Sri Kote Mahaganapathi Temple

ಶ್ರೀ ಕೋಟೆ ಮಹಾಗಣಪತಿ ದೇವಾಲಯ :

                    ಗಣಪತಿಯು ವಿಘ್ನಗಳ ರಾಜ, ಗಣಗಳ ದೊರೆ ಹಾಗೂ ಅಜ್ಞಾನವನ್ನು ತೊಲಗಿಸಿ ಜ್ಞಾನದ ಬೆಳಕನ್ನು ತೋರುವ ಪೂಜ್ಯ ದೈವ, ಆತನನ್ನು ಪ್ರಾರ್ಥಿಸದ ಪೂಜೆಯು ನಿಷ್ಫಲವೆಂಬ ಹೇಳಿಕೆಯಿದೆ. ಪ್ರಂಪಚದಲ್ಲಿ ಅಗ್ರ ಪೂಜೆ ಮಹಾಗಣಪತಿಗಲ್ಲದೆ ಮತ್ತಾರಿಗೆ? ಮಹಾಗಣಪತಿಯು ಸರ್ವ ಪೂಜ್ಯ ಮತ್ತು ಅಗ್ರ ಪೂಜ್ಯ. ಇಂದಿಗೂ ನಾವು ಮನೆ ಕಟ್ಟಲಿ ಮದುವೆ ಮಾಡಲಿ ಎಲ್ಲಾ ವೇಳೆಯಲ್ಲೂ ಮೊದಲು ಮಹಾಗಣಪಲಿಯನ್ನು ನೆನೆಯುತ್ತೇವೆ. ಪೂಜಿಸುತ್ತೇವೆ. ನಮ್ಮ ಸಕಲ ಕಾರ್ಯಗಳು ಅಡ್ಡಿ ಇಲ್ಲದೆ ನೆರವೇರಬೇಕು. ಇದರಿಂದಲೇ ಮಹಾ ಮಹಿಮನನ್ನು ನೆನೆಯದೆ ಏನೊಂದು ನಡೆಯುವುದಿಲ್ಲ.
                        ಈ ಉದ್ದೇಶದಿಂದಲೇ ಕೊಡಗನ್ನಾಳಿದ ರಾಜ ವೀರರಾಜೇಂದ್ರರು ಕೂಡಾ ಕೋಟೆರ ಒಳಗೆ (ಶ್ರೀ ಓಂಕಾರೇಶ್ವರ ದೇವಸ್ಥಾನದ ಸಮೀಪದಲ್ಲೇ) ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆಂಬುದನ್ನು ನಾವು ಕಾಣಬಹುದಾಗಿದ ತನ್ನ ಮನೆ ದೇವರೆಂದೇ ಪೂಜಿಸುವ ಶ್ರೀ ಗಣಪತಿ ದೇವರಿಗೆ ನಮಿಸಿಯೇ ತನ್ನ ದಿನ ನಿತ್ತಯದ ಚಟುವಟಿಕೆ ಪ್ರಾರಂಭವೆಂದು ಪ್ರತೀತ. ಗೋಪುರ ಚಿಕ್ಕದಾದರೂ ಗಣಪತಿಯ ಶಕ್ತಿ ದೊಡ್ಡದು. “ ನಂಬಿ ಕೆಟ್ಟವಿಲ್ಲವೋ” ಎಂಬತೆ ಪ್ರಸ್ತುತವಾಗಿ ಜಿಲ್ಲಾಧಿಕಾರಿಗಳ ಕಛೇರಿ, ಉಪವಿಭಾಗಧಿಕಾರಿಗಳ ಕಛೇರಿ, ನ್ಯಾಯಲಯ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ ಪ್ರಾಚ್ಯವಸ್ತು ಸಂಗ್ರಹಾಲಯ, ಗ್ರಂಧಾಲಯಗಳಿಗೆ ತೆರಳುವ ಸಾರ್ವಜನಿಕರು ಯಾರೇ ಇರಲ ಗಣಪತಿಗೆ ಕೈ ಮುಗಿದು “ ಮನದಲ್ಲೇ ನನ್ನ ಇಷ್ಟಾರ್ಥವನ್ನು ನೆರವೇರಿಸು” ಎಂದು ಪ್ರಾರ್ಥಿಸಿ ಮುಂದೆ ತೆರಳುತ್ತಿರುವುದು ಕಂಡು ಬರುತ್ತಿದೆ. “ನಂಬದವನಿಗೆ ಇಂಬು” ಕೊಡುತ್ತಾನೆಂಬುದಕ್ಕೆ ಅನೇಹ ನಿದರ್ಶನಗಳು ಇವೆ. ಹಿಂದೊಮ್ಮೆ ಪರದೇಶದಲ್ಲಿರುವ ಮಹನೀಯರಿಗೆ 30 ಆನೆಗಳಿತ್ತಂತೆ. ಅದರಲ್ಲಿ ಒಂದು ಆನೆ ತಪ್ಪಿಸಿಕೊಂಡು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತೆ. ಆದರೆ ನಂಬಿದ್ದ ಕೋಟೆ ಶ್ರೀ ಮಹಾಗಣಪತಿಯನ್ನು. ಅಲ್ಲಿಂದಲೆ ಗಣಪತಿಗೆ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಿ “ ನನ್ನ ಸಮಸ್ಯೆಯನ್ನು ಪರಿಹರಿಸು” ಎಂದರಂತೆ. ಒಂದು ವಾರದ ಬಳಿಕ ತಪ್ಪಿಸಿಕೊಂಡ ಆನೆ ಸ್ವಸ್ಥಾನಕ್ಕೆ ಬಂದಾಗ ಮಾಲೀಕರಿಗೆ ಪಡಲಾರದ ಸಂತೋಷ. ಅವರು ನಂಬಿದ್ದ ಕೋಟೆ ಗಣಪತಿಯನ್ನು ಕೊಡಗಿಗೆ ಬಂದಾಗ ಆ ಮಹನೀಯ ದೇವಸ್ಥಾನಕಕೆ ತೆರಳಿ ಚಿನ್ನದ ಆನೆಯ ಪ್ರತಿರೂಪವನ್ನು ದೇವರಿಗೆ ಒಪ್ಪಿಸಿ ನೆಮ್ಮದಿ ಪಟ್ಟರು. ಇಂತಹ ನಿದರ್ಶನಗಳು ಹಲವು ಇದೆ. ಪರೀಕ್ಷಾ ಸಮಯದಲ್ಲಿ ದೇವರಿಗೆ ಕಾಣಿಕೆ ಹಣದೊಂದಿಗೆ ಒಂದು ಪತ್ರವನ್ನು ಬರೆಯುವುದು ಸಾಮಾನ್ಯವಾಗಿದೆ. ‘ನನ್ನನ್ನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಂiÀiಲ್ಲಿ ಪಾಸು ಮಾಡು’ ನಿನಗೆ ಈಡುಗಾಯಿ ಹೊಡೆಯುತ್ತೇನೆ. ಅಲ್ಲದೆ ನನ್ನ ಹೆಸರಿನಲ್ಲಿರುವ ಕೇಸನ್ನು ನ್ಯಾಯಲಯದಲ್ಲಿ ತೀರ್ಮಾನಿಸು ಎಂದು ಬರೆವ ಪತ್ರಗಳು ಸರ್ವೇ ಸಾಮಾನ್ಯ. ಈ ಕೋಟೆ ಮಹಾಗಣಪತಿ ಜನ ಸಾಮಾನ್ಯರಲ್ಲಿ ಅಷ್ಟೊದು ಪ್ರಭಾವ ಬೀರಿದ್ದಾನೆ.
                   ಬೆಳಿಗೆ 8-00 ಘಂಟೆಯಿಂದ9-00 ಘಂಟೆಯ ತನಕ ನಡೆಯುವ ಪೂಜೆಗೆ ಸಾಕಷ್ಟು ಭಕ್ತಾದಿಗಳು ಸೇರಿ ಪೂಜೆ ಸಲ್ಲಿಸುತ್ತಿರುತ್ತಾರೆ. ಪ್ರತಿ ದಿನವೂ ಸುಮಾರು ಒಂದು ನೂರಕ್ಕೂ ಹೆಚ್ಚಿನ ಈಡುಗಾಯಿ ಸೇವೆಯು ನಡೆಯುತ್ತಿರುತ್ತದೆ. ಚೌತಿಯಂತೂ ಗಣಪತಿಗೆ ವಿಶೇಷ. ಸುಮಾರು 50,000ಕ್ಕೂ ಮಿಕ್ಕಿ ತೆಂಗಿನಕಾಯಿ ಒಡೆದು ಭಕ್ತರು ಕೃಪಾರ್ಥರಾಗುತ್ತಾರೆ. ಕೋಟೆ ಗಣಪತಿ ದಸರಾ ಸಮಿತಿಯು ಪ್ರತಿ ವರ್ಷವೂ ಈ ದೇವರ ಹೆಸರಿನಲ್ಲಿ ದಸರಾ ಮಂಟಪವನ್ನು ಹೊರಡಿಸಿತ್ತಿದ್ದ ಅತ್ಯಾಕರ್ಷಕವಾಗಿ ಮೂಡಿ ಬರುತ್ತಿದೆ. ಇದೆಲ್ಲಾ ಗಣಪತಿಯ ಮಹಿಮೆ ಅಲ್ಲದೆ ಬೇರೆನೂ ಅಲ್ಲ !
                 ಪ್ರತಿ ವರ್ಷದ ಹುತ್ತರಿಯಂದು ಶ್ರೀ ಗಣಪತಿಗೆ ಮೊದಲು ಭತ್ತದ ತೆನೆಯನ್ನು ಕಟ್ಟುವುದು ಸಂಪ್ರದಾಯ. ಅದರಂತೆ ವಾದ್ಯಗೋಷ್ಠಿಯೊಡನೆ ಶ್ರೀ ಓಂಕಾರೇಶ್ವರ ದೇವಾಲಯದಿಂದ ಮೆರವಣಿಗೆ ಸಹಿತ ಕದಿರುಗಳನ್ನು ಪೂಜೆಸಲ್ಲಿಸಿ ದೇವರಿಗೆ ಅರ್ಪಿಸುವುದು ವಾಡಿಕೆ. ಇಂದಿಗೂ ನಡೆದು ಬರುತ್ತಿದೆ. ಹೀಗೆ ಹಿಂದೂ ಸಂಸ್ಕøತಿಯಲ್ಲಿ ಗಣಪತಿಗೆ ಅಗ್ರ ಪೂಜೆ ಸಲ್ಲುತ್ತದೆ. ಸಲ್ಲಲೇಬೇಕು. ಹಾಗಿಲ್ಲದಿದ್ದರೆ ವಿಘ್ನ ನಾಶಕನೆಂದು ಹೊಗಳಿಸಿಕೊಳ್ಳುವ ಈತನೇ ವಿಘ್ನಕಾರಕನಾಗಿಯೂ ಚುರುಕು ಮುಟ್ಟಿಸುತ್ತಾನೆ. ಭಕ್ತರು ತಮ್ಮ ಭಕ್ತಿಯನ್ನು ಇಲ್ಲಿ ಧಾರೆಯರೆಯುತ್ತಾರೆ. ಚೌತಿಯ ಸಮಯದಲ್ಲಿ ಇಂತಹ ಗಣಪತಿಯು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.

ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13

Related Information