Sri Dandina Mariyamma Temple

 ಶ್ರೀ ದಂಡಿನ ಮಾರಿಯಮ್ಮ ದೇವಾಲಯ  :-

                         ಮಡಿಕೇರಿ ಕೋಟೆಯ ಬಲ ಭಾಗದಲ್ಲಿ ದೇಗುಲವೇ ಶ್ರೀ ದಂಡಿನ ಮಾರಿಯಮ್ಮ ದೇಗುಲ. ಇದಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸ. ಅಂದಿನ ಕೊಡಗಿನ ರಾಜನು ಪ್ರತಿಷ್ಠಾಪಿಸಿದ್ದ ಶಕ್ತಿ ದೇವತೆಗಳಲ್ಲಿ ಈ ದೇಗುಲವುಒಂದು. ರಾಜನು ದಂಡಿಗೆ (ಯುದ್ದಕ್ಕೆ) ಹೊರಡುವಾಗ ಈ ದೇವಿಯೊಡನೆ ಸಮಲೋಚಿಸಿ, ಆಕೆಯ ಆಶೀರ್ವಾದ ಪಡೆದುಕೊಂಡೇ ಹೊರಡುತ್ತಿದ್ದನು ಎಂಬ ಪ್ರತೀತಿ ಇದೆ. ಆದ್ದರಿಂದಲೇ ಈ ದೇವಿಗೆ ದಂಡಿನ ಮಾರಿಯಮ್ಮ ಎಂಬ ಹೆಸರು ಬಂದಿತ್ತೆನ್ನಲಾಗಿದೆ. ಪಾರ್ವತಿಯ ಸ್ವರೂಪವಾಗಿರುವ ದೇವಿಯ ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಮತ್ತು ಇನ್ನಿತರ ಶಸ್ತ್ರಾಸ್ತ್ರಗಳನ್ನು ಹಿಡಿದಿಕೊಂಡು ರಾರಾಜಿಸುತ್ತಿದ್ದಾಳೆ. ಪ್ರಸ್ತುತ ಗರ್ಭಗುಡಿಯಲ್ಲಿರುವ ವಿಗ್ರಹವಾಗಿದೆ.

                         ದೇಗುಲದ ಎದುರಿನಲ್ಲಿರುವ ಪವಿತ್ರ ಅರಳೀ ಮರವೂ ಪುರಾತನವಾದುದ್ದು. ಇತ್ತೀಚೆಗೆ ಇದಕ್ಕೆ ಅಶ್ವಥ ಉಪನಯನವನ್ನೂ ನೇರವೇರಿಸಲಾಗಿದೆ. ದೇಗುಲದ ಹಿಂಭಾಗದಲ್ಲು ನಾಗನ ವಿಗ್ರಹವಿದೆ. ಅನಾದಿ ಕಾಲದಿಂದಲೂ ನಾಗನ ಸಂಚಾರವಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

                         ಸುಮಾರು ನಾಲ್ಕು ವರ್ಷಗಳ ಕಾಲ 30 ಲಕ್ಷ ರೂ. ಗಳಿಗೂ ಹೆಚ್ಚಿನ ವೆಚ್ಚದಲ್ಲಿ ನವೀಕರಣಗೊಂಡಿರುವ ದೇಗುಲವು ನಗರದ ಸುಂದರ ದೇಗುಲಗಳಲ್ಲಿ ಒಂದೆನಿಸಿದೆ. ಮೊದಲ ನೋಟಕ್ಕೆ ಮನ ಸೆಳೆಯುವ ದೇವಸ್ಥಾನದ ಗೋಪುರದವು ತಿರುಪತಿಯ ಗೋಪುರ ಶೈಲಿಯನ್ನು ಹೊಂದಿದೆ. ಇದನ್ನು ಕೊಂಭಕೋಣಂನ ಶಿಲ್ಪಿಗಳು ನಿರ್ಮಿಸಿದ್ದಾರೆ. ಕಳಶ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಇನ್ನೂ ದೇಗುಲದ ಒಳ ಭಾಗವಂತೂ ವಿಶಿಷ್ಟ ರೀತಿಯಿಂದ ನಿರ್ಮಿಸಲ್ಪಟ್ಟಿದೆ. ಮಾರ್ಬಲ್ ಗಳ ಬಳಕೆ ಮಾಡಲಾಗಿದೆ. ಇಲ್ಲಿನ ವಿಶೇಷತೆ ಎಂದರೆ ‘ನವಶಕ್ತಿ’ ವಿಗ್ರಹಗಳ ಪ್ರತಿಷ್ಠಾಪನೆ, ನವಶಕ್ತಿ ಎಂದರೆ ದೇವಿಯ ವಿವಿಧ ರೂಪಗಳು. ನವಶಕ್ತಿ ವಿಗ್ರಹಗಳಿರುವ ಕೊಡಗಿನ ಏಕೈಕ ದೇಗುಲ ಇದಾಗಿದೆ. ಗರ್ಭಗುಡಿಯು ಕ್ರಿಯಾ ಶಕ್ತಿ, ಜ್ಞಾನಶಕ್ತಿ, ವಿದ್ಯಾಶಕ್ತಿ ಎಂಬ ತ್ರಿಶಕ್ತಿಗಳಿಂದ ಆವೃತವಾಗಿದೆ. ಆದ್ದರಿಂದ ಮಹಾಪೂಜೆ ವೇಳೆ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವಂತಿಲ್ಲ.

                         ದೇಗುಲದಲ್ಲಿ ನಿತ್ಯ ಪೂಜೆಗಳು ನೆರವೇರುತ್ತದೆ. ಪೂಜಾ ಕಾರ್ಯವನ್ನು ಗೌಳಿ (ಗೊಲ್ಲ ಅಥವಾ ಯಾದವ) ಜನಾಂಗದ ಅರ್ಚಕರೇ ಕಾಲಾಂತರದಿಂದ ನಡೆಸಿಕೊಂಡು ಬರುತ್ತಿದ್ದಾರೆ. ವಾರ್ಷಿಕವಾಗಿ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಅಕ್ಟೋಬರ್ 15 ರಂದು ಆಚರಿಸಲಾಗುವ ವಾರ್ಷಿಕೋತ್ಸವವೂ ಸಹ ಅದ್ದೂರಿಯಾಗಿ ನೆರವೇರುತ್ತದೆ. ನವರಾತ್ರಿ ಇಲ್ಲಿನ ಪ್ರಮುಖ ಉತ್ಸವ. 

                       ಈ ದೇಗುಲದಿಂದ ಹೊರಡುವ ಕರಗವು ನಗರ ಪ್ರದಕ್ಷಿಣೆಯನ್ನು ಮಾಡುತ್ತದೆ. ವಿಜಯ ದಶಮಿಯಂದು ಪೇಟೆ ಶ್ರೀ ರಾಮ ಮಂದಿರದ ಮಂಟಪಕ್ಕೆ ಪೂಜೆ ಸಲ್ಲಿಸಿದ ನಂತರ ಕರಗವು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುತ್ತದೆ. ದಸರಾ ನಂತರ ಕುಂಭ ಪೂಜೆ ಮತ್ತು ಶಾಂತಿ ಪೂಜೆಗಳು ನಡೆಯುತ್ತದೆ. ದೇಗುಲದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲಾಗಿತ್ತದೆ. ಇದರ ಜವಬ್ದಾರಿಯನ್ನು ಬಾಲಕ ಭಕ್ತ ಮಂಡಳಿಯು ವಹಿಸಿಕೊಳ್ಳುತ್ತದೆ. ಪ್ರಸ್ತುತ ವರ್ಷ ದಸರಾ ಉತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13