Kukke Sri Subramanya

ಕುಕ್ಕೇ : ಕುಕ್ಕೇ ಸುಬ್ರಹ್ಮಣ್ಯಸ್ವಾಮಿ:

                     ಕುಕ್ಕೇ ಸುಬ್ರಹ್ಮಣ್ಯಸ್ವಾಮಿಯ ದೇವಾಲಯ ಕುಮಾರಧಾರ ನದಿ ತೀರದಲ್ಲಿ ಧರ್ಮಸ್ಥಳ ಹತ್ತಿರದಲ್ಲಿದೆ.

           ಪೌರಾಣಿಕ ಕಥಾನುಸಾರ ಶಿವಪುತ್ರನು ಕುಮಾರಸ್ವಾಮಿ ತಾರಕಾಸುರನನ್ನು ಇಲ್ಲಿ ಸಂಹರಿಸಿದನಂತೆ. ರಾಕ್ಷಸನ ವಧೆಯಾಗುತ್ತಲೇ ತನ್ನ ಕರವಾಳವನ್ನು ಧಾರಾನದಿಯಲ್ಲಿ ಶುಭ್ರ ಮಾಡಿಕೊಂಡನಂತೆ. ಅದಕ್ಕೆ ಈ ನದಿಗೆ ಕುಮಾರಧಾರೆ ಎಂಬ ಹೆಸರು ಬಂದಿದೆ. ಕುಮಾರಸ್ವಾಮಿ ಅದೇ ಸಮಯದಲ್ಲಿ ತನ್ನ ಸೋದರನಾದ ಗಣಪತಿಯೊಂದಿಗೆ ಸೇರಿ ಧಾರಾನದಿಯ ಪಕ್ಕದಲ್ಲೇ ಇರುವ ಬೆಟ್ಟದ ಮೇಲೆ ಸೇರಿಕೊಂಡನಂತೆ. ಅಲ್ಲಿ ಇಂದ್ರನು ಅವರನ್ನು ಸ್ವಾಗತಿಸಿದನಂತೆ. ಅದೇ ಸಮಯದಲ್ಲಿ ಇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕೊಟ್ಟು ಮದುವೆ ಮಾಡಿದನಂತೆ.

           ಆ ಸಂದರ್ಭದಲ್ಲಿ ಬೆಟ್ಟದ ಮೇಲೆ ತಪಸ್ಸು ಮಾಡುತ್ತಿದ್ದ ವಾಸುಕಿ ಬಂದು ಕುಮಾರಸ್ವಾಮಿಯನ್ನು ಅಲ್ಲೇ ವಾಸಿಸಬೇಕೆಂದು ಪ್ರಾರ್ಥಿಸಿದನಂತೆ. ಅದನ್ನು ಅಂಗೀಕರಿಸಿದ ಕುಮಾರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಎಂಬ ಹೆಸರಿನೊಂದಿಗೆ ದೇವಸೇನೆ, ವಾಸುಕಿಯ ಜೊತೆಯಲ್ಲಿ ಈ ಮಂದಿರದಲ್ಲೇ ನಿಂತನಂತೆ.

           ಮಾರ್ಗಶಿರ ಶುದ್ಧ ಪಷ್ಠಿಯಂದು ರಥೋತ್ಸವ ನಡೆಯುತ್ತದೆ. ಈ ಪ್ರಾಂತ್ಯಕ್ಕೆ ಸಮೀಪದಲ್ಲಿ ಹೊರನಾಡು ಎಂಬ ತೀರ್ಥಕ್ಷೇತ್ರವಿದೆ. ಅನ್ನಪೂರ್ಣಾದೇವಿ ಇಲ್ಲಿ ಮುಖ್ಯದೇವಿಯಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ. ಈ ಮಂದಿರದಲ್ಲಿ ಭಕ್ತರಿಗೆ ಉಚಿತವಾದ ಊಟದ ವ್ಯವಸ್ಥೆ ಇದೆ. ಉಚಿತ ವಿಶ್ರಾಂತಿಯನ್ನು ಒದಗಿಸುತ್ತಾರೆ. ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಭಕ್ತರು ಒಂದು ರಾತ್ರಿಯನ್ನು ಕಳೆದು ಹೋಗುತ್ತಾರೆ.