Sri Chowdeshwari Temple

  ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ:

                                 ಮಡಿಕೇರಿ ನಗರದ ಮಾರುಕಟ್ಟೆ ಇರುವ ಸ್ಥಳದಿಂದ ಕೂಗಳತೆಯ ದೂರದಲ್ಲಿ ದೇಗುಲವೇ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ. ಪ್ರಸ್ತುತ ದೇವಾಂಗ ಜನಾಂಗದವರ ಸ್ವಾದೀನದಲ್ಲಿರುವ ಈ ದೇಗುಲವನ್ನು ಕೊಡಗಿನ ರಾಜನಾಗಿದ್ದ ಲಿಂಗರಾಜನು ನಿರ್ಮಿಸಿದನೆಂದು ನಂಬಲಾಗಿದೆ. ಇದಕ್ಕೆ ಇಂಬು ಕೊಡುವಂತೆ ದೇವಸ್ಥಾನದ ಪ್ರವೇಶದ್ವಾರದ ಮೆಟ್ಟಿಲುಗಳ ಬಳಿ ಇರುವ ಕಲ್ಲಿನಲ್ಲಿ ‘ಲಿ’ ಎಂಬ ಕೆತ್ತನೆಯಿಂದ ಆದುದರಿಂದ ಈ ದೇಗುಲಕ್ಕೆ ಶತಮಾನಕ್ಕೂ ಹೆಚ್ಚಿನ ಐತಿಹ್ಯವಿರುವುದು ತಿಳಿದು ಬರುತ್ತದೆ. ನಿಖರವಾದ ಕಾಲದ ಮಾಹಿತಿ ಲಭ್ಯವಿಲ್ಲ.

                                   ಗರ್ಭಗುಡಿಯಲ್ಲಿದ್ದ ಅಮ್ಮನವರ ಮೂಲ ವಿಗ್ರಹವನ್ನು 1966 ರಲ್ಲಿ ಬದಲಾಯಿಸಲಾಯಿತು. ಆದರೂ ಮೂಲವಿಗ್ರಹ ಇಂದಿಗೂ ಭದ್ರವಾಗಿದ್ದು ವಾರ್ಷಿಕ ಉತ್ಸವದಂದು (ದುರ್ಗಾ ಜಯಂತಿ) ಅದೇ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗಿವುದು. 1966 ರಲ್ಲಿ ಚೌಡೇಶ್ವರಿ ಮಾತೆಯ ವಿಗ್ರಹವಲ್ಲದೇ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ-ಬಲಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲದೇ ಮಡಿಕೇರಿಯಲ್ಲಿ ಪ್ರಥಮವೆಂಬಂತೆ ‘ನವಗ್ರಹ’ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಯಿತು. ಮೂಲ ವಿಗ್ರಹ ಮತ್ತು ಇತರ ಕೆಲ ವಿಗ್ರಹಗಳು ಇಂದಿಗೂ ದೇವಸ್ಥಾನದ ಮುಂಭಾಗದಲ್ಲಿರುವ ಮೋಹನ್ ರವರ(ಇದನ್ನು ದೇವರಮನೆ ಎಂದು ಕರೆಯಲಾಗುತ್ತದೆ.) ಮನೆಯಲ್ಲಿ ಭದ್ರವಾಗಿದೆ. ನವರಾತ್ರಿ ಸಮಯದಲ್ಲಿ ಈ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಾರೆ. 

                                ‘ದೇವರ ಹಬ್ಬ’ ಇದು ಈ ದೇಗುಲದಲ್ಲಿ ಪ್ರತಿ 3 ವರ್ಷಗೊಳಿಗೊಮ್ಮೆ ಆಚರಿಸಲಾಗುವ ಉತ್ಸವ ಈ ಉತ್ಸವದ ಹಿನ್ನಲೆಯು ‘ದಕ್ಷಯಜ್ಷ’ ಪ್ರಸಂಗವನ್ನು ಅವಲಂಭಿಸಿದೆ. ಉತ್ಸವ ಮೂರ್ತಿಗಳನ್ನು ದೇಗುಲ ಹಿಂಭಾಗದಲ್ಲಿರುವ ‘ಕೆಂಡದ ಗುಂಡಿ’ ಎಂಬಲ್ಲಿಗೆ ಕೊಂಡೊಯ್ದು ಅಲ್ಲಿನ ಬಾವಿಯಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ. ಮುಂದೆ ಕೆಂಡದಾಟುವುದು, ಪಕ್ಕದ ಕೆರೆಯಿಂದ ‘ಮುತ್ತು ತ್ರಾಯನ’ ಎಂಬ ಕಲ್ಲನ್ನು ಹೊರತೆಗೆದು ಪೂಜಿಸಿವುದು, ಅನ್ನ ಸಂತಪ್ರಣೆ ಮುಂತಾದ ವಿಧಿ ವಿಧಾನಗಳು ವಿಜ್ರಂಭಣೆಯೊಂದ ನೆರವೇರುತ್ತಿತ್ತು. ಆದರೆ ಈ ಉತ್ಸವ ಕೊನೆ ಬಾರಿ ನಡೆದದ್ದು 194 ರಲ್ಲಿ ಅಲ್ಲಿಂದ ಮುಂದೆ ದೇಗುಲದ ನವೀಕರಣ ಕಾರ್ಯ ಆರಂಭಗೊಂಡಿದ್ದರಿಂದ ಈ ಉತ್ಸವಕ್ಕೆ ವಿರಾಮ. ಆದರೂ ಪ್ರತಿ ವರ್ಷವೂ ದುರ್ಗಾ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಜೊತೆಗೆ ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗೌರಿ-ಗಣೇಶ ಮುಂತಾದ ಹಬ್ಬಗಳನ್ನೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ನಿತ್ಯ ಪೂಜೆಗಳು, ಭಕ್ತಾಧಿಗಳೇ ಸೇರಿ ನಡೆಸುವ ರಂಗಪೂಜೆ ಸಂದರ್ಭಗಳಲಂತೂ ಸಮಸ್ತ ಮಡಿಕೇರಿ ಜನತೆ ಇಲ್ಲಿಗಾಗಮಿಸುತ್ತಾರೆ. ಕಳೆದ ಐದು ವರ್ಷಗಳಿಂದ ನವೀಕರಣ ಗೊಂಡಿರುವ ದೇಗುಲ ಗೋಪುರ, ಮಾರ್ಬಲ್ ನೆಲ, ಸುಂದರ ಕೆತ್ತನೆಯ ದ್ವಾರ ಮುಂತಾದವುಗಳಿಂದ ಕಂಗೊಳಿಸುತ್ತಿದೆ. ಕಂಗೊಳಿಸುತ್ತಿದೆ. ಕಳಶ ಪ್ರತಿಷ್ಠಾಪನೆಯ ಕಾರ್ಯವೊಂದು ಬಾಕಿ ಉಳಿದಿದೆ. ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಲಾಗಿದೆ. ದೇಗುಲಕ್ಕೆ ಸೇರಿದ ಕಲ್ಯಾಣಮಂಟಪವೂ ಇದೆ.

                      ನವರಾತ್ರಿಯ ಮೊದಲದಿನ ಪಂಪಿನ ಕೆರೆಯಿಂದ ಹೊರಟ ನಾಲ್ಕು ಕರಗಗಳು ಇಲ್ಲಿಗೆ ಬಂದು ಪೂಜೆಸಲ್ಲಿಸಿಯೇ ಮುಂದೆ ಸಾಗುವುದು ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ವತಿಯಿಂದ ಕಳೆದ 43 ವರ್ಷಗಳಿಂದ ದಸರಾ ಮಂಟಪವನ್ನು ಹೊರಡಿಸಲಾಗುತ್ತದೆ.

   


ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13

Related Information