Sri Chinnathappa Temple

“ಶ್ರೀ ಶ್ರೀ ಚಿನ್ನತಪ್ಪ ಶ್ರೀ ಶ್ರೀ ಕೃಷ್ಣ ಪರಮಾತ್ಮನ ಮಹಿಮಾ ವಿಶೇಷತೆ !”(ಪವಾಡ ಕಥೆ) ಅಯ್ಯಂಗೇರಿ - ಭಾಗಮಂಡಲ 

                           ದೇವಲೋಕದಲ್ಲಿ ದೇವಾನ್ದೇವತೆಗಳು ತಳಗೊಂಡಿದ್ದರೂ ಹದಿನಾಲ್ಕು ಲೋಕಗಳನ್ನು ಬ್ರಹ್ಮ ವಿಷ್ಣು, ಶ್ರೀ ಮನ್ನಾರಾಯಣ ಮತ್ತು ಪರ್ಮೇಶ್ವರರೂ ಸೃಷ್ಟಿ, ಸ್ಥಿತಿ ಮತ್ತು ಲಯ ಇತ್ಯಾದಿ ವ್ಯವಹಾರಗಳನ್ನು ಸಾಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇವರ ವ್ಯವಹಾರ ದೇವಲೋಕದಲ್ಲಿದ್ದರೂ ಭೂಲೋಕದಲ್ಲಿ ಕೊಡವ ಮಾಲೆ ಪೊಮ್ಮಾಲೆ ಕೊಡಗಿನಲ್ಲಿ ಒಂದಲ್ಲ ಒಂದರಂತೆ ವ್ಯವಹಾರಗಳಲ್ಲಿ ದೇವಾನ್ದೇವತೆಗಳು ಬಂದು ನೆಲೆಗೊಂಡು ಒಂದೊಂದು ನೆಪ ಒಡ್ಡಿ ಅವತಾರಿ ಗಳಾಗಿಯೂ, ನಿಜ ಸ್ವರೂಪ ದಲ್ಲಿಯೂ ನೆಲೆಗುಂಡು ವಿವಿಧ ರೀತಿಯಲ್ಲಿ ಆಧಾರ ಕಥೆ ಸೃಷ್ಟಿಸಿ ಎಪ್ಪತ್ನಾಲ್ಕು ಕೋಟಿ ಜೀವರಾಶಿಗಳನ್ದನು ಸೃಷ್ಟಿಸಿ, ನರಮಾನವರೊಡಗೂಡಿ ವಿವಿಧ ಕಷ್ಟ ಕಾರ್ಪಣ್ಯ, ದುಃಖ ದುಮ್ಮಾನಗಳನ್ನು ಪರಿಹರಿಸಿ ಮಾನವನ ಬಾಳಿನೆದರು ವಿವಿಧ ರೀತಿಯ ಪವಾಡ ಕಥೆ ಉಂಟು ಮಾಡಿ ಅವರನ್ನು ತಿದ್ದಿ ತೀಡಿ, ಹುಟ್ಟು - ಸಾವು ಇವುಗಳ ಮದ್ಯದಲ್ಲಿ ಕಂಡು ಬಂದ ದುಷ್ಟರನ್ನು ಸಂಹರಿಸಿ ಶಿಷ್ಯರನ್ನು ಸಾಕಿ ಸಲುಹಿ ದುಷ್ಟರನ್ನು ನರಕಕ್ಕೂ, ಶಿಷ್ಯರನ್ನು ಸ್ವರ್ಗಕ್ಕೂ ಅಟ್ಟಿದ ಅದೆಷ್ಟೋ ಪವಾಡ ಕಥೆ ಆಧಾರ ಸಹಿತ ಪ್ರತ್ಯಕ್ಷ ದರ್ಶನಗಳಿವೆ. 

                            ಯುಗಧರ್ಮಗಳಂತೆಯೇ ಕೃತತ್ರೇತಾ ದ್ವಾಪರ ಕಲಿಯುಗಗಳಲ್ಲಿಯೂ ಶ್ರೀ ಮನ್ನಾರಾಯಣನು ಇಡೀ ಭಾರತ ದೇಶದಲ್ಲೇ ಪವಾಡ ಕಥೆಗಳನ್ನೇ ಸೃಷ್ಟಿಸಿ ಮಾನವರಿಗೆ ಆಧಾರ ರೂಪದಲ್ಲಿ ಕಥೆ ಪುರಾಣಗಳ ಪಳಿಯುಳಿಕೆಯೂ ಇಂದೂ ಇಡೀ ಭಾತದಲ್ಲೇ ಮೂಲೆ ಮೂಲೆಗಳಲ್ಲಿ ದೇವರ ಮಹಿಮೆಗಳ ಕಥೆ ಗೋಚರಿಸುತ್ತಲೂ ಇವೆಯೆಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ ದೇವಾನ್ದೇವತೆಗಳ ಅತ್ತ್ಯಾಶ್ವರ್ಯಕರವಾದ ಪವಾಡ ಕಥೆಗಳು ಕೊಡಗಿನಲ್ಲಿ ಪ್ರದರ್ಶಿಸಲ್ಪಟ್ಟು, ಕೊಡಗು ಮಹಾ ಪುಣ್ಯ ಭೂಮಿಯೆನ್ನುವುದರಲ್ಲಿ ಎರಡಿಲ್ಲ ! ಈ ಹಿಂದೆ ಕೊಡವರ ಆದಿ ದೇವತೆಯೆನಿಸಿದ ಶ್ರೀ ಮೂಲ ಕಾವೇರಿ ಮಹಾಮಾತೆ ಏಳು ಕೋಟಿ ತೀರ್ಥ ಸಹಿತ ಪಾಪನಾಶಿನಿ ಲೋಕಪಾವನೆ ಹೆಸರು ಸಹಿತ ಹರಿದು ಹೊಗುತ್ತಾ ಲೋಕೋಪಕಾರಿಯಾಲಿ ಸಮುದ್ರಕ್ಕೆ ಸೇರುವುದು ಮಕಾಶ್ರೇಷ್ಟವಾದ ಪುಣ್ಯ ಕಥೆಯಾಗಿದೆ. ಇವಳ ಮಹಿಮೆಯ ಫಲವಾಗಿಯೇ ದೇವಲೋಕದಿಂದ ಕೊಡವ ಮಾಲೆ ಪೊಮ್ಮಾಲೆ ಕೊಡಗಿಗೆ ದೇವಾನ್ದೇವತೆಗಳು ಭೂಲೋಕಕ್ಕಿಳಿದು ಉಂಟಾಯಿತೆಂದರೆ ತಪ್ಪಾಗಲಾರದು. ತ್ರೇತಾಯುಗದಲ್ಲಿ ಶ್ರೀಮನ್ನಾರಾಯಣವತಾರಿ ಶೃ ರಾಮಚಂದ್ರನು ಮಾನವ ರೂಪ ಪ್ರದರ್ಶಿಸಿ ಭಾಗಮಂಡಲದ ಸಂಗಮದಲ್ಲಿ ಅಗಸ್ತ್ಯ ಮಹಿರ್ಷಿಗೂ, ಶ್ರೀ ಮೂಲಕಾವೇರಿ ಮಹಾತಾಯಿಗೂ ವಾಗ್ವಿವಾದ ಉಂಟಾದ ವೇಳೆ ನ್ಯಾಯ ತೀರ್ಮಾನ ಮಾಡಿದ ನಿದರ್ಶನವೂ ಇದೆ. ಭರತ ಖಂಡದಲ್ಲೇ ಸತ್ಯ ಕಥೆಯೊಂದಿಗೆ ದುಷ್ಟ ದುರುಳ ಹತ್ತುತಲೆ ದುಷ್ಟ ರಾವಣ ರಾಕ್ಷಸವನ್ನು ಮತ್ತಿತರ ದುಷ್ಟ ರಾಕ್ಷಸರನ್ನೂ ಸಂಹರಿಸಿ ಶಿಷ್ಟರನ್ನು ರಕ್ಷಿಸಿದ ಆಧಾರ ಕಥೆ ಪ್ರತ್ಯಕ್ಷ ದರ್ಶನವಾಗಿದೆ. 

                             ದ್ವಾಪರ ಯುಗದಲ್ಲಿ ಶ್ರೀ ಮನ್ನಾರಾಯಣವತಾರಿ ಶ್ರೀ ಕೃಷ್ಣ ಪರಮಾತ್ದಮನೂ ಕೂಡ ಭರತ ಖಂಡ ಹಾಗೂ ಕೊಡಗಿನಲ್ಲೇ ಹಲವಾರು ಪವಾಡ ಕಥೆಗಳನ್ನು ಸೃಷ್ಟಿಸಿ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಿದ ಬೇರೆ ಬೇರೆ ಕಥೆಗಳ ಆದಾರ, ಸ್ಥಳ ಮಹಿಮೆ ಇದ್ದೇ ಇದೆ. ಒಂದಲ್ಲ ಒಂದರಂತೆ ಊರುನಾಡುಗಳಲ್ಲಿ ಶ್ರೀ ಕೃಷ್ಣ ಪರಮಾತ್ಮನು ಪಾದಸ್ಪರ್ಶ ಮಾಡಿದ ಪಳಿಯುಳಿಕೆಯೂ ಇಂದೂ ಕಥಾ ರೂಪದಲ್ಲಿ, ದೇವಾಲಯಗಳಾಗಿ ಕಂಡುಬರುತ್ತಿವೆ. ನರಮನುಷ್ಯರೂ ಪೂಜಿಸುತ್ತಲೂ ಇದ್ದಾರೆ. ಅಲ್ಲದೆ ಕೊಡಗಿನಲ್ಲಿ ಅಂದಿನಿಂದ ಇಂದಿನವರೆಗೂ ತಪಸ್ವಿಗಳೂ, ಸನ್ಯಾಸಿಗಳೂ ಗುಹೆಗಳಲ್ಲೂ, ಮಠಗಳಲ್ಲೂ ತಪಸ್ಸು ಮಾಡುತ್ತಲೂ, ಧ್ಯಾನ ಮಾಡುತ್ತಲೂ ಮಾನವ ಕೋಟಿ ಉದ್ದಾರರ್ಥ, ಈ ಮಣ್ಣು ಪಾವನವನ್ದನಾಗಿಸಲೂ, ಪ್ರತ್ಯಕ್ಷ ಪರೋಕ್ಷ ಪವಾಡ ಕಥೆಗಳಿವೆ. ಈ ಮಾದರಿಯ ಪವಾಡ ಕಥೆಗಳುದರಗಳಿಂದ ಕೊಡಗು ಒಂದು ತಪೋ ಭೂಮಿ ಎಂದೆನಿಸಿದೆ. ದೇವಲೋಕ ಬಿಟ್ಟನಂತರ ಈಕೊಡಗು ಅದೊಂದು ಮಹಾಮಹಾ ಪವಿತ್ರ ನೆಲೆ ಎನ್ನುವುದರಲ್ಲಿ ಅತಿಶಯೋಕ್ತಿಯಾಗಲಾರದು. ಇಲ್ಲಿನ ಪಾವಿತ್ರತೆಗಳನ್ನರಿತು ಪರರಾಷ್ಟ್ರಗಳಿಂದಲೂ ಪ್ರೇಕ್ಷಕರು ಕೊಟಗಿಗೆ ಆಗಾಗ ಆಗಮಿಸಿ ಇಲ್ಲಿ ಪಾವಿತ್ರತೆಯನ್ನರಿತು ದಿಗ್ಭ್ರಮೆ ಪಟ್ಟು ಹಿಂದಿರುಗುವರು. 

                             ಇದಕ್ಕೊತ್ತಾಗಿ ಕೊಡವ ಮಾಲೆ ಪೊಮ್ಮಾಲೆ ಕೊಡಗಿನ ಮಡಿಕೇರಿ ತಾಲೂಕು ಭಾಗಮಂಡಲದ ಅಯ್ಯಂಗೇರಿ ಎಂದೆನ್ನುವ ಗ್ರಾಮದಲ್ಲಿ ಅಂದು ಶ್ರೀ ಕೃಷ್ಣ ಪರಮಾತ್ಮನು ಪ್ರತ್ಯಕ್ಷ ದರ್ಶನವಿತ್ತು ಶ್ರೀ ಚಿನ್ನತಪ್ಪನೆನ್ನುವ ಹೆಸರಿರಿಸಿ ನಡೆಸಿದಸ ಪವಾಡ ಕಥೆಯೊಂದನ್ನು ನೋಡಿಯೂ, ಕೇಳಿಯೂ ಪರಮಾತ್ಮನ ಮಹಿಮೆಯನ್ನು ನಾವು ತಿಳಿದು ನರಮಾನವರು ಭಕ್ತಿಯನ್ನು ಬೆಳೆಸಿ ಅವನನ್ನು ಪೂಜಿಸಿ ಅವನ ಪ್ರೀತಿ ಮತ್ತು ದಯೆಗೆಡ ಪಾತ್ರರಾಗಿ ನಮ್ಮ ಕೀಳೆರಿಮೆಯನ್ನು ಬಿಸುಟು ಒಳ್ಳೆತನ ಬೆಳೆಸಿ ಮಾನವೀಯತೆಯೊಂದಿಗೆ ಪಾವನವಾಗಿರಿಸಿ ತಾರುಣ್ಯ, ಬಾಲ್ಯ ಯೌವ್ದವನ ಮುಪ್ಪು ಮುಗಿಸಿ ಅವನ ದಯೆ ಪಡೆದು ಅವನ ಮಡಲಿಗೇರಿ ಮುಕ್ತಿಗೆ ತಲುಪಬೇಕಾದುಉ ನಮ್ಮ ಮುಖ್ಯ ಕರ್ತವ್ಯವಾಗಿದೆ ಎಂದು ನಾವೆಲ್ಲ ದೃಢೀಕರಿಸಬೇಕಾಗಿದೆ. ಶ್ರೀ ಕೃಷ್ಣ ಪರಮಾತ್ಮನು ಶ್ರೀ ಚಿನ್ನತಪ್ಪ ದೇವನಲ್ಲಿ ಕಂಡು ಬರುವ ಮಹಿಮಾಪೂರ್ವಕ ಪವಾಡದ ವಿಶೇಷತೆ ಎಂದರೆ ಅಂದೂ ಅವನು ಗೋಪಿಕಾಸ್ತ್ರೀಯರ ಜನಾಂಗದಲ್ಲಿ ಹುಟ್ಟಿ ಬೆಳೆದಿದ್ದು ಕಥೆ ಪುರಾಣ ಉಂಟಾಗಿದ್ದೂ ಇದೀಗ ಕಲಿಯುಗದಲ್ಲೂ ಭಾಗಮಂಡಲದ ಅಯ್ಯಂಗೇರಿ ಗ್ರಾಮದ ಗೊಲ್ಲ ಜನಾಂಗವೇ ಅವನನ್ನು ಪೂಜಿಸುತ್ತಾ ಭಕ್ತಿ ಬೆಳೆಯಲು ಕಾರಣ ಉಂಟಾದ ವಿಶೇಷತೆಯನ್ನೂ, ಮಹಿಮೆಯನ್ನೂ, ಆದಿಶೇಷನೆ ವಿವರಿಸಲು ಶಕ್ತನಲ್ಲದೆ ನಾವು ನರ ಮನುಷ್ಯರು ಆತನ ಮಹಿಮೆಯನ್ನು ವಿವರಿಸಲು ಅಸಾಧ್ಯವೆನ್ನುವುದು ತಾತ್ಪರ್ಯ. 

                             ಏನೇನಿದ್ದರೂ ನಾವು ಮುಂದೆ ಶ್ರೀ ಚಿನ್ನತಪ್ಪ ದೇವರ ಪವಾಡ ಕಥೆಯನ್ನು ಅಯ್ಯಂಗೇರಿ ಗೊಲ್ಲ ಜನಾಂಗದವರನ್ನೂ, ಅಲ್ಲಿನ ಗ್ರಾಮಸ್ಥ ಹಿರಿಕಿರಿಯ ಅನುಭವಿಗಳು, ತಕ್ಕ ಮುಖ್ಯಸ್ಥರಿಂದ ಕೇಳಿ ನೋಡಿ ಅದಷ್ಟು ಮಟ್ಟಿಗೆಯನ್ನು ತಿಳಿದು ಸತ್ಯಾಂಶವನ್ನು ಸಣ್ಣ ಪುಸ್ತಕ ರೂಪದಲ್ಲಿ ಬರೆದು ಮುಂದಿನ ಪೀಳಿಗೆಗೆ ಆಧಾರವಾಗಿರುವ ನಿಟ್ಟಿನಲ್ಲಿ ಪ್ರಯತ್ನಿಸಿ ಮಾನವ ಬಾಳನ್ನು ಪಾವನವಾಗಿರಿಸಲು ಪಣ ತೊಡುವ ಎಂಬ ಅಂಬೋಣ ಈ ಬರಹಗಾರನಾದ ನನ್ನ ಗುರಿ !.

                             ಶ್ರೀ ಚಿನ್ನತಪ್ಪ ಪರಮಾತ್ಮನ ಇಲ್ಲಿಗೆ ದೇಗುಲಕ್ಕೆ ನೆರೆಕೆರೆಉ, ಪರ ಊರಿನ ಜನರೂ ಜಾತಿ ಭೇದವಿಲ್ಲದೆ ಅವರವರ ಕಷ್ಟ ಕಾರ್ಪಾಣ್ಯಗಳಿಗೆ ಹಲವು ಬಗೆಯ ಹರಕೆ ಹೊತ್ತು ಪೂಜಿಸುತ್ತಾ ಭಕ್ತಿಯಿಂದ ಆಚರಣೆಗಳನ್ನು ಆಚರಿಸುತ್ತಾ ತಕ್ಕ ಫಲ ಸಹಿತ ಕೃತಾರ್ಥರಾಗಿ ಸುಖದ ಸೊಪ್ಪತ್ತಿನಲ್ಲಿ ಮೆರೆಯುತ್ತಿರುವ ಆಧಾರ ಕಥೆಗಳಿವೆ.

                            ಒಮ್ಮೆ ದೇವಲೋಕದಲ್ಲಿ ಶ್ರೀ ಮನ್ನಾರಾಯಣ ಸ್ವಾಮಿ ಏಳು ಮಹಡಿ ಅಂತಸ್ತಿನಲ್ಲಿ ದೇವತೆಉರ ಜೊತೆ ಮಾತುಕತೆಗೆ ಪ್ರಾರಂಭಿಸಿದಲ್ಲಿ ಅತ್ತಿಂದಿತ್ತ ಚರ್ಚೆ ಸವಾಲು ಉಂಟಾಗಿ ಹೀಗೆ ನಾವು ಹಳೆಯ ಮಾದರಿಯಲ್ಲೇ ಕಾಲಹರಣ ಮಾಡುತ್ತಿದ್ದರೆ ಕೆಲಸ ನಡೆಯಲಾರದೆಂತಲೂ, ಪ್ರತಿದಿವಸ ಶ್ರೀ ಪೂಜೆ, ಮಹಾಪೂಜೆ ನಡೆಸುತ್ತಾ ಮುಂದುವರೆದರೆ ಮಾತ್ರ ದೇವಲೋಕ ಉದ್ಧಾರಾಗುವುದೆಂದು ತೀರ್ಮಾನಕ್ಕೆ ಬಂದು. ಶ್ರೀಮನ್ನಾರಾಯಣನು ನಿತ್ಯ ಪೂಜೆಗಾಗಿ ಬೆಳ್ಳಗಿನ ಆನೆಯ ಬೆನ್ನಮೇಲೆ ಬಿಳ್ಳಿ ಚಿಂಬೊಂದನ್ನು ಕೈಯಲ್ಲಿ ಹಿಡಿದು ಸ್ನಾನಕ್ಕೆ ಹೋಗುವಾಗ ಶ್ರೀಕೃಷ್ಣ ದೇವರೂ ಜೊತೆಗೂಡಿ ಹೋಗುವಂತೆ ಕರೆಕೊಟ್ಟಾಗ ಆ ಹೊತ್ತಿಗೆ ಶ್ರೀಕೃಷ್ಣ ಜೊತೆ ಸೇರದೆ ಗೋಪಿಕಾಸ್ತ್ರೀಯರೊಡನೆ ಆಟವಾಡುತ್ತಾ ಹೊತ್ತು ಕಳೆಯುತ್ತಾ ಶ್ರೀ ಮನ್ನಾರಾಯಣ ಹೊರಡುವ ಹೊತ್ತಿಗೆ ತಟ್ಟನೆ ಕಾಲ ಮೀರಿ ಬಂದು ಜೊತೆ ಸೇರುವ ವ್ಯವಹಾರವಾಗಿತ್ತು. 

                            ಹೀಗೆ ನಡೆಯುತ್ತಿದ್ದು ಒಂದು ದಿವಸ ಶ್ರೀ ಮನ್ನಾರಾಯಣನು ಸ್ನಾನ ಮಾಡಿ ಬಂದುದಾಯಿತು. ನಾರಾಯಣ ಸ್ವಾಮಿಯು ಪೂಜೆಗೆ ಕೂರುವ ವೇಳೆಗೂ ಶ್ರೀಕೃಷ್ಣ ಬಂದಿರಲಿಲ್ಲ. ಪೂಜೆಗೆ ಕೂರುವ ವೇಳೆಗೂ ಬರದಿದ್ದಾಗ ಶ್ರೀಮನ್ನಾರಾಯಣ ದೇವರಿಗೆ ಬೆಂಕಿ ಬೆಂಕಿಯಂತಹ ಸಿಟ್ಟು ಬಂದಿತು. ಶ್ರೀ ಕೃಷ್ಣನನ್ನು ಹೀಗೆ ಬಿಟ್ಟರಾಗದೆಂದೂ ಈತನನ್ನು ಭೂಲೋಕಕ್ಕೆ ಇಳಿಸಿ ಅಲ್ಲಿ ಮಕ್ಕಳ ಸಂತಾನವಿಲ್ಲದವರಿಗೆ ಸಂತಾನ ಫಲ ಕೊಡಿಸುವಂತೆಯೂ, ಕಣ್ಣಿಲ್ಲದವರಿಗೆ ಕೊಡಿಸುವಂತೆಯೂ ಅಲ್ಲಿನ ನರ ಮನುಷ್ಯರಿಗೆ ಒದಗಿ ಬರುವ ಕಷ್ಟ ನಷ್ಟ, ದುಃಖ ಪರಿಹಾರ ಮಾಡಿಕೊಂಡು ಇರಲೆಂದು ಆದಿನಾರಾಯಣ ತೀರ್ಮಾನ ಮಾಡಿ ಪೂಜೆಗೆ ಕುಳಿತನು. ಪೂಜೆ ಮುಗಿಯುತ್ತಾ ಮಂಗಳಾರತಿ ನಡೆಯುವ ವೇಳೆಯಲ್ಲಿ ತನ್ನ ತಪ್ಪನ್ನರಿತ ಶ್ರೀ ಕೃಷ್ಣನು ಓಡಿ ಹಾರುತ್ತಾ ಬಂದು ಮಂಗಳಾರತಿ ಮಾಡುತ್ತಿದ್ದ ಶ್ರೀ ಮನ್ನಾರಾಯಣ ಸ್ವಾಮಿಗಳ ಪಾದಗಳಗೆ ದೀರ್ಘ ದಂಡ ನಮಸ್ಕಾರ ಮಾಡುತ್ತಾ ತನ್ನ ತಪ್ಪನ್ನು ಮನ್ನಿಸಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಈ ಮಾತು ಕೇಳಿದ ಶ್ರೀಮನ್ನಾರಾಯಣನು ಹಾಕಿದ ಶಾಪವನ್ನು ತೆಗೆಯಲಸಾಧ್ಯವಾಗಿದೆ. ಇದಕ್ಕೆ ಮರುಶಾಪವೆಂದರೆ ಭೂಲೋಕದಲ್ಲಿ ನಿನ್ನ ಗೊಲ್ಲ ಜನಾಣಗವನ್ನು ಸೇರಿಕೊಂಡು ಸತ್ಯರ್ಮಗೈಯ್ದು, ಅವರಿಂದ ಪೂಜೆ, ಗಂಧಪುಪ್ಪ ಪಡೆಯುವಂತವನಾಗೆಂದು ಮರುಶಾಪ ಕೊಟ್ಟನು. ಈ ಅವಧಿಯಲ್ಲಿ ಶ್ರೀಕೃಷ್ಣ ಪರಮಾತ್ಮನು ಶ್ರೀಮನ್ನಾರಾಯಣನ ಕುರಿತು ತಾನು ಗೈಯ್ದ ಅಪರಾದವನ್ನು ಕ್ಷಮೆ ಗೈಯ್ದು ತನ್ನನ್ನು ರಕ್ಷಿಸಿ ಉದ್ದಾರ ಮಾಡಬೇಕೆಂದೂ, ಶಿಕ್ಷೆ ಕೊಡಬಾರದಾಗಿಯೂ ಕ್ಷಮೆ ಕೇಳಿಕೊಳ್ಳಲಾಯಿತು. ಈ ಮಾತನ್ನಾಲಿಸಿದ ಶ್ರೀ ಮನ್ನಾರಾಯಣನು ಶ್ರೀಕೃಷ್ಣನನ್ನು ಕುರಿತು ತನಗೆ ಯಾವುದಾದರೊಂದು ರೂಪದಲ್ಲಿ ಆಪತ್ತು ಬಂದೊದಗಿದಾಗ ನನ್ನನ್ನು ಧ್ಯಾನಿಸಿದಾಗ ನಿನಗೆ ನಾನು ಸಹಾಯ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟನು. 

                            ಈ ಮಾತಿಗೆ ಸಮಾಧಾನಪಟ್ಟುಕೊಂಡು ಶ್ರೀಕೃಷ್ಣ ಪರಮಾತ್ಮನು ತನ್ನ ಜೊತೆಯಲ್ಲಿ ಬೈಕೋಲತಪ್ಪ ಅಯ್ಯಪ್ಪ ಸಾರ್ಥಾಉ ಸಹಿತ ಚಿನ್ನದ ನೂಲಿನಲ್ಲಿ ಭಾಗಮಂಡಲದ ಅಯ್ಯಂಗೇರಿ ಗ್ರಾಮದ ಕರ್ತಕಾಡು ಎಂಬಲ್ಲಿ ಬಂದಿಳಿದು ಸ್ಥಾನಗೊಂಡರು. ಈ ನೆಲೆಯಲ್ಲಿ ಕೂತ ಶ್ರೀಕೃಷ್ಣ ಪರಮಾತ್ಮನು ಕೂತಲ್ಲೇ ಆಗಿದ್ದು, ಪೂಜೆ ಪುನಸ್ಕಾರವಿಲ್ಲದೆ ಬೆರಗುಗೊಂಡುದಾಯಿತು. ಮೂರು ವರ್ಷಗಳವರೆಗೆ ಯೋಚನಾಮಗ್ನನಾಗಿಯೇ ಕೂತಲ್ಲಿ ಅವನ ದೇಹಕ್ಕೆ ಹುತ್ತ ಆವರಿಸಿ ಕತ್ತಲೆ ಕವಿಯಿತು. ಈ ರೂಪದಲ್ಲಿ ಆವರಿಸಿದ ಕಷ್ಟ ಕಾರ್ಪಣ್ಯಗಳಿಂದಾಗಿ ಶ್ರೀಕೃಷ್ಣ ಪರಮಾತ್ಮನು ದುಃಖ ಪಟ್ಟುಕೊಂಡು ಶ್ರೀಮನ್ನಾರಾಯಣ ಸ್ವಾಮಿಯನ್ನು ತನ್ನ ಮನದಲ್ಲೇ ಧ್ಯಾನಿಸುತ್ತಾ ಮೊರೆಗೊಂಡನು. ಅತಿ ಭಕ್ತಿಯಿಂದ ನೊಂದುಕೊಂಡು ಸ್ತುತಿಸುತ್ತಾ ಪ್ರಾರ್ಥಿಸಿದ. 

                            ದೇವಲೋದಲ್ಲಿರುವ ಶ್ರೀಮನ್ನಾರಾಯಣ ಸ್ವಾಮಿಗೆ ಶ್ರೀ ಕೃಷ್ಣ ಪರಮಾತ್ಮನ ಭಕ್ತಿ ಸಹಿತ ಅರ್ಪಣೆಯಾಯಿತು. ಆಹೊತ್ತಿಗೆ ದೇವಲೋಕದಲ್ಲಿ ಅತಿ ಭಯಾನಕ ಸಿಡಿಲು ಬಡಿಯುತ್ತಾ ಭೂಲೋಕದಲ್ಲಿ ಆಲಿಕಲ್ಲು ಸಹಿತ ಭಯಾನಕ ಮಳೆ ಸುರಿಯತಲು ಪ್ರಾರಂಭಿಸಿತು. ಏಳು ಹಗಲು, ಏಳು ರಾತ್ರಿ ಎಡೆಬಿಡದೆ ಮಳೆ ಹೊಡೆಯಿತು. ಏಳು ರಾತ್ರಿ ಏಳು ಹಗಲು ಹೊಡೆದ ಮಳೆಯ ಪ್ರಭಾವದಿಂದ ಶ್ರೀಕೃಷ್ಣ ಪರಮಾತ್ಮನ ಶರೀರಕ್ಕೆ ಆವರಿಸಿದ ಹುತ್ತ ಕರಗಿ ಮಣ್ಣಾಗಿ ಶುದ್ಧ ಪೂರ್ವ ಭಾಗಕ್ಕೆ ನದಿಯಾಗಿ “ಕ್ ಅ” ನದಿಗೆ ಸೇರಿಕೊಂಡಿತು. 

                             ಹುತ್ತ ಕರಗಿ ಹುತ್ತದಿಂದ ಬಿಡುಗಡೆಯಾದ ಶ್ರೀಕೃಷ್ಣ ಪರಮಾತ್ಮನು ನದಿ ಹರಿದ ದಾರಿಗಾಗಿಯೇ ನಡೆದು ಬಂದು ಪೇರೂರಿನ ಕೋಡಿಯಂಡ ಕುಟುಂಬದ ಮನೆಯ ಹತ್ತಿರ ನಿಂತು ನೋಡಿದ ಸಂದರ್ಭದಲ್ಲಿ ಅಲ್ಲಿ ಸ್ಥಾನಗೊಂಡರೆ ಆಗಬಹುದು ಎಂದು ಯೋಚಿಸಿ ನೋಡಿದಾಗ, ಅಲ್ಲಿ ಸ್ಥಾನಗೊಂಡರೆ ತನಗೆ ಪೂಜೆಗೆ ಅವಶ್ಯವಿರುವ ಮಾರಾಯ ವರ್ಗದವರು, ಬ್ರಾಹಣರು, ಗೋವೂಗಳಿಗೆ ಮೇಯಲು ಮೈದಾನ ಮೊದಲಾದವುಗಳ ಕೊರೆತೆಯಿರುವುದಾಗಿಯೂ ಯೋಚಿಸಿ ತನ್ನ ಜೊತೆ ಹೊರಟು ಬಂದ ದೇವತೆಗಳಾದ ಬೈಕೋಲಚ್ಚನಿಗೆ ಅಲ್ಲಿ ಸ್ಥಾನಕೊಟ್ಟು ನಿಲ್ಲಿಸಲಾಯಿತು. ಶ್ರೀ ಬೈಕೋಲಚ್ಚನಿಗೆ ಕೋಡಿಯಂಡ ಕುಟುಂಬಸ್ಥರಿದ್ದು ಬ್ರಾಹ್ಮಣರಿಂದ ಪೂಜೆ ಮಾಡಿಸುವರು. ಅಲ್ಲಿಂದೀಚೆಗೆ ಬೈಕೋಲಚ್ಚ ದೇವನಿಗೆ ವರ್ಷಂಪ್ರತಿ ಪೂಜೆ ಪುನಸ್ಕಾರ ಪಡೆಯುತ್ತಾ ಅಲ್ಲಿನ ಕುಂಟುಂಬಸ್ಥರಿಗೂ, ಸುತ್ತ ಮುತ್ತಲಿನ ಜನರಿಗೂ, ದನಕರುಗಳಿಗೂ ಸುಖ, ಸೌಖ್ಯ, ಸೌಭಾಗ್ಯ ಕೊಡುತ್ತಿರೆಂದೂ ಅದಕ್ಕೆ ತನ್ನ ದಯೆಯಿದೆಯೆನ್ನುತ್ತಾ, ಶ್ರೀಕೃಷ್ಣ ಪರಮಾತ್ಮ ಮುಂದಕ್ಕೆ ಸಾಗಿದನು. ಅಲ್ಲಿಂದ ಮುಂದಕ್ಕೆ ಶ್ರೀಕೃಷ್ಣ ಪರಮಾತ್ಮನು ಕಾಡಿನೊಳಗಾಗಿ ಸಾಗುತ್ತಾ ಹತ್ತಿರದಲ್ಲಿನ “ಉದ್ದ್ ಮಾಡಂಡ” ಕುಟುಂಬಸ್ಥರ ಮನೆಯ ಹತ್ತಿರ ನಿಂತು ಅಲ್ಲಿ ತನಗಿರುವ ಸ್ಥಾನ ದೊರೆಯುವುದೋ ಎಂದು ನೋಡಿನಲ್ಲಿ ಅಲ್ಲಿಯೂ ತನಗೆ ಬೇಕಾದ ಅನುಕೂಲ ಸ್ಥಳ ದೊರೆಯುವುದೋ ಎಂದು ನೋಡಿದಾಗ ಅಲ್ಲಿಯೂ ತನಗೆ ಬೇಕಾದ ಅನುಕೂಲ ಸಹಿತದ ಸ್ಥಳ, ಸ್ಥಾನ ನೆಲೆಗೊಳ್ಳಲಾಗದೆ ತನ್ನ ಜೊತೆಯಲ್ಲಿದ್ದ ಅಯ್ಯಪ್ಪ ಸಾರ್ಥಾವಿಗೆ ಅಲ್ಲಿ ಸ್ಥಾನ ನೆಲೆಕೊಟ್ಟು ತಾನು ಇಲ್ಲಿನ ಕುಟುಂಬಸ್ಥರಲ್ಲಿ ಪೂಜೆ ಸಹಿತ ಗಂಧ ಪ್ರಸಾದ ಪಡೆದು ಕುಟೊಂಬಸ್ಥರಿಗೆ ಒಳ್ಳೆದುಗೆಯಿದು ದನಕರು ಮಳೆ ಬೆಳೆ ಅಭಿವೃದ್ಧಿಗೊಂಡು ಸಾಕಿ ಸಲಹುತ್ತಿರಬೇಕೆಂದು ಹೇಳಿ, ಸಾಲದುದಕ್ಕೆ ನಾನೂ ನಿನ್ನೊಡನಿರುತ್ತೇನೆಂದು ಹೇಳಿದ ಶ್ರೀಕೃಷ್ಣ ರ ಅಲ್ಲಿಂದ ಮುಂದಕ್ಕೆ ದಾರಿ ಹಿಡಿದು ನದಿಯಲ್ಲೇ ಮೇಲ್ಮುಖವಾಗಿ ನಡೆದು ಸಾಗಿದನು. 

                              ಮುಂದೆ ಸಾಗಿದ ಶ್ರೀಕೃಷ್ಣನು ಪೊರಗಿರಿಗೆ ತಲುಪಿದನು. ಅಲ್ಲಿಗೆ ತಲುಪುವ ಹೊತ್ತಿಗೆ ಅಜ್ಜ ಬಿದ್ದ ಪಾರೆಯ ಬದಿಯಲ್ಲಿ ಅಯ್ಯಂಗೇರಿ ಐದು ಕುಟುಂಬಸ್ಥರ ಮಕ್ಕಳು ಅವರ ದನಕರುಗಳನ್ನು ಹೊಡೆದಟ್ಟಿ ಮೇಯುಸುತ್ತಿದ್ದರು. ಮನೆ ಹೆಸರು : ಬಿದ್ದಿಯಂಡ, ಚಿಙಂಡ, ನೆಲೆ ನಿಂತ ಸ್ಥಳಕ್ಕೆ ಅಯ್ಯಂಗೇರಿ ಎಂದು ನಾಮಕರಣ ಉಂಟಾಯುತು. ಈ ಐದು ಕುಟುಂಬಗಳ ಸಾಲಿನಲ್ಲಿ ಬಿದ್ದಿಯಂಡ ದೇವಮ್ಮ ಮತ್ತು ಉಳಿದ ಜೊತೆಗಾರ ಮಕ್ಕಳು ಬಂಡೆ ಕಲ್ಲಿನ ಮೇಲೆ ಗುಳಿಮಣೆ ಬಂಡೆಯಲ್ಲಿ ಆಟಬಾಡುತ್ತಿದ್ದರು. ಂನ್ನದುಂಗುರದ ಮೇಲೆ ವಜ್ರ ಕಿಡಿ ಹೊತ್ತು ವಂತೆ ಮಾಯಾಗಾರ ಶ್ರೀ ಚಿನ್ನತಪ್ಪ ಕೃಷ್ಣನಿಗೆ ಪೊರ ಬೆಟ್ಟದಲ್ಲಿ ಈ ದೃಶ್ಯ ಕಂಡನು. ಶ್ರೀಕೃಷ್ಣ ಪರಮಾತ್ಮನು ನಿಂತಲ್ಲಿಂದಲೇ ತನ್ನ ವೇಷ ಬದಲಾಯಿಸಿ ಸನ್ಯಾಸ ವೇಷ ಧರಿಸಿದನು. ಅಂಗೈಯಲ್ಲಿ ಚಿಪ್ಪಿ, ಹೆಗಲಲ್ಲಿ ಜೋಳಿಗೆ, ಕೈಯಲ್ಲಿ ಒಂದು ಬೆತ್ತದ ಕೋಲು ಹಿಡಿದುಕೊಂಡು ಬಂಡೆಕಲ್ಲಿನ ಮೇಲೆ ಗುಳಿಮಣೆ ಆಡುವ ಮಕ್ಕಳಲ್ಲಿಗೆ ಸಾಗಿದನು. ಆಟಗಾರ ಮಕ್ಕಳ ಹತ್ತಿರ ನಿಂತನು. ಮಕ್ಕಳು ಆಡುತ್ತಿರುವ ಆಟವನ್ನು ನೋಡುತ್ತಿದ್ದನು. ತನಗೂ ಈ ಆಟ ಆಡಬೇಕೆಂಬ ಮನಸ್ಸಾಯಿತು. ಆಟವಾಡುತ್ತಿರುವ ಮಕ್ಕಳನ್ನು ಎಚ್ಚರಿಸಿ ತನಗೂ ನಿಮ್ಮೊಡನೆ ಆಡಲು ಸ್ಥಾನ ಕೊಡುವಿರೋ ಎಂದು ಕೇಳಿದನು. ಜೋಗಿ ವೇಷಧಾರಿ ಶ್ರೀಕೃಷ್ಣ ಚಿನ್ನತಪ್ಪನ ಮಾತು ಕೇಳಿದ ಮಕ್ಕಳು ಭಿಕ್ಷುಕನಾದ ನಿನಗೇಕೆ ಬೇಕು ಆ ಆಟ? ನಿನ್ನ ದಾರಿ ನೋಡುತ್ತಾ ನೀನು ಹೋಗುತ್ತಿರು ಎಂದರು. ಈ ಮಾತು ಕೇಳಿದ ಜೊತೆಗಾರತಿ ದೇವಮ್ಮ, ಏನು ಮಕ್ಕಳೇ ನೀವು ಅವನಿಗೆ ಹಾಗೆ ಹೇಳಬಾರದಿತ್ತಲ್ಲ? ಅವನಿಗೂ ಆಟದಲ್ಲಿ ಒಂದು ಸ್ಥಾನ ಕೊಡಬಾರದೇ ಎಂದಳು. ಹೀಗೆ ಹೇಳತ್ತಾ ಮಕ್ಕಳು ವೇಷಧಾರಿ ಶ್ರೀಕೃಷ್ಣನೂ ಅವರ ಜೊತೆಯಲ್ಲಿ ಆಟವಾಡುವಂಖತೆ ಸೇರಿಸಿಕೊಂಡರು. 

                               ಅಂದಿನ ದಿನವಿಡೀ ಈ ವೇಷಧಾರಿ ಜೋಗಿ ಆಟದಲ್ಲಿ ಸೋಲೇ ಸೋಲೇ ಉಂಟಾಯಿತು. ಇಷ್ಟಾಗುವವರೆಗೆ ಜೋಗಿ ವೇಷಾಧಾರಿ ಚಿನ್ನತಪ್ಪ ಶ್ರೀಕೃಷ್ಣ ಪರಮಾತ್ಮನ ಮಹಿಮೆಯಿಂದ ರಾತ್ರಿಯಾಗಿ ಪರಿಣಮಿಸಿತು. ರಾತ್ರಿಯಾದ ಕಾರಣದಿಂದಾಗಿ ಆಟ ನಿಲ್ಲಿಸುವ ನಿರ್ಧಾರಕ್ಕೆ ಬಂದು ಅವರವರ ಮನೆಗೆ ಹೋಗುವ ಸಲುವಾಗಿ ಅವರವರ ದನಕರುಗಳನ್ನು ಹುಡುಕಾಡಿ ಜೊತೆ ಸೇರಿಸಿ ಎಲ್ಲವರ ದನಕರುಗಳ ಎಣಿಕೆಗೆ ಪ್ರಾರಂಭಿಸಿದಾಗ ದೇವಮ್ಮನ ದೊಡ್ಡದಾದ ಪಾಪಲಿ ಎತ್ತೊಂದು ಕಾಣದಿದು, ಅದನ್ನು ನಾನು ಹುಡುಕಿಕೊಂಡು ಬರುತ್ತೇನೆಂದೂ, ನೀವು ನಿಮ್ಮ ಎತ್ತುಗಳನ್ನು ಅಟ್ಟಿಕೊಂಡು ಹೋಗುತ್ತಿರಿ ಎಂದು ತನ್ನ ಜೊತೆಗಾರರಿಗೆ ಹೇಳುತ್ತಾ ತನ್ನ ಎತ್ತನ್ನು ಹುಡುಕುತ್ತಾ ತಡವರಿಸುತ್ತಾಳೆ. ಎತ್ತನ್ನು ಹುಡುಕಿಕೊಂಡು ದೇವಮ್ಮ ಅತ್ತಿಂದಿತ್ತ ತಡವರಿಸುವ ವೇಳೆ ಅನಿತು ದೂರದಲ್ಲೇ ತನ್ನ ಕಾಣದಾದ ಎತ್ತಿನ ಅಂಬಾ ಸ್ವರ, ಇತರ ಎತ್ತುಗಳೊಡನೆ ಕಾಳಗಕ್ಕೆ ಕರೆಯುವ ಧ್ವನಿ ಕೇಳಿಸುತ್ತಾ, ಎತ್ತಿನ ಸ್ವರ ಕೇಳಿದ ದಿಕ್ಕಿಗೆ ದೇವಮ್ಮನು ತಲುಪಿದ ವೇಳೆ ಅರಿತು ದೂರದಲ್ಲಿ ಎತ್ತು ಆಗತಾನೆ ಹಾಕಿದ ಬಿಸಿ ಆರದ ಸೆಗಣಿಮೂತ್ರ ಕಾಣಸಿಗುತ್ತಿದ್ದು, ಎತ್ತಿನ ಸುಳಿವೇ ಸಿಗದಾಯಿತು. ಮುಂದೆ ಮುಂದೆ ಸಾಗಿದಂತೆ ಕಾಡಿನ ಅಂಚಿನಲ್ಲಿ ಬಳ್ಳಿ ಹುಲ್ಲು ಮೇಯುತ್ತಿದ್ದ ಪಾಪಲಿ ಎತ್ತನ್ನು ಕಾಣಲು ಸಿಕ್ಕುವುದು. ತನ್ನ ಕೈಗೆ ಸಿಕ್ಕಿದ ಪಾಪಲಿ ಎತ್ತನ್ನು ಅಟ್ಟುಕೊಂಟು ಮನೆಗೆ ಹೊರಡುವ ವೇಳೆ ವೇಷಾಧಾರಿ ಜೋಗಿ ರೂಪದ ಶ್ರೀ ಚಿನ್ನತಪ್ಪ ಕೃಷ್ಣಪರಮಾತ್ಮ ನನ್ನು ತನ್ನೆದುರು ಪ್ರತ್ಯಕ್ಷ ದರ್ಶನವಾಗುವುದು. ಆ ಹೊತ್ತಿನಲ್ಲಿ ಚಿನ್ನತಪ್ಪ ಶ್ರೀಕೃಷ್ಣ ಪರಮಾತ್ಮನ ಸ್ವರೂಪವು ಸಾವಿರ ಸೂರ್ಯನ ಪ್ರಕಾಶಕ್ಕೆ ಮೀರಿ ಈಕೆಯ ಎದುರು ಪ್ರತ್ಯಕ್ಷಗೊಳ್ಳುತ್ತಾನೆ. 

                                  ಈ ಸ್ವರೂಪವನ್ನು ಪ್ರತ್ಯಕ್ಷ ಕಂಡ ದೇವಮ್ಮಳು ಪ್ರಜ್ಞೆ ತಪ್ಪಿ ನೆಲಕ್ಕುರುಳಿ ಬೀಳುತ್ತಾಳೆ. ಈ ಪರಿಸ್ಥಿತಿಯನ್ನು ಕಂಡ ಶ್ರೀ ಚಿನ್ನತಪ್ಪ ಕೃಷ್ಣ ಪರಮಾತ್ಮನು ನೆಲಕ್ಕೆ ಉರುಳಿ ಬಿದ್ದ ದೇವಮ್ಮಳ ಕೈ ಹಿಡಿದು ಎಬ್ಬಿಸಿ, ನಾನು ಯಾರೂ ಅಲ್ಲ, ನಾನೇ ಶ್ರೀಕೃಷ್ಣನಾಗಿದ್ದೇನೆ. ಚಿನ್ನತಪ್ಪ ನಿನ್ನ ಅಂದಚೆಂದ ಸೌಂದರ್ಯಕ್ಕೆ ಮಾರುಹೋಗಿ ಮನಸೂರೆಗೊಂಡು ನಿನ್ನ ಎದುರುಗೊಂಡವನಾಗಿದ್ದೇನೆ. ನಾನು ನನ್ನ ಸತಿಯಾಗಿ ನಿನ್ನನ್ನಿಟ್ಟುಕೊಳ್ಳಲು ತುಂಬು ಹೃದಯದಲ್ಲಿ ಬದ್ಧನಾಗಿದ್ದೇನೆಂದು ಹೇಳುತ್ತಾ, ಅವಳ ಎತ್ತನ್ನು ವಶಕ್ಕೆ ಒಪ್ಪಿಸಿ ಕೊಡುತ್ತಾನೆ. ಕಳುಹಿಸುವ ಹೊತ್ತಿನಲ್ಲಿ ಚಿನ್ನತಪ್ಪ ಶ್ರೀಕೃಷ್ಣ ಪರಮಾತ್ಮನು ದೇವಮ್ಮಳನ್ನು ಕುರಿತು ಈ ಮಾತಾಡುತ್ತಾನೆ. ನಿನ್ನ ಪಾಪಲಿ ಎತ್ತನ್ನು ಅಟ್ಟಿಕೊಂಡು ಹೋಗಿ ಕೊಟ್ಟಿಗೆಗೆ ಕೂಡಿಸು.ಇಲ್ಲಿ ನಡೆದ ಕಥೆಯನ್ನು ನಿನ್ನ ಮನೆಯವರಾರಿಗೂ ಹೇಳದೆ, ಮನೆಯಲ್ಲಿ ಉಳಿಯದೆಪಾಪ್ಲಿ ಎತ್ತನ್ನು ಕೂಡಿಸಿದ ಕೊಟ್ಟಿಗೆಯಲ್ಲಿ ಅದರ ಅಟ್ಟದಲ್ಲಿ ಒಂದು ಚಾಪೆ ಹಾಸಿ ಮಲಗಬೇಕೆಂತಲೂ, ಮಲಗುವ ಮೊದಲು ಸ್ವಲ್ಪ ಭತ್ತವನ್ನು ಪಾತ್ರೆಯಲ್ಲಿ ಹಾಕಿ ನೀರು ಬೆರೆಸಿಡಬೇಕೆಂತಲೂ, ಸೂರ್ಯೋದಯಕ್ಕೆ ನದಿಯಲ್ಲಿ ಸ್ನಾನ ಮಾಡಬೇಕೆಂತಲೂ, ಸ್ನಾನ ಕ್ಕಾಗಿ ನದಿಗೆ ಹೋಗುವ ಹೊತ್ತಿನಲ್ಲಿ ಈ ಭತ್ತವನ್ನು ಕೊಂಡುಹೋಗಿ ಸ್ನಾನ ಮುಗಿದ ಮೇಲೆ ಕಲ್ಲ ಮೇಲೆ ಕುಟ್ಟಿ ಅವಲಕ್ಕಿ ಮಾಡಿ ಅದನ್ನು ತಾನು ಫಲಾಹಾರ ಮಾಡಿ ಬಿಳಿ ಮಡಿ ಬಟ್ಟೆ ಉಟ್ಟು ಇಲ್ಲಿಲೆ ಬರಬೇಕೆಂತಲೂ, ಇಲ್ಲಿಗೆ ಬರುವ ವೇಳೆ ನದಿಯಿಂದ ಬರುವಾಗಲೇ ಒಂದು ಕೊಡಿ ಬಾಳೆಲೆಯಲ್ಲಿ ಮೂರು ಬೊಗಸೆ ಅಕ್ಕಿ ಯನ್ನು ದಾರಿಯಲ್ಲಿ ಬರುವಾಗ ಹತ್ತಿರದ ಅರಳಿ ಮರಕ್ಕೆ ಕಟ್ಟಿ ತೂಗಿ ಮಡಗಿರಬೇಕೆಂತಲೂ ಹೇಳಿದಂತೆ ಎಲ್ಲಾ ಕಾರ್ಯ ಮುಗಿಸಿ, ದೇವಮ್ಮಳು ಮಾರಣೆ ದಿವಸ ಬೆಳಿಗ್ಗೆ ಪಾಪ್ಲಿ ಮತ್ತು ಸಹಿತ ಬೇರೆ ದನಕರುಗಳನ್ನೂ ಹೊಡೆದಟ್ಟಿ ಜೊತೆಗಾರ ಮಕ್ಕಳೊಡನೆ ಬೆಟ್ಟದ ಕಡೆಗೆ ಹೊರಟು ಬರುತ್ತಾಳೆ.

                                  ತನ್ಮಧ್ಯೆ ಕಳೆದ ರಾತ್ರಿ ತನ್ನ ಹೆತ್ತ ತಾಯಿ, ತನ್ನ ಮಗಳು ಮನೆಗೆ ಬಾರದಿದ್ದುದರಿಂದ ಬಹಳ ಗಾಬರಿಯಿಂದ ಕಾದು ನೋಡಿ ಪ್ರಯೋಜನವಾಗದೆ ಬಹಳ ಬಹಳ ನೋವಿನಿಂದಿದ್ದವಳಿಗೆ ಸೂರ್ಯೋದಯಕ್ಕೆ ಕೊಟ್ಟಿಗೆಯಿಂದ ಎತ್ತುಗಳನ್ನು ಹೊರಗಟ್ಟುವ ಹೊತ್ತಿಗೆ ತನ್ನ ಮಹಳು ದೇವಮ್ಮಳನ್ನು ಹೆತ್ತ ತಾಯಿ ಎದುರು ಕಾಣುತ್ತಾಳೆ. ಜೊತೆಗೆ ದೇವಮ್ಮಳಿಗೂ ಕಟ್ಟಿಟ್ಟ ಮೊಸರನ್ನವನ್ನೂ ಕೈಗೆತ್ತಿಕೊಳ್ಳುವಂತೆ ಅಂಗಲಾಚಿ ಕೈಗೊಪ್ಪಿಸಿದಳು. ದೇವಮ್ಮಳಿಗೆ ತನ್ನ ಹೆತ್ತ ತಾಯಿಯ ಜೊತೆ ಎಲ್ಲಾ ವೃತ್ತಾಂತಗಳನ್ನು ಹೇಳಿಕೊಳ್ಳಬೇಕೆಂಬ ಆಸೆ ಉಂಟಾಗಿದ್ದರೂ, ಹಿಂದಿನ ದಿವಸ ಮಾಯಾಗಾರ ಶ್ರೀಕೃಷ್ಣ ಪರಮಾತ್ಮ ಚಿನ್ನತಪ್ಪನ ಸಲಹಾ ಮಾತಿನಂತೆ ಅನ್ನದ ಬುತ್ತಿಯನ್ನೂ ಕೇಳಿಕೊಳ್ಳದೆಯೂ, ತಿರುಗಿ ನೇಡದೆ ಅವಳ ದಿನಚರಿಯ ನೆಪದಲ್ಲಿ ಬಿರುಸಾಗಿ ದನಕರುಗಳನ್ನು ಅಟ್ಟಿಕೊಂಡು  ಬೆಟ್ಟಕ್ಕೆ ಸಾಗಿ ನಡೆದಳು. 

                                   ಇದನ್ನು ನೋಡಿದ ಹೆತ್ತ ತಾಯಿ ತನ್ನ ಹೊತ್ತ ಕರುಳಿನ ನೋವು ಸಹಿತ ಕಣ್ಣಿನಲ್ಲಿ ನೀರು ಬರು ಬದಲು ರಕ್ತ ಸುರಿಸುತ್ತಾ ಕರೆಯುತ್ತಾ, ಅನ್ನದ ಬುತ್ತಿಯನ್ನೂ ಕೈಯಲ್ಲಿ ತೂಗಿಕೊಂಡು ಮಗಳ ಹಿಂದೆಯೇ ನಡೆದು ಹೋಗುತ್ತಾಳೆ. ಅರ್ಧದಾರಿ ಸಾಗುವವರೆಗೂ ಹೆತ್ತ ತಾಯಿಯನ್ನು ತಿರುಗೆ ನೋಡದಿದ್ದ ಮಗಳು ದೇವಮ್ಮಳು ಹೆತ್ತ ತಾಯಿಯ ವ್ಯಾಮೋಹದಿಂದ ಅಡ್ಡದಾರಿಗೆ ತಿರುಗಿ ನಿಂತು ತಾಯಿಯ ಕಣ್ಣೀರನ್ನು ತನ್ನ ಸೀರೆಯ ಸೆರಗಿನಿಂದ ಒರೆಸಿ ನೀನು ದುಃಖಿಸಬೇಡವೆಂತಲೂ ಹೇಳುತ್ತಾ ತಕ್ಷಣ ದನಗಳನ್ನು ಹೊಡೆದಟ್ಟುತ್ತಾ ಹೋದ ದೇವಮ್ಮಳು ಹಿಂದಿರುಗಿ ಬರಲಿಲ್ಲ. 

                                  ಅಂದಿನ ದಿನವು ದೇವಮ್ಮನುಳೂ ಮತ್ತು ಜೊತೆಗಾರ ದನ ಕಾಯುವ ಮಕ್ಕಳೂ ಹೊಡೆದಟ್ಟಿದ ದನಗಳನ್ನು ಮೈದಾನದಲ್ಲಿ ಮೇಯಲು ಅಟ್ಟಿ, ಎಂದಿನಂತೆ ಗುಳಿಮಣೆ ಆಟ ಆಡಲು ಪ್ರಾರಂಭಿಸಿದರು. ಆ ದಿನ ಕೆಳಗಿನ ಬಂಡೆಕಲ್ಲಿನಲ್ಲಿ ಆಟವಾಡಲು ಪ್ರಾರಂಭಿಸಿದ್ದರು. ಆ ಹೊತ್ತಿಗೆ ಸರಿಯಾಗಿ ವೇಷಾಧರಿ ಜೋಗಿ ಚಿನ್ನತಪ್ಪ ಇವರೊಡನೆ ಆಟ ಆಡಲು ಸೇರಿಕೊಂಡನು. ತನ್ಮಧ್ಯೆ ಮಕ್ಕಳನ್ನು ಮೋಸ ಮಾಡುವಂತಾಗಲು ಅವತಾರ ಪುರುಷ ಜೋಗಿಯು ಮಕ್ಕಳನ್ನು ಬೇಗನೆ ಕಳುಹಿಸುವಂತಾಗಲು ದನಗಳನ್ನು ಕಾಣದಂತೆ ಮಾಡುವುದೂ, ಬೇಗ ಬೇಗ ಕತ್ತಲಾಗುವಂತೆ ಮಾಡುವುದೂ ಅವನ ಒಂದು ಮಾದರಿಯ ಅವತಾರವಾಗಿತ್ತು. ದನಗಳನ್ನು ಮಾಯಾ ಮೋಡಿಯಲ್ಲಿ ಕಾಣದಂತೆ ಮಾಡುತ್ತಿದ್ದನು ಅವತಾರಿ ಶ್ರೀಕೃಷ್ಣ !

                                 ಆ ಹೊತ್ತಿಗೆ ಶ್ರೀಕೃಷ್ಣ ಪರಮಾತ್ಮನ ಪವಾಡವನ್ನರಿಯದೆ ಏನೂ ತಿಳಿಯದೆ ಮಕ್ಕಳು ದನಗಳನ್ನು ಕಾಣದಿದ್ದು, ಹುಡುಕಿಯೂ ಸಿಗದೆ ನೊಂದುಕೊಂಡು ಕಾಣದಿರುವ ದನಗಳನ್ನು ಬೇಗನೆ ಸಿಕ್ಕಿದರೆ ದೇವರಿಗೆ ಹಣ್ಣುಕಾಯಿ ಮಾಡಿಕೊಳ್ಳುತ್ತೇವೆಂದು ಪ್ರಾರ್ಥಿಸಿ ಮಾವಿನ ಕಾಯಿಯ ಗೊರಟೆಯನ್ನು ಕೊಂಡು ತಂದು ದೇವರಿಗೆ ಹಣ್ಣುಕಾಯಿ ರೂಪದಲ್ಲಿ ಈಡುಕಾಯಿ ಮಾಡಿ ಒಪ್ಪಿಸುತ್ತಿದ್ದರು. ತತ್ಪರಿಣಾಮ ದಿಂದ ವೇಷಧಾರಿ ಜೋಗಿಯ ಮಹಿಮೆಯ ಫಲವಾಗಿ ಕಾಣದಿದ್ದ ದನಗಳು ಕಾನಲು ಸಿಗುತ್ತಿದ್ದವು. ಇದೇ ಆಧಾರವನ್ನು ನೆಲೆಗೊಳಿಸಿ ಈಗಲೂ ಹಿರಿಯವರ ಪದ್ದತಿ ಪ್ರಕಾರ ಚಟ್ಟೋಳಿದೇವರ ಹೆಸರಿನಲ್ಲಿ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಹೆಚ್ಚು ಕಮ್ಮಿ ಇನ್ನೂರು ಮೀಟರ್ ಅಂತರದಲ್ಲಿ ಭಕ್ತಿಯಿಂದ ಚಿಟ್ಟೋಳಿ ದೇವರಿಗೆಂದು ಹಣ್ಣುಕಾಯಿ ಮಾಡುವ ಪದ್ದತಿ ಇದೆ. ಅಲ್ಲಿಗೆ ನಂಬಿದವರಿಗೆ ಇಂಬು ಎನ್ನುವಂತೆ ದನಕರುಗಳಿಗೂ ಸಣ್ಣ ಮಕ್ಕಳಿಗೂ ಅಸೌಖ್ಯ ಕಂಡು ಬಂದಲ್ಲಿ ಈ ರೀತಿಯ ಹರಕೆ ಹೊತ್ತಲ್ಲಿ ಸೌಖ್ಯ ಸಿಗುವುದುಂಟು. ತದೋ ರೀತಿಯಲ್ಲಿ ಕರಾರುವಕ್ಕಾಗಿ ಪದ್ದತಿ ನಡೆಸುತ್ತಿರುವರು. ಈ ಮಾದರಿಯ ಕೀರ್ತಿಯನ್ನು ಯಾರಿಂದಲೂ ವರ್ಣಿಸಲಸಾದ್ಯ. ಸುಖ ಸಂಪತ್ತು ಒದಗಿ ಬರುತ್ತಿರುವುದೂ ಇದೆ. 

                                    ಕೆಳಗಿನ ಬಂಡೆಗಲ್ಲಿನಲ್ಲಿ ಪ್ರತಿಯೊಂದು ಆಟಗಳಲ್ಲಿಯೂ ವೇಷಧಾರಿ ಜೋಗಿಗೇ ಗೆಲವು ಮೇಲುಗೈ ಉಂಟಾಗುತ್ತಿತ್ತು. ಹಿಂದಿನ ದಿನಗಳವರೆಗೆ ದೇವಮ್ಮಳಿಗೇ ಗೆಲವು ಸಿಗುತ್ತಿತ್ತು. ಅಂದಿನ ದಿವಸ ಆಟದ ಜಯಲಕ್ಷ್ಮಿಯು ಜೋಗಿ  ವೇಷಧಾರಿ ಶ್ರೀ ಚಿನ್ನತಪ್ಪ ಕೃಷ್ಣ ಪರಮಾತ್ಮನ ಕಡಿಗೇ ಒಲಿಯುತ್ತಿದ್ದಳು. ಇಷ್ಟಕ್ಕೆಲ್ಲಾ ಕಾರಣ ವೇಷಧಾರಿ ಜೋಗಿಯ ಪವಾಡ ಮಹಿಮೆಯೇ ಕಾರಣವಾಗಿತ್ತು. 

                                 ಇದಕ್ಕೆ ಮೊದಲು ನಡೆದಂತೆಯೇ ಎಲ್ಲಾ ಮಕ್ಕಳು ಅವರವರ ದನಕರುಗಳನ್ನು ದೇವಮ್ಮಳ ದನಗಳ ಸಹಿತ, ಪಪಾಲಿ ಎತ್ತು ವಿನಃ ಹೊಡೆದಟ್ಟಿಕೊಂಡು ಅವರವರ ಮನೆ ಸೇರಿದರು. ಮನೆಗೆ ತಲುಪುವ ವೇಳೆ ಕತ್ತಲಾಗಿರುತ್ತಿದೆ. ಮಕ್ಕಳು ತಲುಪುವ ವೇಳೆ ಮಕ್ಕಳ ತಂದೆ ತಾಯಿಯರು ದೇವಮ್ಮಳು ಬರಲಿಲ್ಲವೂ ? ಎಲ್ಲಿ ಹೋದಳೆಂದು ಮಕ್ಕಳನ್ನು ಕೇಳಿದಾಗ ಅವರು ಪಾಪಲಿ ಎತ್ತು ಕಾಣೆದಾಗಿರುವುದಾಗಿಯು, ಅದನ್ನು ದೇವಮ್ಮನು ಹುಡುಕುತ್ತಿರುವುದಾಗಿಯೂ ಅವಳು ಸದ್ಯದಲ್ಲೇ ಬರುವುದಾಗಿಯೂ ಮಕ್ಕಳು ಅವರ ತಂದೆ ತಾಯಿಯರೊಡನೆ ಹೇಳುವರು. ತುಂಬಾ ಹೊತ್ತು ಕಾದು ನೋಡಿಯೂ ಅವಳು ಬರಲಿಲ್ಲ. 

                                ದೇವಮ್ಮನು ತನ್ನ ಪಾಪಲಿ ಎತ್ತನ್ನೂ ಹುಡುಕಿಕೊಂಡು ಹೋದಲ್ಲಿ ದಾರಿಯುದ್ದಕ್ಕೂ ಅಲ್ಲಲ್ಲಿ ಎತ್ತು ನಿಂತಂತೆಯೂ, ಹತ್ತಿರ ತಲಪುವ ವೇಳೆ ದೂರ ಸಾಗಿದಂತೆ ಯೂ, ಬಿಸಿಯಾರದ ಸಗಣಿ ಸಗಣಿ ಗುಡ್ಡೆ ಕಾಣುವುದು ಹಿಡಿಯಲಸಾಧ್ಯತೆಯಿಂದಲೂ ಅವಳು ಕಪ್ಪು ಕಾಡಿನ ಮಧ್ಯಕ್ಕೆ ತಲುಪಿದಳು. ಹೀಗಾಗಿ ವೇಷಧಾರಿ ಜೋಗಿ ಪರಮಾತ್ಮನ ಜೊತೆಗೋಡಿಕೊಂಡಳು.ಈಕಡೆ ಕುಟುಂಬಸ್ಥರೂ, ನೆರೆಕರೆಯವರೂ ಸೇರಿ ದೇವಮ್ಮ ಹುಡುಗಿ ಮನೆಗೆ ಬರಲಿಲ್ಲವೆಂಬ ಚಿಂತೆ ಆವರಿಸಿ ಜೊತೆಗೂಡಿ ಸೂಟೆ, ದೀಪ ಸಹಿತ ಅವಳನ್ನು ಹುಡುಕಲು ಬೆಟ್ಟಕ್ಕೆ ಹೋದರು. ಅಲ್ಲಿ ಮಕ್ಕಳಿಂದ ವಿಷಯ ಕೇಳಿ ತಿಳಿದು ಅವರು ಆಟ ಆಡುತ್ತಿದ್ದ ಸ್ಥಳದಿಂದಲೇ ಕರೆಯುತ್ತಾ ಕಪ್ಪು ಕಾಡಿಗೆ ತೆರಳಿದರು. ಈ ಹಿಂದೆ ಬಂಡೆಕಲ್ಲಿನ ಮೇಲೆ ದೇವಮ್ಮ ಮಕ್ಕಳೂ ಮತ್ತು ವೇಷಧಾರಿ ಜೋಗಿಯೂ ಜೊತೆ ಸೇರಿ ಗುಳಿಮಣೆ ಆಟವಾಡಿದ ಗುರ್ತು ಸಹಿತ ಗುಂಡಿಗಳು ಈಗಲೂ ಪ್ರತ್ಯಕ್ಷ ದರ್ಶನ ಕಾಣುತ್ತಿವೆ. ಹುಡುಕಲು ಕಾಡು ಸೇರಿದ ಮಂದಿ ಒಂದೊಮ್ಮೆ ದೇವಮ್ಮಳನ್ನು ಕೂಗಿ ಕರೆದಾಗ ಎದುರು ಭಾಗದಲ್ಲಿ ಅವಳು ಕರೆಗೆ ಓಗೂಡುವ ಸ್ವರವೂ ಕೇಳಿಬರುತ್ತಿತ್ತು. ಮತ್ತು ಎತ್ತಿನ ಸ್ವರವೂ ಕೇಳಿಬರುತ್ತಿತ್ತು. ಅವಳು ಓಗೂಡುವ ಸ್ವರವೂ ಮತ್ತು ಪಾಪಲಿ ಎತ್ತಿನ ಕೂಗಾಟವೂ ಕೇಳಿ ಬರುತ್ತಿತ್ತು. ಸ್ವರ ಕೇಳಿದಲ್ಲಿಗೆ ತಲುಪಿ ಕರೆದಾಗ ಸ್ವಲ್ಪ ಎದುರು ಕಡೆ ಕೇಳುತ್ತಿತ್ತು. 

                                    ದೇವಮ್ಮಳನ್ನು ಪಾಪಲಿ ಎತ್ತನ್ನೂ ಹುಡುಕಿ ಕಾಣಲು ಅಸಾಧ್ಯವಾದ ಹೊತ್ತಿನಲ್ಲಿ ಅವರೆಲ್ಲಾ ಸೋತು ಹೋಗಿ ಸಾಕಾಗಿ ಮಧ್ಯರಾತ್ರಿಯಲ್ಲಿ ಹಿಂದಿನ ಕಾಲದ ಕೋವಿಯನ್ನು ಗುರಿಕಟ್ಟಿ, ಸುತ್ತಮುತ್ತಲೂ ಈ ಮಂದಿ ಬೇಟೆ ಕೂಡಿದರು. ಹಾಗಾದರೂ ಕಾಣೆಯಾದ ದೇವಮ್ಮನೂ ಮತ್ತು ಎತ್ತನ್ನೂ ಕಾಣದಾಯಿತು. ಸಾಲದುದಕ್ಕೆ ದೇವಮ್ಮನ ಸ್ವರವೂ ಮ್ತು ಪಾಪಲಿ ಎತ್ತಿನ ಕೂಗಾಟವೂ ನಿಂತು ಹೋಯಿತು. ಹೀಗಾಗಿ ಇವರೆಲ್ಲಾ ಸೋತು ಸುತ್ತು ಬಳಸಿ ಜೊತೆ ಸೇರಿ ಹಿಂದಿರುಗಿ ಮನೆ ಸೇರಿ ತಲುಪಿದರು.   ಮಾರನೆ ದಿವಸ ಏನೊಂದು ಸಾಧ್ಯವಾಗದೆ ಬೆಳಗ್ಗಿನ ಜಾವ ಜೊತೆ ಸೇರಿ ಚರ್ಚಿಸಲಾಗಿ ಇದಕ್ಕೆ ಪರಿಹಾರರ್ಥವಾಗಿ ಸರ್ವರೂ ಸೇರಿ ನೀಲೇಶ್ವರಕ್ಕೆ ಹೋಗಿ ಒಳ್ಳೆ ಜ್ಯೋತಿಷ್ಯರಿಂದ ಪ್ರಶ್ನೆ ಇಡಿಸಿ ನೋಡುವುದೊಂದೇ ಪರಿಹಾರವೆಂಬ ನಿಧಾಧರಕ್ಕೆ ಬಂದರು. ತಕ್ಷಣ ಇದ್ದವರಲ್ಲಿ ಒಬ್ಬಿಬ್ಬರು ಹಿರಿಯವರು, ಅರಿತವರು ಜೊತೆ ಸೇರಿ ಕೇರಳಕ್ಕೆ ತಲುಪಿ ಬಹಳ ಬಹಳ ಪ್ರವೀಣರಾದ ಅಚ್ಚುತ ಜ್ಯೋತಿಷ್ಯರನ್ನು ಕಂಡು ಭೇಟಿ ಮಾಡಿ ವೃತ್ತಾಂತವನ್ನರುಹಿ ಪ್ರಶ್ನೆ ಇಡುವಂತೆ ನಿವೇದಿಸಿಕೊಂಡರು. 

                                  ಅಚ್ಚುತ್ತ ಜ್ಯೋತಿಷ್ಯರವರಲ್ಲಿಗೆ ತಲುಪಿದ ಈ ಮಂದಿಯನ್ನು ಅವರು ಸತ್ಕರಿಸಿ, ಕಾಫಿ ತಿಂಡಿ ಕೊಟ್ಟು ಉಪಚರಿಸಿ, ಅಲ್ಲಿಗೆ ಹೋದ ಕಾರಣವನ್ನು ಕೇಳಿ ಮನನ ಮಾಡಿಕೊಂಡ ಅಚ್ಚುತ್ತ ಜ್ಯೋತಿಷ್ಯರು ಪದ್ದತಿಯಂತೆ ಕವಡೆ ಅಲ್ಲಾಡಿಸಿ ಹಾಕಿ ಪರಿಶೀಲಿಸಿ ಗಣಿತ ಶಾಸ್ತ್ರಕ್ಕನುಗುಣವಾಗಿ ಎಣಿಸಿ ನೋಡಿ ಮತ್ತೆ ಮತ್ತೆ ಮೂರು ಸಲ ಕವಡೆ ಚೆಲ್ಲಿ ನೋಡಿ ಮನನ ಮಾಡಿ ಇದೇನೋ ಒಂದು ಅನಿಷ್ಟ ಪರಿಸ್ಥಿತಿಯಲ್ಲೆಂತಲೂ, ಶ್ರೀ ಕೃಷ್ಣ ಪರಮಾತ್ಮನ ಚಿನ್ನತಪ್ಪ ದೈವಸಂಕಲ್ಪದಿಂದಾಗಿ ನಿಮ್ಮ ದೇವಮ್ಮ ಕನ್ನಿಕೆಯನ್ನು ಮೋಹಿಸಿ ಸ್ವತಃ ಪತ್ನಿಯಾಗಿ ಸ್ವೀಕರಿಸಿ ಜೊತೆ ಕರೆದೊಯ್ದಿರುವನು. ಅವಳು ನಿಮ್ಮ ವಶಕ್ಕೆ ಮರಳಿ ಸಿಕ್ಕುವುದಂತಲ್ಲವೆಂತಲೂ  ಮುಂದೆ ಮೂರು ವರ್ಷಗಳವಧಿಯಲ್ಲಿ ತನ್ನ ಮನಗೇ ಬಂದು ದೈವ ಸ್ವರೂಪದಲ್ಲಿ ಬಂದು ನೆಲೆಗೊಳ್ಳುವುದುಂಟೆಂದೂ ಕರಾರುವಕ್ಕಾಗಿ ಮುಖಾಮುಖಿ ಉತ್ತರಿಸಿದರು ಜ್ಯೋತಿಷ್ಯರು. ತತ್ಪರಿಣಾಮವಾಗಿ ಇದರ ವಿಷಯವಾಗಿ ಚಿಂತಿಸಬೇಕಾದ ಪ್ರಮೆಯವೇ ಇಲ್ಲವೆಂದು ಜ್ಯೋತುಷ್ಯರು ಪ್ರತ್ಯಕ್ಷ ನುಡಿದರು. ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಇದೊಂದು ಮಹಿಮಾ ವಿಶೇಷವೆಂದೂ ಹೇಳಿದರು. ಉತ್ತರಿಸಿದ ಜ್ಯೋತಿಷ್ಯರು ಈ ಮಂದಿಯನ್ನು ಹಿಂದಕ್ಕೆ ಕಳುಹಿಸಿಕೊಟ್ಟರು. ಗುಟ್ಟನ್ನರಿತ ಮನೆಯವರು ಅಲ್ಲಿಂದಿತ್ತ ದೇವಮ್ಮನ ವಿಷಯ ಮನದಿಂದ ತ್ಯಜಿಸಿದರು. 

                                  ವಿಶೇಷವೆನ್ನುವಂತೆ ಅನ್ವೇಶಿಸುತ್ತಾ ನಡೆದ ಮನೆ ಮಂದಿಯ ದೃಷ್ಟಿಗೆ ಶ್ರೀ ಕೃಷ್ಣ ಪರಮಾತ್ಮನೂ ದೇವಮ್ಮನೂ ಕಾಣಸಿಗದೆ ಅರಣ್ಯದಾರಿಗಾಗಿಯೇ ನಡೆದು ಬೆಂಜಾಟ್ ನದಿಗಾಗಿಯೇ ನಡೆದು ಕೇರಳದ ಸಮುದ್ರ ಕರಾವಳಿ ಪ್ರವೇಶಕ್ಕಾಗಿ ಸ್ಥಾನ ನೆಲೆ ಹುಡುಕುತ್ತಾ ಹೋಗಿ ಅವರಿಬ್ಬರಿಗೂ ಸ್ಥಾನ ನೆಲೆ ಸೆರೆಯಾಗಿ ದೊರಕದೆ ಹೋದ ದಾರಿಗಾಗಿಯೇ ಪಾಪಸು ಮರಳಿ ಬರುತ್ತಾ ಅಲ್ಲಿನ ತೀಯರ ಜನಾಂಗದ ಸೇಂದಿ ವಾಸನೆಯ ಸಮ್ಮತಿಸುವುದೂ ಇಲ್ಲ, ಮುಕ್ಕೋ ಮಕ್ಕಳ ಮೀನು ವಾಸನೆ ಒಗ್ಗುವುದಿಲ್ಲವೆಂದೂ ಅವರು ಬಮದ ದಾರಿಗಾಗಿಯೇ ಮರಳಿ ಹೊರಟರು. 

                                 ಹಿಂದಕ್ಕೆ ಬಂದ ದಾರಿಗಾಗಿಯೇ ಹಿಂದಿರುಗಿ ಮರಳಿದಾಗ ಪಡಿಯ ಮಲೆದೇವತೆಗಳಾದ ಪಾಷಾಣ ಮೂರ್ತಿ, ಕರಿಚೌಂಡಿ, ಭೀರ, ತಮ್ಮಚ್ಚ ಇವರೆಲ್ಲ ಇವರನ್ನು ಅಡ್ಡದಾರಿ ತಡೆದು ತಾವೂ ನಿಮ್ಮ ಜೊತೆ ಬರುತ್ತೇವೆಂದೆನ್ನತ್ತಾ ಇವರಿಬ್ಬರ ಜೊತೆ ಸೇರಿಕೊಂಡರು. ನದಿಯ ಮೇಲ್ಭಾಗಕ್ಕಾಗಿ ನಡೆದು ಸಾಗುತ್ತಾ ಬೆಂಜಾಟ್ ನದಿಯ ದಡದಲ್ಲಿ ಇದ್ದ ದೊಡ್ಡ ಬಂಡೆಕಲ್ಲಿನ ಮೇಲೆ ಜೊತೆಸೇರಿ ಮಾತಿಗೆ ಮಾತು ಬೆಳೆಸುತ್ತಾ ಜೊತೆಯಲ್ಲಿದ್ದವರ ಮಾತಿಗೆ ಒಪ್ಪಿಗೆ ನೀಡುತ್ತಾ ನಾವೆಲ್ಲ ಅಣ್ಣ ತಮ್ಮಂದಿಯರು, ಅಕ್ಕ ತಂಗಿಯು ಈ ಸಂದರ್ಭದಲ್ಲಿ ನಾವೆಲ್ಲಾ ಒಗ್ಗಟ್ಟಿನಲ್ಲಿ ಜೊತೆ ಸೇರಿ ಮುನ್ನಡೆಯುವಾ ಎಂಬ ನಿರ್ಧಾರಕ್ಕೆ ಬಂದು ಮೊದಲಿನ ದಿನ ಏಡಿಗಳನ್ನು ಹಿಡಿದು ಸಾರು ಮಾಡಿಯೂ, ಮಾರನೆ ದಿನ ಮೀನು ಸಾರು ಮಾಡಿಯೂ ಭೋಜನ ಮಾಡಿಯೂ ಮಾರನೆಯ ದಿವಸ ಅವಲಕ್ಕಿ ಫಲಹಾರ ಮಾಡಿ ಶುದ್ಧ ಮುದ್ರಿಕೆಯನ್ನು ಕಾಪಾಡುವಾ ಎಂಬ ನಿರ್ಧಾರಕ್ಕೆ ಬಂದು ಶ್ರೀ ಕೃಷ್ಣ ಪರಮಾತ್ಮನ ಸಲಹೆಯಂತೆ ಮಾರನೆಯ ದಿವಸ ಅವಲಕ್ಕಿ ಫಲಹಾರ ಮಾಡಿ ಶುದ್ಧಮುದ್ರಿಕೆಯನ್ನು ಕಾಪಾಡುತ್ತಾ ದಿನಕಳೆದರು. ಎಲ್ಲರಿಗೂ ಮಲಗಿದ್ದಲ್ಲಿ ತಕ್ಷಣ ನಿದ್ದೆ ಹತ್ತಿತು.  

                                  ಇದೇ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರೀ ಕೃಷ್ಣ ಪರಮಾತ್ಮನು ಮಾಯಾಗಾರ ತಿಳಿಯದೆ ಅಲ್ಲಿಂದ ಕಾಲ್ತೆಗೆದು ಮುಂದೆ ಹೊರಟರು. ಸ್ವಲ್ಪ ಹೊತ್ತು ಕಳೆಯಲು ಮಲಗಿದ್ದ ಜೊತೆಗಾರ ನಿದ್ದೆಯಿಂದೆಚ್ಚತ್ತು, ಶ್ರೀಕೃಷ್ಣ ಪರಮಾತ್ಮನೋ ಮತ್ತು ದೇವಮ್ಮಳನ್ನೂ ಅಲ್ಲಿ ಕಾಣದಿದ್ದು ಅಲ್ಲಿಂದೆದ್ದು ಓಡೋಡಿ ಅವರನ್ನು ಹಿಂಬಾಲಿಸಿದರು. ಮುಂದೆ ಸಾಗಿದ ಶ್ರೀ ಕೃಷ್ಣ ಪರಮಾತ್ಮನೂ ದೇವಮ್ಮಳೂ ದಾರಿಯಲ್ಲಿ ಮುರಿಕಡ್‍ಂಗ್‍ಂದೆನ್ನುವಲ್ಲಿದ್ದ ಬಂಡೆಕಲ್ಲಿನ ಸಂಸಿನಲ್ಲಿದ್ದ ಒಂದು ಪೊಟರೆಯೊಳಗೆ ನುಗ್ಗಿ ಕಲ್ಲಿನ ಬಾಗಿಲೊಂದನ್ನು ಮುಚ್ಚಿಕೊಂಡರು. ಓಡೋಡಿ ಹಿಂಬಾಲಿಸಿದ ಜೊತೆಗಾರ ದೇವತೆಗಳೆಲ್ಲ ಯಾವ ದಾರಿಯೂ ಕಾಣದೆ ಅವರವರ ಸ್ಥಾನಗಳನ್ನು ಸೇರಿಕೊಂಡರು. ಆ ಬಂಡೆಗಲ್ಲಿನ ಸಂಧಿನಲ್ಲಿ ಶ್ರೀ ಕೃಷ್ಣ ಪರಮಾತ್ಮನೂ ಮತ್ತು ದೇವಮ್ಮ ಅಂದಿನ ದಿನ ಉಳಿದರು. ಮಾರನೆ ದಿಸ ಸೂರ್ಯೋದಯಕ್ಕೆ ಅವರಿಬ್ಬರು ಬಂಡೆಯಿಂದ ಹೊರಹೊರಟರು. ಬಂಡೆಕಲ್ಲಿನ ಸಂದಿನೊಳಗಿಂದ ಅವರಿಬ್ಬರೂ ದಾರಿಯಲ್ಲಿ ಸಾಗಿ ಬರುವ ವೇಳೆ ದಾರಿಯಲ್ಲಿದ್ದ ಸೇಂದಿ ಮರದ ತುದಿಯಿಂದ ಮೂರು ತೊಟ್ಟು ಬಿದ್ದಾಗ ಇದೇನೆಂಉ ಆಶ್ಚರ್ಯದಿಂದ ಮೇಲೆ ನೋಡಿದ ಶ್ರೀ ಕೃಷ್ಣ ಮೇಲೆ ನೋಡಿದ ಸಂದರ್ಭ ಸೇಂದಿ ಮರದ ತುದಿಯಲ್ಲಿ ಕಂಡ ಕುಡಿಯರವರುಬ್ಬನನ್ನು ಕೆಳಗಿಳಿಯಲು ಹೇಳಿದ ಶ್ರೀ ಕೃಷ್ಣ ಪರಮಾತ್ಮ ! ಈ ಅಪರಿಚಿತರ ಮಾತು ಕೇಳಿ ಕುಡಿ ಯರವನು ಸೇಂದಿಯ ಮಡಕೆ ಸಹಿತ ಕೆಳಗಿಳಿದು ನಿಂತನು. ಶ್ರೀ ಕೃಷ್ಣ ಪರಮಾತ್ಮನು ಕುಡಿವನನ್ನು ಕೈಯಲ್ಲಿದ್ದ ಮಡಕೆಯಲ್ಲಿರುವುದೇನೆಂದು ಕೇಳುವಾಗ, ಸೇಂದಿಯೆಂದೂ ಅದು ತನ್ನ ಹೆಂಡತಿ ಮಕ್ಕಳನ್ನು ಸಾಕು ಬೇಕಾದ ಕಸುಬು ಎಂತಲೂ ಉತ್ತರಿಸಿದರು. 

                               ಕುಡಿಯನ ಮಾತು ಕೇಳಿದ ಶ್ರೀಕೃಷ್ಣ ಪರಮಾತ್ಮನು ತನ್ನ ಹೆಂಡತಿ ಮಕ್ಕಳನ್ನು ಸಾಕುತ್ತಾ ನಿನ್ನ ಬಾಳಿನ ಹೊಣೆಹೊರುತ್ತಾ ನಿನ್ನ ಸ್ಥಳದಲ್ಲಿ ಸ್ಥಾನ ನೆಲೆಗೊಂಡ ದೇವಾನ್ದೇವರಿಗೆ ಕೊಡುತ್ತಾ ನಾನು ಎಲ್ಲಿ ಸ್ಥಾನ ನೆಲೆಗೊಳ್ಳುವೆನೋ ಅಲ್ಲಿಗೆ ಮೂಉ ಪಾನಿ ಸೇಂದಿಯೂ ಮೂರು ಕಟ್ಟು ವೀಳ್ಯದೆಲೆ ಅಡಿಕೆ ಸಹಿತ ಬಂದು ತಲುಪಬೇಕೆಂದೂ ಶ್ರೀಕೃಷ್ಣ ಪರಮಾತ್ಮನು ಕುಡಿಯರವನಿಗೆ ಆಶೀರ್ವಾದ ಸಹಿತ ಬಂದು ಕಟ್ಟಪ್ಪಣೆ ಮಾಡಿದನು.  ಅಲ್ಲದೆ ಕುಡಿಯರವನಿಗೆ ಶ್ರೀ ಕೃಷ್ಣ ಪಮಾತ್ಮನು ಎರಡು ಬೆಳ್ಳಿಯ ಕಡಗ ಕೊಟ್ಟು ಮುಂದೆ ಭಾಗಮಂಡಲದ ಅಯ್ಯಂಗೇರಿ ಗ್ರಾಮದ ಬಿದ್ದಿಯಂಡ ಕುಟುಂಬದವರ ಮಣ್ಣಿನಲ್ಲಿ ಸ್ಥಾನ ನೆಲೆ ನಿಲ್ಲುವಂತೆಯೂ, ಅಲ್ಲಿ ವರ್ಷಂಪ್ರತಿ ನಡೆಯುವ ಹಬ್ಬಕ್ಕೆ ಮೂರು ಹಾನಿ ಸೇಂದಿಯನ್ನು ಅಮೃತದ ಸ್ವರೂಪದಲ್ಲಿಯೂ, ಮೂರು ಕಟ್ಟು ವಿಳ್ಯದೆಲೆ ಮತ್ತು ಅಡಿಕೆಯನ್ನೂ, ದನಕರುಗಳನ್ನೂ ನನ್ನ ಮಡಿಲಲ್ಲಿಟ್ಟು ಸಕಲ ಬಾಬಿನಲ್ಲೂ ಸಂರಕ್ಷಣೆ ಮಾಡುತ್ತಿರುವೆನೆಂದು ಶ್ರೀ ಕೃಷ್ಣ ಪರಮಾತ್ಮನು ದಯಾಮಯನಾಗಿ ಆಶೀರ್ವಾದ ಸಹಿತ ಅನುಗ್ರಹ ನೀಡುತ್ತಾನೆ. ತದನಂತರ ಶ್ರೀ ಕೃಷ್ಣ ಪರಮಾತ್ಮನು ಕುಡಿಯರವನನ್ನು ಕುರಿತು, ನೀನು ನಿನ್ನ ಬೆನ್ನ ಹಿಂದುರುಗಿ ನಿಂತು ನಿನ್ನ ಸೇಂದಿ ಮಡಿಕೆಯನ್ನು ದಿಟ್ಟಿಸಿ ನೋಡುತ್ತಿರೆಂದು ಆಜ್ಞಾಪಿಸುತ್ತಾನೆ. ಈ ಸಲಹೆಯಂತೆ ಕುಡಿಯರವನು ಹಿಂಬದಿಹೆ ತಿರುಗಿ ತನ್ನ ಸೇಂದಿ ಮಡಕೆಯನ್ನು ದಿಟ್ಟಿಸಿದ ವೇಳೆ ಅದರೊಳಗಿದ್ದ ಸೇಂದಿ ಮಡಕೆಯಿಂದ ಸೇಂದಿ ಉಕ್ಕುತ್ತಾಚೆಲ್ಲುತ್ತಿತ್ತು. ಈ ಅದ್ಭುತವನ್ನು ನೋಡಿ ಸಂತೋಷಗೊಂಡ ಕುಡಿಯರವನು ಪುನಃ ತಿರುಗಿ ತನ್ನ ಮೊದಲಿನ ದಿಕ್ಕಿನತ್ತ ದೃಷ್ಟಿ ಹರಿಸಿದಾಗ ಅಲ್ಲಿ ಶ್ರೀ ಕೃಷ್ಣ ಪರಮಾತ್ಮನೂ ದೇವಮ್ಮನು ಸಹಿತ ಮಾಯವಾಗಿದ್ದರು. ಶ್ರೀಕೃಷ್ಣಪರಮಾತ್ಮನ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಕ್ಕೊಂದು ಸಲ ನಡೆಯುವ ಉತ್ಸವದ ಆ ಕುಡಿಯರ ಕುಟುಂಬದವರು ಅಂದು ಶ್ರೀಕೃಷ್ಣ ಪರಮಾತ್ಮನಿತ್ತ ಬೆಳ್ಳಿಯ ಕಡಗ ಗಳನ್ನು ಕೈಗೆ ತೊಟ್ಟುಕೊಂಡು ಶುದ್ಧ ಮುದ್ರಿಕೆಯಿಂದ ಸೇಂದಿ ಮತ್ತು ವೀಳ್ಯದೆಲೆಯಡಿಕೆ ಸಹಿತ ದೇವಸ್ಥಾನದೆದುರು ಒಪ್ಪಿಸುವ ಪದ್ದತಿಯಿದೆ. 

                                ಕುಡಿಯರವನಲ್ಲಿ ಶ್ರೀಕೃಷ್ಣ ಪರಮಾತ್ಮನು ನಡೆಸಿದ ಪವಾಡದ ನಂತರ ಅಲ್ಲಿಂದ ಕಾಲ್ದೆಗೆದ ಶ್ರೀಕೃಷ್ಣ ಪರಮಾತ್ಮನೂ ದೇವಮ್ಮನೂ ಕಪ್ಪು, ಕಾಡು, ಸೀತಕೊಲ್ಲಿ ನದಿ ದಾಟಿ, ಆ ನದಿ ಹರಿದಂತೆಯೇ ದಡಕ್ಕಾಗಿಯೇ ಕೆಳಮುಖವಾಗಿ ನಡೆದು ಸಾಗುತ್ತಾ ಆರೆಲ್ಜೆ ಎಂಬಲ್ಲಿ ನಿಂತರು. ಅಲ್ಲಿ ಸ್ಥಾನ ನೆಲೆನಿಲ್ಲಬೇಕೆಂದು ನೆನಸಿದರು. ಅಲ್ಲಿಯೋ ಅಕ್ಕಪಕ್ಕದಲ್ಲಿರುವ ಕುಟುಂಬಸ್ಥರ ಹೆಣ್ಣು ಮಕ್ಕಳು ನದಿಯಿಂದ ನೀರು ತರಲು ಖಾಲಿ ಬಿಂದಿಗೆ ಕೊಂಡು ಬರುವರು. ಅದೊಂದು ರೀತಿಯಲ್ಲಿ ಸೂರ್ಯೋದಕ್ಕೆ ನಾವು ಕಾಣಬೇಕಾದ ಅವಲಕ್ಷಣದ ಚಿಹ್ನೆಯಾಗಿ ಕಾಣಬೇಕಾದ ಪರಿಸ್ಥಿತಿ ! ಆದುದರಿಂದ ಇಲ್ಲಿಂದ ಹೊರಟು ಮುಂದೆ ಸಾಗೋಣವೆಂಬ ತೀರ್ಮಾನಕ್ಕೆ ಶ್ರೀಕೃಷ್ಣ ಪರಮಾತ್ಮನೂ ದೇವಮ್ಮಳೂ ಬಂದರು. ಅಲ್ಲಿಂದ ಮುಂದೆ ಸಾಗಿದರು. ಅಲ್ಲಿಂದ ಏಳನೇ ಎಲ್ಜೆಗೆ ತಲುಪಿದರು. ಅಲ್ಲಿ ಹತ್ತಿರದಲ್ಲಿ ಚಿಙಂಡ ಕುಟುಂಬದ ಒಬ್ಬ ತರುಣನು ಅವರ ಗದ್ದೆಯನ್ನು ಉಳುತ್ತಾ ಪ್ರತಿ ದಿವಸ ಎತ್ತುಗಳನ್ನು ತೊಳೆಯಲು ಏನೇ  ಎಲ್ಜೆಯ ಗುಂಡಿಗೆ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ದಿನನಿತ್ಯ ಹೋಗುವಂತೆಯೂ ಉಳುಮೆ ಮಾಡಿದ ಎತ್ತುಗಳು ನೀರುಗುಂಡಿಗೆ ಇಳಿಯದೆ ಅಡೆತಡೆ ಉಂಟು ಮಾಡಿದವು. ಬಲತ್ಕಾರದಿಂದ ಹೊಡೆದು ಬಡಿದೂ ಎತ್ತುಗಳನ್ನು ಇಳಿಸಿದರೂ ಎತ್ತುಗಳು ಹಠತ್ತಾಗಿ ನೀರಿಗಿಳಿಯದೆ ದಡದ ಕಡೆಗೇ ಓಡಿ ಹಾರಿ ವಿರೋಧ ಉಂಟು ಮಾಡುತ್ತಿದ್ದರು. 

                                  ಎತ್ತುಗಳು ಆಡುವ ವಿಪರಿತ್ಯ ಆಟಕ್ಕೆ ಸಂಶಯಪಟ್ಟು, ನದಿಯ ನೀರುಗುಂಡಿಯ ಕಡೆಗೆ ದಿಟ್ಟಿಸಿ ನೋಡಿದಾಗ ಮಹಿಮಾ ಪೂರ್ವಕ ತುಂಬಿದ ನೀರುಗುಂಡಿಯ ಮೇಲೆ ನೂರೆಂಟು ಸೂರ್ಯನ ಬೆಳಕಿನಂದದಿ ಪ್ರಕಾಶಮಯ ಜ್ಯೋತಿ ಎದ್ದು ಹೊತ್ತುತ್ತಿತ್ತು. ಈ ವೈಪರೀತ್ಯ ಮಹಿಮೆಯನ್ನು ಕಂಡವರು ಅಕ್ಕಪಕ್ಕದ ಜನರನ್ನೆಲ್ಲಾ ಕರೆದು ಕೂಡಿಸಿದ ವೇಳೆ ಅವರಿಲ್ಲರೂ ಓಡಿ ಬಂದು ನೀರು ಗುಂಡಿಯಲ್ಲಿ ಕಾಣತ್ತಿರುವ ವೈಭವಪೂರ್ಣ ಮಹಿಮೆಯನ್ನು ನೋಡುತ್ತಾ ಆಶ್ಚರ್ಯಚಕಿತರಾದರು. ನೆರೆದ ಜನರೆಲ್ಲವರು ಸುತ್ತುಕಟ್ಟಿ ಗುಂಡಿಯ ಸುತ್ತಲೂ ತೇಲಿಕೊಂಡಿದ್ದ ಮಹಿಮಾ ಪೂರ್ವಕ ಜ್ಯೋತಿಯನ್ನು ಹಿಡಿಯಲು ಹುರುಪಿನಿಂದ ನಾನು ಮುಂದು ತಾನು ಮುಂದೆನ್ನುತ್ತಾ ಜ್ಯೋತಿಯನ್ನು ಹಿಡಿಯಲು ಮುಂದಾದರು. ಆ ಹೊತ್ತಿನಲ್ಲಿ ಜೊತೆಯಲ್ಲಿದ್ದ ಬಿದ್ದಿಯಂಡ ಒಬ್ಬ ಏಳುವರ್ಷ ಪ್ರಾಯದ ತರುಣನ ಕೈಗೆ ನದಿಯಲ್ಲಿ ತೇಲುತ್ತಿದ್ದ ಜ್ಯೋತಿಯು ಮಹಿಮಾ ಪೂರ್ವಕ ಹಾರಿ ಬಂದು ಸೇರಿಕೊಂಡಿತು. ಅವನ ಕೈ ಸೇರಿದ ಜ್ಯೋತಿ ಶಕ್ತಿಯನ್ನು ಹೊತ್ತು ಹೆಚ್ಚು ಕಮ್ಮಿ ಒಂದು ಫರ್ಲಾಂಗಿನಷ್ಟು ದೂರ ಇತರರಿಗೆ ಅರಿಯದೆ ಓಡಿ ಹಾರಿ ಹೋಗಿ ಒಂದು ಸ್ಥಳದಲ್ಲಿ ಬಹಿರಂಗವಾಗಿ ಮೂರು ಸಲ ವಿಶೇಷತೆಯಿಂದ ಕೂಗಿದನು. ಕೂಗಿದ ಈ ಮಹಿಮಾ ಸ್ವರ ಆಲಿಸಿದ ನದಿ ಸುತ್ತಮುತ್ತಲಿದ್ದ ಜನರು ಕೇಳಿಸಿ ಹಿಂಬದಿಯಲ್ಲಿ ನಿಂತಿದ್ದ ಹುಡುಗನನ್ನೂ ಕಾಣದಿದ್ದು ನೀರು ಗುಂಡಿಯಲ್ಲಿ ತೇಲಿಕೊಂಡಿದ್ದ ತೇಜಸ್ವಿತ ಪ್ರಕಾಶವನ್ನೂ ಕಾಣದೆ ದೂರದಲ್ಲಿ ಕೇಳಿಸಿದ ತರುಣನ ಸ್ವರದ ದಿಕ್ಕಿನತ್ತ ಸರ್ವರೂ ಓಡಿ ಹಾರಿ, ಧಾವಿಸಿ ಹೋಗಿ ತಲುಪಿದರು. 

                                 ಆ ಹೊತ್ತಿಗೆ ಜ್ಯೋತಿ ಕೈ ಸೇರಿದ ತರುಣನಿಗೆ ದೇವ ದರ್ಶನ ಉಂಟಾಗಿ ನಾಲ್ಕು ಮೂರೇಳು ಮುತ್ತು ನುಡಿಯಿತ್ತನು. ಅಲ್ಲಿ ಕೂಡಿ ನೆರೆದ ಮಾನವರಿಗೆ ದೇವದರ್ಶನ ಬಂದ ಹುಡುಗನ ಕೈಯಲ್ಲಿ ಜ್ಯೋತಿಯಾಗಿ ಪ್ರಕಾಶಿಸುತ್ತಿದ್ದ ಮಹಿಮೆಯು ಬದಲಾಗಿ ಮಹಿಮಾ ಪೂರ್ವಕ ಕೊಳಲೊಂದು ನಿಜಸ್ವರೂಪದಲ್ಲಿ ಪ್ರತ್ಯಕ್ಷ ಕಂಡು ಬಂತು. ದರ್ಶನ ಸಹಿತದ ತರುಣನು ಮಾತು ಬೆಳೆಸುತ್ತಾ ಶ್ರೀ ಕೃಷ್ಣ ಪರಮಾತ್ಮನೂ ಮತ್ತು ದೇವಮ್ಮನೂ ಸೇರಿ ಸೃಷ್ಠಸಿದ ನಜವಾದ ವಿವರಣೆಯನ್ನೂ ಕಥಾರೂಪದಲ್ಲಿ ಅರ್ಥಪೂರ್ಣವಾಗಿ ಒಂದನ್ನೂ ಬಿಡದೆ ಸಂಪೂರ್ಣವಾಗಿ, ವಿಷಧವಾಗಿ ವಿವರಣೆಯನ್ನು ಬಿಡಿಸಿ ಬಿಡಿಸಿ ಹೇಳಿದನು. ನೆರೆದವರಿಗೆಲ್ಲಾ ಸತ್ಯಾಂಶ ಹೇಳಿ ಒಪ್ಪಿಸಿದರು. 

                                ಅಲ್ಲಿ ಆ ಸಂದರ್ಭದಲ್ಲಿ ನೆರೆದ ಮಹಾಜನರು ದೇವ ದರ್ಶನ ಬಂದು ಮುತ್ತಪ್ಪಣೆ ಕೊಟ್ಟು ಮುಗಿಸಿ ದೇವದರ್ಶನ ಮುಗಿದು ಮೈಬಿಟ್ಟ ತರುಣನು ತಲೆಬಾಗಿ ನಿಂತ ಮೇಲೆ ಈ ಮಹಿಮಾ ವಿಶೇಷತೆಯ ಕೊಳಲನ್ನು ಎಲ್ಲಿ ಸ್ಥಾಪಿಸುವುದು ಎಂದು ತೀರ್ಮಾನದ ಸರಸ ಸಲ್ಲಾಪ ಉಂಟಾದಾಗ ಈ ಮಹಿಮಾ ವಿಶೇಷತೆಯ ಕೊಳಲು ಒಬ್ಬೊಬ್ಬರಿಗೆ ಚಿನ್ನದ ಕೊಳಲಾಗಿಯೂ, ಇತರಿರಿಗೆ ಬಿಳ್ಳಿಯ ಮಾದ್ರಿಯಾಗಿಯೂ, ಮತ್ತಿತರರಿಗೆ ತಾಮ್ರ, ಕಂಚಿಯ ಮಾದ್ರಿ ಹೀಗೆ ವಿವಿಧ ಮಾದ್ರಿಯಲ್ಲಿ ಜಳಪಿಸುತ್ತಿದ್ದು ತತ್ಸಂಬಂಧಿಸಿ ಕಡೆಯ ಹಂತದಲ್ಲಿ ಬುದ್ಧುಜೀವಿಗಳು, ಅನುಭವಸ್ಥ ಮಹಾಕನರು ಚಿನ್ನದ ಕೊಳವೆನ್ನುತ್ತಾ ಚಿನ್ನತಪ್ಪ ದೇವರ ಕೊಳಲಾಗಿ ನಾಮಕರಣ ಸಹಿತ ತೀರ್ಮಾನಕ್ಕೆ ಬಂದರು. ಮುಂದಕ್ಕೆ ದೇವರನ್ನು ಎಲ್ಲಿ ಸ್ಥಾನ ಕೊಟ್ಟು ಸ್ಥಾಪನೆ ಕೊಡುವುದೆಂದು ಚರ್ಚಿಸಿ ಕಟ್ಟಕಡೆಗೆ ಆದಿಯಲ್ಲಿ ದೇವದರ್ಶನ ಬಂದು ಮುತ್ತಪ್ಪಣೆ ಕೊಟ್ಟ ತರುಣನ ಕುಟುಂಬ ಬಿದ್ದಿಯಂಡ ಕುಟುಂಭಸ್ಥರ ಮನೆಯಲ್ಲಿ ಕಿರಿಯಾದಾಗಿದ್ದು, ಮೂರು ದಿವಸಗಳವೆಗೆ ಬಿದ್ದಿಯಂಡ ಕುಟುಂಬಸ್ಥರ ಹೊಸ ಮನೆ ನಿರ್ಮಾಣವಾದ ನಂತರ ಅಲ್ಲಿಗೆ ದೇವರನ್ನು ಸಾಗಿಸಿ ಅಲ್ಲಿ ಸ್ಥಿರ ಸ್ಥಾನ ಕೊಡುವಂತಿನ ತೀರ್ಮನಕ್ಕೆ ಬಂದರು. ಈ ತೀರ್ಮಾನದಂತೆ ಅಮ್ಮಕೊಡವರ ಮನೆಯಲ್ಲಿ ದೇವರಿಗೆ ಸ್ಥಾನ ಕೊಟ್ಟರು. 

                                 ದೈವಸಕ್ತಿ, ಮಹಾಜನರ ಭಕ್ತಿಯ ಶಕ್ತಿಯ ಫಲವಾಗಿ ಬಿದ್ದಿಯಂಡ ಕುಟುಂಬದ ಪೂರ್ವಿಕರು ಮೂರು ದಿವಸಗಳವಧಿಯಲ್ಲೇ ಕುಟುಂಬಸ್ಥರ ಮನೆಕಟ್ಟಿ ಮುಗಿಸಿದುದೂ ಆಯಿತು. ಈ ಹೊತ್ತಿನಲ್ಲಿ ಮೊತ್ತಮೊದಲು ದೈವದರ್ಶನ ಬಂದು ಜೋತಿ ಸಹಿತ ಮುತ್ತಪ್ಪಣೆ ಕೊಟ್ಟ ತರುಣನೂ ಮತ್ತು ಅವನ ಬಾವ ತೆಕ್ಕಡ ಮಹಾನುಭಾವನೂ ಭಕ್ತಿಯಿಂದ ದೆವರ ನೆಲೆ ತಾತ್ಕಾಲಿಕ ಸ್ಥಾನವಿತ್ತ ಅಮ್ಮಕೊಡವರ ಕುಟುಂಬಸ್ಥರ ಮನೆಗೆ ಹೋಗೆ ಹಿಂದಿನ ದಿನದ ವಾಗ್ದಾನವನ್ನು ಸ್ಮರಿಸುತ್ತಾ ಊರಿನ ಹಲಕೆಲ ಅನುಭವಿ ಭಕ್ತಜನ ಸಮೂಹ ಸಹಿತ ನಾವಿತ್ತ ಚಿನ್ನತಪ್ಪ ದೇವರ ಕೊಳಲನ್ನು ನಮಗಿತ್ತು ಸಹಕರಿಸಬೇಕೆಂದು ವಿನಂತಿಸಿಕೊಂಡರು. ಈ ಮಾತನ್ನು ಕೇಳಿದ ಅಮ್ಮ ಕೊಡವರು ಅಂದು ಒಳ್ಳೆ ಮುಹೂರ್ತದಲ್ಲಿ ಚಿನ್ನತಪ್ಪ ದೇವರ ಕೊಳಲನ್ನು ನಮ್ಮ ಮನೆಯಲ್ಲಿ ಸ್ಥಾನ ಕೊಟ್ಟು ದರ ಪ್ರಯುಕ್ತ ಇಂದು ನಿಮ್ಮ ವಶಕ್ಕೆ ಹಿಂತಿರುಗಿಸಲಾಗುವುದಿಲ್ಲವೆಂತಲೂ ಕರಾರುವಕ್ಕಾಗಿ ವಿರೋಧ ಧ್ವನಿಗೂಡಿ ಮರುತ್ತರಿಸಿದರು. ಅಮ್ಮ ಕೊಡವ ಕುಟುಂಬಸ್ಥರು. ಈ ವಿರೋಧ ಧಾಟಿಯ ಮಾತು ಕೇಳಿದ ಮಹಾಜನ ಈ ವಿಷಯದಲ್ಲಿ ಮಹಾಚರ್ಚೆ ನ್ಯಾಯ ತೀರ್ಮಾನ ಮಾಡಲನುವಾದರು. ಆ ಸಂದರ್ಭದಲ್ಲಿ ಅಮ್ಮ ಕೊಡವ ಕುಟುಂಬಸ್ಥರು ವಾಗ್ದಾಳಿ ನಡೆಸುತ್ತಾ ದೇವಾದನೆ ಬಂದ ತರುಣನೂ, ಆತನ ಬಾವ ತೆಕ್ಕಡ ಪುರುಷನೂ ಮತ್ತಿತರ ಊರವರೂ ಅಮ್ಮಕೊಡವರ ಕುಟುಂಬಸ್ಥರ ಮನೆಯಿಂದ ನೂರು ಅಡಿಯಷ್ಟು ದೂರ ತೊಲಗಿ ನಿಲ್ಲುವಂತೆ ಕಟ್ಟಪ್ಪಣೆಯಿತ್ತರು. ಬೇರಿ ದಾರಿಯೇ ಕಾನದೆ ತರುಣನೂ, ಆತನ ಬಾವನೂ ಜೊತೆಗೆ ನೆರೆದ ಹಲಕೆಲ ಊರಿನ ಜನರೂ ಅಮ್ಮ ಕೊಡವ ಕುಟುಂಬಸ್ಥರ ಕಟ್ಟಪ್ಪಣೆಯಂತೆ ನೂರಡಿ ದೂರವೇ ನಿಂತರು. 

                              ಈ ರಿತಿಯ ತಾರ್ಕಿಕ ವಿವಾದದೆಡೆಯಲ್ಲಿ ಅಮ್ಮ ಕೊಡವರ ಕುಟುಂಬಸ್ಥರ ಮನೆಯಲ್ಲಿ ದೇವರಿಗೆ ಸ್ಥಾನ ಕೊಟ್ಟು ನಿಲ್ಲಿಸಿದ ಕೋಣೆಯ ಗೋಡೆಯು ಇದ್ದಕ್ಕಿದ್ದ ಹಾಗೇ ಒಡೆದು ಕುಸಿದು ಒಂದು ಬದಿಯಲ್ಲಿ ಒಂದು ಪೊಟರೆ ಕಂದಕವುಂಟಾಗಿ, ಶ್ರೀ ಕೃಷ್ಣ ಪರಮಾತ್ಮನ ಮಹಿಮಾ ವಿಶೇಷತೆಯಿಂದ ದೇವ ಮಹಿಮಾ ಕೊಳಲು ಇದ್ದಕ್ಕಿದ್ದಂತೆ ಹಾರಿ ಹೋಗಿ ದೇವ ದರ್ಶನ ಬಂದಿದ್ದ ತರುಣ ಬಿದ್ದಿಯಂಡ ಹುಡುಗನ ಕೈಗೆ ಮಹಿಮಾ ವಿಶೇಷತೆ ಸಹಿತ ಹಾರಿ ಕುಳಿತಿತು. ಆ ತರುಣನು ತನ್ನ ಕೈಗೆ ದೇವರ ಕೊಳಲು ಒಂದು ಸೇರಿದಂತೆ ತಕ್ಷಣ ತನ್ನ ಬಾವ ತೆಕ್ಕಡ ಮಹಾನುಭಾವ ಸಹಿತ ಹಿಂದು ಮುಂದಾಗಿ ಓಡಿ ಹಾರಿ ಬಿದ್ದಿಯಂಡ ಮನೆ ಹತ್ತಿರ ತಲುಪುವ ವೇಳೆ ಇದ್ದಕ್ಕಿದ್ದ ಹಾಗೆ ದೈವದರ್ಶನ ಸಹಿತ ಪದ್ದತಿಯಂತೆ ಮೂರು ಸಲ ಜೋರಾಗಿ ಬಾಯಿದೆರೆಯಿತ್ತನು. ಈ ಕೂಗು ಕೇಳಿಸಿದ ಅಲ್ಲಿನ ತೀರ್ಮಾನಕ್ಕಾಗಿ ಸೇರಿದ ಪಂಚಾಯಿತಿದಾರರು ಅಮ್ಮ ಕೊಡವರ ಕುಟುಂಬಸ್ಥರ ಕೋಣೆಯಲ್ಲಿ ಇಟ್ಟದ್ದ ದೇವರ ಕೊಳಲು ಇದೆಯೊ ಎಂದು ಹುಡುಕಾಡಿದರು. 

                            ಆ ಹೊತ್ತಿನಲ್ಲಿ ಅತ್ತಿಂದಿತ್ತ ಹುಡುಕಾಡುವ ಸಮಯದಲ್ಲಿ ಒಂದು ಬದಿಯ ಗೋಡೆಯಲ್ಲಿ ಒಡೆದುಂಟಾದ ಪೊಟರೆಯೋಪಾದಿಯಲ್ಲಿ ಉಂಟಾದ ದ್ವಾರಕ್ಕಾಗಿ ಮಹಿಮಾಪೂರಿತ ದೇವರು ಹೊರೆ ದಾಟಿರುವುದಾಗಿ ಮನದಟ್ಟಾಯಿತು. ಈ ಮಹಿಮಾ ವಿಶೇಷತೆಯನ್ನರಿತ ಮಹಾಜನರು ದೇವದರ್ಶನ ಬಂದು ಮುತ್ತಪ್ಪಣೆ ಕೊಟ್ಟ ಬಿದ್ದಿಯಂಡ ಬಾಲಕನ ಮನೆಗೆ ಓಡಿ ತಲುಪಿದರು. ಈ ಹೊತ್ತಿಗೆ ದೈವದರ್ಶನ ಬಂದ ಬಾಲಕನ ಕೈಗೆ ಸಿಕ್ಕಿದ ಮಹಿಮಾ ಪೂರ್ಣ ಕೊಳಲನ್ನು ಕೊಂಡು ಹೋಗಿ ಅವನ ಮನೆಯ ಪಶ್ಚಿಮ ದಿಕ್ಕಿಗಾಗಿ ಒಳಸೇರಿ ಅಟ್ಟಕ್ಕೇರಿ ಇವರು ಹಿಮಾಪೂರಿತ ದೇವರ ಕೊಳಲನ್ನು ಸ್ಥಾನ ಕೊಟ್ಟು ಶಾಸ್ತ್ರೀಯವಾಗಿ ನೆಲೆ ನಿಲ್ಲಿಸಲಾಯಿತು. 

                                ಇತ್ತ ಪಂಚಾಯಿತಿದಾರರು ಓಡಿ ಹಾರಿ ಬಂದು ಬಿದ್ದಿಯಂಡ ಕುಟುಂಬಸ್ಥರು ಮನೆಗೆ ನುಗ್ಗಲು ಹವಣಿಸುತ್ತಿದ್ದಾಗ, ದೇವದರ್ಶನ ಬಂದ ತರುಣನ ಬಾವ ತೆಕ್ಕಡ ವ್ಯಕ್ತಿ ತನ್ನ ಹಸ್ತದಲ್ಲಿ ಒಡಿಕತ್ತಿಯನ್ನು ಹಿಡಿದು ಜಳಪಿಸುತ್ತಾ ಬಿದ್ದಿಯಂಡ ಕುಟುಂಬಸ್ಥರ ಮನೆಯ ಪಶ್ಚಿಮ ದಿಕ್ಕಿನ ಅಂಗಳದಲ್ಲಿ ಸಮನಾಂತರದಲ್ಲಿ ಒಡಿಕತ್ತಿಯಿಂದಲೇ ಗೆರೆ ಹಾಕಿ ಬಂದ ಜನರು ಈ ಗೆರೆಗಳನ್ನು ದಾಟಕೂಡದೆಂದೂ, ಯಾರೋಬ್ಬರೂ ಸೊಕ್ಕಿನಿಂದ ಮಿತಿಮೀರಿ ಹಾಕಿದ ಮೂರು ಗೆರೆಗಳನ್ನು ದಾಟಿ ಬಿಟ್ಟರೆ ಇದೇ ಒಡಿಕತ್ತಿಯಲ್ಲೇ ಮೀನನ್ನು ಕಡಿಯುವಂತೆ ಕಡಿದು ನುಚ್ಚು ನೂರು ಮಾಡುವುದಾಗಿಯೂ ಬಹಳ ಬಹಳ ವೀರಾವೇಶದಿಂದ ಹೌಹಾರಿ ಆರ್ಭಟ ಸಹಿತ ಹೇಳಿದರು. ಈ ಮಾತು ಕೇಳಿ ಅಲ್ಲಿ ನೆರೆದಿದ್ದ ಜನರು ಸ್ಥಂಭೀಭೂತರಾಗಿ ಕಲ್ಲಿನಂತೆ ನಿಂತುಕೊಂಡರು ಮತ್ತು ಅಲ್ಲಿ ಅವರ ಬೇಳೆ ಬೇಯಲಾರದೆಂದು ನೆನೆಯುತ್ತಾ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಬರಿಗೈಯಲ್ಲಿ ಬಾಡಿದ ಮೊಗ ಸಹಿತ ನಾಚಿಕೆಯಿಂದ ಹಿಂದಿರುಗಿ ಹೋದರು. 

                                ಶ್ರೀ ಚಿನ್ನತಪ್ಪ ದೆವರೂ ದೇವಮ್ಮಳೂ ಸಹಿತ ಬಿದ್ದಿಯಂಡ ಕುಟುಂಬಸ್ಥರ ಮನೆಯಲ್ಲಿ ಕೊಳಲಿನ ರೂಪದಲ್ಲಿ ಸ್ಥಾನ ನೆಲೆಗೊಂಡರು. ಈ ಶ್ರೀ ಚಿನ್ನತಪ್ಪ ದೇವರ ಮಹಿಮಾ ಪುರುಷ ಅಯ್ಯಂಗೇರಿ ಗೊಲ್ಲ ಜನಾಂಗದ ವಂಶದ ಬಿದ್ದಿಯಂಡ ಮನೆಯಲ್ಲಿ ನೆಲೆನಿಂತ ಪ್ರಮಾಣವೆಂದರೆ ದೇವಲೋಕದಲ್ಲಿ ಅಂದಿನ ಅವಧಿಯಲ್ಲಿ ಗೋಪಿಕಾಸ್ತ್ರೀಯರೊಡಗೂಡಿ ಚಕ್ಕಂದವಾಡಿದ ರೀತಿ ಇಲ್ಲಿಯೂ ಪವಾಡ ಕಥೆಯೊಂದನ್ನು ಪ್ರದರ್ಶಿಸುತ್ತಾ ಗೋವುಗಳ ಪೋಷಕನಾಗಿ ಅಲ್ಲಿ ನೆಲೆನಿಂತ ಎಲ್ಲಾ ಕುಟುಂಬಸ್ಥರ ದನಕರಗಳು ಮೇಯಲು ಅಡೆತಡೆಯುಂಟಾಗದೆ, ಹುಲ್ಲು ಮೇವು ಹಾಲು ಉಕ್ಕುವಂತೆ ವೃದ್ಧಿಗೊಂಡಿದ್ದೂ, ಕುಡಿಯಲು ಬಹಳ ಶುದ್ದನೀರು ಮನ ಸಮೃದ್ಧಿಯಾಗುತ್ತಾ ಉಕ್ಕಿ ಹರಿಯುತ್ತಾ ಬಹಳ ಬಹಳ ಮಹಿಮಾ ವಿಶೇಷದಿಂದ ಇರುವುದು ಗೋಚರವಾಗುತ್ತಿದೆ. 

                                  ಸಾಲದುದಕ್ಕೆ ಅಲ್ಲಿ ದೇವನೆಲೆಯ ಸುತ್ತುಮುತ್ತಲೂ ವಾಸವಿರುವ ಎಲ್ಲಾ ಜನಾಂಗದ ಮನೆ ಸುತ್ತಲೂ ಸ್ವಂತ ಶುದ್ಧ ತಿಳಿನೀರು ಹರಿಯುತ್ತಾ ಮಾನವ ಕುಲವನ್ನು ಸಾಕಿ ಸಲಹುತ್ತಿರುವುದು ಆಮಹಿಮಾ ಪವಾಡ ಪುರುಷನ ವಿಶೇಷತೆಯಾಗಿದೆ. ಇದಕ್ಕೆ ಮೊದಲು ವಿವರಣೆ ವಿಶೇಷತೆ ವಿವರಿಸಲ್ಪಟ್ಟಂತೆ ದೇವರು ಸ್ಥಾನಗೊಂಡಂದಿನಿಂದ ಮೇಲ್ಭಾಗ ಎಂದರೆ ದೇವರು ಬಂದ ನದಿಯಲ್ಲಿ ಅವಶುದ್ಧ ಆಗುವಂತ ಯಾವುದೊಂದೂ ಕಾರಣವಿರುವುದಿಲ್ಲ, ಎಲ್ಲೆಲ್ಲಿ ನಡೆದುದೂ ಇಲ್ಲ. 

                               ಇದಕ್ಕೆ ಮೊದಲು ದೆವ್ವಾದನೆ ಬಂದ ತರುಣನ ಮುತ್ತಪ್ಪಣೆ ನಾಲ್ಕು ಮೂರೇಳು ಮುತ್ತಿನಂತೆ ಮಾತಿನ ಸತ್ಯ ಪ್ರಮಾಣದಂತೆ ವರ್ಷಂಪ್ರತಿ ನಿಗದಿಸಿದ ದಿವಸ ತಿಂಗಳ ಹುಣ್ಣಿಮೆ ದಿವಸ ಪದ್ದತಿಯಂತೆ ಹಬ್ಬದ ಕಟ್ಟಿ ಬಿದ್ದಲ್ಲಿಂದ ಅಲ್ಲಿಂದ ಮುಂದಕ್ಕೆ ಹಬ್ಬದವರೆಗೆ ಆ ಗ್ರಾಮದಲ್ಲಿ ಯಾರೊಬ್ಬರು ಮದ್ದು ಮಾಂಸ ಸೇವಿಸಬಾರದಾಗಿಯೂ, ಯಾವ ರೀತಿಯ ಸಾರಾಯಿಯನ್ನೂ ಸೇವಿಸಬಾರದಾಗಿಯೂ ಮತ್ತು ತಿಂಗಳ ಋತುವಾದ ಹೆಂಗಸರು ಯಾರೊಬ್ಬರು ಊರಿನಲ್ಲಿ ವಾಸವಿರದೆ ಹೊರ ನಡೆಯುವಂತಾಗಬೇಗಿಯೂ ನಿರ್ಬಂಧ ವಿಧಿಸುವಂತಾಯಿತು. ಕೊಲೆ ಇತ್ಯಾದಿ ಹಿಂಸೆ ನಡೆಯಬಾರದಾಗಿಯೂ, ಗ್ರಾಮದೊಳಗೆ ಮರಣಪಟ್ಟವರನ್ನು ವಾದ್ಯಗೋಷ್ಠಿರಹಿತ ಶವಸಂಸ್ಕಾರವಾಗಬೇಕೆಂತಲೂ ವಿಧಿ ನಿಯಮ ನಿಗಧಿಸಿರುವ ಪದ್ದತಿ ಮುಂದುವರಿಯುವಂತ ನಿರ್ಬಂಧನೆ ಅಳವಡಿಸಬೇಕಾಯಿತು. 

                          ಈ ಮಾದರಿಯ ನಿರ್ಬಂಧನೆಯು ದೇವಸ್ಥಾನದ ವಠಾರ ದಿಂದ ಒಂದನೇ ನಾಟಿಕಲ್ಲು ಕಂಡಿ, ಎರಡನೆ ಮಣಿ ಗೊಂಡ್ ಕಂಡಿ, ಮೂರನೇ ನಾಡ್‍ರಾಣೆ ಬೊಳಿಕಂಡಿ, ನಾಲ್ಕನೇ ಅಕ್ಕಿ ಬಕ್ಕ ಕಂಡಿ, ಐದನೇ ಬಿಳಿಮಣ್ಣು ಗುಂಡಿ, ಆರನೇ ಕಾವೇರಿ ನದಿ ಕಂಡಿ, ಏಳನೇ ಕೊರ್ಕರ್ಚಿ ಕಂಡಿ, ಎಂಟನೇ ಪೆಗ್ಗ ಪೊಳೆ ಕಂಡಿ ಹೀಗೆ ಎಂಟು ಕಂಡಿಗಳಡಗಿದ ವಠಾರದ ಜನರಿಗೆ ಶ್ರೀ ಚಿನ್ನತಪ್ಪ ದೇವರ ನಿರ್ಬಂಧನೆ ಅಡಗಿರುತ್ತದೆ. 

                           ಇದಕ್ಕೊತ್ತಾಗಿ ಅಯ್ಯಂಗೇರಿ, ಸಣ್ಣ ಪುಲಿಕೋಟು ಮತ್ತು ಕೋರಂಗಾಲ ಗ್ರಾಮಗಳನ್ನು ಬಾದ್ಯಸ್ಥರಾಗಿರುವರು ಏಳನೇ ದಿವಸ ಅಯ್ಯಂಗೇರಿಗಡಗಿದ ಹದಿನಾಲ್ಕು ಕುಟುಂಬಸ್ಥರುಗಳಲ್ಲಿ ದೇವರ ಕೆಲಸ ನಡೆಸುವವರು ದೇವರ ಹಬ್ಬಕ್ಕೆ ಕಟ್ಟು ಹಾಕಿದಲ್ಲಿಂದ ಮುಂದಕ್ಕೆ ಹಬ್ಬದವರಿಗೆ ಹೊರಗೆ ಹೋಗಿ ಇತರ ತಿಂಡಿ ತಿನ್ನುವಂತಿಲ್ಲ. ಮನೆಯಲ್ಲಿ ಹುಡುಗಿಯರು, ಹೆಂಗಸರು ಸ್ನಾನ ಮಾಡಿ ಹೊಸ ನೀರಿನಲ್ಲಿ ಆಗಿಂದಾಗ್ಗೆ ಹೊಸ ಹೊಸ ಅಡುಗೆ ಮಾಡಿ ಬಡಿಸುತ್ತಿರಬೇಕು. ದೇವರ ಕೆಲಸ ಮಾಡುವವರು ಬೇರೆ ಬೇರೆ ಮಲಗಬೇಕಾಗಿಯೂ, ಅಲ್ಲದೆ ಊರಿನೊಳಗಿನ ಎಲ್ಲಾ ಕುಟುಂಬಸ್ಥರೂ ಮೈಲಿಗೆ ಬಟ್ಟೆಗಳಿರದೆ ಜಗೆದು ಶುದ್ದ ಮುದ್ರಿಕೆಯಿದಿರಬೇಕಾಗಿದೆ. ದೇವರ ಕೆಲಸ ಮಾಡುವವರು ಬೆಳಗ್ಗಿನ ನಾಸ್ಟಾ ಮಾಡದಿದ್ದು, ಉಪವಾಸಿದ್ದು, ನದಿಯಲ್ಲಿ ಸ್ನಾನಗೈದು ಶುದ್ದ ಮುದ್ರಿಕೆಯಿಂದ ದೇವಸ್ಥಾನಕ್ಕೆ ತಲುಪಿ, ಅಲ್ಲಿ ಅರ್ಚಕರು ಚಿನ್ನತಪ್ಪ ದೇವರಿಗೆ ಪೂಜೆಗೈಯ್ದು, ಅಲ್ಲಿಂದ ತೀರ್ಧ ಪ್ರಸಾದ, ಗಂಧ, ಹೂವು ಪಡೆದು ಅಲ್ಲಿಂದ ತೀರ್ಥ ಪ್ರಸಾದ ಸಹಿತ ಮನೆಗೆ ತಲುಪಿ ಮನೆಗೆ ತೀರ್ಥ ಚಿಮುಕಿಸಿ ಶುದ್ದಗೊಳಿಸಿ ನಂತರ ಸಿದ್ದಗೊಳಿಸಿದ ಫಲಾಹಾರ ಊಟೋಪಚಾರ ಮಾಡಬೇಕಾದ ನಿಯಮ. ಏಳನೇ ದಿವಸ ಊರಿನ ಪ್ರತಿ ಕಟುಂಬಸ್ಥರು ಜೊತೆಗೆ ಬಟ್ಟಿಯತ್ ಕುಡಿಯರು ಬಂದು ಜೊತೆ ಸೇರಬೇಕಾದ ಅವಶ್ಯಕ ಇದೆ. 

                              ಆ ಹೊತ್ತಿಗೆ ಶ್ರೀ ಚಿನ್ನತಪ್ಪ ದೇವರ ಮಹಿಮಾ ಪೂರ್ವಕದ ಕೊಳಲನ್ನು ಹೊತ್ತುಕೊಳ್ಳುವಾತನೇ ದೇವರನ್ನು ತೆಗೆಯುವವನೆಂದು ಪ್ರತೀತಿ. ಈ ಪ್ರತೀತಿಯಂತೆ ದೇವರನ್ನು ಎತ್ತಿಕೊಳ್ಳುವವನ್ನು ಶ್ರೀ ಕೃಷ್ಣ ಪರಮಾತ್ಮ ಧರಿಸುವ ಸಕಲ ಆಭರಣಗಳಂತೆ ಅವರಿಗೆ ಧರಿಸಿ ಶೃಂಗರಿಸುತ್ತಾರೆ. ಅವರೇ ದೇವರನ್ನೆತ್ತುವವರು. ಅಲ್ಲದೆ ದೈವದರ್ಶನ ಬರುವವನ್ನೂ, ತಕ್ಕ ಮುಖ್ಯಸ್ಥರನ್ನೂ ದೇವರ ಆಭರಣ ಧರಿಸುವಂತಾಗಿ ಶೃಂಗರಿಸುವರು. ದೇವರನ್ನು ಎತ್ತುವವರು ಒಂದುವರ್ಷವೆಂದಾದರೆ ದೇವರೆತ್ತುವವರಿಗೆ ಕೊಡೆ ಹಿಡಿಯುವವರು ಚಿಙಂಡ ಪುರುಪರೆಂದು ನಿಯಮ. ಶೃಂಗರಿಸಲ್ಪಟ್ಟರವರೂ, ಅಲ್ಲಿ ಕೂಡಿದ ಊರು ನಾಡಿನ ಜನ ಸಾಮಾನ್ಯರೂ ಜೊತೆ ಸೇರಿ ಚಿಙಂಡ ಕುಟುಂಬದ ಅಂಗಳದಲ್ಲಿ ಸಿದ್ದಪಡಿಸಿದ ಬೆಂಕಿ ರಾಶಿಯ ಸುತ್ತಲೂಊರು, ನಾಡಿನ ಜನರೂ, ದೇವರು ಕೆಲಸ ಮಾಡುವವರೂ ಜೊತೆಗೂಡಿ ಕುಳಿತು ಬಿದ್ದಿಯಂಡ ತಕ್ಕನು ಮುಂದಕ್ಕೆ ಎರಡು ದಿವಸಗಳವಧಿಯಲ್ಲಿ ಹಬ್ಬದಲ್ಲಿ ನಡೆಸಬೇಕಾದ ಆಚಾರ ವಿಚಾರಗಳನ್ನು ವಿವರಿಸುತ್ತಾ ನಿಯಮಾವಳಿಯ ತಖ್ತೆಯನ್ನೆಲ್ಲಾ ಬಿಡಿಸಿ ಬಿಡಿಸಿ ಬಹಿರಂಗ ಪಡಿಸುವುದಿದೆ.ಎಂಟನೇ ದಿವಸ ಸೂರ್ಯೋದಯಕ್ಕೆ ದೇವರ ಕೆಲಸಗಾರರಿಗೆ ದರ್ಶನ ಬರುವುದು ಮತ್ತು ಮುತ್ತಪ್ಪಣೆ ಕೊಡುವುದಿದೆ. ಅಟ್ಟದಲ್ಲಿ ಸ್ಥಾಪನೆಗೊಳಿಸಿದ ದೇವರ ಕೊಳಲನ್ನು ದೇವರನ್ನು ಎತ್ತುವವನು ಕಳೆಗೆ ತಂದಿಳಿಸುವನು. ಅಂದು ಭಕ್ತರು ತಂದು ಹರಕೆಗಳನ್ನು ಒಪ್ಪಿಸುವುದಿದೆ. ತದನಂತರ ದೇವರನ್ನು ತೆಗೆದುಕೊ0ಂಡು ಇದಕ್ಕೆ ಮೊದಲು ಸ್ಥಾನಗೊಂಡ ಕೈಲಪ್ಪ ಹೋಗಿ ಹಿಂತಿರುಗಿ ಹಿಂದಕ್ಕೆ ಬರುವರು. 

                          ಆ ದಿನ ಅಪರಾಹ್ನದ ಮೇಲೆ ದೇವರ ಕೊಳಲನ್ನು ತೆಗೆದುಕೊಂಡು ಪ್ರಾಂಭದಲ್ಲಿ ಜ್ಯೋತಿ ರೂಪದಲ್ಲಿ ತೇಲಾಡಿಕೊಂಡಿದ್ದ ನದಿಯ ಗುಂಡಿಯ ಹತ್ತಿರ ಕೂಡಿದ್ದ ಮಹಾಜನರು ಜೊತೆಗೂಡಿ ಹೋಗಿ ಅಲ್ಲಿ ಸೇರುತ್ತಾರೆ. ಅಲ್ಲಿಂದ ದೇವರು ಮೀನುಗಳಿಗೆ ಶಾಸ್ರ್ತೀಯ ಒಕ್ಕಣೆ ಕಟ್ಟಿ ನಿಯಮಾವಳಿ ಪ್ರಕಾರ ಅಕ್ಕಿ ಎರಚುವರು. ಜೊತೆಗೆ ಬ್ರಾಹ್ಮಣರಿಂದ ಧಾರೆಪೂಜೆ, ಅಪ್ಪತ್ ಪೂಜೆ ಮಾಡುವುದುಂಟು. ಈ ದಿವಸದ ಬೆಳಿಗ್ಗೆಯ ಹಬ್ಬ ಮುಗಿದ ನಂತರ ಊರಿನ ಎಲ್ಲಾ ಭಾಗದಲ್ಲೂ ದೇವರಿಗೆ ಸಂಬಧಿಸಿದ ಕುಟುಂಬಸ್ಥರ ಹೆಂಗಸರು ಸ್ನಾನ ಮಾಡಿ ಉಪವಾಸ ಸಹಿತ ಭತ್ತ ಬೇಯಿಸಿಡುತ್ತಾರೆ. ಧಾರೆ ಪೂಜೆ ನದಿಯಲ್ಲಿ ಸಂಭ್ರಮದಿಂದ ನಡೆಸುತ್ತಿರುವ ವೇಳೆ ಹೆಂಗಸರು ಔಲಕ್ಕಿ ಮಾಡಿಡುವ ಪದ್ದತಿ.

                             ಮಾರನೆ ದಿವಸ ಉಪವಾಸದ ದಿವಸವಾಗಿದ್ದು, ಔಲಕ್ಕಿ ಬಾಳೆಹಣ್ಣು ಮೊದಲಾದವುಗಳ ಫಲಾಹಾರ ಮಾಡುವ ಪದ್ದತಿ, ಉಪವಾಸದ ಅಷಠಮಿಯಲ್ಲಿ ಬೆಳಿಗ್ಗೆ ನಡೆಸಿದ ಹಬ್ಬದಂತೆ ಹಬ್ಬ ನಡೆಸುತ್ತಾರೆ. ಅದೇ ದಿವಸ ಅಪರಾಹ್ನದ ಮೇಲೆ ಭಂಡಾರದ ಮನೆಯಿಂದ ದೇವರನ್ನು ಹೊತ್ತು ಚಂಡೆ ಜಾಗಟೆ ಮೊಳಗಿಸುತ್ತಾ ತಂತ್ರಿ ಸಹಿತ ನಾಡುಮಂದಿಗಾಗಿ ಪೋವದಿ ದೇವಸ್ಥಾನದ ಬದಿಗಾಗಿ ಕಾದಿ ಬ್ಯ ಎನ್ನುವ ಗದ್ದೆಯ ಮೂಲೆಯಲ್ಲಿ ಇರುವ ಸ್ಥಾನ ದಲ್ಲಿ ತಕ್ಕ ಮುಖ್ಯಸ್ಥರು, ದೇವರನ್ನು ಹೊತ್ತು ಕೊಂಡವರು ಮತ್ತು ಹಬ್ಬಕ್ಕೆ ನೆರೆದವರೂ ಈ ನೆಲೆಯಲ್ಲಿ ಸೇರಿರುವ ನಿಂiÀiಮಾವಳಿ.

                            ಆ ಹೊತ್ತಿನಲ್ಲಿ ಅಲ್ಲಿ ನಿಂತಿದ್ದ ಸಂಪೂರ್ಣ ಪೂರ್ವ ದಿಕ್ಕಿನಲ್ಲಿರುವ ನಾಳಿಯಂಡ ಅವರ ಅಕದಲ್ಲಿ ಎಲ್ಲವರೂ ಬಂದು ಸೇರುತ್ತಾರೆ. ಅದೇ ಹೊತ್ತಿನಲ್ಲಿ ಅಲ್ಲಿನ ಹದಿನಾರು ಕುಟುಂಬಸ್ಥರ ಚೆಂಬು ಚರ್ಕ್ ಬಂದು ತಲುಪಿರುತ್ತದೆ. ಅಲ್ಲಿಂದ ದೆವ್ವಾದನೆ ಗಾರರು ತಕ್ಕರನ್ನು ಎತ್ತು ಪೋರಾಟವನ್ನು ಹೊಡೆದಟ್ಟಿಕೊಂಡು ಬರುವಂತೆ ಅಪ್ಪಣೆ ಮಾಡುವುದುಂಟು. ಪತ್ತಣಕ್ಕಿ ಕೊಡುವರು. ಪತ್ತಣಕ್ಕೆ ಪಡೆದುಕೊಂಡ ನಾಡುತಕ್ಕರು ನಾಳಿಯಂಡಾಕದಲ್ಲಿ ನಿಂತಿದ್ದ ಎತ್ತು ಪೋರಾಟ ಮತ್ತು ಚೆಂಬು ಚರ್ಕ ಹೊತ್ತವರನ್ನೂ ಮೇದರ ಡೋಲು ಹೊಡೆತ ಸಹಿತ ನೊಕ್ಕಿಯಾಟು ದುಡಿಕೊಟ್ಟು ಹಾಡು ಸಹಿತ ದೇವರು ನಿಂತ ನಾಡು ಮಂದಿಗೆ ಶುದ್ಧಗಾರ ಮಡಿವಾಳರು ಸಹಿತ ಹತ್ತಿ ಸೇರುತ್ತಾರೆ. ಅಲ್ಲಿ ಕಾದಿರ ಬಲ್ಯ ಗದ್ದೆಯ ಮಾರು ಸುತ್ತು ನೊಕ್ಕಿಯಾಟ್, ಎತ್ತು ಪೋರಾಟ ಸಹಿತ ಬಂದು ದೇವರ ಅನುವಾದ ಪಡೆದು ಎತ್ತು ಪೋರಾಟದ ಎತ್ತುಗಳನ್ನು ಕಟ್ಟಿ ಹಾಕುತ್ತಾರೆ. 

                               ಚಿಙಂಡ ಕಾವುಕಾರನನ್ನು ದೆವ್ವಾದನೆ ಗಾರ ಕರೆದು ತೆಂಗಿನಕಾಯಿಯೊಂದನ್ನು ಕೊಟ್ಟು ಅಂದಿನ ದಿನದ ನಡಾವಳಿಕೆ ನಡೆಸುವಂತಾಗಲು ಅನುವಾದ ಕೊಡುವುದುಂಟು. ಅವರು ತೆಂಗಿನಕಾಯಿಯನ್ನು ಕಟ್ಟಿ ಪದ್ದತಿಯಂತೆ ಅವನೇ ಮೊದಲಿನ ಸಾಲಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಪದ್ದತಿ ನಡೆಸುತ್ತಾರೆ. ಗುಂಡು ಹೊಡೆದು ತೆಂಗಿನಕಾಯಿಯನ್ನು ಹಾರಿಸಿದಬನಿಗೆ ದೆವ್ವಾದನೆ ಗಾರನು ಒಂದು ತೆಂಗಿನಕಾಯಿಯನ್ನು ಇನಾಮಾಗಿ ಕೊಡುವರು. 

                             ಕಾದಿ ಬಲ್ಲಿಯದಲ್ಲಿ ದೇವರು ಬಂದು ನಿಂತಲ್ಲಿಗೆ ಪ್ರತೀ ವರ್ಷ ಹಬ್ಬದಲ್ಲಿ ಶ್ರೀ ಚಿನ್ನತಪ್ಪ ಶ್ರೀ ಕೃಷ್ಣ ಪರಮಾತ್ಮ ದೆವರ ಪವಾಡ ಮಹಿಮೆಯಂತೆ ಆಕಾಶ ಮಾರ್ಗದಲ್ಲಿ ಶ್ರೀ ಕೃಷ್ಣ ಪರಮಾತ್ಮನ ವಾಹನವಾದ ಗರುಡನು ಹಾರುತ್ತಾ ಸುತ್ತು ಹಾಕುವ ಮಹಿಮೆಮಾ ವಿಶೇಷ ಪೃಕ್ಷಕರಿಗೆ ಕಾಣುವುದಿದೆ. ಇದು ಶ್ರೀ ಚಿನ್ನತಪ್ಪ ನ ಮಹಿಮಾಪೂರಿತ ವಿಶೇಷತೆಯಾಗಿದೆ. ಪವಾಡ ಕಥೆಯಾಗಿದೆ. ಲೇಖಕರು : ಬಡ್ಡೀರ ಮಣಿ ಚಂಗಪ್ಪ  ಕೊಳಗದಾಳು (ಚೇರಂಬಾಣೆ)