Shri Arya Durga Devi Ankola

ಶ್ರೀ ಆರ್ಯಾದುರ್ಗಾ ದೇವಿಯ ಅವತಾರದ ಪೌರಾಣಿಕ ಹಿನ್ನಲೆ:

            ಶ್ರೀ ಗೋಕರ್ಣ  ಪುರಾಆನದ ಉತ್ತರ ಖಂಡದಲ್ಲಿ ಶ್ರೀ ಆರ್ಯಾದುರ್ಗೆಯು ಹೇಗೆ ಅವತರಿಸಿದಳು. ಅವಳ ಮಹಿಮೆ ಏನು? ಎನ್ನುವುದನ್ನು ವಿವರವಾಗಿ ವಿಷಧೀಕರಿಸಿದೆ. ಸೂತಮುನಿಯು ಶತಾನಿಕ ರಾಜನಿಗೆ ಇದರ ಸವಿಸ್ತಾರವಾಗಿ ತಿಳಿಸುತ್ತಾನೆ.


               ಜಗನ್ಮಂಗಲಕಾರಿಯಾದ ದುರ್ಗಾ ಎಂಬ ಹೆಸರಿನಿಂದ ಪ್ರಸಿದ್ಧಿಯಾದ ಜಗನ್ಮಾತೆ ಶ್ರೀ ಗೌರಿ ಯಾರೆಂದರೆ ಅಪಾರ ತೇಜಸ್ಸುಳ್ಳ ಮಹಾವಿಷ್ಣುವಿನ ಯೋಗನಿದ್ರಾ ಸ್ವರೂಪಳು. ಅವಳು ಹುಟ್ಟಿದ ಕಥೆಯನ್ನು ವಿವರಿಸುವುದಾಗಿ ತಿಳಿಸುತ್ತ ಸೂತ ಮುನಿಯು ವೃತ್ರಾಸುರನ ವೃತ್ತಾಂತವನ್ನು ಅರುಹುವನು.


               ಸಿಂಧೂ ದ್ವೀಪನೆಂಬ ಮಹಾಪುರುಷನಿಂದ ವೇತ್ರವತೀ ಎಂಬ ಸ್ತ್ರೀಯಲ್ಲಿ ವೃತ್ರಾಸುರನು ಪ್ರಾಗ್ಜೋತಿಷ ಪಟ್ಟಣದ ಅಧಿಪತಿಯಾಗಿದ್ದನು. ಅತ್ಯಂತ ಬಲಶಾಲಿಯಾದ ರಕ್ಕಸನು ಭೂಲೋಕದ ಸಮಸ್ತ ಶತ್ರುಗಳನ್ನು ಸಂಹರಿಸಿ ಸಂಪೂರ್ಣ ಭೂಲೋಕವನ್ನೇ ಗೆದ್ದುಕೊಂಡನು. ತದನಂತರ ಸ್ವರ್ಗಲೋಕಕ್ಕೆ ದಾಳಿಯಿಟ್ಟು ದೇವೇಂದ್ರನನ್ನು ಯುದ್ಧದಲ್ಲಿ ಮಣಿಸಿ, ಉಳಿಸಿ ಅಷ್ಟದಿಕ್ಪಾಲಕರನ್ನೆಲ್ಲ ಧುರದಲ್ಲಿ ಸದೆಬಡಿದನು. ಆತನು ಸ್ವರ್ಗಾಧಿ ಪತಿಯೆನಿಸಿಕೊಂಡನು. ವೃತ್ರಾಸುರನ ಭಯದಿಂದ ಎಲ್ಲಾ ದೇವತೆಗಳು, ದೇವರ್ಷಿಗಳು ಸ್ವರ್ಗಲೋಕದ ತಮ್ಮ ತಮ್ಮ ಸ್ಥಾನವನ್ನು ಬಿಟ್ಟು ಓಡಿಹೋದರು. ಹಾಗೂ ಅವರೆಲ್ಲ ಬ್ರಹ್ಮಲೋಕಕ್ಕೆ ತಲುಪಿದರು ಇತ್ತ ಅಸುರನು ಸ್ವರ್ಗದಲ್ಲಿ ಪ್ರತ್ಯೇಕವಾಗಿ ಅಷ್ಟದಿಕ್ಲಾಲಕರನ್ನು ನಿಯುಕ್ತಿಗೊಳಿಸಿದನು.


               ಅಧಿಕಾರ ಚ್ಯುತರಾದ ದೇವತೆಗಳೆಲ್ಲ ಸೃಷ್ಟಿಕರ್ತ ಬ್ರಹ್ಮನಲ್ಲಿ ಶರಣುಹೋಗಿ ಅವನನದನು ನಾನಾ ರೀರಿಯಲ್ಲಿ ಸ್ತುತಿಸುತ್ತ ತಮ್ಮ ಅಳಲನ್ನು ತೋಡಿಕೊಂಡರು. ಬ್ರಹ್ಮದೇವನಿಂದ ಸ್ವರ್ಗದ ಅಧಿಪತ್ಯವನ್ನು ಪಡೆದ ತಾವುಗಳೆಲ್ಲ ಇಂದು ಅನಾಥರಾಗಿ ಇರುವುದಾಗಿ ಪ್ರಾರ್ಥಿಸಿಕೊಂಡರು. ದೇವತೆಗಳ ಪ್ರಾರ್ಥನೆಯನ್ನು ಆಲಿಸಿದ ಬ್ರಹ್ಮದೇವನು ಶಂಖ ಚಕ್ರ ಗದಾಧಾರಿಯಾದ ಮಹಾವಿಷ್ಣುವನ್ನು ಧ್ಯಾನಿಸಿ ಪೂಜಿಸಿದನು. ಆ ಕೂಡಲೇ ಶ್ರೀಮನ್ನಾರಾಯಣನು ಅಲ್ಲಿ ಪ್ರತ್ಯಕ್ಷನಾದನು. ಅವನಿಗೆ ವೃತ್ರಾಸುರನಿಂದಾದ ಉಪಟಳವನ್ನೆಲ್ಲಾ ನಿವೇದಿಸಿದನು. ದುರಾತ್ಮನಾದ ವೃತ್ರಾಸುರನ ವಾರ್ತೆಯನ್ನು ಕೇಳಿದ ಭಗವನ್ನಾರಾಯಣನು ಅತ್ಯಂತ ಕೋಪಾವಿಷ್ಣನಾದನು. ಆತನ ಸಿಟ್ಟಿನ ಭರದಲ್ಲಿ ಅವನ ಮುಖದಿಂದಲೂ ಬ್ರಹ್ಮದೇವನ ಮುಖದಿಂದಲೂ ಅತೀ ಭಯಂಕರವಾದ ತೇಜಸ್ಸು ಹೊರಗೆ ಬಂದಿತು. ಅದೇ ತೆರನಾಗಿ ಇಂದ್ರಾದಿ ಎಲ್ಲ ದೇವತೆಗಳ ಹಣೆಯಿಂದಲೂ ಸಹ ಮಹಾತೇಜಸ್ಸು ಹೊರಹೊಮ್ಮಿತು. ಈ ಎಲ್ಲ ತೇಜಸ್ಸುಗಳೂ ಒಟ್ಟು ಗೂಡಿದ ಈ ತೇಜಸ್ಸು ಒಮ್ಮೇಲೆ ಬೆಳೆದು ಜಗತ್ತನ್ನೇ ಬೆಳಗಿಸಿತು. ಈ ತೇಜಸ್ಸಿನಿಂದ ದಿವ್ಯ ಸ್ವರೂಪಳೂ ಶಕ್ತಿಸ್ವರೂಪಳೂ ಆದ ದೇವತೆಯು ಪ್ರತ್ಯಕ್ಷಳಾದಳು.


               ಈಶ್ವರನ ತೇಜಸ್ಸಿನಿಂದ ಕೇಶಗಳೂ, ವಿಷ್ಣುವಿನ ತೇಜಸ್ಸಿನಿಂದ ಕೈಗಳೂ, ಸೋಮನ ತೇಜಸ್ಸಿನಿಂದ ಸ್ತನಗಳೂ, ಇಂದ್ರನ ತೇಜಸ್ಸಿನಿಂದ ಉದರವೂ, ವರುಣನ ತೇಜಸ್ಸಿನಿಂದ ತೊಡೆಗಳೂ, ಭೂದೇವಿಯ ತೇಜಸ್ಸಿನಿಂದ ಕಟಿ ಪ್ರದೇಶವೂ ಕ್ರಮವಾಗಿ ರೂಪಗೊಂಡವು. ಬ್ರಹ್ಮನ ತೇಜಸ್ಸಿನಿಂದ ಕಾಲುಗಳೂ, ಸೂರ್ಯನ ತೇಜಸ್ಸಿನಿಂದ ಕಾಲಿನ ಬೆರಳುಗಳೂ, ವಸುಗಳ ತೇಜಸ್ಸಿನಿಂದ ದಂತಗಳೂ, ವಾಯುವಿನ ತೇಜಸ್ಸಿನಿಂದ ಕಣ್ಣುಗಳು,, ಸಂಧ್ಯಾ ದೇವತೆಯ ತೇಜಸ್ಸಿನಿಂದ ಕಣ್ಣಿನ ಹುಬ್ಬುಗಳೂ, ಅಗ್ನಿಯ ತೇಜಸ್ಸಿನಿಂದ ಕಿವಿಗಳೂ ಉಂಟಾದವು. ಹೀಗೆ ಬೇರೆಬೇರೆ ದೇತೆಗಳ ತೇಜಸ್ಸಿನಿಂದ ಸರ್ವಶಕ್ತ ಅವಯವಗಳಿಂದ ಸರ್ವಮಂಗಲೆಯಾದ ಶ್ರೀದೇವಿ ಮೈದಳೆದಳು. ದೇವತೆಗಳ ದಿವ್ಯ ತೇಜಸ್ಸಿನಿಂದ ಆವಿರ್ಭವಿಸಿದ ಶ್ರೀದೇವಿ ಮೈದಳೆದಳು. ದೇವತೆಗಳ ದಿವ್ಯ ತೇಜಸ್ಸಿನಿಂದ ಆವಿರ್ಭವಿಸಿದಿ ಶ್ರೀ ದೇವಿಯ ಮಹಾಶಕ್ತಿಯನ್ನು ನೋಡಿ ವೃತ್ರಾಸುರ ಭಯದಿಂದ ಭೀತಿಗೊಂಡಾಗ ದೇವತೆಗಳಿಗೆ ಅತ್ಯಂತ ಆನಂದವಾಯಿತು. ದೇವತೆಗಳ ತೇಜೋರಾಶಿಯಿಂದ ಉತ್ಪನ್ನಳಾದ ಮಹಾದೇವಿಗೆ ಶಿವನು ತನ್ನ ತ್ರಿಶೂಲವನ್ನೂ, ಶ್ರೀಮನ್ನಾರಾಯಣ ತನ್ನ ಚಕ್ರವನ್ನೂ, ಬ್ರಹ್ಮನು ತನ್ನ ವ್ರಹ್ಮದಂಡವನ್ನು, ಯಮನು ತನ್ನ ಯನದಂಡವನ್ನು, ವರುಣನು ತನ್ನ ಪಾಶವನ್ನು, ವಾಯುದೇವನು ತನ್ನ ದಿವ್ಯ ಧನಸ್ಸನ್ನು, ಇಂದ್ರನು ತನ್ನ ವಜ್ರಾಯುಧವನ್ನು, ತನ್ನ ದಿವ್ಯವಾದ ಶಕ್ತಿಯನ್ನೂ ಅನುಗ್ರಹಿಸಿದರು. ಕಾಲನು ತನ್ನ ಖಡ್ಗವನ್ನು, ಸಮುದ್ರರಾಜನು ಶಂಖವನ್ನು, ಕ್ಷೀರಸಮುದ್ರಾಧಿಪತಿ ತನ್ನಲ್ಲಿರುವ ಚುಡಾಮಣಿಯನ್ನು, ಹಿಮಪರ್ವತರಾಜನು ದೇವಿಗೆ ವಾಹನವಾಗಿ ಸಿಂಹವನ್ನು ಹಾಗೂ ನಾನಾತರದ ರತ್ನಗಳನ್ನೂ, ವಿಶ್ವದೇವರು ಕಿರೀಟ ಹಾಗೂ ಉತ್ತಮವಾದ ಆಭರಣಗಳನ್ನೂ ನಾನಾತರದ ಆಯುಧಗಳನ್ನು ಅರ್ಪಿಸಿದರು. ಸಕಲದೇವತೆಗಳಿಂದ ಹಾಗೂ ವಿಶ್ವಶಕ್ತಿಯಿಂದ ಪಡೆದ ಆಯುಧಗಳಿಂದಲೂ ದಿವ್ಯ ತೇಜಸ್ಸಿನಿಂದಲೂ ಕಂಗೊಳಿಸುವ ಮಹಾದೇವಿಯ ಒಮ್ಮೆ ಗರ್ಜನೆಯನ್ನು ಮಾಡಿದಾಗ ಸಕಲ ಚರಾಚರ ಪ್ರಪಂಚವೇ ಭಯದಿಂದ ಕಂಪಿಸಿದ್ದನ್ನು ತಿಳಿದು ಅತಿ ಭಯಂಕರ ರೂಪವನ್ನು ತಾಳಿದ ದೇವಿಯನ್ನು ನೋಡಿದ ದೇವತೆಗಳೆಲ್ಲಾ ನಾನಾ ವಿಧದಲ್ಲಿ ಸ್ತುತಿನ್ನ ಮಾಡಿದರು.


                 ಎಲ್ಲೈ ದೇವಿಯೇ, ಸಕಲ ಲೋಕಕ್ಕೂ ನೀನು ಜನನಿ. ಈ ವಿಶ್ವವನ್ನೆಲ್ಲ ನೀನು ವ್ಯಾಪಿಸಿಕೊಂಡಿರುವೆ. ನಿನಗೆ ಜಯವಾಗಲಿ, ನೀನೆ ಸ್ವಾಹಾ, ನೀನೆ ಸ್ವಧಾ ಆಗಿರುವೆ. ಕ್ರಿಯಾ, ಕರಾಳ, ಲಕ್ಷ್ಮೀ, ತುಷ್ಟಿ, ಪುಷ್ಟೀ, ಸರಸ್ವತಿ, ಲಜ್ಜಾ, ಕೀರ್ತಿ, ಮೋದ, ಪ್ರಭಾ, ಮಾಯಾ, ಶೃತಿ ದಯಾ ಇವೆಲ್ಲ ಶಕ್ತಿಯಾಪಳಾದ ನಿನ್ನ ಸ್ವರೂಪಳಾಗಿವೆ. ಸಿದ್ಧಿ, ಬುದ್ಧಿ, ಅಹಂಕಾರ ಸ್ವರೂಪಿಯೂ ನೀನೆ ಆಗಿರುವೆ. “ಹ್ರೀಂ” ಎಂಬ ಬೀಜಮಂತ್ರದ ಪ್ರತಿಪಾದ್ಯಳೂ ನೀನೆ ತ್ರಿಮೂರ್ತಿಗಳನ್ನು ಉದರದಲ್ಲಿಟ್ಟುಕೊಂಡ ಜನನಿ ನೀನು. 4 ವೇದಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ನೀನು “ದಿತಿ” ಎಂದೆನಿಸಿಕೊಂಡಿರುವೆ. ದಿವ್ಯ ಸ್ವರೂಪಳಾದ ನೀನು ನಮ್ಮೆಲ್ಲರ ಸೃಷ್ಟಿಗೆ ಗೋಚರಗಳಾಗಿರುವೆ. ನೀನು ಯಾರಿಗೂ ದುರ್ಜಯಳಾಗಿರುವುದರಿಂದ ದುರ್ಗಮಯಳಾಗಿರುವುದರಿಂದ “ದುರ್ಗಾ” ಎಂಬ ಹೆಸರಿನಿಂದ ಮೆರೆಯುವವಳಾಗು ಎಂಬ ದೇವಾದಿದೇವತೆಗಳೆಲ್ಲರೂ ಸ್ತುತಿಸಿದರು. ಆದ್ದರಿಂದಲೇ ದೇವಿಯು “ದುರ್ಗಾ” ಎಂಬ ನಾಮಧೇಯದಿಂದ ಪ್ರಸಿದ್ಧಳಾದಳು.ಶ್ರೀ ಅರ್ಯಾದುರ್ಗಾ ದೇವಿ ಸಂಸ್ಥಾನ ಅಂಕೋಲಾ.