Sri RajaRajeshwari Temple Ukkada

ಶ್ರೀ ರಾಜರಾಜೇಶ್ವರಿ ದೇವಾಲಯ:

                 ಮಡಿಕೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯ ಕೆಲವು ದಶಕಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. ಈ ಅಪೂರ್ವ ದೇವಿಯ ನೆಲೆ ತನ್ನ ಕ್ಷೇತ್ರ ಮಹಿಮೆಯಿಂದಾಗಿ ಬಹಳ ಪ್ರಖ್ಯಾತಿಯನ್ನು ಹೊಂದಿದೆ.ಜನಸಾಮಾನ್ಯರಲ್ಲಿ ‘ಉಕ್ಕಡ’ ಎಂದೇ ಪ್ರಚಲಿತದಲ್ಲಿರುವ ಮಡಿಕೇರಿ ನಗರದ ಈ ತಾಣ ಬಸ್ ನಿಲ್ದಾಣದಿಂದ ಸುಮಾರು 3 ಕಿ.ಮೀ ಅಂತರದಲ್ಲಿದೆ. ಒಂದು ವರ್ಷದ ಹಿಂದೆ ಈ ಕ್ಷೇತ್ರ ವ್ಯಾಪ್ತಿಯನ್ನು ‘ರಾಜರಾಜೇಶ್ವರಿ ನಗರ’ ಎಂದು ಹೆಸರಿಸಲಾಗಿದೆ.

                 ಶ್ರೀ ರಾಜರಾಜೇಶ್ವರಿ ದೇವಾಲಯ ನಿರ್ಮಾಣಗೊಂಡಿರುವುದು 50 ವರ್ಷಗಳ ಹಿಂದೆ ಉಕ್ಕಡದ ಬೆಟ್ಟದ ಸಾಲಿನ ರಮಣೀಯ ಪ್ರಕೃತಿಯ ಮಡಿಲಲ್ಲಿ. ರಾಜರಾಜೇಶ್ವರಿಯ ಈ ನೆಲೆಯಲ್ಲಿ ತಿರುಪತಿ ವೆಂಕಟರಮಣ, ಈಶ್ವರ, ಶನಿಮಹಾತ್ಮೆ, ಗಣಪತಿ, ಮಹಾಕಾಳಿ, ದುರ್ಗಿ, ಸುಬ್ರಹ್ಮಣ್ಯ, ಕುಟ್ಟಿಚಾತನ್, ಕಾವೇರಿ ದೇವಾಲಯ, ನವಗ್ರಹ ದೇವತೆಗಳು ಹಾಗೂ ಅಣ್ಣಪ್ಪ ದೇವಾಲಯಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ದೇವಾಲಯದಲ್ಲಿ ನಿತ್ಯಪೂಜೆ ಇದೆ. ನಿರ್ದಿಷ್ಟಪಡಿಸಿದ ದಿನಗಳಂದು ಸಂಜೆ ಪ್ರಾರ್ಥನೆ ಹಾಗೂ ಮಂಗಳಾರತಿ ಪೂಜಾವಿಧಿಗಳಿವೆ. ಪ್ರತಿವರ್ಷ ಮೇ ತಿಂಗಳಲ್ಲಿ ಜಾತ್ರಾ ಉತ್ಸವ ನಡೆಯುತ್ತದೆ. ಆ ಸಂದರ್ಭದಲ್ಲಿ ರಾಜ್ಯದ ವಿವಿಧ ಬಾಗಗಳಿಂದ ಭಕ್ತಾದಿಗಳು ಬಂದು ಸೇರುತ್ತಾರೆ. ದೂರದ ಸ್ಥಳಗಳಿಂದ ಬರುವ ಭಕ್ತಾದಿಗಳು ವಾಹನಗಳ ನಿಲುಗಡೆಗೆ ಗುಡ್ಡದ ಮೇಲ್ಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

                 ರಾಜರಾಜೇಶ್ವರಿ ನಗರದ ಆಕರ್ಷಕ ಪ್ರವೇಶದ್ವಾರದ ಮೂಲಕ ಒಳಪ್ರವೇಶಿಸುವ ಭಕ್ತಾದಿಗಳು ಪ್ರಕೃತಿಯ ಮಡಿಲಿನಲ್ಲಿ ಇಳಿಜಾರು ರಸ್ತೆಯಲ್ಲಿ ದೇವಾಲಯವಿರುವ ತಾಣಕ್ಕೆ ಸಾಗಬೇಕು. ಕ್ಷೇತ್ರಕ್ಕೆ ತೆರಳುವ ದುರ್ಗಮ ಹಾದಿಯನ್ನು ದುರಸ್ತಿ ಪಡಿಸಲಾಗಿದ್ದು, ಜಿಲ್ಲಾ ಪಂಚಾಯತ್ ವತಿಯಿಂದ ಡಾಂಬರು ರಸ್ತೆಯನ್ನು ನಿರ್ಮಿಸಲಾಗಿದೆ.

                   ಶ್ರೀ ರಾಜರಾಜೇಶ್ವರಿ ದೇವಾಲಯದ ಶ್ರೇಯೋಭಿವೃದ್ಧಿಗಾಗಿ ಹೆಚ್.ಎಸ್. ಗೋವಿಂದರಾಜು ಅವರ ನೇತೃತ್ವದಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಗಿದೆ. ಟ್ರಸ್ಟ್ ನ ವತಿಯಿಂದ ರೂ 1 ಲಕ್ಷ ವೆಚ್ಚದಲ್ಲಿ ನವಗ್ರಹ ದೇವಾಲಯವನ್ನು ನೂತನವಾಗಿ ನಿರ್ಮಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಭಕ್ತರು ದೇವಿಯ ತಾಣದಲ್ಲಿ ಬಂದು ಸೇರುತ್ತಿರುವ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ತಂಗುವ ಹಾಗೂ ಅನ್ನದಾನಕ್ಕಾಗಿ ಉತ್ತಮ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಟ್ರಸ್ಟ್ ಬೃಹತ್ ಯೋಜನೆಯೊಂದನ್ನು ಕೈಗೊಳ್ಳಲು ನಿರ್ಧರಿಸಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ ಹಾಗೂ ಭೋಜನಶಾಲೆಯನ್ನು ನಿರ್ಮಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.

    ರಾಜರಾಜೇಶ್ವರಿ ನಗರದ ಬೆಟ್ಟದ ಸಾಲಿನಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ ಸ್ತಾಪಿತವಾಗಿತುವ ಈ ದೇವಾಲಯ ಕೇವಲ ಭಕ್ತಾದಿಗಳಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಒಂದು ಉತ್ತಮ ವೀಕ್ಷಣ ತಾಣವಾಗಿದೆ.  


Sri Raja Rajeshwari Temple Madikeri 1
Sri Raja Rajeshwari Temple Madikeri 2
Sri Raja Rajeshwari Temple Madikeri 3
Sri Raja Rajeshwari Temple Madikeri 4
Sri Raja Rajeshwari Temple Madikeri 5
Sri Raja Rajeshwari Temple Madikeri 6
Sri Raja Rajeshwari Temple Madikeri 7
Sri Raja Rajeshwari Temple Madikeri 8
Sri Raja Rajeshwari Temple Madikeri 9
Sri Raja Rajeshwari Temple Madikeri 10
Sri Raja Rajeshwari Temple Madikeri 11
Sri Raja Rajeshwari Temple Madikeri 12
Sri Raja Rajeshwari Temple Madikeri 13
Sri Raja Rajeshwari Temple Madikeri 14
Sri Raja Rajeshwari Temple Madikeri 15
Sri Raja Rajeshwari Temple Madikeri 16
Sri Raja Rajeshwari Temple Madikeri 17
Sri Raja Rajeshwari Temple Madikeri 18
Sri Raja Rajeshwari Temple Madikeri 19
Sri Raja Rajeshwari Temple Madikeri 21
Sri Raja Rajeshwari Temple Madikeri 22
Sri Raja Rajeshwari Temple Madikeri 23

Related Information