Sri Karavale Bhagavathi Mahisha Mardhini Temple

ಶ್ರೀ ಕರವಲೆ ಭಗವತಿ ಮಹಿಷಾ ಮರ್ಧಿನಿ ದೇವಾಲಯ:

                              ಕೊಡಗಿನಲ್ಲಿ ಆದಿಯಾಗಿ ಮಡಿಕೇರಿ ಪ್ರಸಿದ್ದ ಪ್ರವಾಸಿ ಸ್ಥಳ ಅಬ್ಬಿ ಜಲಪಾತದ ಸಮೀಪ ಅಂದರೆ 5-6 ಕಿಲೋಮೀಟರ್ ಅಂತರದಲ್ಲಿರುವ ಕರವಲೆ ಬಾಡಗ ಎಂಬ ಗ್ರಾಮದಲ್ಲಿ ನೆಲೆಮಾಡಿ ನಿಂತಿರುವ ತಾಯಿಯೇ ಶ್ರೀ ಕರವಲೆ ಭಗವತಿ ಮಹಿಷಾ ಮರ್ಧಿನಿ, ಈ ತಾಯಿಯ ಚರಿತೆಯ ವಿಚಾರಕ್ಕೆ ಬಂದರೆ ಸುಮಾರು 4-5 ಶತಮಾನಗಳ ಹಿಂದಿನ ಚರಿತ್ರೆ ಬಿತ್ತರಗೊಳ್ಳುತ್ತದೆ.

                             ಪ್ರಸ್ತುತ ದೇವಾಲಯವಿರುವ ಸ್ಥಳದಲ್ಲಿ ಶ್ರೀ ಮಹಿಷಾ ಮರ್ಧಿನಿ ಮತ್ತು ಭಗವತಿ ತಾಯಿ ಇಬ್ಬರು ಜೊತೆಯಲ್ಲೇ ಸ್ಥಾಪಿತರಾಗಿದ್ದರೆ. ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ ಮುಂಚೆಈ ದೇಗುಲದಲ್ಲಿ ಮಹಿಷಾ ಮರ್ಧಿನಿ ಮಾತ್ರ ಇದ್ದು 2 ಶತಮಾನಗಳ ಹಿಂದೆ ಕರವಲೆ ಬಾಡಗದ ಎರಡು ಕುಟುಂಬಸ್ತರು ಗಾಳಿಬೀಡು ಎಂಬಲ್ಲಿದ್ದ ಭಗವತಿ ತಾಯಿಯನ್ನು ರಾತ್ರಿಯ ವೇಳೆ ತಂದು ಮಹಿಷಾ ಮರ್ಧಿನಿ ದೇಗುಲದಲ್ಲಿ ಅಂದರೆ ಮಹಿಷಾ ಮರ್ಧಿನಿ ದೇವಿಯ ವಿಗ್ರಹವಿರುವ ಎಡಭಾಗದಲ್ಲಿ ಭಗವತಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಆದ್ದರಿಂದ ಮಹಿಷಾ ಮರ್ಧಿನಿ ದೇಗುಲ ಎಂದಿರುವುದು ಮುಂದೆ ‘ಶ್ರೀ ಕರವಲೆ ಭಗವತಿ ಮಹಿಷಾ ಮರ್ಧಿನಿ’ ದೇವಾಲಯ ಎಂದಾಯಿತು. 

                            ವರ್ಷಂಪ್ರತಿ ಈ ದೇವಿಯ ವಾರ್ಷಿಕೋತ್ಸವವೂ ಮಾರ್ಚ್ ತಿಂಗಳ 14 ರಂದು ಪ್ರಾರಂಭವಾಗುತ್ತದೆ. ಅಂದು ರಾತ್ರಿ 8 ಗಂಟೆಗೆ ಮಹಿಷಾ ಮರ್ಧಿನಿ ದೇವಿಗೆ ಬೊಳ್‍ಕ್‍ಮರ ನಿಲ್ಲಿಸುವುದು ನಂತರ ಚಂಡೆಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.

                            ಮಾರನೇ ದಿನ ಅಂದರೆ ಮಾರ್ಚ್ 15 ರಂದು ಬೆಳಿಗ್ಗೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಭಗವತಿ ದೇವಿಯ ವಿಗ್ರಹವನ್ನು ಬ್ರಾಹ್ಮಣ ಅರ್ಚಕರ ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟ್ ಪಾಟ್ ಹಾಗೂ ಚಂಡೆಯೊಂದಿಗೆ ದೇವಸ್ಥಾನದ ಪ್ರದಕ್ಷಿಣೆ ಬರುತ್ತದೆ. ತಾರೀಕು 16 ರಂದು ಮಧ್ಯಾಹ್ನ 2 ಗಂಟೆಗೆ ನಾಡಿನ ಭಕ್ತಾದಿಗಳಿಂದ ಎತ್ತು ಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಅಲ್ಲಿಂದ ಬೊಳ್‍ಕಾಟ್, ಕಾಯಿಗೆ ಗುಂಡು ಹಾರಿಸುವುದು, ಅದಾದ ನಂತರ ಭಗವತಿ ವಿಗ್ರಹವನ್ನು ಹೊರತಂದು ದೇಗುಲದ ಸುತ್ತ 9 ಸುತ್ತು ಪ್ರದಕ್ಷಿಣೆ ನಡೆಸಲಾಗುವುದು. ಅಂದು ರಾತ್ರಿ 8 ಗಂಟೆಯ ನಂತರ ವಿಷ್ಣು ಮೂರ್ತಿಯ ಕೋಲ ಕೂಡ ಇರುತ್ತದೆ.

                            ತಾ 17 ರಂದು ಮಧ್ಯಾಹ್ನ 4 ಗಂಟೆಗೆ ಶ್ರೀ ಭಗವತಿ ದೇವಿಯ ‘ಜಳಕ ಕಾರ್ಯ’ ವು ಕಳಕೇರಿ ನಿಡುಗಣೆ ಗ್ರಾಮದ ಕೂಟುಹೊಳೆ ಎಂಬಲ್ಲಿ ನಡೆಯುತ್ತದೆ.

             ಈ ಸ್ಥಳದ ವಿಶೇಷವೇನೆಂದರೆ ಭಗವತಿ ದೇವಿಯು ಗಾಳಿ ಬೀಡುವಿನಿಂದ ಬಂದ ಕಾರಣ ಭಗವತಿಯ ಆದಿ ಸ್ಥಳದಿಂದ ಹರಿದು ಬರುವಂತಹ ನೀರಿನಿಂದಲೇ ತಾಯಿಯ ಜಳಕವಾಗ ಬೇಕೆಂಬುವುದು ಪ್ರತೀತಿ.  ಅಲ್ಲಿ ದೇವಿಯ ವಿಗ್ರಹಕ್ಕೆ ಜಳಕವಾದ ನಂತರ ಮಹಾ ಮಂಗಳಾರತಿ ನಡೆದು ತಾಯಿಯವಿಗ್ರಹವನ್ನು ಬ್ರಾಹ್ಮಣ ಅರ್ಚಕರ ತಲೆಯ ಮೇಲಿಟ್ಟು ನಾಡಿನ ‘ತಕ್ಕರ’ ನುಡಿಯಂತೆ, ಬ್ರಾಹ್ಮಣ ಅರ್ಚಕರ ದೇಹದ ಮೂಲಕ ದೇವಿಯ ದರ್ಶನ ಬಂದು ಗಾಳಿಬೀಡುವಿನ ಕಡೆಗೆ ಓಡಲು ಪ್ರಯತ್ನಿಸುವ ಶ್ರೀ ಭಗವತಿ ತಾಯಿಯನ್ನು ಗ್ರಾಮಸ್ತರೆಲ್ಲ ಸೇರಿ ತಡೆದು ಮರಳಿ ಪ್ರಸ್ತುತ ದೇಗಲದ ಕಡೆ ಕರೆದಕ್ಕೊಂಡು ಬರುತ್ತಾರೆ.   ನಂತರ ದೇಗುಲದ ಸುತ್ತ 11 ಸುತ್ತು ಪ್ರದಕ್ಷಿಣೆ ನಡೆಸಿ ಗರ್ಭಗುಡಿಯೊಳಗೆ ಪ್ರವೇಶಿಸಿ ನಹಾ ಮಂಗಳಾರತಿಯೊದಿಗೆ ಮಹಿಷಾ ಮರ್ಧಿನಿ ದೇವಿಯ ಪಕ್ಕದಲ್ಲಿ ಸ್ಥಾಪಿತಳಾಗುತ್ತಾಳೆ.ಇದರೊಂದಿಗೆ ಮಡಿಕೇರಿ ನಗರದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಕರಗ ದೇವತೆಗಳ ದೊಡ್ಡ ಅಕ್ಕಳೆನಿಸಿರುವ  ‘ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಿಯು ಕೂಡ ಕರವಲೆ ಬಾಡಗದ ಅದಿನದಲ್ಲಿದ್ದು ಈಗ ಹಲವು ವರ್ಷಗಳ ಇತ್ತೀಚೆಗೆ ಪ್ರಸುತ್ತ ದೇಗುಲದ ಹತ್ತಿರದಲ್ಲಿರುವವರು ದೇಗುಲದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಹೇಳುತ್ತಾರೆ.