Peraaje Village

ಗುಡ್ಡೆ ಚಾಮುಂಡಿ ದೈವಸ್ಥಾನ, ಪೆರಾಜೆ ಗ್ರಾಮ, ಅಂಚೆ ನೇರಳಕಟ್ಟೆ:-

     ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದಾದ ಈ ದೈವಸ್ಥಾನವು ಪೆರಾಜೆ ಗುತ್ತಿನ ಅನು ವಂಶೀಯ ಆಡಳಿತೆಯಲ್ಲಿದೆ. ಫಾಲ್ಗುಣ ಶುದ್ಧ ಅಷ್ಟಮಿ ಯಂದು ಇಲ್ಲಿ ವರ್ಷಾವಧಿ ‘ಸಾದಿಕುಕ್ಕು’ ಜಾತ್ರೆ. ಇದಲ್ಲದೆ ಮಿತ್ತ ಪೆರಾಜೆ ಓಲಸರಿ ನೇಮ ಮತ್ತು ಪುದುವಾರುಮೆಚ್ಚಿ ನೇಮಗಳು ಇಲ್ಲಿ ನಡೆಯುತ್ತವೆ ಪ್ರತಿ ತಿಂಗಳ ಸಂಕ್ರಮಣದಂದು ‘ತಂಬಿಲ’ ನಡೆಯುತ್ತದೆ. ಈ ದೈವಸ್ಥಾನಕ್ಕೂ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನಕ್ಕೂ ಸಂಬಂಧ ಇದೆ.