Angadi Village In History Pages

ಹೊಯ್ಸಳರ ಮೂಲ ಸ್ಥಾನ ಅಂಗಡಿ. ಮೂಡಿಗೆರೆ ತಾಲ್ಲೂಕಿನಿಂದ 2 ಕಿ.ಮೀ ದೂರದಲ್ಲಿರುವ ಅಂಗಡಿ ಗ್ರಾಮವನ್ನು 11, 12ನೇ ಶತಮಾನದಲ್ಲಿ ಸೊಸೆಯೂರು ಎಂದು ಕರೆಯುತ್ತಿದ್ದರು. ಈ ಸೊಸೆಯೂರು ಹೊಯ್ಸಳರ ಮೂಲಸ್ಥಾನವಾಗಿತ್ತು. ಬುಕ್ಕರಾಯನ ಕಾಲದಲ್ಲಿ 1359 ರಲ್ಲಿ ಇದೇ ಹೆಸರಿತ್ತು. ಆದರೆ ಅಚ್ಯುತರಾಯನ ಕಾಲದಲ್ಲಿ 1539 ರ ಹೊತ್ತಿಗೆ ಅಂಗಡಿ ಎಂಬ ಹೆಸರು ಪ್ರಚಲಿತವಾಯಿತು. ಈ ಸ್ಥಳಕ್ಕೆ ವಿಷ್ಣುವರ್ಧನನ ಕಾಲದಲ್ಲಿ ಶಶಪುರ ಹಾಗೂ ಶಶಕಪುರ ಎಂಬ ನಾಮಾಂಕಿತವಿತ್ತು. ಇಲ್ಲಿ ಸಳನು ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದವನೆಂದು ಶಾಸನಗಳು ತಿಳಿಸುತ್ತಿದೆ. ಇಲ್ಲಿ ಐದು ವಿಗ್ರಹಗಳಿವೆ, ಅವುಗಳೆಂದರೆ ಬ್ರಾಹ್ಮಿಣಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಶ್ವರಿ, ಇಂದ್ರಾಣಿ ಮತ್ತು ಚಾಮುಂಡಿ ಸೇರಿ ಸಪ್ತ ಮಾತೃಕೆಗಳು. ಈ ಭಾಗದಲ್ಲಿ ವಸಂತ ಪರಮೇಶ್ವರ ಅಥವಾ ವೈಷ್ಣವೀ ದೇವಿಯ ಹಬ್ಬ ನಡೆಯುತ್ತದೆ. ಅನೇಕ ಜೈನ ಯತಿಗಳು ಇಲ್ಲಿದ್ದು ಬಸದಿಗಳನ್ನು ಕಟ್ಟಿಸಿರುವುದು ಶಾಸನಗಳಲ್ಲಿ ಕಂಡುಬಂದಿದೆ. ಚೈತ್ರ, ವೈಶಾಖ ಮಾಸದಲ್ಲಿ ಇಲ್ಲಿ ಸುಗ್ಗಿ ಹಬ್ಬವನ್ನು ವಿಜೃಂಭಣೆಯಿಂದ ನಡೆಯುತ್ತದೆ. ವಸಂತಮ್ಮ ಅಥವಾ ವಾಸಂತಿದೇವಿ ಇಲ್ಲಿಯ ಕುಲದೇವತೆಯಾಗಿದೆ.

classic ad
classic ad
flower ad
Friends ad
kiran ad
ms ad
malnad ad
mudigere ad
engine works
national ad
studio
bikes ad
aq ad
spice
works ad
work ad
deco ad
bikes
hotel ad
pipes ad
ads
bakery

Tags: ಎಂ.ಎಲ್ ಸುನೀಲ್ ಮೂಡಿಗೆರೆ ಮಲೆನಾಡ ಮಡಿಲಲ್ಲಿ ಮೂಡಿಗೆರೆ


Related Information