯ ರೀತಿಯ ಬಸ್ಸುಗಳನ್ನು ಒದಗಿಸುತ್ತಿದ್ದು, ಈ ಸುತ್ತಲಿನ ವಿದ್ಯಾವಂತ ನಿರುದ್ಯೋಗಿಗಳ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುತ್ತಾ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಾ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ.

                        ಈ ಸಂಘದ ಪ್ರಜಾಪ್ರಭುತ್ವ ವ್ಯವಸ್ಥೆಯು ಇತರೆ ಸಹಕಾರಿ ಸಂಸ್ಥೆಗಳಿಗಿಂತ ಭಿನ್ನವಾಗಿದ್ದು, ಯಾರು ಈ ಸಂಸ್ಥೆಯಲ್ಲಿ ನೌಕರರಾಗುತ್ತಾರೋ ಅವರೇ ಸಂಸ್ಥೆಯ ಸದಸ್ಯರೂ ಆಗಿ ಅದೇ ಸದಸ್ಯರಿಂದ ರಚಿತವಾದ ಆಡಳಿತ ಮಂಡಳಿಯ ಮೂಲಕ ಸಂಘದ ಆಡಳಿತ ಮಿಯಂತ್ರಣವೂ ಸಹ ಇರುತ್ತದೆ. ಇದು ಸಹಕಾರಿ ವ್ಯವಸ್ಥೆಯಲ್ಲಿಯೇ ವಿಶೇಷವಾಗಿರುತ್ತದೆ.

                        ಸಂಘವು ಪ್ರಧಾನ ಕಛೇರಿಯಾದ ಕೊಪ್ಪದಲ್ಲಿ 1998ರಲ್ಲಿ ನಿರ್ಮಾಣ ಮಾಡಲ್ಪಟ್ಟ ಎರಡು ಅಂತಸ್ತಿನ ಸ್ವಂತ ಕಟ್ಟಡ ಹೊಂದಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮವಾಗಿ ಗಣಕಯಂತ್ರ ಅಳವಡಿಸಿದ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಕಟ್ಟಡದಲ್ಲಿ ಸಂಘವು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು 12 ವಿಭಾಗಗಳನ್ನು ಮಾಡಿ ದಿನನಿತ್ಯದ ಕೆಲಸಗಳನ್ನು ಆಯಾಯಾ ಸಮಯಕ್ಕೆ ಅನುಗುಣವಾಗಿ ಮಾಡುತ್ತಿದ್ದು, ವ್ಯವಹಾರದ ಸಮತೋಲನೆಗೆ ಆಧಾರವಾಗಿದೆ.

                        ಸಂಘದ ಬಸ್ಸುಗಳ ಹಾಗೂ ಅದರ ವ್ಯವಸ್ಥತ ತಾಂತ್ರಿಕ ನಿರ್ವಹಣೆಗೆ ಸಂಘದ ಪ್ರಧಾನ ಕೇಂದ್ರವಾದ ಕೊಪ್ಪದಲ್ಲಿ ಸುಸಜ್ಜಿತ ಯಂತ್ರೋಪಕರಣಗಳಿಂದ ಕೂಡಿದ ವರ್ಕ್‍ಶಾಪ್‍ನ್ನು ಹೊಂದಿದ್ದು, ಹಾಗೆಯೇ  ತಾಂತ್ರಿಕತೆಯಲ್ಲಿ ಪರಿಣಿತಿ ಹೊಂದಿರುವ ನೌಕರರು ಇದ್ದು, ಬಸ್‍ನ ಕವಚ ನಿರ್ಮಾಣವೊಂದನ್ನು ಹೊರತುಪಡಿಸಿ, ಉಳಿದೆಲ್ಲಾ ಕೆಲಸಗಳು ಇಲ್ಲಿಯೇ ನಡೆಯುತ್ತದೆ ಹಾಗೂ ಶೃಂಗೇರಿಯಲ್ಲಿ ಇದರ ತರೆದಿದ್ದು, ಅಲ್ಲಿ ಬಸ್ಸಿನ ಮೇಲೆ ತಾಂತ್ರಿಕ ದುರಸ್ತಿ, ಬಸ್ಸಿನ ತಂಗುವಿಕೆ ಹಾಗೂ ನೌಕರರ ವಿಶ್ರಾಂತಿ ಗೃಹದ ವ್ಯವಸ್ಥೆ ಇದೆ. ಈ ವಿಔಆಗದ ಕಟ್ಟಡ ಮತ್ತು ಗ್ಯಾರೇಜ್ ವ್ಯವಸ್ಥೆ ಹೊಂದಿರುತ್ತದೆ.

                       ಸಹಕಾರ ರಂಗದ ಸಾರಿಗೆ ಉದ್ಯಮದಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಪ್ರಯೋಗವಾದ ಈ ಸಹಕಾರ ಸಾರಿಗೆಯ ಬಗ್ಗೆ ಜಪಾನ್ ದೇಶದ ಸಹಕಾರ ರಂಗದಲ್ಲಿ ಶ್ಲಾಘನೀಯ ಮಾತಾಗಿ ಕಯಾಟೋ ನಗರದ ರಿಟ್ಸುಮೆಕಿನ್ ವಿಶ್ವವಿದ್ಯಾಲಯದ 21 ಜನರ ಅಧ್ಯಯನದ ತಂಡವು ದಿನಾಂಕ: 13-09-1998 ರಂದು ಭೇಟಿ ನೀಡಿ ಹಲವಾರು ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿ ಸಂಸ್ಥೆಯ ಪ್ರಾರಂಭದಿಂದ ಈ ಅವಧಿಯವರೆಗಿನ ಸಂಘದ ರಚನೆ, ಉದ್ದೇಶ, ಚಟುವಟಿಕೆ ಇನ್ನಿತರೆ ವಿಚಾರಗಳನ್ನು ಮನನ ಮಾಡಿಕೊಂಡು ಪ್ರಗತಿಯ ಪಥದತ್ತ ಯಾವ ರೀತಿ ಹೋಗಬೇಕೆಂದು ಸಲಹೆ ಮಾಡಿದೆ ಹಾಗೂ ಈ ಸಂಘದ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾದ ಶ್ರೀ ಪಿ. ಸುರೇಶ ರಮಣಮಯ್ಯರವರು ವಿವಿಧ ಕೋನಗಳಲ್ಲಿ ಸುಮಾರು 2 ವರ್ಷಗಳ ವರೆಗೆ ಅಧ್ಯಯನವನ್ನು ವಿಶ್ವವಿದ್ಯಾಲಯವು ಅಂಗೀಕರಿಸಿ ಅವರಿಗೆ ಡಾಕ್ಟರೇಟ್ ಪದವಿ ನೀಡಿದ್ದಲ್ಲದೇ? ಈ ಅಧ್ಯಯನದ ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ರವರು ತಮ್ಮ ಪ್ರಥಮ ದರ್ಜೇ ಮತ್ತು ಸ್ನಾತಕೋತ್ತರ ಪದವಿಯ ವ್ಯಾಸಂಗದಲ್ಲಿ ಪಠ್ಯ ವಿಷಯವಾಗಿ ಹೊರಹೊಮ್ಮಿ ಅಭ್ಯಾಸಕ್ಕೆ ರೂಪುಗೊಂಡಿದೆ.ಹಾಗೂ ಸಂಗದ ಕಾರ್ಯಚಟುವಟಿಕೆಯನ್ನು ಗಮನಿಸಿದ ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 30 ನಿಯೋಜಿತ ಡಿಪೋ ಮ್ಯಾನೇಜರ್‍ಗಳ ನಾಲ್ಕು ತಂಡಕ್ಕೆ ಸಂಘದಿಂದ ಸಂಘಟನೆ, ತಾಂತ್ರಿಕ ನಿವ್ಹಣೆ, ನೌಕರರ ಸೇವಾ ಸೌಲಭ್ಯ ಇನ್ನಿತರೇ ವಿಷಯಗಳ ಬಗ್ಗೆ ದಿನಾಂಕ: 10-12-2003 ರಂದು ತರಬೇತಿ ನೀಡಿ ಈ ಸಂಘದ ಏಳಿಗೆಯಲ್ಲಿ ಕಾರ್ಮಿಕರ ಪಾತ್ರ ಎಷ್ಟು ಎಂಬುದು ಮನಗಣುವಂತಾಗಿದೆ. ಕೊಪ್ಪದ ಪ್ರಥಮ ದರ್ಜೇ ಕಾಲೇಜಿನ ಉಪನ್ಯಾಸಕರಾದ ಶ್ರೀ ಎಂ.ಸಿ. ದುಗ್ಗಪ್ಪಗೌಡರವರು 2005 ರಲ್ಲಿ ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರ ಇದರಲ್ಲಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಹಾಗೂ ಸುಮಾರು 40 ಕ್ಕೂ ಹೆಚ್ಚು ಕಾಲೇಜುಗಳ ಎಂ.ಬಿ.ಎ ವಿದ್ಯಾರ್ಥಿಗಳ ಸಂಘದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿರುತ್ತಾರೆ. ಸಂಗವು 2010 ರಿಂದ ಕೊಪ್ಪದ ಐ.ಟಿ.ಐ. ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ನಿರ್ವಹಣೆಯ ಬಗ್ಗೆ ತರಬೇತಿಯನ್ನು ನೀಡಿ ಅಶೋಕ್ ಲೇಲ್ಯಾಂಡ್, ಮತ್ತು ಇತರೆ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ.

                         ಇದೆಲ್ಲದರ ನಡುವೆ ಈ ಸಂಘದ ಏಳಿಗೆಗೆ ಕಾರಣಕರ್ತರು ಆಡಳಿತ ಮಂಡಳಿ ಹಾಗೂ ಅದರ ಸಿಬ್ಬಂದಿಗಳು  ಇವರೆಲ್ಲರ ನಡುವೆ ಕೆಲಸಕಾರ್ಯಗಳ ಜೊತೆಗೆ ಪ್ರತಿಯೊಂದು ವಿಭಾಗವನ್ನು ಪೂರ್ಣಾವಾಗಿ ಅವಲೋಕಿಸಿ, ಖಾಸಗಿಯವರೊಂದಿಗೆ ತೀವ್ರ ಪೃಪೋಟಿ ಇರುವಂತಹ ಈ ಉದ್ಯಮದಲ್ಲಿ ಅದರ ಅಸ್ತಿತ್ವ ಉಳಿಸಿಕೊಂಡು ಹೋಗಲು ಮೂಲ ಕಾರಣಕರ್ತರಾಗಿರುವ ಸಂಘದ ಸ್ಥಾಪನಾ ದಿನಗಳಿಂದಲೂ ಸಂಘದ ಮಂಡಳಿ ಮತ್ತು ಸದಸ್ಯರು ಸೇರಿ ಅವಿರತವಾಗಿ ದುಡಿದು, ಸಂಘದ ಸಂಘಟನಾ ಶಕ್ತಿಯಾಗಿದ್ದಾರೆ. ಅವರ ಪರಿಶ್ರಮ ಹಾಗೂ ಛಲದ ಭಾಗವಾಗಿ ವರುಷಗಳ ಪಾದಾರ್ಪಣೆ ಮಾಡಿರುವುದೆಂದು ಹೇಳಿದರೆ ತಪ್ಪಾಗಲಾರದು.

                        ಸಂಘವು ಉತ್ತಮವಾದ ಆಡಳಿತ ಮಂಡಳಿಯನ್ನು ಹೊಂದಿದ್ದು, ಅದರ ಸದಸ್ಯರೆಲ್ಲರೂ ಅದರ ಕಾಲಕಾಲಕ್ಕೆ ಒಳ್ಳೆಯ ತೀರ್ಮಾನ ಕೈಗೊಂಡಿರುವುದರ ಫಲವಾಗಿ ಸಂಘವು ಇಲ್ಲಿಯವಗೆರೆ ಬಿಅüವೃದ್ಧಿಯ ಪಥದಲ್ಲಿ ಸಾಗುತ್ತಾ ಬಂದಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ವಿಭಾಗದ ಮುಖ್ಯಸ್ಥರುಗಳು ಸ್ವತಂತ್ರವಾಗಿ ಯೋಚಿಸಿ ಕಾರ್ಯಗಳನ್ನು ಮಾಡುತ್ತಿರುವುದು ಈ ಸಂಘದ ಪೂರಕ ಬೆಳವಣಿಗೆಗೆ ಕಾರಣವಾಗಿದೆ. ಇದರ ಪರಿಶ್ರಮದಿಂದ ಸಂಘವು ಇಂದು 76 ಬಸ್‍ಗಳನ್ನು ಹೊಂದಿ 280 ಕಾರ್ಮಿಕರಿಗೆ ಉದ್ಯೋಗ ನೀಡಿ, ಗ್ರಾಮೀಣ ಸಾರಿಗೆ ಸೌಕರ್ಯ ಕಲ್ಪನೆಗೆ ಉತ್ತಮ ಒತ್ತು ನೀಡಿ ಪ್ರಾರಂಭದಲ್ಲಿ 48 ಕ್ಷಗಳ ವ್ಯವಹಾರದಿಂದ ಈಗ ಸುಮಾರು 17 ಕೋಡಿಗಳ ವ್ಯವಹಾರದೆಡೆಗೆ ಸಂಘವು ಮುನ್ನಡೆದಿದೆ. ಈ ಮುನ್ನಡೆಗೆ ಇಲಾಖೆಯ ಅಧಿಕಾರಗಳ ಶ್ರಮವೂ ಮಹತ್ತರವಾದದುದಾಗಿದೆ. ನಮ್ಮ ಈ ಪ್ರಯತ್ನಕ್ಕೆ ಮಾಧ್ಯಮಗಳು ಬಹಳವಾಗಿ ಸಹಕರಿಸಿವೆ.

                        ಈ ಸಂಘದ ಅಭಿವೃದ್ಧಿಯ ದಿನೇ ದಿನೇ ವೃದ್ಧಿಗೊಂಡು 25 ವರುಷಗಳಲ್ಲಿ ತನ್ನ ವಹಿವಾಟುವನ್ನು ಹೆಚ್ಚಿಸುವುದರೊಂದಿಗೆ ಕಾರ್ಮಿಕರಿಗೆ ಉತ್ತಮ ಸೌಲಭ್ಯ, ಗ್ರಾಮೀಣ ಭಾಗಕ್ಕೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಕೊಡುವ ಮಹತ್ತರವಾದ ಯೋಜನೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಗತಿಯು ಬಹುಮುಖವಾಗಲಿದೆ. ಸಂಘದ 25 ವರ್ಷಗಳ ನೆನಪಿಗಾಗಿ ನಾಡಿನ ಗಣ್ಯರ ಸಮಕ್ಷಮದಲ್ಲಿ 03-01-2017ರಂದು ರಜತೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತದೆ.

ಸೇವಾದೃಷ್ಟಿ

ಈ ಸಂಘವು ಮುಖ್ಯವಾಗಿ ಸಾರ್ವಜನಿಕ ಸಾರಿಗೆ ಉದ್ಯಮವನ್ನು ಕೈಗೊಂಡು ಪ್ರತಿ ದಿನ ಸಾವಿರಾರು ಪ್ರಯಾಣಿಕರ, ವಿದ್ಯಾರ್ಥಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಾತ್ರವಲ್ಲದೇ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕವನ್ನು ಕಲ್ಪಿಸಿಕೊಟ್ಟಿರುವುದರಿಂದ ತನ್ಮೂಲಕ ಗ್ರಾಮೀಣಾಭಿವೃದ್ಧಿಯಲ್ಲೂ ಈ ಸಂಘವು ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಮಾತ್ರವಲ್ಲದೇ ಈ ಸಂಸ್ಥೆಯು ನೂರಾರು ದುಡಿಯುವ ಕೈಗಳಿಗೆ ಕೆಲಸದ ಭದ್ರತೆಯನ್ನು ಒದಗಿಸಿ ತನ್ಮೂಲಕ ಅವರ ಸಾಮಾಜಿಕ ಆರ್ಥಿಕ ಹಾಗೂ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ 25 ವರುಷಗಳಿಂದ ಯಶಸ್ವಿಯಾಗಿದೆ.


TCS2
TCS3
TCS4
TCS5
TCS6
TCS7
TCS8
TCS9

Related Information