Shri Kundur Motte Chowti Mariyamma Temple

ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ:

      ಕೊಡಗೆಂಬ ಬೆಡಗಿನ ನಾಡ ರಾಜಧಾನಿ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್. ಇದರ ಸಮೀಪದಲ್ಲೇ ಪುರಾತನವೂ, ಪ್ರಸಿದ್ದವೂ, ಸುಂದರವೂ ಆಗಿರುವ ದೇವಾಲಯವೊಂದಿದೆ. ಅದುವೇ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ. ಇದರ ಇತಿಹಾಸವನ್ನು ಅರಸಿದರೆ ಎರಡು ಶತಮಾನಗಳಷ್ಟು ಹಿಂದಕ್ಕೆ ಚಲಿಸಿದಂತೆ. ಅಂದಿನ ಕೊಡಗಿನರಸರು ಹೊರ ರಾಜ್ಯಗಳಿಂದ ಕರೆತಂದು ನೆಲೆಗೊಳಿಸಿದ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಯವಳೆನಿಸಿರುವ ದೇವಿಯೇ ಶ್ರೀ ಚೌಟಿ ಮಾರಿಯಮ್ಮ. ಯಾವುದೇ ಅನಿಷ್ಟ, ವಿಪತ್ತು ಸಂಭವಿಸದಂತೆ ನಾಡನ್ನು ರಕ್ಷಿಸಲು ಎಂದು ರಾಜರು ಈ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಿದ್ದರು.

     ಇಂದಿಗೂ ಹಿರಿಯರು ಈ ದೇವತೆಯ ಶಕ್ತಿಯ ಬಗೆಗಿನ ಹಲವಾರು ಕಥೆಗಳನ್ನು ತಮ್ಮ ನೆನಪಿನ ಬುತ್ತಿಯಲ್ಲಿ ತುಂಬಿಸಿಟ್ಟು ಕೊಂಡಿದ್ದಾರೆ. ವೀರನೂ, ಹಾಗೇಯೇ ಅಹಂಕಾರಿಯೂ, ಆಗಿದ್ದ ರಾಜನ ಸೇನಾಧಿಕಾರಿಯೊಬ್ಬನನ್ನು ದೇವಿಯು ಪುಟ್ಟ ಪಕ್ಷಿಯೊದರ ರೂಪಧರಿಸಿ ಸಂಹಾರ ಮಾಡಿದ್ದು, ಅಂತಹ ರೋಚಕ ಕಥೆಗಳಲ್ಲೊಂದು ಈ ದೇವಿಯು ಉಗ್ರ ಸ್ವರೂಪಿಣಿ. ಉದ್ದವಾದ ಕೋರೆ ಹಲ್ಲನ್ನು ಹೊಂದಿರುವುದು ಚೌಟಿ ಮಾರಿಯಮ್ಮನ ವೈಶಿಷ್ಟತೆ. ಗರ್ಭಗುಡಿಯಲ್ಲಿರುವ ವಿಗ್ರಹ ಮೂಲವಿಗ್ರಹವಾಗಿದ್ದು ನೋಡುಗನಿಗೆ ಪ್ರಥಮ ನೋಟದಲ್ಲಿಯೇ. ಭಯ -ಭಕ್ತಿ ಭಾವವನ್ನು ಮೂಡಿಸುತ್ತದೆ. ದೇವಾಲಯದ ಪೂಜೆ ಪುರಸ್ಕಾರಗಳನ್ನು ಗೌಳಿ ಜನಾಂಗದವರೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. 

    ದೇವಾಲಯ ಆಡಳಿತ ಮಂಡಳಿಯ ಕಾಳಜಿಯಿಂದ ಪುರಾತನ ದೇಗುಲದ ಸ್ಥಾನ ಇಂದು ಸುಂದರ ವಿಶಿಷ್ಟ, ಬೃಹತ್ ದೇಗುಲವು ನಿರ್ಮಾಣಗೊಂಡಿದೆ. ದೇಗುಲದ ಹಿಂಭಾಗದಲ್ಲಿ ನಾಗದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆಯೇ ದೇಗುಲದಲ್ಲಿ ಬಲಿಪೀಠವೂ ಇದೆ. ವಾರಕ್ಕೆರಡು ದಿನ ಬಲಿ ಅರ್ಪಣೆ. ವಾರ್ಷಿಕವಾಗಿ ಹಲವಾರು ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ವಾರ್ಷಿಕೋತ್ಸವ, ಕೋಲ ಉತ್ಸವಗಳು ಇವುಗಳಲ್ಲಿ ಪ್ರಮುಖ ಹಬ್ಬ ಹರಿದಿನಗಳಲ್ಲೂ ವಿಶೇಷ ಪೂಜೆಗಳಿರುತ್ತವೆ. ಎಲ್ಲಕ್ಕಿಂತಲೂ ಅತೀ ಸಂಭ್ರಮದಿಂದ ಆಚರಸಲ್ಪಡುವುದು ನವರಾತ್ರಿ ಉತ್ಸವ. ಈ ಸಂದರ್ಭ ದೇಗುಲದಿಂದ ಕರಗವನ್ನು ಹೊರಡಿಸಲಾಗುವುದು. ನವದಿಗಳ ನಗರ ಪ್ರದಕ್ಷಿಣೆ. ವಿಜಯ ದಶಮಿಯಂದು ಪೇಟೆ ಶ್ರೀ ರಾಮ ಮಂದಿರದಿಂದ ಕಳಶ ಹೊತ್ತು ಮಂಟಪವೂ ಮೊಟ್ಟ ಮೊದಲು ಆಗಮಿಸುವುದು. ಕುಂದುರು ಮೊಟ್ಟೆ ದೇಗುಲಕ್ಕೆ ಕಳಶಕ್ಕೆ ಪೂಜೆ ಸಲ್ಲಿಸಿದ ನಂತರ ಕರಗವು ಹೊರಟು ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಬನ್ನಿ ಮಂಟಪಕ್ಕೆ ತೆರಳುತ್ತದ. ನವರಾತ್ರಿ ನಂತರ ಶಾಂತಿಪೂಜೆ ಮತ್ತು ಕುಂಭ ಪೂಜೆ. ಪ್ರತೀ ಶುಕ್ರವಾರದ ವಿಶೇಷ ಪೂಜೆಗಳೊಂದಿಗೆ ಇಲ್ಲಿ ನಿತ್ಯ ಪೂಜೆಯು ನೆರವೇರುತ್ತದೆ.

ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13

Related Information